Raashii Khanna: ʼನನ್ನ ಜೀವನದ ಅದ್ಭುತ ಕ್ಷಣವಿದುʼ; ಯೋಧನ ಪತ್ನಿಯ ಕಷ್ಟ ಬಿಚ್ಚಿಟ್ಟ ನಟಿ ರಾಶಿ ಖನ್ನಾ
Raashii Khanna: ಬಾಲಿವುಡ್ ಬಹುನಿರೀಕ್ಷಿತ ಸಿನಿಮಾದಲ್ಲಿ 120 ಬಹದ್ದೂರ್ ಸಿನಿಮಾ ಕೂಡ ಒಂದು. ರೆಜಿಮೆಂಟ್‌ನ 120 ಭಾರತೀಯ ಸೈನಿಕರ ಅಸಾಧಾರಣ ಧೈರ್ಯವನ್ನು ಪರಾಕ್ರಮದ ಕಥೆಯೂ ದೇಶ ಪ್ರೇಮಕ್ಕೆ ಸಾಕ್ಷಿಯಾಗಲಿದೆ. ಈ ಸಿನಿಮಾ ಇದೇ ತಿಂಗಳು ಬಿಡುಗಡೆಗೆ ಸಜ್ಜಾಗುತ್ತಿದ್ದು ಬಿಡುಗಡೆಗೂ ಮುನ್ನವೇ ಜನರಿಗೆ ಅನೇಕ ವಿಚಾರದಲ್ಲಿ ಕುತೂಹಲ ಉಂಟಾಗುವಂತೆ ಮಾಡಿದೆ.
ರಾಶಿ ಖನ್ನಾ -
ನವದೆಹಲಿ: ಬಾಲಿವುಡ್ ಬಹುನಿರೀಕ್ಷಿತ ಸಿನಿಮಾದಲ್ಲಿ 120 ಬಹದ್ದೂರ್ ಸಿನಿಮಾ ಕೂಡ ಒಂದು. 1962 ರ ಯುದ್ಧದ ಸಮಯದಲ್ಲಿ ಆದ ರೆಜಾಂಗ್ ಲಾ ಕದನದಲ್ಲಿ ಹೋರಾಡಿದ ಕಥೆಯ ಆಧರಿಸಿದ್ದ ಸಿನಿಮಾ ಇದಾಗಿದೆ. ರೆಜಿಮೆಂಟ್‌ನ 120 ಭಾರತೀಯ ಸೈನಿಕರ ಅಸಾಧಾರಣ ಧೈರ್ಯವನ್ನು ಪರಾ ಕ್ರಮದ ಕಥೆಯೂ ದೇಶ ಪ್ರೇಮಕ್ಕೆ ಸಾಕ್ಷಿಯಾಗಲಿದೆ. ಈ ಸಿನಿಮಾ ಇದೇ ತಿಂಗಳು ಬಿಡುಗಡೆಗೆ ಸಜ್ಜಾಗುತ್ತಿದ್ದು ಬಿಡುಗಡೆಗೂ ಮುನ್ನವೇ ಜನರಿಗೆ ಅನೇಕ ವಿಚಾರದಲ್ಲಿ ಕುತೂಹಲ ಉಂಟಾಗು ವಂತೆ ಮಾಡಿದೆ. ಸಿನಿಮಾ ಪ್ರಚಾರ ಕಾರ್ಯ ಈಗಾಗಲೇ ಆರಂಭ ಆಗಿದ್ದು, ನಿರ್ಮಾಪಕರು 120 ಬಹದ್ದೂರ್ (120 Bahadur) ಸಿನಿಮಾ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮವನ್ನು ಇತ್ತೀಚೆಗಷ್ಟೇ ಆಯೋಜನೆ ಮಾಡಿದ್ದರು. ಅಲ್ಲಿ ಸಿನಿಮಾ ತಂಡ ಭಾಗವಹಿಸಿದ್ದು ಪಾತ್ರವರ್ಗದ ಬಗ್ಗೆ ಕೂಡ ಆಸಕ್ತಿದಾಯಕ ಅಂಶ ತಿಳಿಸಲಾಗಿದೆ. ರಾಶಿ ಖನ್ನಾ (Raashii Khanna) ಅವರು ಈ ಸಿನಿಮಾದಲ್ಲಿ ತನ್ನ ಪಾತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ನಟಿ ರಾಶಿ ಖನ್ನಾ ಅವರು ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿ, ನನ್ನ ಸಿನಿಮಾ ಜೀವನ ದಲ್ಲಿ ಇದೊಂದು ಸವಾಲಿನ ಪಾತ್ರವಾಗಿದೆ. 120 ಬಹದ್ದೂರ್ ಸಿನಿಮಾದಲ್ಲಿ ನಾನು ಸೇನೆ ವೀರ ರೊಬ್ಬರ ಪತ್ನಿ ಪಾತ್ರದಲ್ಲಿ ನಟಿಸಿದ್ದೇನೆ. ಇಷ್ಟೊಳ್ಳೆ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ನೀಡಿದ್ದಕ್ಕೆ ಸಿನಿಮಾ ತಂಡಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಫರ್ಹಾನ್ ಸರ್ ಜೊತೆ ಅವರ ಪತ್ನಿಯಾಗಿ ಈ ಪಾತ್ರ ನಟಿಸಿದ್ದು ಒಂದೊಳ್ಳೆ ಅನುಭವ ಸಿಕ್ಕಂತಾಗಿದೆ. ಈ ಸಿನಿಮಾ ಪ್ರೇಕ್ಷಕರ ಮನಗೆಲ್ಲುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ರೆಜಾಂಗ್ ಲಾ ಕದನ ದೃಶ್ಯ ಮರು ಸೃಷ್ಟಿಸುವುದು ಕಷ್ಟದ ಕೆಲಸವಾಗಿದೆ. ಯೋಧರ ನಿಜ ಜೀವನದ ಶೌರ್ಯದಿಂದ ಪ್ರೇರಿತವಾಗಿದ್ದ ಈ ಸಿನಿಮಾದ ಟೀಸರ್ ನಲ್ಲಿ ಅನೇಕ ಇಂಟ್ರಸ್ಟಿಂಗ್ ಸಂಗತಿ ಇರಲಿದೆ. ಹಮ್ ಪೀಚೆ ನಹಿ ಹತೇಂಗೆ ಎಂಬ ಸಾಲುಗಳನ್ನು ಕೂಡ ಟೀಸರ್ ಟ್ಯಾಗ್ ಲೈನ್ ನಂತೆ ಬಳಕೆ ಮಾಡಲಾಗಿದೆ. ಟೀಸರ್ ನಲ್ಲಿ ನಂಬಲಾಗದ ಸತ್ಯ ಕಥೆಯನ್ನು ಆಧರಿಸಿದ್ದ ಸಿನಿಮಾ ಎಂದು ತೋರಿಸಲಾಗಿದೆ.
ಇದನ್ನು ಓದಿ:Yajamana Movie: 25 ವರ್ಷಗಳ ನಂತರ ಡಾ. ವಿಷ್ಣುವರ್ಧನ್ ಅಭಿನಯದ ʼಯಜಮಾನʼ ರೀ ರಿಲೀಸ್!
ಫರ್ಹಾನ್ ಅಖ್ತರ್ (Farhan Akhtar) ಅವರು ಈ ಸಿನಿಮಾದಲ್ಲಿ ಪಿವಿಸಿಯ ಮೇಜರ್ ಶೈತಾನ್ ಸಿಂಗ್ ಭಾಟಿ ಪಾತ್ರವನ್ನು ನಿರ್ವಹಿಸಿದ್ದಾರೆ. ಸೈನಿಕರೊಂದಿಗೆ ಭಾರತೀಯ ಮಿಲಿಟರಿ ಇತಿಹಾಸದ ಅತ್ಯಂತ ನಿರ್ಣಾಯಕ ಯುದ್ಧಗಳಲ್ಲಿ ಪಾಲ್ಗೊಂಡ ಕ್ಷಣಗಳನ್ನು ಅತ್ಯಂತ ಭಾವನಾತ್ಮಕ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. ರಜನೀಶ್ 'ರಾಜಿ' ಘಾಯ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ರಿತೇಶ್ ಸಿಧ್ವಾನಿ, ಫರ್ಹಾನ್ ಅಖ್ತರ್ (ಎಕ್ಸೆಲ್ ಎಂಟರ್‌ಟೈನ್‌ಮೆಂಟ್) ಮತ್ತು ಅಮಿತ್ ಚಂದ್ರಾ (ಟ್ರಿಗ್ಗರ್ ಹ್ಯಾಪಿ ಸ್ಟುಡಿಯೋಸ್) ಅವರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು ಎಕ್ಸೆಲ್ ಎಂಟರ್ ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ.
120 ಬಹದ್ದೂರ್ ಸಿನಿಮಾದಲ್ಲಿ ಫರ್ಹಾನ್ ಅಖ್ತರ್ ಮತ್ತು ರಾಶಿ ಖನ್ನಾ ಅವರು ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ. ಯುದ್ದ ದೃಶ್ಯಗಳು, ಫೈಟಿಂಗ್ , ಭಾವನಾತ್ಮಕ ಕಥಾ ಹಂದರ ಹೊಂದಿದ್ದ ಈ ಸಿನಿಮಾ ನವೆಂಬರ್ 21 ರಂದು ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ನವೆಂಬರ್ 6 ರಂದು ಬಿಡುಗಡೆಯಾಗಲಿದೆ. ಹೀಗಾಗಿ ಈಗಾಗಲೇ ಸಿನಿಮಾ ತಂಡ ಪ್ರಚಾರಕಾರ್ಯ ನಡೆಯುತ್ತಿದ್ದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.