ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Baahubali: The Epic: ದಾಖಲೆಯಿಂದ ಕುಸಿತ ಕಂಡ ಬಾಹುಬಲಿ ದಿ ಎಪಿಕ್ ಸಿನಿಮಾ? ಇದುವರೆಗಿನ ಕಲೆಕ್ಷನ್ ಎಷ್ಟು?

Baahubali: The Epic: ಭಾರತೀಯ ಸಿನಿಮಾ ರಂಗದಲ್ಲಿ ಎಸ್‌. ಎಸ್. ರಾಜಮೌಳಿ (SS Rajamouli) ನಿರ್ದೇಶನದ ಬಾಹುಬಲಿ ಸಿನಿಮಾ ಜಾಗತಿಕ ಮನ್ನಣೆ ಪಡೆದ ವಿಚಾರ ನಮಗೆಲ್ಲ ತಿಳಿದೆ ಇದೆ‌. ಪ್ರಭಾಸ್ ಮುಖ್ಯ ಪಾತ್ರಾಭಿನಯದಲ್ಲಿ ಮಿಂಚಿದ್ದ ಈ ಸಿನಿಮಾ ಎರಡು ಭಾಗದಲ್ಲಿ ರಿಲೀಸ್ ಮಾಡಿದ್ದು ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಮಾಡಿತ್ತು. ಅಂತೆಯೇ ಈ ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ 10 ವರ್ಷ ದಾಟಿದೆ. ಹಾಗಿದ್ದರೂ ಅಭಿಮಾನಿಗಳ ಮನದಲ್ಲಿ ದಿ ಬೆಸ್ಟ್ ಗುಡ್ ಮೂವಿ ಎಂಬ ಸ್ಥಾನವನ್ನು ಬಾಹುಬಲಿ ಸಿನಿಮಾ ಪಡೆದಿದೆ‌. 10 ವರ್ಷದ ಸವಿನೆನಪಿಗಾಗಿ ಇತ್ತೀಚೆಗಷ್ಟೇ ಭಾಗ 1ಮತ್ತು ಭಾಗ ಎರಡು ಒಟ್ಟಿಗೆ ಸೇರಿಸಿ ಬಾಹುಬಲಿ ದಿ ಎಪಿಕ್ (Baahubali: The Epic) ಎಂದು ಸಿನಿಮಾ ಮರು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆ ಮಾಡಿದ್ದ ಕೆಲವು ದಿನ ಬಾಕ್ಸ್ ಆಫೀಸ್ ಉತ್ತಮ ಕಲೆಕ್ಷನ್ ಮಾಡಿದೆ.

ಬಾಹುಬಲಿ ದಿ ಎಪಿಕ್ ಸಿನಿಮಾ ಒಟ್ಟು ಕಲೆಕ್ಷನ್ ಎಷ್ಟು..

ಬಾಹುಬಲಿ ದಿ ಎಪಿಕ್ ಸಿನಿಮಾ -

Profile Pushpa Kumari Nov 5, 2025 6:40 PM

ನವದೆಹಲಿ: ಭಾರತೀಯ ಸಿನಿಮಾ ರಂಗದಲ್ಲಿ ಎಸ್‌. ಎಸ್. ರಾಜಮೌಳಿ (SS Rajamouli) ನಿರ್ದೇಶನದ ಬಾಹುಬಲಿ (Baahubali) ಸಿನಿಮಾ ಜಾಗತಿಕ ಮನ್ನಣೆ ಪಡೆದ ವಿಚಾರ ನಮಗೆಲ್ಲ ತಿಳಿದೆ ಇದೆ‌. ಪ್ರಭಾಸ್ ಮುಖ್ಯ ಪಾತ್ರಾಭಿನಯದಲ್ಲಿ ಮಿಂಚಿದ್ದ ಈ ಸಿನಿಮಾ ಎರಡು ಭಾಗದಲ್ಲಿ ರಿಲೀಸ್ ಮಾಡಿದ್ದು ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಮಾಡಿತ್ತು. ಅಂತೆಯೇ ಈ ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ 10ವರ್ಷ ದಾಟಿದೆ. ಹಾಗಿದ್ದರೂ ಅಭಿಮಾನಿಗಳ ಮನದಲ್ಲಿ ದಿ ಬೆಸ್ಟ್ ಗುಡ್ ಮೂವಿ ಎಂಬ ಸ್ಥಾನವನ್ನು ಬಾಹುಬಲಿ ಸಿನಿಮಾ ಪಡೆದಿದೆ‌. 10 ವರ್ಷದ ಸವಿನೆನಪಿಗಾಗಿ ಇತ್ತೀಚೆಗಷ್ಟೇ ಭಾಗ 1ಮತ್ತು ಭಾಗ ಎರಡು ಒಟ್ಟಿಗೆ ಸೇರಿಸಿ ಬಾಹುಬಲಿ ದಿ ಎಪಿಕ್ (Baahubali: The Epic) ಎಂದು ಸಿನಿಮಾ ಮರು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆ ಮಾಡಿದ್ದ ಕೆಲವು ದಿನ ಬಾಕ್ಸ್ ಆಫೀಸ್ ಉತ್ತಮ ಕಲೆಕ್ಷನ್ ಮಾಡಿದೆ. ಆದರೆ ಈಗ ಕಲೆಕ್ಷನ್ ಮಟ್ಟ ಕುಸಿಯುತ್ತಿದೆ ಎಂಬ ಮಾಹಿತಿ ವೈರಲ್ ಆಗುತ್ತಿದೆ.

ಎರಡು ಭಾಗ ಸೇರಿ ‘ಬಾಹುಬಲಿ: ದಿ ಎಪಿಕ್’ ಎಂದು ಅಕ್ಟೋಬರ್ 31ರಂದು ಮರು ಬಿಡುಗಡೆ ಮಾಡಲಾಗಿತ್ತು. ರಿಲೀಸ್ ಆದ ಕೆಲವು ದಿನ ಒಳ್ಳೆಯ ಕಲೆಕ್ಷನ್ ಕೂಡ ಮಾಡಿತು. ಆದರೆ ಈಗ ಚಿತ್ರದ ಒಟ್ಟು ಕಲೆಕ್ಷನ್ ಕುಸಿಯುತ್ತಿದೆ ಎಂದು ಹೇಳಲಾಗುತ್ತಿದೆ. ನವೆಂಬರ್ 4 ರಂದು ಈ ಸಿನಿಮಾ ಭಾರತ ದಲ್ಲಿ ಸುಮಾರು 1.50 ಕೋಟಿ ರೂ. ನಿವ್ವಳ ಗಳಿಸಿದೆ. ಈ ಮೂಲಕ ನಮ್ಮ ದೇಶದಲ್ಲಿ ಇದುವರೆಗೆ 27.60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮರು-ಬಿಡುಗಡೆ ಆದ ಬಳಿಕವೂ ಇಷ್ಟು ಕಲೆಕ್ಷನ್ ಮಾಡಿದ್ದು ಸಾಧನೆ ಎಂದು ಅನಿಸಿದರೂ ಈ ಚಿತ್ರಕ್ಕೆ ದೊಡ್ಡ ಅಭಿಮಾನಿ ಬಳಗವಿದ್ದು ನಿರೀಕ್ಷಿತ ಗಳಿಕೆ ಇನ್ನು ಕೂಡ ಆಗಲಿಲ್ಲ ಎನ್ನಬಹುದು.

ಬಾಹುಬಲಿ: ದಿ ಎಪಿಕ್ ಸಿನಿಮಾವು ಪ್ರೀಮಿಯರ್ ಪ್ರದರ್ಶನ ಗಳಿಂದ 1.15 ಕೋಟಿ ರೂ. ಪಡೆದಿತ್ತು. ನವೆಂಬರ್ 1ರಂದು 7.25 ಕೋಟಿ ಮತ್ತು ನವೆಂಬರ್ 2ನೇ ತಾರೀಖಿನಂದು 6.3 ಕೋಟಿ ಗಳಿಸಿತು. ಹಾಗಿದ್ದರೂ ನವೆಂಬರ್ 3ರಂದು ಬಾಕ್ಸ್ ಆಫೀಸ್ ಕಲೆಕ್ಷನ್ ಮಟ್ಟ 1.72ಕೋಟಿ ರೂಪಾಯಿ ಯಾಗಿದ್ದು ಈ ಮೂಲಕ 72% ರಷ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಮಟ್ಟ ಕುಸಿದಿದ್ದು ತಿಳಿದುಬಂದಿದೆ. ಇನ್ನು ನವೆಂಬರ್ 5ರ ಮಧ್ಯಾಹ್ನದ ತನಕ ಈ ಸಿನಿಮಾ ಬರೀ 13ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಹೀಗಾಗಿ ರಾತ್ರಿ ಒಳಗೆ ಒಂದು ಕೋಟಿ ಸಮೀಪ ತಲುಪ ಬಹುದಷ್ಟೇ ಎಂದು ಸಹ ಅಂದಾಜಿಸ ಲಾಗಿದೆ. ಬಿಡುಗಡೆಯಾಗಿ ಐದು ದಿನಗಳಲ್ಲಿ ಭಾರತದಲ್ಲಿ 26.10 ಕೋಟಿ ನಿವ್ವಳ ಮತ್ತು ವಿಶ್ವಾ ದ್ಯಂತ 42.85 ಕೋಟಿ ಗಳಿಕೆ ಮಾಡಿದೆ.

ಇದನ್ನು ಓದಿ:Yajamana Movie: 25 ವರ್ಷಗಳ ನಂತರ ಡಾ. ವಿಷ್ಣುವರ್ಧನ್ ಅಭಿನಯದ ʼಯಜಮಾನʼ ರೀ ರಿಲೀಸ್‌!

ಕಾಲ್ಪನಿಕ ಕಥೆ, ತಂತ್ರಜ್ಞಾನದ ಎಫೆಕ್ಟ್ , ಸಿನಿಮಾ ಕಲಾವಿದರ ಅದ್ಭುತ ಅಭಿನಯ ಇವೆಲ್ಲವೂ ಬಾಹುಬಲಿ ಭಾಗ 1 ಮತ್ತು ಭಾಗ 2 ಹಿಟ್ ಆಗಲು ಮುಖ್ಯ ಕಾರಣವಾಗಿದೆ‌‌. ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ ಮತ್ತು ತಮನ್ನಾ ಭಾಟಿಯಾ, ರಮ್ಯಾ ಕೃಷ್ಣ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ.

ಸಂಗೀತದಿಂದ ಹಿಡಿದು ಕಲಾವಿದರ ಕಾಸ್ಟ್ಯೂಂ ಡಿಸೈನ್ ತನಕವು ಈ ಸಿನಿಮಾ ಐತಿಹಾಸಿಕ ಅಂಶಗಳಿಗೆ ವಿಶೇಷ ಮಹತ್ವ ನೀಡಿತ್ತು. ಇದೀಗ ಇದೇ ಸಿನಿಮಾದ ಮುಂದುವರಿಕೆಯಾಗಿ 2027 ಕ್ಕೆ ಆ್ಯನಿಮೇಟೆಡ್ ಚಲನಚಿತ್ರ ಬಾಹುಬಲಿ: ದಿ ಎಟರ್ನಲ್ ವಾರ್ ಬಿಡುಗಡೆಯಾಗಲಿದೆ. ಇದರ ಟೀಸರ್ ಕೂಡ ದೊಟ್ಟ ಮಟ್ಟಕ್ಕೆ ಸುದ್ದಿ ಮಾಡಿತು, ಈ ಮೂಲಕ ರಾಜಮೌಳಿ ಕಾಲ್ಪನಿಕ ಜಗತ್ತು ಮತ್ತಷ್ಟು ವಿಸ್ತರಿಸಿಕೊಂಡಿದ್ದು 2027ರಲ್ಲಿ ಈ ಸಿನಿಮಾ ಹೊಸ ದಾಖಲೆ ಮಾಡುವ ನಿರೀಕ್ಷೆ ಇದೆ.