Rachita Ram: ʻಲ್ಯಾಂಡ್‌ಲಾರ್ಡ್ʼ ಸಿನಿಮಾದಿಂದ ಬಂತು ಬಿಗ್ ಅಪ್‌ಡೇಟ್; ರಚ್ಚು ಫ್ಯಾನ್ಸ್ ಫುಲ್ ಖುಷ್
Duniya Vijay: ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆಯುತ್ತಿರುವ ಚಿತ್ರಗಳಲ್ಲಿ ʼಲ್ಯಾಂಡ್‌ಲಾರ್ಡ್ʼ ಕೂಡ ಒಂದು. ಸ್ಯಾಂಡಲ್‌ವುಡ್ ಸಲಗ, ದುನಿಯಾ ವಿಜಯ್ ಅಭಿನಯದ ಚಿತ್ರ ಇದಾಗಿದ್ದು, ಸಾರಥಿ ಫಿಲಂಸ್ ಬ್ಯಾನರ್‌ನಡಿ ಮೂಡಿಬರುತ್ತಿದೆ. ಹೇಮಂತ್ ಗೌಡ ಕೆ.ಎಸ್. ಹಾಗೂ ಕೆ.ವಿ. ಸತ್ಯಪ್ರಕಾಶ್ ನಿರ್ಮಾಣ ಮಾಡಿದ್ದು, ಜಡೇಶ ಕೆ. ಹಂಪಿ ನಿರ್ದೇಶನದ ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಇದಾಗಿದೆ.
ರಚಿತಾ ರಾಮ್ -
ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆಯುತ್ತಿರುವ ಚಿತ್ರಗಳಲ್ಲಿ ʼಲ್ಯಾಂಡ್‌ಲಾರ್ಡ್ʼ (Landlord) ಕೂಡ ಒಂದು. ಸ್ಯಾಂಡಲ್‌ವುಡ್ ಸಲಗ, ದುನಿಯಾ ವಿಜಯ್ (Duniya Vijay) ಅಭಿನಯದ ಚಿತ್ರ ಇದಾಗಿದ್ದು, ಸಾರಥಿ ಫಿಲಂಸ್ ಬ್ಯಾನರ್‌ನಡಿ ಮೂಡಿಬರುತ್ತಿದೆ. ಹೇಮಂತ್ ಗೌಡ ಕೆ.ಎಸ್. ಹಾಗೂ ಕೆ.ವಿ. ಸತ್ಯಪ್ರಕಾಶ್ ನಿರ್ಮಾಣ ಮಾಡಿದ್ದು, ಜಡೇಶ ಕೆ. ಹಂಪಿ ನಿರ್ದೇಶನದ ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಇದಾಗಿದೆ. ಇದೀಗ ಈ ಸಿನಿಮಾದ ನಿಂಗವ್ವ (Ningavva Song) ಸಾಂಗ್ ಪ್ರೋಮೋ ಔಟ್ ಆಗಿದೆ.
ದೊಡ್ಡ ಮೊತ್ತ
ಸಾಲು ಸಾಲು ವಿಜಯ್ ಸಿನಿಮಾಗಳು ಆನಂದ್ ಆಡಿಯೋ ಕಂಪನಿಗೆ ಒಳ್ಳೆಯ ವ್ಯಾಪಾರವನ್ನ ಮಾಡಿಕೊಟ್ಟಿವೆ. ಅದೇ ರೀತಿ ಅಜನೀಶ್ ಲೋಕನಾಥ್ ಹಾಗೂ ಜಡೇಶ ಕೆ. ಹಂಪಿ ಅವ್ರ ಕಾಂಬಿನೇಶನ್ ಸಿನಿಮಾಗಳು ಆನಂದ್ ಆಡಿಯೋ ಆಯ್ಕೆಯ ಸಕ್ಸಸ್‌ಫುಲ್ ಸಿನಿಮಾಗಳಾಗಿವೆ.
ಆನಂದ್ ಆಡಿಯೋ ಕಂಪನಿ ʼಲ್ಯಾಂಡ್ ಲಾರ್ಡ್ʼ ಆಡಿಯೋ ಹಕ್ಕನ್ನ ದೊಡ್ಡ ಮೊತ್ತ ಕೊಟ್ಟು ಖರೀದಿಸಿದೆ. ಈ ಆಲ್ಬಂ ತುಂಬಾ ವಿಶೇಷತೆಗಳಿಂದ ಕೂಡಿದ್ದು, ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್ ಗಳಲ್ಲಿ ಒಂದಾಗಿರಲಿದೆ. ಈಗ ನಿಂಗವ್ವ ಸಾಂಗ್ ಫಸ್ಟ್ ಸಿಂಗಲ್ ಔಟ್ ಆಗಿದೆ. ಡಿಸೆಂಬರ್ 18, ಅಂದರೆ ನಾಳೆ ಈ ಸಾಂಗ್ ಔಟ್ ಆಗಲಿದೆ. ಸರಳ ಲುಕ್‌ನಲ್ಲಿ ಕಾಣುವ ರಚಿತಾ ಡಿಗ್ಲ್ಯಾಮರ್ ಪಾತ್ರದಲ್ಲಿ ಮಿಂಚಿದ್ದಾರೆ.
ಡಿಫರೆಂಟ್ ಲುಕ್
ರಚಿತಾ ಕೂಡ ಡಿಫರೆಂಟ್ ಲುಕ್‌ನಲ್ಲಿ ಕಂಡಿದ್ದಾರೆ. ಲ್ಯಾಂಡ್ ಲಾರ್ಡ್ʼ ಚಿತ್ರದಲ್ಲಿ ವಿಜಯ್ ಹಿರಿಯ ಮಗಳು ರಿತನ್ಯ ವಿಜಯ್ ಅಭಿನಯಿಸುತ್ತಿರುವುದು ವಿಶೇಷ. ರಚಿತಾ ರಾಮ್ ಈ ಚಿತ್ರದಲ್ಲಿ ವಿಜಯ್‌ಗೆ ಮತ್ತೊಮ್ಮೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ರಿವೀಲ್ ಮಾಡದ ಸಿಕ್ಕಾಪಟ್ಟೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆಯಂತೆ.
ಇದನ್ನೂ ಓದಿ: Gharga Movie: ಮಗನನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ ʻಜೋಗಿʼ ನಿರ್ಮಾಪಕ ʻಅಶ್ವಿನಿʼ ರಾಮ್ ಪ್ರಸಾದ್
ಈ ಮುಂಚೆಯೇ ರಚಿತಾ ರಾಮ್ ನಿಂಗವ್ವ ಫಸ್ಟ್ ಲುಕ್ ಹಂಚಿಕೊಂಡಿದ್ದರು. ಅಭಿನಯಕ್ಕೆ ಹೆಚ್ಚು ಪ್ರಾಶಸ್ತ್ಯವಿರುವ ನಿಂಗವ್ವನ ಪಾತ್ರದಲ್ಲಿ ರಚಿತಾ ಪರಕಾಯ ಪ್ರವೇಶ ಮಾಡಿದಂತೆ ನಟಿಸಿರುವ ಫಸ್ಟ್ಲುಕ್ ವೀಡಿಯೋ ವೈರಲ್ ಆಗಿರುವ ಬೆನ್ನಲ್ಲೇ ರಚ್ಚು ಪಾತ್ರದ ಬಗ್ಗೆ ವೀಕ್ಷಕರಲ್ಲೊ ಕುತೂಹಲ ಮೂಡಿತ್ತು.