ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rachita Ram: ಟಾಲಿವುಡ್‌ಗೆ ರಚಿತಾರಾಮ್ ರೀ ಎಂಟ್ರಿ? ಏನಿದು ಅಪ್‌ಡೇಟ್‌?

Rachita Ram: ಚಿರಂಜೀವಿ ಅವರ ಮಹತ್ವಾಕಾಂಕ್ಷೆಯ 158 ನೇ ಚಿತ್ರ ಪ್ರಸ್ತುತ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. 'ವಾಲ್ತೇರು ವೀರಯ್ಯ' ನಂತಹ ಬ್ಲಾಕ್‌ಬಸ್ಟರ್‌ಗಳ ನಂತರ, ಚಿರಂಜೀವಿ ಮತ್ತು ನಿರ್ದೇಶಕ ಬಾಬಿ ಕೊಲ್ಲಿ ಅವರ ಸಂಯೋಜನೆಯಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ನಿರೀಕ್ಷೆಗಳು ಗಗನಕ್ಕೇರಿವೆ. ಇದೀಗ ಮೆಗಾಸ್ಟಾರ್ ಚಿರಂಜೀವಿ ಚಿತ್ರಕ್ಕೆ ರಚ್ಚು ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ. ಇದೀಗ ಮೆಗಾಸ್ಟಾರ್ ಮುಂದಿನ ಚಿತ್ರದ ಪ್ರಮುಖ ಪಾತ್ರದ ಅವಕಾಶ ಸಿಕ್ಕಿದೆ ಎಂದು ಚರ್ಚೆ ನಡೀತಿದೆ.

ಟಾಲಿವುಡ್‌ಗೆ ರಚಿತಾರಾಮ್  ರೀ ಎಂಟ್ರಿ? ಏನಿದು ಅಪ್‌ಡೇಟ್‌?

ರಚಿತಾ ರಾಮ್‌ -

Yashaswi Devadiga
Yashaswi Devadiga Jun 6, 2026 8:36 PM

ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ಮಹತ್ವಾಕಾಂಕ್ಷೆಯ 158 ನೇ ಚಿತ್ರ (MEGA158) ಪ್ರಸ್ತುತ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. 'ವಾಲ್ತೇರು ವೀರಯ್ಯ' ನಂತಹ ಬ್ಲಾಕ್‌ಬಸ್ಟರ್‌ಗಳ ನಂತರ, ಚಿರಂಜೀವಿ ಮತ್ತು ನಿರ್ದೇಶಕ ಬಾಬಿ ಕೊಲ್ಲಿ ಅವರ ಸಂಯೋಜನೆಯಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ನಿರೀಕ್ಷೆಗಳು ಗಗನಕ್ಕೇರಿವೆ. ಇದೀಗ ಮೆಗಾಸ್ಟಾರ್ ಚಿರಂಜೀವಿ ಚಿತ್ರಕ್ಕೆ ರಚ್ಚು (Rachitaram) ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ. ಇದೀಗ ಮೆಗಾಸ್ಟಾರ್ ಮುಂದಿನ ಚಿತ್ರದ ಪ್ರಮುಖ ಪಾತ್ರದ ಅವಕಾಶ ಸಿಕ್ಕಿದೆ ಎಂದು ಚರ್ಚೆ ನಡೀತಿದೆ.

ಮಾಸ್ ಆಕ್ಷನ್ ಎಂಟರ್‌ಟೈನರ್ ಆಗಿ ರೂಪುಗೊಳ್ಳುತ್ತಿರುವ ಈ ಯೋಜನೆಯ ಬಗ್ಗೆ ಪ್ರತಿಯೊಂದು ಸಣ್ಣ ವಿಷಯವೂ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟ್ರೆಂಡಿಂಗ್‌ನಲ್ಲಿದೆ. ಈ ಸಂದರ್ಭದಲ್ಲಿ, ಈ ಚಿತ್ರದ ತಾರಾಬಳಗದ ಬಗ್ಗೆ ಹೊಸ ಸುದ್ದಿ ಫಿಲ್ಮ್ ನಗರ ವಲಯಗಳಲ್ಲಿ ಬಿಸಿ ವಿಷಯವಾಗಿದೆ.

ಚಿತ್ರೀಕರಣ ಹಂತದಲ್ಲಿರುವ ಈ ಚಿತ್ರದಲ್ಲಿ ನಿರ್ಣಾಯಕ ಮತ್ತು ಶಕ್ತಿಶಾಲಿ ಪಾತ್ರಕ್ಕಾಗಿ ಮಾಲಿವುಡ್ ಸುಂದರಿ ಹನಿ ರೋಸ್ ಅವರನ್ನು ಆಯ್ಕೆ ಮಾಡಲು ಚಿತ್ರತಂಡ ಆರಂಭದಲ್ಲಿ ಪರಿಗಣಿಸಿತ್ತು. 'ವೀರಸಿಂಹ ರೆಡ್ಡಿ' ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ತುಂಬಾ ಹತ್ತಿರವಾದ ಹನಿ ರೋಸ್ ಈ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಚಿತ್ರತಂಡ ಆರಂಭದಲ್ಲಿ ಚಿತ್ರಕಥೆಯ ಕೆಲಸದ ಸಮಯದಲ್ಲಿ ಭಾವಿಸಿತ್ತು.

ಇದನ್ನೂ ಓದಿ: Amruthadhaare Serial: ಅಖಾಡಕ್ಕೆ ಇಳಿದೇ ಬಿಟ್ಲು ಭೂಮಿ! ಮಿಂಚು ಸುಳಿವು ಸಿಕ್ಕೇ ಬಿಡ್ತಾ?

ಆದರೆ, ಕೆಲವು ಅನಿವಾರ್ಯ ಕಾರಣಗಳು ಮತ್ತು ದಿನಾಂಕ ಹೊಂದಾಣಿಕೆ ಸಮಸ್ಯೆಗಳಿಂದಾಗಿ, ಈ ಪಾತ್ರದಲ್ಲಿ ಅನಿರೀಕ್ಷಿತ ಬದಲಾವಣೆಯಾಗಿದೆ ಎಂದು ತೋರುತ್ತದೆ. ಹನಿ ರೋಸ್ ಬದಲಿಗೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಾಯಕಿ ಎನಿಸಿಕೊಂಡಿರುವ ಲಕ್ಕಿ ಬ್ಯೂಟಿ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಕನ್ನಡದ ಬಹುತೇಕ ಎಲ್ಲಾ ಟಾಪ್ ಹೀರೋಗಳ ಎದುರು ನಟಿಸಿ ಬ್ಲಾಕ್ ಬಸ್ಟರ್ ಹಿಟ್ ಗಳನ್ನು ಪಡೆದಿರುವ ರಚಿತಾ ರಾಮ್ ಗೆ ಅಲ್ಲಿ ಭಾರಿ ಕ್ರೇಜ್ ಇದೆ. ನಟನೆಗೆ ಒತ್ತು ನೀಡುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಲೇ ತನ್ನದೇ ಆದ ಗ್ಲಾಮರ್ ನಿಂದ ಪ್ರಭಾವ ಬೀರಬಲ್ಲ ರಚಿತಾ ರಾಮ್ ಗೆ ಈಗ ಟಾಲಿವುಡ್ ನಲ್ಲಿ ಮೆಗಾ ಅವಕಾಶ ಸಿಕ್ಕಿದೆ.

ಇದನ್ನೂ ಓದಿ: Peddi Box Office Collection: ಮೊದಲ ದಿನವೇ 100 ಕೋಟಿ ರೂ. ಕಲೆಕ್ಷನ್! ರಾಮ್ ಚರಣ್ ಮಾಸ್ ಕ್ರೇಜ್‌

ರಚಿತಾ ರಾಮ್ ಈ ಹಿಂದೆ 'ಸೂಪರ್ ಮಚ್ಚಿ' ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದರು. 2022 ರಲ್ಲಿ ಕಲ್ಯಾಣ್ ದೇವ್ ನಾಯಕನಾಗಿ ತೆರೆಕಂಡಿದ್ದ ಈ ಚಿತ್ರವು ಉತ್ತಮ ಪ್ರದರ್ಶನ ನೀಡಲಿಲ್ಲ. ಈಗ ಮೆಗಾಸ್ಟಾರ್ ಚಿತ್ರದೊಂದಿಗೆ ಅವರಿಗೆ ಟಾಲಿವುಡ್‌ನಲ್ಲಿ ಸರಣಿ ಅವಕಾಶಗಳು ಸಿಗುತ್ತವೆಯೇ ಎಂದು ಕಾದು ನೋಡಬೇಕಾಗಿದೆ.

ಇನ್ನುಳಿದಂತೆ ಧ್ರುವ ಸರ್ಜಾ ಜೋಡಿಯಾಗಿ 'ಕ್ರಿಮಿನಲ್' ಎಂಬ ಚಿತ್ರದಲ್ಲಿ ಡಿಂಪಲ್ ಕ್ವೀನ್ ನಟಿಸಿದ್ದಾರೆ. ಇನ್ನುಳಿದಂತೆ 'ಶಬರಿ' ಹಾಗೂ 'ಲವ್ ಮಿ or ಹೇಟ್ ಮಿ' ಸಿನಿಮಾಗಳು ಸದ್ಯಕ್ಕೆ ರಿಲೀಸ್ ಆಗುವಂತೆ ಕಾಣ್ತಿಲ್ಲ.