ಮಲಯಾಳಂ ಚಿತ್ರರಂಗದತ್ತ ಹೊರಟ ರಾಧಿಕಾ ಕುಮಾರಸ್ವಾಮಿ; ಬಿಗ್ ಬ್ಯಾನರ್‌ನಲ್ಲಿ ಶುರುವಾಗಲಿದೆ ಹೊಸ ಸಿನಿಮಾ
Radhika Malayalam Movie: ನಟಿ ರಾಧಿಕಾ ಕುಮಾರಸ್ವಾಮಿ ಅವರು ಶೀಘ್ರದಲ್ಲೇ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆಯೊಂದು ಇವರನ್ನು ಸಂಪರ್ಕಿಸಿದ್ದು, ಕಥೆ ಇಷ್ಟವಾಗಿರುವ ಕಾರಣ ಡೇಟ್ಸ್ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಸ್ವತಃ ರಾಧಿಕಾ ಅವರೇ ಖಚಿತಪಡಿಸಿದ್ದಾರೆ.
-
ಬಹುಭಾಷಾ ನಟಿ ರಾಧಿಕಾ ಕುಮಾರಸ್ವಾಮಿ ಅವರು 2024ರಲ್ಲಿ ಬಿಡುಗಡೆಯಾದ 'ಭೈರಾದೇವಿ' ಚಿತ್ರದ ನಂತರ ಚಿತ್ರರಂಗದಿಂದ ಸ್ವಲ್ಪ ಅಂತರ ಆಯ್ದುಕೊಂಡಿದ್ದರು. ʻಅಜಾಗ್ರತʼ ಎಂಬ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಈ ನಡುವೆ ಪುನಃ ಬೆಳ್ಳಿತೆರೆಯಲ್ಲಿ ಮಿಂಚಲು ರಾಧಿಕಾ ಕುಮಾರಸ್ವಾಮಿ ಸಜ್ಜಾಗುತ್ತಿದ್ದಾರೆ. ಈ ಬಾರಿ ಅವರು ಸ್ಕ್ರಿಪ್ಟ್ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಎಚ್ಚರಿಕೆಯಿಂದ ಇದ್ದಾರಂತೆ ರಾಧಿಕಾ. ಸದ್ಯ ಅವರ ಹೊಸ ಸಿನಿಮಾವು ಮಲಯಾಳಂ ಭಾಷೆಯಲ್ಲಿ ಮೂಡಿಬರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಮಾಲಿವುಡ್‌ಗೆ ಹೊರಟ ರಾಧಿಕಾ ಕುಮಾರಸ್ವಾಮಿ
ಕನ್ನಡದಲ್ಲಿ ಸ್ಟಾರ್ ಆಗಿ ಮಿಂಚಿರುವ ನಟಿ ರಾಧಿಕಾ ಕುಮಾರಸ್ವಾಮಿ ಅವರು ತೆಲುಗು ಮತ್ತು ತಮಿಳಿನಲ್ಲೂ ಸದ್ದು ಮಾಡಿದ್ದಾರೆ. ಇದೀಗ ಅವರು ಶೀಘ್ರದಲ್ಲೇ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ ಎಂಬ ಮಾಹಿತಿ ಕೇಳಿಬಂದಿದೆ. ಖ್ಯಾತ ನಿರ್ಮಾಣ ಸಂಸ್ಥೆಯೊಂದು ಅವರನ್ನು ಸಂಪರ್ಕಿಸಿದ್ದು, ಈ ಬಗ್ಗೆ ರಾಧಿಕಾ ಅವರೇ ಖಚಿತಪಡಿಸಿದ್ದಾರೆ.
Radhika Kumaraswamy: ಜಮೀರ್ ಅಹ್ಮದ್‌ಗೆ ರಾಧಿಕಾ ಕುಮಾರಸ್ವಾಮಿ 2.5 ಕೋಟಿ ರೂ. ಸಾಲ, ಲೋಕಾಯುಕ್ತ ವಿಚಾರಣೆ
"ನನಗೆ ಮಲಯಾಳಂ ಪ್ರಾಜೆಕ್ಟ್ ಒಂದರ ಆಫರ್ ಬಂದಿದೆ, ಅದರ ಕಥೆ ನನಗೆ ತುಂಬಾ ಇಷ್ಟವಾಯಿತು. ಸದ್ಯ ಡೇಟ್ಸ್ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ, ಎಲ್ಲವೂ ಸರಿಯಾಗಿ ನಡೆದರೆ ಶೀಘ್ರದಲ್ಲೇ ಅಧಿಕೃತವಾಗಿ ಈ ಪ್ರಾಜೆಕ್ಟ್ ಅನ್ನು ಘೋಷಿಸುವೆ" ಎಂದು ರಾಧಿಕಾ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
ನಟಿ ರಾಧಿಕಾ ಕುಮಾರಸ್ವಾಮಿ ವಿಚಾರಣೆ ಅಂತ್ಯ
'ಅಜಾಗ್ರತ' ಸಿನಿಮಾ ಎಲ್ಲಿಗೆ ಬಂತು?
ಎಂ. ಶಶಿಧರ್ ನಿರ್ದೇಶನದ 'ಅಜಾಗ್ರತ' ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಜೊತೆಗೆ ಶ್ರೇಯಸ್ ತಲ್ಪಾಡೆ, ಸಮುತಿರಕಣಿ ಮತ್ತು ಸುನಿಲ್ ಅಂತಹ ದೊಡ್ಡ ತಾರಾಗಣವಿದ್ದು, ಈ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಇದರೊಂದಿಗೆ ಕೆಲವು ಕನ್ನಡ ಚಿತ್ರಗಳ ಕಥೆಗಳನ್ನೂ ರಾಧಿಕಾ ಕೇಳುತ್ತಿದ್ದು, ಈ ವರ್ಷ ಕನಿಷ್ಠ ಎರಡು ಸಿನಿಮಾಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ.
"ಉತ್ತಮ ಸ್ಕ್ರಿಪ್ಟ್‌ಗಳು ಬರುತ್ತಿರುವುದು ಖುಷಿ ತಂದಿದೆ. ಕೌಟುಂಬಿಕ ಜವಾಬ್ದಾರಿಗಳಿಂದ ಸ್ವಲ್ಪ ಸಮಯ ಬ್ಯುಸಿಯಾಗಿದ್ದೆ, ಆದರೆ ಈ ವರ್ಷ ಕನಿಷ್ಠ ಎರಡು ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಆಲೋಚನೆಯಲ್ಲಿದ್ದೇನೆ" ಎಂದು ರಾಧಿಕಾ ಕುಮಾರಸ್ವಾಮಿ ಸೇರಿಸಿದ್ದಾರೆ.