ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪುರಾತನ ಕಾಲದ ನಾಣ್ಯಗಳ ಕುಡಿಕೆ ಪತ್ತೆ

ಮಕ್ಕಳು ಆಟವಾಡುವಾಗ ನಡೆದ ಅಕಸ್ಮಿಕ ಘಟನೆಯೊಂದು ಐತಿಹಾಸಿಕ ನಿಧಿಯ ಶೋಧಕ್ಕೆ ಕಾರಣ ವಾಗಿದೆ. ಗೋಪನಹಳ್ಳಿ ಗ್ರಾಮದ ನಿವಾಸಿ ರಂಗಮ್ಮ ಎಂಬುವರ ಮನೆಯ ಅಂಗಳದಲ್ಲಿ ಈ ಘಟನೆ ನಡೆದಿದೆ. ರಂಗಮ್ಮ ಅವರ ಮನೆಯಲ್ಲಿದ್ದ ಮಕ್ಕಳು ಆಮೆ ಆಟ ವಾಡುತ್ತಾ ಮನೆಯ ಅಂಗಳದಲ್ಲಿ ನೆಲವನ್ನು ಅಗೆಯುತ್ತಿದ್ದರು. ಈ ವೇಳೆ ಮಣ್ಣಿನ ಅಡಿಯಲ್ಲಿ ಸಣ್ಣ ಕುಡಿಕೆಯೊಂದು ಸಿಕ್ಕಿದೆ. ಕುಡಿಕೆಯನ್ನು ತೆಗೆದು ಪರಿಶೀಲಿಸಿದಾಗ ಅದರೊಳಗೆ ಪುರಾತನ ಕಾಲದ ನಾಣ್ಯಗಳು ಇರುವುದು ಕಂಡುಬಂದಿದೆ.

ಪುರಾತನ ಕಾಲದ ನಾಣ್ಯಗಳ ಕುಡಿಕೆ ಪತ್ತೆ

-

Profile
Ashok Nayak Oct 28, 2026 12:39 PM

ಚಿತ್ರದುರ್ಗ: ಕರ್ನಾಟಕದ ಇತಿಹಾಸವೆಂದರೆ ಕೋಟೆ, ರಾಜರ ಯುದ್ಧಗಳ ಕಥೆಯಷ್ಟೇ ಅಲ್ಲ, ಜನಸಾಮಾನ್ಯರು ಬಳಸುತ್ತಿದ್ದ ವಸ್ತುಗಳು ಇತಿಹಾಸವನ್ನು ನೆನಪಿಸುತ್ತವೆ. ಹಳೆಯ ನಾಣ್ಯಗಳು ಕೇವಲ ವ್ಯಾಪಾರದ ಮಾಧ್ಯಮಗಳಲ್ಲ. ಅವು ಅಂದಿನ ಸಾಮ್ರಾ ಜ್ಯದ ಆರ್ಥಿಕ ಸ್ಥಿತಿಗತಿ ಮತ್ತು ಇತಿಹಾಸವನ್ನು ತಿಳಿಸುವ ಜ್ಞಾನದ ನಿಧಿ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಅಪರೂಪದ ಹಳೆಯ ಕಾಲದ ನಾಣ್ಯಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಮಕ್ಕಳು ಆಟವಾಡುವಾಗ ನಡೆದ ಅಕಸ್ಮಿಕ ಘಟನೆಯೊಂದು ಐತಿಹಾಸಿಕ ನಿಧಿಯ ಶೋಧಕ್ಕೆ ಕಾರಣವಾಗಿದೆ. ಗೋಪನಹಳ್ಳಿ ಗ್ರಾಮದ ನಿವಾಸಿ ರಂಗಮ್ಮ ಎಂಬುವರ ಮನೆಯ ಅಂಗಳದಲ್ಲಿ ಈ ಘಟನೆ ನಡೆದಿದೆ. ರಂಗಮ್ಮ ಅವರ ಮನೆಯಲ್ಲಿದ್ದ ಮಕ್ಕಳು ಆಮೆ ಆಟ ವಾಡುತ್ತಾ ಮನೆಯ ಅಂಗಳದಲ್ಲಿ ನೆಲವನ್ನು ಅಗೆಯುತ್ತಿದ್ದರು. ಈ ವೇಳೆ ಮಣ್ಣಿನ ಅಡಿಯಲ್ಲಿ ಸಣ್ಣ ಕುಡಿಕೆಯೊಂದು ಸಿಕ್ಕಿದೆ. ಕುಡಿಕೆಯನ್ನು ತೆಗೆದು ಪರಿಶೀಲಿಸಿದಾಗ ಅದರೊಳಗೆ ಪುರಾತನ ಕಾಲದ ನಾಣ್ಯಗಳು ಇರುವುದು ಕಂಡುಬಂದಿದೆ.

ಇದನ್ನೂ ಓದಿ: Raghavendra Chitravani: ರಾಘವೇಂದ್ರ ಚಿತ್ರವಾಣಿಗೆ 50ರ ಸಡಗರ; ಲೋಗೋ ಲಾಂಚ್

ಸ್ಥಳಕ್ಕೆ ಕಂದಾಯ ಅಧಿಕಾರಿಗಳ ಭೇಟಿ: ವಿಷಯ ತಿಳಿದ ತಕ್ಷಣ ಚಳ್ಳಕೆರೆ ತಾಲೂಕು ತಹಸೀಲ್ದಾರ್ ರಹೆನ್ ಪಾಶಾ ಅವರು ಸಿಬ್ಬಂದಿಯೊಂದಿಗೆ ಗೋಪನಹಳ್ಳಿಯ ರಂಗಮ್ಮ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಸಾರ್ವಜನಿಕ ರಿಂದ ಮಾಹಿತಿ ಪಡೆದ ಅಧಿಕಾರಿಗಳು, ನಾಣ್ಯಗಳಿದ್ದ ಕುಡಿಕೆ ಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಪುರಾತತ್ವ ಇಲಾಖೆಗೆ ಮಾಹಿತಿ ರವಾನೆ: ಈ ನಾಣ್ಯಗಳು ಯಾವ ಕಾಲಘಟ್ಟಕ್ಕೆ ಸೇರಿದವು, ಯಾವ ಲೋಹದಿಂದ ಮಾಡಲ್ಪಟ್ಟಿವೆ ಮತ್ತು ಇವುಗಳ ಐತಿಹಾಸಿಕ ಮಹತ್ವವೇನು ಎಂಬುದನ್ನು ಕಂಡು ಕೊಳ್ಳಲು ಕಂದಾಯ ಇಲಾಖೆಯು ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಅಧಿಕೃತ ಮಾಹಿತಿ ರವಾನಿಸಿದೆ. ಪುರಾತತ್ವ ತಜ್ಞರು ಸ್ಥಳಕ್ಕೆ ಆಗಮಿಸಿ ವೈeನಿಕ ಪರಿಶೀಲನೆ ನಡೆಸಿದ ಬಳಿಕವಷ್ಟೇ ಈ ನಾಣ್ಯಗಳ ಹಿಂದಿನ ರಾಜವಂಶ ಹಾಗೂ ಇತಿಹಾಸ ಸ್ಪಷ್ಟವಾಗಲಿದೆ.