ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Radhika Pandit: ಅಭಿಮಾನಿಗಳಿಗಾಗಿ ಹೊಸ ಫೋಟೋಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್‌; ಸ್ಪೆಷಲ್ ವಿಡಿಯೋದಲ್ಲಿದೆ ಈ ಹಾಡು!

Radhika Pandit: ಇನ್ನುಳಿದಂತೆ ಮಗಳು ಐರಾ ಹಾಗೂ ಮಗ ಯಥರ್ವ್ ಜೊತೆ ರಾಧಿಕಾ ಇರುವ ಫೋಟೊ, ವೀಡಿಯೋ ಹಂಚಿಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಮಕ್ಕಳ ಜೊತೆ ಕೂರ್ಗ್, ಮಡಿಕೇರಿಗೆ ತೆರಳಿ ಒಂದಷ್ಟು ಸಮಯ ಕಳೆದಿದ್ದರು.ಯಶ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಿದ್ದರಿಂದ ಈ ವೇಳೆ ಫ್ಯಾಮಿಲಿ ಜೊತೆ ಕಾಣಿಸಿಕೊಂಡಿರಲಿಲ್ಲ. ಸದ್ಯ ರಾಧಿಕಾ ಪಂಡಿತ್ ಒಂದಷ್ಟು ಸೆಲ್ಫಿ ಫೋಟೊಗಳನ್ನು ಕೊಲಾಜ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ.

ರಾಧಿಕಾ ಪಂಡಿತ್‌-ಯಶ್‌

ನಟಿ ರಾಧಿಕಾ ಪಂಡಿತ್‌ (Radhika Pandit) ಅವರು ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಮದುವೆ ನಂತರ ಸಂಪೂರ್ಣ ಸಮಯವನ್ನ ಕುಟುಂಬಕ್ಕೆ ಮೀಸಲಿಟ್ಟಿದ್ದಾರೆ. ನಟಿ ಕೊನೆಯದಾಗಿ ಅಭಿನಯಿಸಿದ ಚಿತ್ರ ‘ಆದಿ ಲಕ್ಷ್ಮಿ ಪುರಾಣ’. ರಾಧಿಕಾ ಪಂಡಿತ್‌ ಅವರು ಆಗಾಗ ಮಕ್ಕಳ ಜೊತೆ ಸಮಯ ಮೀಸಲಿಟ್ಟಿರೋ ಫೋಟೋವನ್ನು (Photo) ಹಂಚಿಕೊಳ್ಳುತ್ತಿರುತ್ತಾರೆ, ಸದ್ಯ ರಾಧಿಕಾ ಪಂಡಿತ್ ಒಂದಷ್ಟು ಸೆಲ್ಫಿ ಫೋಟೊಗಳನ್ನು ಕೊಲಾಜ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ.

ಒಂದು ಸಣ್ಣ ಕಲೆಕ್ಷನ್

ಪತಿ ಯಶ್ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಫೋಟೊಗಳು ಇದರಲ್ಲಿದೆ. 'ಕಡ್ಡಿಪುಡಿ' ಚಿತ್ರದ 'ಬೇರೆ ಯಾರೋ' ಹಾಡಿನ ಹಿನ್ನೆಲೆಯಲ್ಲಿ ಫೋಟೊಗಳನ್ನು ನೋಡಬಹುದು.

ಇದನ್ನೂ ಓದಿ: Amruthadhaare Serial: ಪ್ರೀತಿಯಿಂದ ಸಾಕಿದ ಮಗಳು ಮಿಂಚು ಕೈ ತಪ್ಪಿ ಹೋಗೋ ಆತಂಕದಲ್ಲಿ ಗೌತಮ್ - ಭೂಮಿ!

"ನನ್ನ ಸೆಲ್ಫಿಗಳನ್ನು ನೀವು ಬಹಳ ಮೆಚ್ಚಿಕೊಳ್ತೀರಾ. ನಿಮ್ಮೆಲ್ಲರಿಂದ ಅವುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ, ನನ್ನ ನೆಚ್ಚಿನ ಗಾಯಕಿ ಮತ್ತು ಗೀತರಚನೆಕಾರರಿಂದ ನನ್ನ ನೆಚ್ಚಿನ ಹಾಡುಗಳಲ್ಲಿ ಒಂದರೊಂದಿಗೆ ಒಂದು ಸಣ್ಣ ಕಲೆಕ್ಷನ್ ಮಾಡಿದ್ದೀನಿ" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

ಎಕ್ಸ್‌ಕ್ಲೂಸಿವ್ ಫೋಟೊಗಳನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ಕಾರಿನಲ್ಲಿ ಕುಳಿತಾಗ, ಎಲ್ಲಿಗೋ ಹೋಗಲು ಅಲಂಕಾರಗೊಂಡು ತಯಾರಾದಾಗ ರಾಧಿಕಾ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿಗಳನ್ನು ನೋಡಬಹುದು.

ಇನ್ನುಳಿದಂತೆ ಮಗಳು ಐರಾ ಹಾಗೂ ಮಗ ಯಥರ್ವ್ ಜೊತೆ ರಾಧಿಕಾ ಇರುವ ಫೋಟೊ, ವೀಡಿಯೋ ಹಂಚಿಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಮಕ್ಕಳ ಜೊತೆ ಕೂರ್ಗ್, ಮಡಿಕೇರಿಗೆ ತೆರಳಿ ಒಂದಷ್ಟು ಸಮಯ ಕಳೆದಿದ್ದರು.ಯಶ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಿದ್ದರಿಂದ ಈ ವೇಳೆ ಫ್ಯಾಮಿಲಿ ಜೊತೆ ಕಾಣಿಸಿಕೊಂಡಿರಲಿಲ್ಲ. ಇನ್ನು ರಾಧಿಕಾ ಪಂಡಿತ್ ಅವರನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.



ರಾಧಿಕಾ ಪಂಡಿತ್‌ ಅವರು ಮೂಲತಃ ಗೋವಾ ರಾಜ್ಯದವರು. ಮನೆಯಲ್ಲಿ ಕೊಂಕಣಿ ಮಾತ್ನಾಡುತ್ತಾರೆ. ತಂದೆ-ತಾಯಿ.. ಮಗಳ ಜೊತೆಗೆ ನೆಲೆಸಿದ್ದು, ಸಹೋದರ ಲಂಡನ್‌ನಲ್ಲಿದ್ದಾರೆ. ಹೀಗಾಗಿ, ಗೋವಾ ಕಡಲತೀರವೇ ರಾಧಿಕಾ ಅವರಿಗೆ ಬಲು ಪ್ರೀತಿ. ಔಟಿಂಗ್‌ ಅಂತ ಹೊರಟರೆ ಬೀಚ್‌ಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ: Divyashree Sullia: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತ ನಟಿ; 'ಕೃಷ್ಣ ರುಕ್ಕು' ಸೀರಿಯಲ್‌ ನಟಿಯ ಹೋರಾಟದ ಕಥೆ ಇದು

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಮಹಾರಾಷ್ಟ್ರದ ಐಷಾರಾಮಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಹತ್ವದ ಹೂಡಿಕೆ ಮಾಡಿದ್ದಾರೆ. ಅಲಿಬಾಗ್‌ನಲ್ಲಿನ ಬೀಚ್‌ಫ್ರಂಟ್‌ ಆಸ್ತಿಯನ್ನ ಬರೋಬ್ಬರಿ 24 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರಂತೆ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ.

Yashaswi Devadiga

View all posts by this author