Yatharva Yash: ಹಾವನ್ನು ಕೈಯಲ್ಲಿ ಹಿಡಿದ ಯಶ್ ಮಗ ಯಥರ್ವ್; ವಿಡಿಯೊ ಹಂಚಿಕೊಂಡ ರಾಧಿಕಾ ಪಂಡಿತ್
Yash: ಸ್ಯಾಂಡಲ್‌ವುಡ್ ಕ್ಯೂಟ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಇತ್ತೀಚೆಗೆ ತಮ್ಮ ಮಗ ಯಥರ್ವ್‌ನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ಬಾರಿ ಅತನ 6ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಯಥರ್ವ್‌ನ ಇಚ್ಛೆಯಂತೆ ಕಾಡಿನ ಥೀಮ್‌ನಲ್ಲಿ ಇಡೀ ಸಮಾರಂಭ ನಡೆದಿದೆ. ಜತೆಗೆ ನಿಜವಾದ ಪ್ರಾಣಿಗಳನ್ನೂ ಕರೆತರಲಾಗಿತ್ತು.
6ನೇ ಹುಟ್ಟುಹಬ್ಬ ಅಚರಿಸಿಕೊಂಡ ಯಶ್-ರಾಧಿಕಾ ಪಂಡಿತ್ ಮಗ ಯಥರ್ವ್ -
Ramesh B
Nov 2, 2025 2:43 PM
ಬೆಂಗಳೂರು, ನ. 2: ಸ್ಯಾಂಡಲ್‌ವುಡ್ ಕ್ಯೂಟ್ ದಂಪತಿ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಇತ್ತೀಚೆಗೆ ತಮ್ಮ ಮಗ ಯಥರ್ವ್‌ನ (Yatharva Yash) ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. 2019ರ ಅಕ್ಟೋಬರ್ 30ರಂದು ಯಶ್- ರಾಧಿಕಾ ಪಂಡಿತ್‌ಗೆ ಯಥರ್ವ್ ಜನಿಸಿದ್ದ. ಹೀಗಾಗಿ ಈ ಬಾರಿ ಅತನ 6ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಯಥರ್ವ್‌ನ ಇಚ್ಛೆಯಂತೆ ಕಾಡಿನ ಥೀಮ್‌ನಲ್ಲಿ ಇಡೀ ಸಮಾರಂಭ ನಡೆದಿದೆ. ಸದ್ಯ ರಾಧಿಕಾ ಪಂಡಿತ್ ಮಗನ ಹುಟ್ಟುಹಬ್ಬ ಆಚರಣೆಯ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.
ʼʼಪ್ರಕೃತಿ ಪ್ರೇಮಿ ಯಥರ್ವ್‌ಗೆ ಅದ್ಭುತವಾದ 6ನೇ ಹುಟ್ಟುಹಬ್ಬ! ಆ ದಿನವನ್ನು ಸಹಬಾಳ್ವೆಯ ಉದಾಹರಣೆಯಾಗಿ ಆಚರಿಸಲಾಯಿತು. ರಕ್ಷಿಸಲ್ಪಟ್ಟ ಪ್ರಾಣಿಗಳನ್ನು ಇಲ್ಲಿಗೆ ಕರೆತಂದಿದ್ದಕ್ಕಾಗಿ ʼಪ್ರಾಣಿ ದಿ ಪೆಟ್ ಸ್ಯಾಂಕ್ಚುರಿʼ ಸಂಸ್ಥೆಗೆ ವಿಶೇಷ ಧನ್ಯವಾದಗಳುʼʼ ಎಂದು ರಾಧಿಕಾ ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Yash-Radhika Pandit: ರಾಕಿ ಭಾಯ್‌ಗೆ ಮದುವೆ ಆನಿವರ್ಸರಿ ಸಂಭ್ರಮ; ಯಶ್-ರಾಧಿಕಾ ಜೋಡಿ ದಾಂಪತ್ಯ ಜೀವನಕ್ಕೆ ಈಗ ಎಂಟರ ನಂಟು!
ನಿಜವಾದ ಪ್ರಾಣಿ ಪಕ್ಷಿಗಳ ಜತೆ ಯಥರ್ವ್ ಹುಟ್ಟುಹಬ್ಬ ಆಚರಿಸಿದ್ದು ವಿಶೇಷ. ಹಾವು, ಆಮೆ, ಓತಿ, ಕಪ್ಪೆ, ಗಿಳಿ ಮುಂತಾದ ವನ್ಯ ಜೀವಿಗಳನ್ನು ಈ ಪಾರ್ಟಿಗೆ ಕರೆತರಲಾಗಿತ್ತು. ಯಥರ್ವ್ ಸೇರಿದಂತೆ ಮಕ್ಕಳೆಲ್ಲ ಈ ಪ್ರಾಣಿಗಳನ್ನು ಸ್ಪರ್ಶಿಸಿ ಖುಷಿ ಪಟ್ಟಿದ್ದಾರೆ. ಈ ವೇಳೆ ಎಲ್ಲರ ಮುಖದಲ್ಲಿ ಅಚ್ಚರಿ ಕಂಡು ಬಂದಿದೆ. ಈ ವೇಳೆ ಪ್ರಾಣಿಗಳಿಗೆ ಯಾವುದೇ ರೀತಿಯ ಹಾನಿಯ ಮಾಡಿಲ್ಲ ಎಂದು ರಾಧಿಕಾ ಪಂಡಿತ್ ಸ್ಪಷ್ಟಪಡಿಸಿದ್ದಾರೆ. ಬರ್ತ್ ಡೇ ಪಾರ್ಟಿಯಲ್ಲಿ ಯಥರ್ವ್‌ನ ಅಕ್ಕ ಆಯ್ರಾ ಪ್ರಧಾನ ಆಕರ್ಷಣೆಯಾಗಿದ್ದಳು. ಆಕೆ ಕೂಡ ಪ್ರಾಣಿಗಳೊಂದಿಗೆ ಖುಷಿ ಖುಷಿಯಿಂದ ಸಮಯ ಕಳೆದಿದ್ದಾಳೆ.
ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್ ಪೋಸ್ಟ್:
ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಯಶ್ ಮತ್ತು ರಾಧಿಕಾ ಪಂಡಿತ್ 2016ರಲ್ಲಿ ಮದುವೆಯಾದರು. 2018ರಲ್ಲಿ ಆಯ್ರಾ ಜನಿಸಿದರೆ ಮರುವರ್ಷ ಯಥರ್ವ್ ಜನಿಸಿದ. ಚಿತ್ರಗಳಲ್ಲಿ ಎಷ್ಟೇ ಬ್ಯಸಿ ಇದ್ದರೂ ಯಶ್ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುವುದನ್ನು ಮರೆಯುವುದಿಲ್ಲ. ಪ್ರತಿ ಹಬ್ಬವನ್ನು, ಮಕ್ಕಳ ಜನ್ಮದಿನವನ್ನು ಪತ್ನಿ, ಮಕ್ಕಳೊಂದಿಗೆ ಅದ್ಧೂರಿಯಾಗಿ ಆಚರಿಸುತ್ತಾರೆ. ಆಗಾಗ ಕುಟುಂಬದೊಂದಿಗೆ ಕಳೆದ ಖುಷಿಯ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಬಹುನಿರೀಕ್ಷಿತ ಚಿತ್ರಗಳಲ್ಲಿ ಬ್ಯುಸಿ
ಸದ್ಯ ಯಶ್ ಬಹು ನಿರೀಕ್ಷಿತ ಚಿತ್ರಗಳಾದ ʼಟಾಕ್ಸಿಕ್ʼ ಮತ್ತು ʼರಾಮಾಯಣʼದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. 2022ರಲ್ಲಿ ತೆರೆಕಂಡ ʼಕೆಜಿಎಫ್ 2' ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಬಳಿಕ ಯಶ್ ಒಪ್ಪಿಕೊಂಡ ಚಿತ್ರಗಳಿವು ಎನ್ನುವುದು ವಿಶೇಷ. ಮಲಯಾಳಂ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ʼಟಾಕ್ಸಿಕ್ʼ ಕನ್ನಡ ಜತೆ ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದ್ದು, ಬಳಿಕ ವಿವಿಧ ಭಾಷೆಗಳಿಗೆ ಡಬ್ ಆಗಲಿದೆ. ಇನ್ನು ನಿತೇಶ್ ತಿವಾರಿ ನಿರ್ದೇಶನದ ʼರಾಮಾಯಣʼದಲ್ಲಿ ಯಶ್ ರಾವಣನ ಪಾತ್ರ ನಿರ್ವಹಿಸುತ್ತಿದ್ದು, ರಣಬೀರ್ ಕಪೂರ್, ಸಾಯಿ ಪಲ್ಲವಿ ರಾಮ ಮತ್ತು ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ʼಟಾಕ್ಸಿಕ್ʼ ಮುಂದಿನ ವರ್ಷ ಮಾರ್ಚ್‌ನಲ್ಲಿ ತೆರೆಕಂಡರೆ, 2 ಭಾಗಗಳಲ್ಲಿ ಸಿದ್ಧವಾಗುತ್ತಿರುವ ರಾಮಾಯಣದ ಮೊದಲ ಪಾರ್ಟ್ ದೀಪಾವಳಿ ವೇಳೆಗೆ ರಿಲೀಸ್ ಆಗಲಿದೆ.