ರಾಧಿಕಾ ಪಂಡಿತ್ (Radhika Pandit) ಹಾಗೂ ರಾಕಿಂಗ್ ಸ್ಟಾರ್ (Yash) ಯಶ್ ಯಾವುದೇ ಶುಭ ಸಮಾರಂಭಗಳಿರಲಿ, ವಿಶೇಷ ದಿನಗಳಇರಲಿ ಸುದ್ದಿಯಲ್ಲಿ ಇದ್ದೇ ಇರ್ತಾರೆ. ಹುಟ್ಟುಹಬ್ಬ, ಮ್ಯಾರೇಜ್ ಆನಿವರ್ಸರಿ ಇತ್ಯಾದಿಗಳಿಗೆ ಹಾಕಿಕೊಳ್ಳೋ ಪೋಸ್ಟ್‌ಗಳು ವೈರಲ್ ಆಗುತ್ತವೆ. ಇದೀಗ ವ್ಯಾಲೆಂಟೈನ್ ಡೇ ಸಂದರ್ಭದಲ್ಲಿ ರಾಧಿಕಾ ಪಂಡಿತ್ ಯಶ್‌ಗೆ ಹಾರೈಸಿದ್ದಾರೆ. ವ್ಯಾಲೆಂಟೈನ್ಸ್ ಡೇ (Valentine's Day) ಪ್ರಯುಕ್ತ ರಾಧಿಕಾ ಪಂಡಿತ್ ಅವರು ಯಶ್‌ಗೆ ವಿಶ್ ಮಾಡಿದ್ದಾರೆ. ಈ ಪೋಸ್ಟ್ ಗಮನ ಸೆಳೆದಿದೆ.
ನನ್ನನ್ನು ದಿನವೂ ಆಯ್ಕೆ ಮಾಡಿದ್ದಕ್ಕೆ ನಿನಗೆ ಧನ್ಯವಾದ
ಕಡಲ ತೀರದ ರೆಸಾರ್ಟ್‌ನಲ್ಲಿ ಇಬ್ಬರೂ ಕುಳಿತು ಬೀಚ್ ನೋಟವನ್ನು ನೋಡುತ್ತಿರುವ ಹಾಗೂ ಪಟಾಕಿಗಳ ಸಂಭ್ರಮ ಎಂಜಾಯ್ ಮಾಡುತ್ತಿರುವ ಫೋಟೋ ಕೂಡ ಶೇರ್ ಮಾಡಿಕೊಂಡಿದ್ದಾರೆ. ಯಾರೂ ನೋಡದ ಹಾಗೆ ನಾನು ನೃತ್ಯ ಮಾಡಲು ಸಾಧ್ಯವಾಗಿಸಿದ ವ್ಯಕ್ತಿಗೆ.. ನಿನ್ನ ಕಣ್ಣುಗಳಲ್ಲಿ ದಣಿವು, ಬೇರೆ ಯಾರೂ ಗಮನಿಸದ ತ್ಯಾಗ, ದೂರು ನೀಡದೆ ನೀನು ಹೊತ್ತುಕೊಂಡ ದೀರ್ಘ ದಿನಗಳ ಭಾರ ನನಗೆ ಕಾಣುತ್ತಿದೆ.. ಅದು ನಮಗಾಗಿ ಎಂದು ನನಗೆ ತಿಳಿದಿದೆ.
ಇದನ್ನೂ ಓದಿ: Lahari Velu Son Marriage: ಲಹರಿ ವೇಲು ಪುತ್ರ ಅದ್ಧೂರಿ ವಿವಾಹ; ಇಲ್ಲಿವೆ ಫೋಟೋಸ್
ಪ್ರತಿದಿನ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. 2004ರಲ್ಲಿ 'ನಂದಗೋಕುಲ' ಸೀರಿಯಲ್ ಸಲುವಾಗಿ ಯಶ್ ರಾಧಿಕಾ ಭೇಟಿಯಾದರು. ನಂತರ ಡ್ರಾಮಾ ಮತ್ತು 'ಮೊಗ್ಗಿನ ಮನಸ್ಸು' ಸಿನಿಮಾಗಳಲ್ಲಿ ತೆರೆಹಂಚಿಕೊಂಡರು.
7 ವರ್ಷಗಳ ಪ್ರೀತಿ ಬಳಿಕ ಗೋವಾದ ಕಡಲ ತೀರದಲ್ಲಿ 2016ರಲ್ಲಿ ಅದ್ಧೂರಿ ನಿಶ್ಚಿತಾರ್ಥ ಮಾಡಿಕೊಂಡರು. 2016ರ ಡಿಸೆಂಬರ್ 9ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದರು.
ಇಬ್ಬರು ಸ್ನೇಹಿತರಾಗಿದ್ದ ಇವರು ಒಬ್ಬರಿಗೊಬ್ಬರು ಎಲ್ಲವನ್ನೂ ಹಂಚಿ ಕೊಳ್ಳುತ್ತಿದ್ದರು. ವೃತ್ತಿಪರ ಜೀವನದಲ್ಲಿ ಏರಿಳಿತ , ನೋವು , ನಲಿವು, ಎಲ್ಲವನ್ನು ಶೇರ್ ಮಾಡು ತ್ತಿದ್ದರು. ಪ್ರೀತಿ ಯಾವಾಗ ಆಯ್ತು ಎಂಬುದರ ಬಗ್ಗೆ ನಟ ಯಶ್ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದುನಾವು ಒಳ್ಳೆ ಸ್ನೇಹಿತರಾಗಿದ್ದಾಗ ಎಲ್ಲ ವಿಚಾರ ಹಂಚಿಕೊಳ್ಳುತ್ತಲೇ ಅವರು ನನಗೆ ಅರ್ಥವಾಗುತ್ತ ಹೋದರು. ನಾನು ಯಾರನ್ನು ಅಷ್ಟಾಗಿ ಹಚ್ಚಿಕೊಂಡಿರಲಿಲ್ಲ. ಆದರೆ ರಾಧಿಕಾ ಬಹಳ ಇಷ್ಟವಾಗಿ ಬಿಟ್ಟಿದ್ದರು. ಆಕೆ ಬರಿ ನನ್ನ ಸ್ನೇಹಿತಳಲ್ಲ ಎಂಬ ಅರಿವು ನನಗಾಯ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: Allu Sirish Wedding: ಅಲ್ಲು ಸಿರೀಶ್ ಹಳದಿ ಶಾಸ್ತ್ರ ಫೋಟೋ ವೈರಲ್; ಅಲ್ಲು ಅರ್ಜುನ್ ಬೇಸರ ಹೊರಹಾಕಿದ್ದೇಕೆ?
ರಾಧಿಕಾ ಪಂಡಿತ್ ಕೂಡ ಮಾತನಾಡಿದ್ದು, ನನಗೆ ಲವ್ ಮೂಮೆಂಟ್ ಗಳು ಕಾಲ್ ಮೆಸೇಜ್ ಇಷ್ಟವಿತ್ತು ಆದರೆ ಯಶ್ ಅದರಿಂದೆಲ್ಲ ದೂರ ಇದ್ದರು. ಅವರಿಗೆ ಡೇಟಿಂಗ್ ಮಾಡುವುದು ಅಷ್ಟು ಇಷ್ಟ ಇರಲಿಲ್ಲ. ಅಲ್ಲಿ ಸಮಯ ವ್ಯರ್ಥ ಮಾಡುವ ಬದಲು ಏನಾದರೂ ಹೊಸತು ಮಾಡ ಬೇಕು ಎಂಬ ಯೋಚನೆ ಅವರಲ್ಲಿತ್ತು ಹೀಗಾಗಿ ನಾವು ಡೇಟಿಂಗ್ ಏನು ಮಾಡಿಲ್ಲ. ಲವ್ ಮಾಡಿ ಮದುವೆಯಾಗಿದ್ದು ಈಗ ಖುಷಿಯಿಂದ ಇದ್ದೇವೆ ಎಂದು ತಿಳಿಸಿದ್ದರು.