ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ragini Dwivedi: ಇವೆಂಟ್​ವೊಂದರಲ್ಲಿ ಅಭಿಮಾನಿಯ ಕೆನ್ನೆಗೆ ಬಾರಿಸಿದ ರಾಗಿಣಿ ದ್ವಿವೇದಿ: ವಿಡಿಯೋ ನೋಡಿ

Ragini Dwivedi Slapped Fan: ತಮ್ಮ ನೆಚ್ಚಿನ ಕಲಾವಿದರನ್ನು ನೋಡಿದ ತಕ್ಷಣ ಅಭಿಮಾನಿಗಳು ಫೋಟೋ ತಗೊಳ್ಳಲು ಮುಗಿಬೀಳುವುದು ಕಾಮನ್. ಹ್ಯಾಂಡ್‌ಶೇಕ್‌ ಮಾಡುತ್ತಾರೆ, ಇನ್ನೂ ಕೆಲವರು ಮಿತಿ ಮೀರಿ ವರ್ತನೆ ಮಾಡುತ್ತಾರೆ. ಹೀಗೆ ಅಭಿಮಾನಿಯೋರ್ವರು ಕೈ ಹಿಡಿದು ಎಳೆದಿದ್ದಕ್ಕೆ ರಾಗಿಣಿ ದ್ವಿವೇದಿ ಅವರು ಕೆನ್ನೆಗೆ ಬಾರಿಸಿದ್ದಾರೆ.

ಅಭಿಮಾನಿಯ ಕೆನ್ನೆಗೆ ಬಾರಿಸಿದ ರಾಗಿಣಿ ದ್ವಿವೇದಿ: ವಿಡಿಯೋ

Ragini Dwivedi

Profile Vinay Bhat Mar 10, 2025 6:54 AM

ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ (Ragini Dwivedi) ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಯಾವುದೂ ತೆರೆಕಂಡಿಲ್ಲ. ಬದಲಾಗಿ ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆ್ಯಕ್ಟಿವ್ ಇದ್ದಾರೆ. ಸಿನಿಮಾ ಮಾಡುವುದು ಕಡಿಮೆ ಮಾಡಿದ್ದರೂ ರಾಗಿಣಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇವರು ಎಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡರೂ ಫೋಟೋಕ್ಕೆ-ಸೆಲ್ಫೀಗಾಗಿ ಅಭಿಮಾನಿಗಳು ಮುಗಿ ಬೀಳುತ್ತಾರೆ. ಆದರೆ, ಇದೀಗ ರಾಗಿಣಿ ಅವರು ತಮ್ಮ ಅಭಿಮಾನಿಗೆಯೇ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ತಮ್ಮ ನೆಚ್ಚಿನ ಕಲಾವಿದರನ್ನು ನೋಡಿದ ತಕ್ಷಣ ಅಭಿಮಾನಿಗಳು ಫೋಟೋ ತಗೊಳ್ಳಲು ಮುಗಿಬೀಳುವುದು ಕಾಮನ್. ಹ್ಯಾಂಡ್‌ಶೇಕ್‌ ಮಾಡುತ್ತಾರೆ, ಇನ್ನೂ ಕೆಲವರು ಮಿತಿ ಮೀರಿ ವರ್ತನೆ ಮಾಡುತ್ತಾರೆ. ಹೀಗೆ ಅಭಿಮಾನಿಯೋರ್ವರು ಕೈ ಹಿಡಿದು ಎಳೆದಿದ್ದಕ್ಕೆ ರಾಗಿಣಿ ದ್ವಿವೇದಿ ಅವರು ಕೆನ್ನೆಗೆ ಬಾರಿಸಿದ್ದಾರೆ. ನಟಿ ರಾಗಿಣಿ ದ್ವಿವೇದಿ ಅವರು ಇವೆಂಟ್‌ವೊಂದರಲ್ಲಿ ಭಾಗವಹಿಸಿದ್ದರು. ಆ ವೇಳೆ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು. ಇದೇ ವೇಳೆ ಓರ್ವ ಫ್ಯಾನ್​ನ ವರ್ತನೆ ಮಿತಿಮೀರಿದೆ. ಅಭಿಮಾನಿಯೊಬ್ಬ ಏಕಾಏಕಿ ನಟಿ ರಾಗಿಣಿ ದ್ವಿವೇದಿ ಅವರ ಕೈಯನ್ನು ಹಿಡಿದುಕೊಂಡಿದ್ದಾನೆ. ಸಿಟ್ಟು ತಡೆದುಕೊಳ್ಳಲಾಗದೆ ರಾಗಿಣಿ ಕೆನ್ನೆಗೆ ಬಾರಿಸಿದ್ದಾರೆ.

ಇದಾದ ಬಳಿಕ ಎಲ್ಲರ ಮುಂದೆ ಆ ಅಭಿಮಾನಿ ಮೇಲೆ ಸಿಟ್ಟಾಗಿ ಬೈದಿದ್ದಾರೆ. ನಂತರ ಅಲ್ಲಿನ ಸಿಬ್ಬಂದಿಗಳು ಆತನನ್ನು ಬೇರೆ ಕಡೆ ಕರೆದುಕೊಂಡು ಹೋಗಿದ್ದಾರೆ. ನಟಿ ರಾಗಿಣಿ ದ್ವಿವೇದಿ ಅಭಿಮಾನಿಗೆ ಹೊಡೆದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.



(video credit: suddi mane)

ರಾಗಿಣಿ ನಡೆ ಕುರಿತು ಪರ-ವಿರೋಧ ಚರ್ಚೆಗಳು ಆಗುತ್ತಿವೆ. ಕೆಲವರು, ಸರಿಯಾಗಿ ಮಾಡಿದ್ದೀರಿ ರಾಗಿಣಿ ಅವರೇ, ಇಂತಹವರಿಗೆ ಹೀಗೆ ಬುದ್ದಿ ಕಲಿಸಬೇಕು ಅಂತ ಹೇಳಿದ್ದರೆ, ಇನ್ನೂ ಕೆಲವರು ಅಭಿಮಾನಿಗೆ ಹೀಗೆ ಮಾಡಿದ್ದು ಎಷ್ಟು ಸರಿ ಅಂತ ಪ್ರಶ್ನೆ ಮಾಡಿದ್ದಾರೆ.

ರಾಗಿಣಿ ದ್ವಿವೇದಿ ಚಿತ್ರರಂಗದಲ್ಲಿ ಬಹುದೊಡ್ಡ ಗೆಲುವನ್ನು ಕಂಡು ಅನೇಕ ವರ್ಷಗಳಾಗಿವೆ. ಆದರೂ ಕೂಡ ಇವರ ಡಿಮ್ಯಾಂಡ್ ಕಡಿಮೆಯಾಗಿಲ್ಲ. ಕೇವಲ ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲಿ ಕೂಡ ರಾಗಿಣಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ರಿಲೀಸ್‌ ಆದ ಗಜರಾಮ ಮತ್ತು ಸಂಜು ವೆಡ್ಸ್‌ ಗೀತಾ 2 ಸಿನಿಮಾದಲ್ಲಿ ಸ್ಪೆಷಲ್‌ ಸಾಂಗ್‌ ಮೂಲಕ ಅಭಿಮಾನಿಗಳಿಗೆ ಕಿಕ್ಕೇರಿಸಿದ್ದರು. ಸದ್ಯ ಮೋಹನ್‌ ಲಾಲ್‌ ನಟನೆಯ ವೃಷಭ ಸಿನಿಮಾದಲ್ಲಿ ರಾಗಿಣಿ ಅಭಿನಯಿಸಿದ್ದಾರೆ. ನಂದಕಿಶೋರ್ ನಿರ್ದೇಶನದ ಈ ಚಿತ್ರ ಮಲಯಾಳಂ ಜೊತೆ ಕನ್ನಡದಲ್ಲಿ ಕೂಡ ಬಿಡುಗಡೆಯಾಗಲಿದೆ.

Dhanraj Achar: ನಾನು ಮಾಡುವ ವಿಡಿಯೋಗಳಲ್ಲಿ ಕೆಟ್ಟ ಪದ ಇರಲ್ಲ, ಫ್ಯಾಮಿಲಿಗಳು ನೋಡಬೇಕು: ಧನರಾಜ್ ಆಚಾರ್