ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dhanraj Achar: ನಾನು ಮಾಡುವ ವಿಡಿಯೋಗಳಲ್ಲಿ ಕೆಟ್ಟ ಪದ ಇರಲ್ಲ, ಫ್ಯಾಮಿಲಿಗಳು ನೋಡಬೇಕು: ಧನರಾಜ್ ಆಚಾರ್

Dhanraj Achar Comedy Video: ಧನರಾಜ್ ಆಚಾರ್ ಬಿಗ್ ಬಾಸ್ನಲ್ಲಿ ನಡೆದುಕೊಂಡು ಬಂದ ಹಾದಿ ಅದ್ಭುತ. ಆರಂಭದಲ್ಲಿ ಮೂಲೆಗುಂಪಾಗಿದ್ದ ಇವರು ನಂತರದಲ್ಲಿ ಫಿನಿಕ್ಸ್ನಂತೆ ಎದ್ದು ಬಂದರು. ಹೊಟ್ಟೆ ಹುಣ್ಣಾಗುವಷ್ಟು ನಗಿಸಿದರು. ಹನು-ಧನು ಜೋಡಿ ಇಡೀ ಕರ್ನಾಟಕದಲ್ಲಿ ಫೇಮಸ್ ಆಯಿತು.

ನಾನು ಮಾಡುವ ವಿಡಿಯೋಗಳಲ್ಲಿ ಕೆಟ್ಟ ಪದ ಇರಲ್ಲ: ಧನರಾಜ್ ಆಚಾರ್

dhanraj achar

Profile Vinay Bhat Mar 8, 2025 4:14 PM

ಬಿಗ್ ಬಾಸ್ ಕನ್ನಡ ಸೀಸನ್​ 11ರಲ್ಲಿ (BBK 11) ಮುಗ್ಧ ಮನಸ್ಸಿನ ಸ್ಪರ್ಧಿಯಾಗಿ ಇಡೀ ಕರ್ನಾಟಕದ ಮನೆಮಾತಾಗಿರುವ ಧನರಾಜ್ ಆಚಾರ್ (Dhanraj Achar) ಅಂತಿಮ ಹಂತದಲ್ಲಿ ಎಲಿಮಿನೇಟ್ ಆಗಿ ಆಚೆ ಬಂದರು. ಬಿಬಿಕೆ 11 ಫಿನಾಲೆಗೆ ಒಂದು ವಾರ ಇರುವಾಗ ದೊಡ್ಮನೆಯಿಂದ ಹೊರಬಂದರು. ಹನುಮಂತನ ಜೊತೆಗೆ ಇವರ ಒಡನಾಟ ಕಂಡು ಕರ್ನಾಟಕ ಮಂದಿಯ ಹೃದಯದಲ್ಲಿ ದೋಸ್ತಾ ಎಂಬ ಸ್ಥಾನ ಪಡೆದಿದದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರಾಮಾಣಿಕತೆ, ಮುಗ್ಧತೆ ಹಾಗೂ ಕಾಮಿಡಿಯಿಂದಲೇ ಫೇಮಸ್ ಆಗಿದ್ದ ಧನರಾಜ್ ಫಿನಾಲೆ ವಾರಕ್ಕೆ ಎಂಟ್ರಿ ಆಗಬೇಕಿತ್ತು ಎಂದು ಅನೇಕರು ಹೇಳಿದ್ದೂ ಉಂಟು.

ಯಾಕೆಂದರೆ ಇವರು ಬಿಗ್ ಬಾಸ್​ನಲ್ಲಿ ನಡೆದುಕೊಂಡು ಬಂದ ಹಾದಿ ಅದ್ಭುತ. ಆರಂಭದಲ್ಲಿ ಮೂಲೆಗುಂಪಾಗಿದ್ದ ಇವರು ನಂತರದಲ್ಲಿ ಫಿನಿಕ್ಸ್​ನಂತೆ ಎದ್ದು ಬಂದರು. ಹೊಟ್ಟೆ ಹುಣ್ಣಾಗುವಷ್ಟು ನಗಿಸಿದರು. ಹನು-ಧನು ಜೋಡಿ ಇಡೀ ಕರ್ನಾಟಕದಲ್ಲಿ ಫೇಮಸ್ ಆಯಿತು. ಸೋಷಿಯಲ್ ಮೀಡಿಯಾ ಮೂಲಕ ತನ್ನನ್ನು ತಾನು ಗುರುತಿಸಿಕೊಂಡ ಧನರಾಜ್​ ಇಂದು ಈ ಸ್ಥಾನದಲ್ಲಿದ್ದಾರೆ ಎಂದರೆ ಅವರು ಸಾಕಷ್ಟು ಕಷ್ಟಪಟ್ಟು ಇಲ್ಲಿಯ ವರೆಗೆ ಬಂದಿದ್ದಾರೆ. ಒಂದು ಅವಕಾಶಕ್ಕಾಗಿ ನಾನಾಕಡೆ ಅಲೆದಾಡಿದ್ದಾರೆ.

ತನ್ನ ಜೀವನದ ಕಷ್ಟದ ಕುರಿತು ಧನರಾಜ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾ ಬರುವುದಕ್ಕೂ ಮುನ್ನ ನಾನು ಅಡಿಷನ್‌ಗಳನ್ನು ಕೊಡಬೇಕಿತ್ತು. ಸಾಕಷ್ಟು ಆಡಿಷನ್‌ಗಳನ್ನು ಕೊಟ್ಟಿದ್ದೀನಿ. ರಿಯಾಲಿಟಿ ಶೋಗಳಿಗೆ ಆಡಿಷನ್ ಕೊಟ್ಟಿದ್ದೀನಿ ಆದರೆ ಎಲ್ಲೂ ಸೆಲೆಕ್ಟ್‌ ಆಗುತ್ತಿರಲಿಲ್ಲ. ಸೋಷಿಯಲ್ ಮೀಡಿಯಾ ಹೇಗೆ ಬಂತು ಅಂದ್ರೆ...ನಾನೇ ಕ್ರಿಯೇಟ್ ಮಾಡಿದೆ ಜನರು ಕೈ ಹಿಡಿದರು, ಪಾಸಿಟಿವ್ ಆಗಿ ಸಪೋರ್ಟ್ ಕೊಟ್ಟರು. ಕಾನ್ಫಿಡೆನ್ಸ್‌ ಅಂತ ಕೊಟ್ಟಿದ್ದು ಸೋಷಿಯಲ್ ಮೀಡಿಯಾ ಮತ್ತು ಅದರ ಫಾಲೋವರ್ಸ್ ಎಂದು ಹೇಳಿದ್ದಾರೆ.

Bhavya Gowda: ರಂಜಿತ್ ಎಂಗೇಜ್ಮೆಂಟ್​​ನಲ್ಲಿ ಅನುಷಾ ರೈ ಬೆರಳಿಗೆ ಉಂಗುರ ತೊಡಿಸಿದ ಭವ್ಯಾ ಗೌಡ

ಸೋಷಿಯಲ್ ಮೀಡಿಯಾ ಬರುವುದಕ್ಕೂ ಮುನ್ನ ನಾವು ಮತ್ತೊಬ್ಬರ ಸಹಾಯ ಕೇಳಿ ಮೇಲೆ ಬರಬೇಕಿತ್ತು. ಆದರೆ, ಇಲ್ಲಿ ನಾವೇ ಕ್ರಿಯೇಟ್ ಮಾಡಿಕೊಂಡು ಬೆಳೆಯಬೇಕು. ನನಗೆ ನಾನೇ ನಾಯಕ ನಿಮ್ಮನ್ನು ನಗಿಸುವುದು ನನ್ನ ಕಾಯಕ. ಮತ್ತೊಬ್ಬರನ್ನು ಅವಕಾಶ ಕೇಳಿಕೊಂಡು ಹೋಗುವ ಬದಲು ನಮಗೆ ನಾವೇ ಸೃಷ್ಟಿ ಮಾಡಿಕೊಳ್ಳಬೇಕು. ನನಗೆ ಕಾಮಿಡಿ ಸೆನ್ಸಸ್‌ ಬಂದಿರೋದು ಫ್ಯಾಮಿಲಿಯಿಂದ. ಹೆಚ್ಚಾಗಿ ನಾಟಕಗಳನ್ನು ನೋಡುತ್ತಿದ್ದೆ ಅಲ್ಲಿಂದ ಕಾಮಿಡಿ ಐಡಿಯಾ ಬರುತಿತ್ತು ಎಂದು ಹೇಳಿದರು.

Ranjith Bigg Boss: ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡ ಬಿಗ್ ಬಾಸ್ ಖ್ಯಾತಿಯ ರಂಜಿತ್: ಹುಡುಗಿ ಯಾರು ನೋಡಿ

ಇನ್ನು ತಮ್ಮ ವಿಡಿಯೋದ ಕಂಟೆಂಟ್ ಕುರಿತು ಮಾತನಾಡಿದ ಧನರಾಜ್, ನಾನು ಮಾಡುವ ವಿಡಿಯೋಗಳಲ್ಲಿ ಯಾವುದೇ ಕೆಟ್ಟ ಪದಗಳನ್ನು ಬಳಸುವುದಿಲ್ಲ, ಫ್ಯಾಮಿಲಿಗಳು ನೋಡಬೇಕು, ಸೋಷಿಯಲ್ ಮೆಸೇಜ್‌ಗಳು ಇರಬೇಕು ಅಂತ ಮಾಡುತ್ತೀವಿ. ಯಾವುದೇ ಪ್ರಾಡೆಕ್ಟ್‌ ಪ್ರಮೋಷನ್‌ ಬರಲಿ ಅಥವಾ ಗ್ಯಾಂಬಲಿಂಗ್ ಬಂದರೂ ಸಾಕಷ್ಟು ಬಾರಿ ಯೋಚನೆ ಮಾಡಿ ವಿಡಿಯೋ ಮಾಡುತ್ತೀನಿ. ಜನರನ್ನು ನನ್ನನ್ನು ಮೇಲೆ ಕರೆದುಕೊಂಡು ಬಂದಿದ್ದು ಅವರಿಗೆ ನಾನು ಥ್ಯಾಂಕ್‌ಫುಲ್ ಆಗಿ ಇರಬೇಕು. ಹೀಗಾಗಿ ಎಷ್ಟೇ ದುಡ್ಡು ಕೊಟ್ಟರೂ ಸಹ ಯೋಚನೆ ಮಾಡಿ ಕೆಲಸ ಮಾತ್ತೇನೆ ಎಂಬುದು ಧನರಾಜ್‌ ಮಾತು.

ಇನ್ನಷ್ಟು ಮನರಂಜನೆ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.