ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Shiva Rajkumar: ಶಿವರಾಜ್‌ ಕುಮಾರ್‌ಗೆ 40 ವರ್ಷಗಳ ಸಿನಿ ಪಯಣದ ಸಂಭ್ರಮ! ಗೀತಾ ಪಿಕ್ಚರ್ಸ್ ಸ್ಪೆಷಲ್‌ ಪೋಸ್ಟ್‌

Shivaraj Kumar: ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಅವರು ಚಿತ್ರರಂಗಕ್ಕೆ ಪ್ರವೇಶಿಸಿ 40 ವರ್ಷಗಳು ಭರ್ತಿಯಾಗಿವೆ. 1986ರಲ್ಲಿ 'ಆನಂದ್' ಸಿನಿಮಾ ಮೂಲ ಶಿವಣ್ಣ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ 'ರಥಸಪ್ತಮಿ', 'ಮನಮೆಚ್ಚಿದ ಹುಡುಗಿ' ಸೇರಿ ಮೂರು ಬ್ಯಾಕ್‌ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟು ಹ್ಯಾಟ್ರಿಕ್ ಹೀರೋ ಆದರು. ಇಲ್ಲಿಂದ ಶಿವಣ್ಣ ತಿರುಗಿ ನೋಡಿದ್ದೇ ಇಲ್ಲ. 'ಜೋಗಯ್ಯ' ಸಿನಿಮಾ ಮೂಲಕ ಸೆಂಚುರಿ ಸ್ಟಾರ್ ಆದರು. ಇನ್ನು 150 ಸಿನಿಮಾಗಳ ಕಡೆಗೆ ಇವರ ಪಯಣ ಮುನ್ನುಗ್ಗುತ್ತಿದೆ.

ಶಿವರಾಜ್‌ ಕುಮಾರ್‌ಗೆ 40 ವರ್ಷಗಳ ಸಿನಿ ಪಯಣದ ಸಂಭ್ರಮ!

ಶಿವರಾಜ್‌ ಕುಮಾರ್‌ -

Yashaswi Devadiga
Yashaswi Devadiga Feb 19, 2026 7:50 PM

ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ (Shiva rajkumar) ಅವರು ಚಿತ್ರರಂಗಕ್ಕೆ ಪ್ರವೇಶಿಸಿ 40 ವರ್ಷಗಳು ಭರ್ತಿಯಾಗಿವೆ. 1986ರಲ್ಲಿ 'ಆನಂದ್' ಸಿನಿಮಾ ಮೂಲ ಶಿವಣ್ಣ ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ 'ರಥಸಪ್ತಮಿ', 'ಮನಮೆಚ್ಚಿದ ಹುಡುಗಿ' ಸೇರಿ ಮೂರು ಬ್ಯಾಕ್‌ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟು ಹ್ಯಾಟ್ರಿಕ್ ಹೀರೋ ಆದರು. ಇಲ್ಲಿಂದ ಶಿವಣ್ಣ ತಿರುಗಿ ನೋಡಿದ್ದೇ ಇಲ್ಲ. 'ಜೋಗಯ್ಯ' (Jogayya) ಸಿನಿಮಾ ಮೂಲಕ ಸೆಂಚುರಿ ಸ್ಟಾರ್ ಆದರು. ಇನ್ನು 150 ಸಿನಿಮಾಗಳ ಕಡೆಗೆ ಇವರ ಪಯಣ ಮುನ್ನುಗ್ಗುತ್ತಿದೆ.

ಗೀತಾ ಪಿಕ್ಚರ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌

ಈ ಕುರಿತು ನಿರ್ಮಾಣ ಸಂಸ್ಥೆಯಾಗಿರುವ 'ಗೀತಾ ಪಿಕ್ಚರ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ವೊಂದನ್ನು ಹಂಚಿಕೊಂಡು ಶಿವಣ್ಣನಿಗೆ ಶುಭಾಶಯ ತಿಳಿಸಿದೆ. ಮತ್ತೊಂದೆಡೆ ದುನಿಯಾ ವಿಜಯ್, ಪವನ್ ಒಡೆಯರ್, ತೆಲುಗು ಚಿತ್ರರಂಗದ ಗಣ್ಯರು ಅಭಿನಂದನೆ ತಿಳಿಸಿದ್ದಾರೆ.

ಇದನ್ನೂ ಓದಿ: Kamal Haasan: ಕಮಲ್ ಹಾಸನ್-ಶಿವಕಾರ್ತಿಕೇಯನ್ ಜೋಡಿಯ ಹೊಸ ಸಿನಿಮಾಗೆ ಟೈಟಲ್‌ ಫಿಕ್ಸ್‌!

ನಾಗಾರ್ಜುನ ಶಿವ ಪುಟ್ಟಸ್ವಾಮಿ ಅನ್ನೋದು ಶಿವಣ್ಣನ ಮೂಲ ಹೆಸರಾಗಿದೆ. ಫೆಬ್ರವರಿ-19 ರಂದು ಆನಂದ್ ಚಿತ್ರದ ಮುಹೂರ್ತ ಆಯಿತು. ಆ ಲೆಕ್ಕದಂತೆ ಶಿವಣ್ಣ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟು ಫೆಬ್ರವರಿ-19,2026 ಕ್ಕೆ ಬರೋಬ್ಬರಿ 40 ವರ್ಷ ಆಗಿದೆ.

ಹಲವು ಪಾತ್ರಗಳು ಜನರ ಮನಸ್ಸಲ್ಲಿ ಇದೆ

ಟುವ್ವಿ ಟುವ್ವಿ ಎಂದು ಹಾಡುತ್ತಾ, ಕುಣಿಯುತ್ತಾ ಕನ್ನಡ ಚಿತ್ರರಂಗ ಹಾಗೂ ಅಭಿಮಾನಿಗಳ ಹೃದಯದಲ್ಲಿ ನಾಯಕ ನಟನಾಗಿ ಎಂಟ್ರಿ ಕೊಟ್ಟ ಶಿವರಾಜ್ ಕುಮಾರ್‌ ಅವರ ವರ್ಚಸ್ಸು ಹಾಗೇ ಉಳಿದಿದೆ.ಅದರಲ್ಲೂ ಶಿವರಾಜ್ ಕುಮಾರ್ ಅವರ ಓಂ, ಜೋಗಿ, ಟಗರು, ಭಜರಂಗಿ ಅಂತಹ ಹತ್ತು ಹಲವು ಪಾತ್ರಗಳನ್ನು ಯಾರು ಮರೆಯೋ ಹಾಗಿಲ್ಲ. ಹೀಗೆ ಹಲವು ಪಾತ್ರಗಳು ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿವೆ.

ತಮ್ಮ ವೈಯಕ್ತಿಕ ಬದುಕಿನಿಂದಲೂ ಕೂಡ ಸ್ಫೂರ್ತಿ ತುಂಬುವ ವ್ಯಕ್ತಿತ್ವ ಉಳ್ಳವರು. ಈ ವಯಸ್ಸಿನಲ್ಲೂ ಕೂಡ ಶಿವರಾಜ್‌ಕುಮಾರ್ ಅವರು ಸಿಕ್ಕಾಪಟ್ಟೆ ಎನರ್ಜಿಟಿಕ್. ಅವರು ಈಗಲೂ ಯಾವುದೇ ಪಾತ್ರವಾದರೂ ಉತ್ಸಾಹದಿಂದ ಜೀವ ತುಂಬುತ್ತಾರೆ. ಹಾಗಾಗಿ ಸಿನಿಮಾರಂಗದಲ್ಲಿ ಎಲ್ಲರೂ ಶಿವರಾಜ್‌ಕುಮಾರ್‌ ಅವರ ಬಗ್ಗೆ ಒಂದು ಮಾತು ಹೇಳುತ್ತಾರೆ. ವಯಸ್ಸಿಗೆ ವಯಸ್ಸಾಗ ಬಹುದು, ಅದರೆ ಶಿವಣ್ಣನಿಗೆ ವಯಸ್ಸು ಆಗುವುದಿಲ್ಲ ಎಂದು.

ಇದನ್ನೂ ಓದಿ: Kannada Serial TRP: ಟಿಆರ್‌ಪಿ ಜಿದ್ದಾಜಿದ್ದಿನಲ್ಲಿ ಗೆದ್ದ ಸೀರಿಯಲ್ ಯಾವುದು?

ಆನಂದ್' ಸಿನಿಮಾದಿಂದ ಆರಂಭವಾದ ಈ ಪಯಣ ಇತ್ತೀಚೆಗೆ ಬಿಡುಗಡೆಯಾದ 45' ಸಿನಿಮಾದವರೆಗೆ ಹಲವು ರೀತಿಯ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. 130ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶಿವಣ್ಣ 'ಜೈಲರ್-2', 'ಪೆದ್ದಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳು ಬಿಡುಗಡೆಯ ಹಂತದಲ್ಲಿವೆ.