ʻಸೂಪರ್ ಸ್ಟಾರ್ʼ ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು 'ಜೈಲರ್ 2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಇತ್ತೀಚೆಗಷ್ಟೇ ಇದರ ಶೂಟಿಂಗ್ ಕೂಡ ಬಹುತೇಕ ಪೂರ್ಣಗೊಂಡಿದೆ.
ಅಶ್ವತ್ ಮಾರಿಮುತ್ತುಗೆ ಸಿಕ್ತು ಭರ್ಜರಿ ಚಾನ್ಸ್
ಶೀಘ್ರದಲ್ಲೇ ರಜನಿಕಾಂತ್ ತಮ್ಮ 173ನೇ ಸಿನಿಮಾವನ್ನು ಪ್ರಾರಂಭಿಸಲಿದ್ದಾರೆ. ಕಮಲ್ ಹಾಸನ್ ಈ ಚಿತ್ರವನ್ನು ನಿರ್ಮಿಸಲಿದ್ದು, ಇತ್ತೀಚೆಗೆ ಈ ಸಿನಿಮಾಗೆ ಸಂಬಂಧಿಸಿದಂತೆ ಒಂದು ಇಂಟರೆಸ್ಟಿಂಗ್ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ರಜನಿಕಾಂತ್ ಹೀರೋ ಆಗಿರುವ ಈ ಸಿನಿಮಾದ ಬಗ್ಗೆ ಕಳೆದ ವರ್ಷ ನವೆಂಬರ್‌ನಲ್ಲೇ ‘ತಲೈವರ್ 173’ ಎಂಬ ವರ್ಕಿಂಗ್ ಟೈಟಲ್‌ನೊಂದಿಗೆ ಈ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಿಸಲಾಗಿತ್ತು. ಈ ಸಿನಿಮಾವನ್ನು ಸುಂದರ್ ಸಿ ನಿರ್ದೇಶನ ಮಾಡಲಿದ್ದಾರೆ ಎನ್ನಲಾಯ್ತು, ಆನಂತರ ಅದು ಸಿಬಿ ಚಕ್ರವರ್ತಿ ಕೈಗೆ ಹೋಯ್ತು. ಕೊನೆಗೆ ಆ ಜಾಗಕ್ಕೀಗ ನಿರ್ದೇಶಕ ಅಶ್ವತ್ ಮಾರಿಮುತ್ತು ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ.
Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್-ಕಮಲ್ ಹಾಸನ್
ಜುಲೈನಲ್ಲಿ ಶೂಟಿಂಗ್ ಆರಂಭ
ರಜನಿಕಾಂತ್ ಅವರ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ʻಡ್ರ್ಯಾಗನ್ʼ ಖ್ಯಾತಿಯ ಅಶ್ವತ್ ಮಾರಿಮುತ್ತು ಅವರು ಮಗ್ನರಾಗಿದ್ದಾರೆ. ಈ ಸಿನಿಮಾಗಾಗಿ ಚೆನ್ನೈನ ಪೂನಮಲ್ಲಿಯಲ್ಲಿ ಒಂದು ಭವ್ಯವಾದ ಸೆಟ್ ನಿರ್ಮಿಸಲಾಗುತ್ತಿದ್ದು, ಮುಂದಿನ ತಿಂಗಳಿನಿಂದ ಶೂಟಿಂಗ್ ಆರಂಭವಾಗುವ ಸಾಧ್ಯತೆ ಇದೆ. ಇನ್ನು, ಈ ಸಿನಿಮಾದಲ್ಲಿ ರಜನಿಕಾಂತ್ ಅವರು ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಚೆನ್ನೈನಲ್ಲಿ ಅತ್ಯಂತ ಜನಪ್ರಿಯರಾಗಿದ್ದ 5 ರೂಪಾತಿ ಡಾಕ್ಟರ್' ಪ್ರೇರಣೆಯಿಂದ ರಜನಿ ಅವರ ಪಾತ್ರವನ್ನು ರೂಪಿಸಲಾಗಿದೆ ಎನ್ನಲಾಗುತ್ತಿದೆ. ಈಗಾಗಲೇ ಲುಕ್ ಟೆಸ್ಟ್ ಕೂಡ ಮುಗಿದಿದೆ ಎನ್ನಲಾಗುತ್ತಿದೆ. ಈ ಸುದ್ದಿ ನಿಜವಾದರೆ, ರಜನಿಕಾಂತ್ ತಮ್ಮ ವೃತ್ತಿಜೀವನದಲ್ಲೇ ಮೊದಲ ಬಾರಿಗೆ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಯಾರು ಈ ರೂ. 5 ಡಾಕ್ಟರ್...?
ತಮಿಳುನಾಡಿಗೆ ಸೇರಿದ ಎಸ್ ಜಯಚಂದ್ರನ್ ಮತ್ತು ವಿ ತಿರುವೇಂಗಡಂ ಎಂಬ ಇಬ್ಬರು ವೈದ್ಯರು '5 ರೂಪಾಯಿ ವೈದ್ಯರು' ಎಂದೇ ದೇಶಾದ್ಯಂತ ಗುರುತಿಸಿಕೊಂಡಿದ್ದಾರೆ. ವೈದ್ಯಕೀಯ ವೃತ್ತಿಯನ್ನು ವ್ಯಾಪಾರ ಮಾಡಿಕೊಳ್ಳದೆ, ಬಡ ಜನರಿಗೆ ಸೇವೆ ಮಾಡುವುದನ್ನೇ ಗುರಿಯಾಗಿಸಿಕೊಂಡು ಬದುಕಿದ ನಿಜವಾದ ಹೀರೊಗಳು ಇವರು. ಬಡ ಜನರಿಗಾಗಿ ಕ್ಲಿನಿಕ್‌ಗಳನ್ನು ತೆರೆದು, ಕೇವಲ 5 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದರು. ದುಡ್ಡು ಕೊಡಲಾಗದವರಿಗೆ ಉಚಿತವಾಗಿಯೇ ಚಿಕಿತ್ಸೆ ನೀಡುತ್ತಿದ್ದರು. ಅಷ್ಟೇ ಅಲ್ಲದೆ, ತಮ್ಮ ಸ್ವಂತ ಹಣದಿಂದ ಔಷಧಿಗಳನ್ನು ಕೊಂಡುಕೊಂಡು ಉಚಿತವಾಗಿ ನೀಡುತ್ತಿದ್ದರು. ತಮ್ಮ ಕೊನೆಯುಸಿರು ಇರುವವರೆಗೂ ಬಡವರಿಗೆ ವೈದ್ಯಕೀಯ ಸೇವೆ ಒದಗಿಸಿದರು.
Rajinikanth: ಬರೋಬ್ಬರಿ 34 ವರ್ಷಗಳ ಬಳಿಕ ಒಂದಾಗಲಿದ್ದಾರೆ ರಜನಿಕಾಂತ್-ಮಣಿರತ್ನಂ
ನಮ್ಮ ಮಂಡ್ಯದಲ್ಲೂ "5 ರೂಪಾಯಿ ಡಾಕ್ಟರ್" ಎಂದೇ ಪ್ರಸಿದ್ಧರಾಗಿರುವವರು ಡಾ. ಎಸ್. ಸಿ. ಶಂಕರೇಗೌಡ. ಕಳೆದ 4 ದಶಕಗಳಿಗೂ ಹೆಚ್ಚು ಕಾಲದಿಂದ ಕೇವಲ 5 ರೂಪಾಯಿ ಕನ್ಸಲ್ಟೇಷನ್ ಫೀಸ್ ಪಡೆದು ಬಡ ರೋಗಿಗಳಿಗೆ ನಿಸ್ವಾರ್ಥ ಚಿಕಿತ್ಸೆ ನೀಡುತ್ತಿರುವುದು ಗೊತ್ತೇ ಇದೆ.
ಅಂದಹಾಗೆ, ಅಟ್ಲಿ ನಿರ್ದೇಶಿಸಿದ ʻಮೆರ್ಸಲ್ʼ ಸಿನಿಮಾದಲ್ಲಿಯೂ ʻದಳಪತಿ; ವಿಜಯ್ '5 ರೂಪಾಯಿ ಡಾಕ್ಟರ್' ಆಗಿ ಕಾಣಿಸಿಕೊಂಡಿದ್ದರು. ಈಗ ‘ತಲೈವರ್ 173’ ಸಿನಿಮಾದಲ್ಲಿ ರಜನಿಕಾಂತ್ ಕೂಡ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಆ ಪಾತ್ರಕ್ಕೆ 5 ರೂಪಾಯಿ ಡಾಕ್ಟರ್ ಅವರನ್ನೇ ಸ್ಫೂರ್ತಿಯಾಗಿ ತೆಗೆದುಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ಈ ಬಗ್ಗೆ ಚಿತ್ರತಂಡದಿಂದಲೇ ಅಧಿಕೃತ ಮಾಹಿತಿ ಹೊರಬರಬೇಕಿದೆ.