ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ (Super Star Rajinikanth) ಸಿನಿಮಾಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಅದರಲ್ಲೂ ಸ್ಟಾರ್ ನಟ- ನಟಿಯರ ಸಂಗಮ ಇರುವ ʼಕೂಲಿʼ ಚಿತ್ರ (Coolie Movie)ದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜತೆ ಬಾಲಿವುಡ್ ನಟ ಆಮಿರ್ ಖಾನ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಾಗಾರ್ಜುನ ಅಕ್ಕಿನೇನಿ ಅವರಂತಹ ಸ್ಟಾರ್ ನಟರು ಅಭಿನಯಿಸುತ್ತಿದ್ದಾರೆ. ಇದೀಗ ʼಕೂಲಿʼ ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಅಗಿದೆ. ಈ ನಿಟ್ಟಿನಲ್ಲಿ ಈ ಸಿನಿಮಾಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಅದೇ ದಿನ ಹೃತಿಕ್ ರೋಷನ್ ಮತ್ತು ಜೂ.ಎನ್ಟಿಆರ್ ಒಟ್ಟಿಗೆ ನಟಿಸಿರುವ ‘ವಾರ್ 2’ ಸಿನಿಮಾ ಬಿಡುಗಡೆ ಆಗಲಿದ್ದು, 2 ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರಲಿದೆ.
ಯಾವಾಗ ಬಿಡುಗಡೆ?
ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯ ಅಭಿನಯದಲ್ಲಿ ʼಕೂಲಿʼ ಸಿನಿಮಾವು ಆ. 14ರಂದು ತೆರೆ ಕಾಣಲಿದೆ. ಈ ಮೂಲಕ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ನಡುವೆಯೇ ರಜನಿಕಾಂತ್ ಅಭಿಮಾನಿಗಳಿಗೆ ರಸದೌತಣ ನೀಡಲು ಮುಂದಾಗಿದೆ. ಸಿನಿಮಾ ತಂಡವು ರಜನಿಕಾಂತ್ ಶಿಳ್ಳೆ ಹೊಡೆಯುವ ಪೋಸ್‌ನ ಪೋಸ್ಟರ್ ಮೂಲಕ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಚಿತ್ರವು ಬಾಕ್ಸ್ ಆಫೀಸ್ ಚಿಂದಿ ಮಾಡುವುದು ಪಕ್ಕಾ ಎನ್ನಲಾಗುತ್ತಿದೆ. ಲೋಕೇಶ್ ಕನಕರಾಜು ಈ ಸಿನೆಮಾ ನಿರ್ದೇಶಿಸಿದ್ದು, ಸ್ಟಾರ್ ನಾಯಕಿ ಶ್ರುತಿ ಹಾಸನ್, ಸತ್ಯರಾಜ್, ರೇಬಾ ಮೋನಿಕಾ ಜಾನ್, ಮಲಯಾಳಂ ನಟ ಸೌಬಿನ್ ಶಾಹಿರ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ಸಂಗೀತ ಸಂಯೋಜಕ ಅನಿರುದ್ಧ್ ರವಿ ಚಂದರ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.
ʼಕೂಲಿʼ ಚಿತ್ರದ ಪೋಸ್ಟರ್ ಇಲ್ಲಿ ನೋಡಿ:
ಒಟ್ಟಿಗೆ ರಿಲೀಸ್ ಆಗಲಿದೆ ಬಿಗ್ ಬಜೆಟ್ ಸಿನಿಮಾ
ಪ್ಯಾನ್ ಇಂಡಿಯಾ ಸಿನಿಮಾಗಳ ನಡುವೆ ಆಗಾಗ ಪೈಪೋಟಿ ಇರುವುದು ಸಾಮಾನ್ಯ. ಇದೇ ಸಾಲಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ʼಕೂಲಿʼ ಮತ್ತು ಹೃತಿಕ್ ರೋಷನ್, ಜೂನಿಯರ್ ಎನ್ ಟಿಆರ್ ಅಭಿನಯದ ʼವಾರ್ 2ʼ ಸಿನಿಮಾ ಒಂದೇ ದಿನ ಬಿಡುಗಡೆಯಾಗುವ ಮೂಲಕ ಭರ್ಜರಿ ಫೈಟ್ ನೀಡಲಿದೆ. ʼವಾರ್ 2’ ಸಿನಿಮಾ ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಮೊದಲ ಬಾರಿಗೆ ಜೂ ಎನ್ಟಿಆರ್ ಹಿಂದಿಯಲ್ಲಿ ನಟಿಸಿದ್ದಾರೆ. ಹಾಗಾಗಿ ಏಕಕಾಲಕ್ಕೆ ತೆರೆಗೊಳ್ಳುವ ಕಾರಣ ಬಾಕ್ಸ್ ಆಫೀಸ್‌ನಲ್ಲಿ ಯಾವುದು ಹೊಸ ದಾಖಲೆ ಮಾಡುತ್ತದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಇದನ್ನು ಓದಿ: Bollywood Movies: ಈ ತಿಂಗಳು ರಿಲೀಸ್ ಆಗ್ತಿರೋ ಥ್ರಿಲ್ಲಿಂಗ್ ಬಾಲಿವುಡ್ ಸಿನಿಮಾಗಳಿವು!
ʼಕೂಲಿʼ ಸಿನಿಮಾದಲ್ಲಿ ಹೆಸರೇ ಸೂಚಿಸುವಂತೆ ಕಾರ್ಮಿಕರ ಕುರಿತಾಗಿ ಕಥಾ ವಸ್ತು ಇದೆ. ಫ್ಯಾಮಿಲಿ, ಎಮೋಷನಲ್ ಸಿಕ್ವೆನ್ಸ್ ನಡುವೆ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಸಮಾಜದಲ್ಲಿ ʼಕೂಲಿʼ ಆಳಿನ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ. ಈ ಹಿಂದೆ ʼಕೂಲಿʼ ಸಿನಿಮಾವನ್ನು ಮೇ 1ರಂದು ಕಾರ್ಮಿಕ ದಿನಾಚರಣೆ ದಿನ ರಿಲೀಸ್ ಮಾಡಲು ಸಿನಿಮಾ ತಂಡ ನಿರ್ಧಾರ ಕೈಗೊಂಡಿತ್ತು. ಆದರೆ ಕಾರಣಾಂತರದಿಂದ ಈ ದಿನಾಂಕ ಮುಂದೂಡಲಾಯಿತು. ಈ ಮೂಲಕ ಆಗಸ್ಟ್ 14ಕ್ಕೆ ರಿಲೀಸ್ ಆಗುವುದು ಪಕ್ಕಾ ಎಂದು ಸಿನೆಮಾ ತಂಡ ಅನೌನ್ಸ್ ಮಾಡಿದೆ.