ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rakhi Sawant: ಇನ್ಮುಂದೆ ಒಳ ಉಡುಪು ಹಾಕುವುದಿಲ್ಲವಂತೆ ರಾಖಿ ಸಾವಂತ್; ಕಾರಣ ಇದು

rakhi sawant: ಇತ್ತೀಚೆಗೆ, ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯಲ್ಲಿ ವಿಚಿತ್ರವಾದ ಡ್ರೆಸ್‌ ಧರಿಸಿ ವಿವಾದಕ್ಕೆ ಸಿಲುಕಿದ್ದರು ರಾಖಿ ಸಾವಂತ್ . ಈಗ, ಐಟಂ ಗರ್ಲ್ ಪಾಡ್‌ಕ್ಯಾಸ್ಟ್ ಸಂದರ್ಶನವೊಂದರಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ ರಾಖಿ ಸಾವಂತ್‌. ಜ್ಯೋತಿಷಿಯ ಸೂಚನೆಯ ಮೇರೆಗೆ ಒಂದು ವರ್ಷದವರೆಗೆ ತಾನು ಬ್ರಾ ಅಥವಾ ಪ್ಯಾಂಟಿ ಧರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ಮುಂದೆ ಒಳ ಉಡುಪು ಹಾಕುವುದಿಲ್ಲವಂತೆ ರಾಖಿ ಸಾವಂತ್.

ರಾಖಿ ಸಾವಂತ್‌

ಇತ್ತೀಚೆಗೆ, ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯಲ್ಲಿ ವಿಚಿತ್ರವಾದ ಡ್ರೆಸ್‌ ಧರಿಸಿ ವಿವಾದಕ್ಕೆ ಸಿಲುಕಿದ್ದರು ರಾಖಿ ಸಾವಂತ್ (rakhi sawant). ಈಗ, ಐಟಂ ಗರ್ಲ್ ಪಾಡ್‌ಕ್ಯಾಸ್ಟ್ ಸಂದರ್ಶನವೊಂದರಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ ರಾಖಿ ಸಾವಂತ್‌. ಜ್ಯೋತಿಷಿಯ ಸೂಚನೆಯ ಮೇರೆಗೆ ಒಂದು ವರ್ಷದವರೆಗೆ ತಾನು ಬ್ರಾ ಅಥವಾ ಪ್ಯಾಂಟಿ ಧರಿಸುವುದಿಲ್ಲ (Inner wear) ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ಮುಂದೆ ಒಳ ಉಡುಪು ಹಾಕುವುದಿಲ್ಲವಂತೆ ರಾಖಿ ಸಾವಂತ್.

ಕಾರಣ ಇದು!

ರಾಖಿ ಸಾಮಾನ್ಯವಾಗಿ ಪಾಪರಾಜಿಗಳ ಮುಂದೆ ಬಿಗಿಯಾದ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆ ಸಂದರ್ಶನವೊಂದರಲ್ಲಿ ನೀಡುವಾಗ ರಾಖಿ ಈ ಬಗ್ಗೆ ಹೇಳಿದ್ದಾರೆ. ನಂಗೆ ಜ್ಯೋತಿಷಿ ಒಬ್ಬರು, ಒಂದು ವರ್ಷದವರೆಗೆ ಪ್ಯಾಂಟಿ, ಬನಿಯಾನ್ ಹಾಕುದಂತೆ ಸೂಚನೆ ನೀಡಿದ್ದಾರೆ. ಅದನ್ನು ಫಾಲೋ ಮಾಡ್ತೀನಿ. ಆಗ ನನ್ನ ವೃತ್ತಿ ಜೀವನ ಮೇಲೆ ಹೋಗಲಿದೆಯಂತೆ’ ಎಂದು ರಾಖಿ ಸಾವಂತ್ ಹೇಳಿದ್ದಾರೆ.

ಇದನ್ನೂ ಓದಿ: Gilli Nata: ಗಿಲ್ಲಿ ಗೆದ್ದಿದ್ದೇ ಡಿ ಬಾಸ್‌ ಫ್ಯಾನ್ಸ್‌ನಿಂದ, ಅದೃಷ್ಟದಿಂದ; ಜಾಹ್ನವಿ

ರಾಖಿ ಸಾವಂತ್ ಮಾತಿಗೆ ಸದ್ಯ ಎಲ್ಲ ಕಡೆಗಳಿಂದ ಟೀಕೆಗಳು ಬಂದಿವೆ. ಅವರು ಈ ರೀತಿ ಹೇಳಿದ್ದು ಸರಿ ಅಲ್ಲ ಎಂದು ಸಾಕಷ್ಟು ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ನೆಗೆಟಿವ್‌ ವಿಚಾರವಾಗಿಯೂ ಟ್ರೋಲ್‌

ಚಲನಚಿತ್ರಗಳು ಮತ್ತು ಸರಣಿಗಳಲ್ಲಿ ಮತ್ತು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಕಾರ್ಯಕ್ರಮಗಳಲ್ಲಿಯೂ ವಿರಳವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬದಲಾಗಿ, ಅವರು ನಕಾರಾತ್ಮಕ ಕಾರಣಗಳಿಗಾಗಿ ಹೆಚ್ಚು ಹೆಚ್ಚು ಸುದ್ದಿ ಮಾಡುತ್ತಿದ್ದಾರೆ.



ಕಳೆದ ಕೆಲವು ದಶಕಗಳಲ್ಲಿ ರಾಖಿ ಸಾವಂತ್ ಬಾಲಿವುಡ್ ಗಿಂತ ಹೆಚ್ಚು ವಿವಾದದ ಸುದ್ದಿಗಳಲ್ಲಿದ್ದಾರೆ. ಕೆಲವೊಮ್ಮೆ ಅವರ ಉಡುಗೆ ತೊಡುಗೆ, ಕೆಲವೊಮ್ಮೆ ಅವರ ವಿಚಿತ್ರ ಮುಖಭಾವ ಮತ್ತು ಕೆಲವೊಮ್ಮೆ ಅವರ ಬಟ್ಟೆಗಳು ವಿವಾದವನ್ನು ಹುಟ್ಟುಹಾಕಿವೆ. ಆದಾಗ್ಯೂ, ವಿರೋಧಿಗಳ ಅಭಿಪ್ರಾಯಗಳನ್ನು ಲೆಕ್ಕಿಸದೆ, ರಾಖಿ ರಾಖಿಯಾಗಿಯೇ ಉಳಿದಿದ್ದಾರೆ. ಎರಡು ಬಾರಿ ವಿವಾಹವಾದರೂ, ಎರಡೂ ವಿವಾಹಗಳು ಸಂತೋಷವಾಗಿರಲಿಲ್ಲ. 2019 ರಲ್ಲಿ, ಅವರು ರಿಯಾಲಿಟಿ ಶೋ ಮೂಲಕ ಅನಿವಾಸಿ ಭಾರತೀಯ ಪತಿ ರಿತೇಶ್ ಅವರನ್ನು ವಿವಾಹವಾದರು.

ಇದನ್ನೂ ಓದಿ: Valentine's Day: ಪ್ರೇಮಿಗಳ ದಿನದಂದು ನಿಮ್ಮ ಪಾರ್ಟ್ನರ್ ಜೊತೆ ಈ ಸೌತ್‌ ರೊಮ್ಯಾಂಟಿಕ್‌ ಸಿನಿಮಾಗಳನ್ನು ನೋಡಿ!

ಆದಾಗ್ಯೂ, ನಾಲ್ಕು ವರ್ಷಗಳಲ್ಲಿ ಮದುವೆ ಮುರಿದುಬಿತ್ತು. ಎರಡನೇ ಮದುವೆಯೂ ಒಂದು ವರ್ಷದೊಳಗೆ ಕೊನೆಗೊಂಡಿತು! ರಾಖಿ ಸಾವಂತ್ ತಮ್ಮ ಬಟ್ಟೆಗಳಿಂದಾಗಿ ಹಲವಾರು ಬಾರಿ ವಿವಾದಕ್ಕೆ ಸಿಲುಕಿದ್ದಾರೆ. ಈಗ ಮತ್ತೆ ರಾಖಿ ಟೀಕೆ ಮತ್ತು ವ್ಯಂಗ್ಯಕ್ಕೆ ಗುರಿಯಾಗಿದ್ದಾರೆ.

Yashaswi Devadiga

View all posts by this author