ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rakshak Bullet: ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ರಕ್ಷಕ್ ಬುಲೆಟ್: ಕಾರಣವೇನು?

ಭರ್ಜರಿ ಬ್ಯಾಚುಲರ್ಸ್ ಪ್ರತಿ ವಾರ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಇದೇ ಶೋನಲ್ಲಿ ಬುಲೆಟ್ ಪ್ರಕಾಶ್ ಮಗ ಹಾಗೂ ಬಿಗ್ ಬಾಸ್ ಕನ್ನಡ ಮಾಹಿ ಸ್ಪರ್ಧಿ ರಕ್ಷಕ್ ಬುಲೆಟ್ ಕೂಡ ಮಿಂಚುತ್ತಿದ್ದಾರೆ. ರಕ್ಷಕ್ ಬುಲೆಟ್ಗೆ ಕನ್ನಡತಿ ಸೀರಿಯಲ್ ಖ್ಯಾತಿಯ ರೋಮಲ ಅವರು ಜೋಡಿಯಾಗಿದ್ದಾರೆ.

ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ರಕ್ಷಕ್ ಬುಲೆಟ್

Rakshak Bullet

Profile Vinay Bhat Mar 12, 2025 4:07 PM

ಝೀ ಕನ್ನಡದಲ್ಲಿ ಶುರುವಾಗಿರುವ ಭರ್ಜರಿ ಬ್ಯಾಚುಲರ್ಸ್ ( Bharjari Bachelors )​ ಸೀಸನ್ 2ಗೆ ಅಮೋಘ ರೆಸ್ಪಾನ್ಸ್ ಕೇಳಿಬರುತ್ತಿದೆ. ಹತ್ತು ಬ್ಯಾಚುಲರ್ಸ್​ಗೆ ಹತ್ತು ಸುಂದರಿಯರು ಮೆಂಟರ್ಸ್ ಆಗಿರುವ ಈ ಶೋ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದೆ. ಕಳೆದ ವಾರ ಗಗನಾ ಜೊತೆಗೆ ಜೋಡಿಯಾಗಿರುವ ಡ್ರೋನ್​ ಪ್ರತಾಪ್ ಎಲ್ಲರ ಕಣ್ಣುಕುಕ್ಕುವಂತೆ ಮಾಡಿದ್ದರು. ಕಿರುತೆರೆ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತಾಪ್ ಅವರು 1000 ಅಡಿ ಎತ್ತರದಲ್ಲಿ ಹಾರುವ ಹೆಲಿಕ್ಯಾಪ್ಟರ್‌ ತಂದು ಗಗನಾಗೆ ಸರ್ಪ್ರೈಸ್‌ ಕೊಟ್ಟಿದ್ದರು. ಹೀಗೆ ಭರ್ಜರಿ ಬ್ಯಾಚುಲರ್ಸ್​ ಪ್ರತಿ ವಾರ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ.

ಇದೇ ಶೋನಲ್ಲಿ ಬುಲೆಟ್ ಪ್ರಕಾಶ್ ಮಗ ಹಾಗೂ ಬಿಗ್ ಬಾಸ್ ಕನ್ನಡ ಮಾಹಿ ಸ್ಪರ್ಧಿ ರಕ್ಷಕ್ ಬುಲೆಟ್ ಕೂಡ ಮಿಂಚುತ್ತಿದ್ದಾರೆ. ರಕ್ಷಕ್​ ಬುಲೆಟ್​ಗೆ ಕನ್ನಡತಿ ಸೀರಿಯಲ್​ ಖ್ಯಾತಿಯ ರೋಮಲ ಅವರು ಜೋಡಿಯಾಗಿದ್ದಾರೆ. ಹೀಗೆ ಈ ವಾರ ಈ ವಾರ 10 ಬ್ಯಾಚ್ಯುಲರ್ಸ್​ ಮತ್ತು ಏಂಜಲ್ಸ್ 10 ಸೂಪರ್ ಹಿಟ್ ಸಿನಿಮಾಗಳನ್ನು ಮರುಸೃಷ್ಟಿ ಮಾಡಲಿದ್ದಾರೆ. ಸದ್ಯ ಝೀ ಕನ್ನಡ ರಿಲೀಸ್​ ಮಾಡಿದ ಪ್ರೋಮೋದಲ್ಲಿ ರಕ್ಷಕ್​ ಬುಲೆಟ್​ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.

ರಕ್ಷಕ್ ಅವರು ತಮ್ಮ ಪಾರ್ಟ್ನರ್ ರಮೋಲಾ ಜೊತೆ ಬುಲ್ ಬುಲ್ ಸಿನಿಮಾದ ಫೇಮಸ್ ಸೀನ್‌ವೊಂದನ್ನು ರೀ-ಕ್ರಿಯೇಟ್ ಮಾಡಿದ್ದಾರೆ. ರಕ್ಷಕ್‌ಗೆ ದರ್ಶನ್ ಅಂದ್ರೆ ಅಚ್ಚುಮೆಚ್ಚು. ಅವರದ್ದೇ ಸಿನಿಮಾದ ಸೀನ್ ಅನ್ನು ರಕ್ಷಕ್ ಸಖತ್ ಆಗಿಯೇ ವೇದಿಕೆ ಪರ್ಫಾಮ್ ಮಾಡಿದ್ದು, ಅದನ್ನು ಕಂಡ ರಚಿತಾ ರಾಮ್‌ಗೆ ಸಖತ್ ಖುಷಿಯಾಗಿದೆ. ಅಷ್ಟೇ ಅಲ್ಲದೆ, ರಕ್ಷಕ್ ಪರ್ಫಾಮೆನ್ಸ್ ಅನ್ನು ಮೆಚ್ಚಿಕೊಂಡು, ವೇದಿಕೆ ಮೇಲೆ ಬಂದು ರಕ್ಷಕ್ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಅತ್ತ ರವಿಚಂದ್ರನ್ ಅವರು, "ಇದನ್ನು ನೋಡಿ ನನಗೆ ಖುಷಿ ಆಯ್ತು, ಮನಸ್ಫೂರ್ತಿಯಾಗಿ ಖುಷಿ ಆಯ್ತು" ಎಂದಿದ್ದಾರೆ.

ತಮ್ಮ ಪರ್ಫಾಮೆನ್ಸ್‌ಗೆ ಎಲ್ಲರಿಂದ ಮೆಚ್ಚುಗೆ ಸಿಗುತ್ತಿದ್ದಂತೆಯೇ ಭಾವುಕರಾದ ರಕ್ಷಕ್, ಕಣ್ಣೀರು ಹಾಕಿದ್ದಾರೆ. ಇದೇ ಅಬ್ಬಯ್ಯ ನಾಯ್ಡು ಸ್ಟುಡಿಯೋಗೆ ನಮ್ಮ ಅಪ್ಪನ ಜೊತೆಗೆ ನಾನೂ ಬರ್ತಿದ್ದೆ. ಇವತ್ತು ನಾನು ಈ ವೇದಿಕೆ ಮೇಲೆ ಪರ್ಪಾಮೆನ್ಸ್ ಮಾಡಿದ್ದೀನಿ, ಇನ್ನೂ ಸ್ವಲ್ಪ ದಿನ ಅವರು ಇದ್ದಿದ್ದರೇ ಚೆನ್ನಾಗಿ ಇರುತ್ತಿತ್ತು. ಅದನ್ನು ಮಿಸ್​ ಮಾಡಿಕೊಂಡೇ ಅತ್ತ ಕಣ್ಣೀರು ಹಾಕಿದ್ದಾರೆ. ಆ ಕ್ಷಣದಲ್ಲಿ ರವಿಚಂದ್ರನ್ ಸೇರಿದಂತೆ ಅಲ್ಲಿದ್ದ ಎಲ್ಲರೂ ಭಾವುಕರಾಗಿದ್ದಾರೆ.

Bhagya Lakshmi Serial: ಭಾಗ್ಯಾಳನ್ನು ಜೋಕರ್ ವೇಷದಲ್ಲಿ ನೋಡಿದ ಗುಂಡಣ್ಣ: ಎಲ್ಲರಿಗೂ ಗೊತ್ತಾಗುತ್ತ ಸತ್ಯ?