Drone Prathap: ಕಿರುತೆರೆ ಇತಿಹಾಸದಲ್ಲೇ ಮೊದಲ ಬಾರಿ: ಗಗನಳನ್ನು ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿಸಿದ ಡ್ರೋನ್ ಪ್ರತಾಪ್
ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನಲ್ಲಿ ಡ್ರೋನ್ ಪ್ರತಾಪ್ ತನ್ನ ಮೆಂಟರ್ ಗಗನಾಳಿಗೆ ಪ್ರತಾಪ್ ಸ್ಪೆಷೆಲ್ ಸರ್ಪ್ರೈಸ್ ನೀಡಿದ್ದಾರೆ. ಈ ಶೋನಲ್ಲಿ ಪ್ರತಾಪ್ ಅವರು 1000 ಅಡಿ ಎತ್ತರದಲ್ಲಿ ಹಾರುವ ಹೆಲಿಕ್ಯಾಪ್ಟರ್ ತಂದು ಗಗನಾಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ವಾಹಿನಿಯು ಹೊಸ ಪ್ರೋಮೋ ರಿಲೀಸ್ ಮಾಡಿ ವೀಕ್ಷಕರಿಗೂ ಅಚ್ಚರಿ ನೀಡಿದೆ.

Drone Prathap and Gagana

ಬಿಗ್ ಬಾಸ್ ಕನ್ನಡ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ ಇತ್ತೀಚಿನ ದಿನಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಡ್ರೋನ್ ಪ್ರತಾಪ್ ಝೀ ಕನ್ನಡದಲ್ಲಿ ಶುರುವಾಗಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನಲ್ಲಿ ಕಾಣಿಸಿಕೊಂಡಿದ್ದು ಇಲ್ಲಿ ಇವರ ಹವಾ ಭರ್ಜರಿ ಆಗಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ಪ್ರಸಾರವಾಗುತ್ತಿದೆ. ಈ ಶೋಗೆ ಅಮೋಘ ರೆಸ್ಪಾನ್ಸ್ ಕೇಳಿಬರುತ್ತಿದೆ. ಹತ್ತು ಬ್ಯಾಚುಲರ್ಸ್ಗೆ ಹತ್ತು ಸುಂದರಿಯರು ಮೆಂಟರ್ಸ್ ಆಗಿದ್ದಾರೆ.
ಗಗನಾ ಜೊತೆಗೆ ಜೋಡಿಯಾಗಿರುವ ಡ್ರೋನ್ ಪ್ರತಾಪ್ ಎಲ್ಲರ ಕಣ್ಣುಕುಕ್ಕುವಂತೆ ಮಾಡುತ್ತಿದ್ದಾರೆ. ಮೊದಲಿಗೆ ಱಂಪ್ ವಾಕ್ ಮಾಡಿ ಎಲ್ಲರ ಗಮನ ಸೆಳೆದಿದ್ದ ಪ್ರತಾಪ್ ಬಳಿಕ ಮೈ ಚಳಿ ಬಿಟ್ಟು ಸಖತ್ ಸ್ಟೆಪ್ ಹಾಕಿದ್ದರು. ಇದೀಗ ಕಿರುತೆರೆ ಇತಿಹಾಸದಲ್ಲೇ ಈ ವರೆಗೆ ಯಾರೂ ಮಾಡಿದ ಸಾಧನೆಯೊಂದನ್ನ ಪ್ರತಾಪ್ ಮಾಡಿದ್ದಾರೆ.
ತನ್ನ ಮೆಂಟರ್ ಗಗನಾಳಿಗೆ ಪ್ರತಾಪ್ ಸ್ಪೆಷೆಲ್ ಸರ್ಪ್ರೈಸ್ ನೀಡಿದ್ದಾರೆ. ಈ ಶೋನಲ್ಲಿ ಪ್ರತಾಪ್ ಅವರು 1000 ಅಡಿ ಎತ್ತರದಲ್ಲಿ ಹಾರುವ ಹೆಲಿಕ್ಯಾಪ್ಟರ್ ತಂದು ಗಗನಾಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ವಾಹಿನಿಯು ಹೊಸ ಪ್ರೋಮೋ ರಿಲೀಸ್ ಮಾಡಿ ವೀಕ್ಷಕರಿಗೂ ಅಚ್ಚರಿ ನೀಡಿದೆ. ರಿಲೀಸ್ ಆಗಿರೋ ಹೊಸ ಪ್ರೋಮೋದಲ್ಲಿ ಪ್ರತಾಪ್ ಅವರು ನಾನು ಡ್ರೋನ್ ಪ್ರತಾಪ್ ಆದರೆ ನೀವು ಏನು ಅಂತ ಗಗನಾಗೆ ಪ್ರಶ್ನೆ ಮಾಡಿದ್ದಾರೆ.
ಆಗ ನಾನು ಗಗನಾ ಹೆಲಿಕಾಪ್ಟರ್ ಗಗನಾ ಎಂದಿದ್ದಾರೆ. ಆ ಕೂಡಲೇ ಮುಂದೆ ನಿಂತುಕೊಂಡಿದ್ದ ಹೆಲಿಕಾಪ್ಟರ್ ನೋಡಿ ಶಾಕ್ ಅಂಡ್ ಸರ್ಪ್ರೈಸ್ ಆಗಿದ್ದಾರೆ. ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದಂತೆ ಗಗನಾ ಖುಷಿಯಿಂದ ಕಿರುಚಾಡಿದ್ದಾರೆ. ಕನ್ನಡದ ಹೆಣ್ಣು ಮಗಳು 1000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಳೆ ಎಂದು ಹೆಲಿಕಾಪ್ಟರ್ನಲ್ಲೇ ಕೂಗಿದ್ದಾರೆ. ಇನ್ನೂ, ಹೆಲಿಕಾಪ್ಟರ್‌ನಲ್ಲಿ ಗಗನಾಗೆ ಅರಿಶಿನ ಕುಂಕುಮ ಕೊಟ್ಟು ಕಣ್ಣೀರು ಒರೆಸಿದ್ದಾರೆ ಡ್ರೋನ್ ಪ್ರತಾಪ್.
ಇನ್ನು ವೇದಿಕೆ ಮೇಲೆ ಈ ಬಗ್ಗೆ ಮಾತನಾಡಿದ ಗಗನಾ, ಡ್ರೋನ್ ಪ್ರತಾಪ್ ನನಗೆ ಸ್ಪರ್ಧಿ ಸಿಕ್ಕಿದ್ದು ಅದೃಷ್ಟ ಎಂದು ಹೇಳಿದ್ದಾರೆ. ಪ್ರತಾಪ್ ಅವರು ನನ್ನ ಬಾಳಿಗೆ ಲಕ್ಷ್ಮೀ ಆಗಮನವಾಗಲಿ ಎಂದು ತನ್ನ ತೊಡೆಯ ಮೇಲೆ ಗಗನಾ ಕಾಲಿಟ್ಟು, ಆ ಕಾಲಿಗೆ ಬೆಳ್ಳಿ ಕಾಲ್ಗೆಜ್ಜೆ ತೊಡಿಸಿದ್ದಾರೆ. ಇದನ್ನು ನೋಡಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರಚಿತಾ ರಾಮ್ ಮೆಚ್ಚಿಕೊಂಡಿದ್ದಾರೆ. ಗಗನಕ್ಕೆ ಕರೆದುಕೊಂಡು ಹೋಗಿ ಅರಿಶಿನ-ಕುಂಕುಮ ನೀಡಿದ್ದೇ ಬೆಸ್ಟ್ ಸರ್ಪ್ರೈಸ್ ಎಂದು ಹೇಳಿದ್ದಾರೆ. ಸದ್ಯ ಈ ಪ್ರೋಮೊ ವೈರಲ್ ಆಗುತ್ತಿದೆ.
Ranjith Bigg Boss: ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡ ಬಿಗ್ ಬಾಸ್ ಖ್ಯಾತಿಯ ರಂಜಿತ್: ಹುಡುಗಿ ಯಾರು ನೋಡಿ