Bhagya Lakshmi Serial: ಭಾಗ್ಯಾಳನ್ನು ಜೋಕರ್ ವೇಷದಲ್ಲಿ ನೋಡಿದ ಗುಂಡಣ್ಣ: ಎಲ್ಲರಿಗೂ ಗೊತ್ತಾಗುತ್ತ ಸತ್ಯ?
ಭಾಗ್ಯ ಈ ಕೆಲಸಕ್ಕೆ ಪುನಃ ಮರಳಿದ್ದಾಳೆ. ಆದರೆ, ಭಾಗ್ಯಾ ಜೋಕರ್ ವೇಷ ತೊಟ್ಟು ಹಣ ಸಂಪಾದಾನೆ ಮಾಡುತ್ತಿರುವ ವಿಚಾರ ಭಾಗ್ಯಾನ ಮಗ ಗುಂಡಣ್ಣನಿಗೆ ಗೊತ್ತಾಗಿದೆ. ತನ್ನ ಕಣ್ಣಿಂದಲೇ ಭಾಗ್ಯಾಳನ್ನು ಗುಂಡಣ್ಣ ರೆಸಾರ್ಟ್ನಲ್ಲಿ ನೋಡಿದ್ದಾನೆ. ಗುಂಡಣ್ಣ ಪಾರ್ಟಿಗೆಂದು ಈ ರೆಸಾರ್ಟ್ಗೆ ಬಂದಿದ್ದಾನೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi) ಭಾಗ್ಯಾಳ ಕಷ್ಟ ಮುಗಿಯುವಂತೆ ಕಾಣುತ್ತಿಲ್ಲ. ಒಂದರ ಹಿಂದೆ ಒಂದರಂತೆ ತೊಂದರೆಗಳು ಭಾಗ್ಯಾಳಿಗೆ ಆವರಿಸಿಕೊಂಡು ಬರುತ್ತಿದೆ. ಮನೆಯ ಲೋನ್ ಕಟ್ಟಲು ಭಾಗ್ಯಾಗೆ ಎದುರಾದ ಸಮಸ್ಯೆ ಅಷ್ಟಿಟ್ಟಲ್ಲ. ಹೀಗಿದ್ದರೂ ಹೇಗಾದರು ಮಾಡಿ ಒಂದೇ ದಿನ 40 ಸಾವಿರ ರೂಪಾಯಿಯನ್ನು ಅಡ್ಜಸ್ಟ್ ಮಾಡಿ ಸಾಲ ತೀರಿಸಿದಳು. ತಾಂಡವ್-ಶ್ರೇಷ್ಠಾ ಭಾಗ್ಯಾಳನ್ನು ಸೋಲಿಸಲು ಪ್ಲ್ಯಾನ್ ಮಾಡಿದರೂ ಅದು ಯಶಸ್ವಿ ಆಗಲಿಲ್ಲ. ಈ ತಿಂಗಳ ಸಾಲ ತೀರಿತು ಎಂದು ಕೊಂಚ ನೆಮ್ಮದಿಯಲ್ಲಿರುವ ಭಾಗ್ಯಾ ಮುಂದಿನ ತಿಂಗಳ ಸಾಲ ಕಟ್ಟಲು ಪುನಃ ತನ್ನ ಹಳೆಯ ಕೆಲಸಕ್ಕೆ ಮರಳಿದ್ದಾಳೆ. ಆದರೆ, ಅಲ್ಲಿ ತನಗೇ ತಿಳಿಯದಂತೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಮನೆಯ ಸಾಲ ತೀರಿದ ಖುಷಿಯಲ್ಲಿ ಭಾಗ್ಯ ತನ್ನ ಮನೆಯಲ್ಲಿ ಎಲ್ಲರಿಗೂ ಕೈತುತ್ತು ಮಾಡಿ ತಿನ್ನಿಸಿದ್ದಾಳೆ. ಎಲ್ಲರೂ ಖುಷಿಯಲ್ಲಿ ಊಟ ಮಾಡಿದ್ದಾರೆ. ಆದರೆ, ಭಾಗ್ಯ ಬೇಸರದಲ್ಲಿ ಒಂದೇ ಕಡೆ ನೋಡುತ್ತ ಕೂರುತ್ತಾಳೆ. ಕುಸುಮಾ ಅದನ್ನು ಗಮನಿಸಿ, ಯಾಕೆ ಭಾಗ್ಯ ಬೇಸರಪಟ್ಟುಕೊಂಡಿದ್ದೀ, ನಾವೆಲ್ಲಾ ನಿನ್ನ ಕಷ್ಟದಲ್ಲಿ ಒಟ್ಟಾಗಿ ಇರುತ್ತೇವೆ, ನಾವೆಲ್ಲರೂ ಈ ಕಷ್ಟವನ್ನು ಒಟ್ಟಾಗಿ ಎದುರಿಸೋಣ ಎನ್ನುತ್ತಾಳೆ. ಕುಸುಮಾ ಮಾತಿಗೆ ಮನೆಯವರೂ ದನಿಗೂಡಿಸುತ್ತಾರೆ, ಭಾಗ್ಯ ಕಣ್ಣು ತುಂಬಿ ಬರುತ್ತದೆ. ಮನೆಯವರ ಒಗ್ಗಟ್ಟನ್ನೆಲ್ಲ ಕಂಡು ಎಷ್ಟೇ ಕಷ್ಟವಾದರೂ ಸರಿ, ಮನೆಯವರನ್ನು ಬಿಟ್ಟು ಕೊಡುವುದಿಲ್ಲ, ಅವರಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ ಎಂದು ಭಾಗ್ಯ ಅಂದುಕೊಳ್ಳುತ್ತಾಳೆ.
ಅದರಂತೆ ಮರುದಿನ ಬೆಳಗ್ಗೆ ಪುನಃ ತನ್ನ ಹಳೆಯ ಕೆಲಸಕ್ಕೆ ಮರಳುತ್ತಾಳೆ. ಈ ಹಿಂದೆ ಕೆಲಸ ಕಳೆದುಕೊಂಡಿದ್ದಾಗ ಭಾಗ್ಯ ಎಷ್ಟೇ ಅಲೆದಾಡಿದರು ಎಲ್ಲೂ ಕೆಲಸ ಸಿಗುತ್ತಿರಲಿಲ್ಲ. ಕೊನೆಗೆ ಬೇಜಾರಿನಲ್ಲಿ ಭಾಗ್ಯಾ ನಡೆದುಕೊಂಡು ಹೋಗುವಾಗ ಜೋಕರ್ ವೇಷ ತೊಟ್ಟಿರುವ ಕೆಲವರು ರೆಸಾರ್ಟ್ ಮುಂದೆ ನೃತ್ಯ ಮಾಡುತ್ತಿರುವುದನ್ನು ಗಮನಿಸುತ್ತಾಳೆ. ಬಳಿಕ ಅಲ್ಲೇ ಕೆಲಸ ಗಿಟ್ಟಿಸಿಕೊಳ್ಳುತ್ತಾಳೆ. ಜೋಕರ್ ವೇಷ ತೊಟ್ಟು ಜನರನ್ನು ನಗಿಸುವ ಕೆಲಸಕ್ಕೆ ಭಾಗ್ಯಾ ಸೇರಿಕೊಳ್ಳುತ್ತಾಳೆ. ಆದ್ರೆ, ಈ ವಿಚಾರ ಮನೆಯವರಿಗೆ ಗೊತ್ತಿಲ್ಲ. ತನ್ನ ಮಗಳ ಬರ್ತ್ ಡೇ ಪಾರ್ಟಿಯಲ್ಲೂ ಭಾಗ್ಯ ಜೋಕರ್ ವೇಷ ತೊಟ್ಟಿದ್ದಳು.
ಇದೀಗ ಭಾಗ್ಯ ಈ ಕೆಲಸಕ್ಕೆ ಪುನಃ ಮರಳಿದ್ದಾಳೆ. ಆದರೆ, ಭಾಗ್ಯಾ ಜೋಕರ್ ವೇಷ ತೊಟ್ಟು ಹಣ ಸಂಪಾದಾನೆ ಮಾಡುತ್ತಿರುವ ವಿಚಾರ ಭಾಗ್ಯಾನ ಮಗ ಗುಂಡಣ್ಣನಿಗೆ ಗೊತ್ತಾಗಿದೆ. ತನ್ನ ಕಣ್ಣಿಂದಲೇ ಭಾಗ್ಯಾಳನ್ನು ಗುಂಡಣ್ಣ ರೆಸಾರ್ಟ್ನಲ್ಲಿ ನೋಡಿದ್ದಾನೆ. ಗುಂಡಣ್ಣ ಪಾರ್ಟಿಗೆಂದು ಈ ರೆಸಾರ್ಟ್ಗೆ ಬಂದಿದ್ದಾನೆ. ಆಗ ಭಾಗ್ಯಾ ತನ್ನ ಕೆಲಸ ಮುಗಿಸಿ ಜೋಕರ್ ವೇಷದಲ್ಲೇ ತನ್ನ ಸ್ನೇಹಿತೆ ಜೊತೆ ಊಟ ಮಾಡಲು ತಯಾರು ಮಾಡಿಕೊಳ್ಳುತ್ತಾಳೆ.
Vijay Devarakonda Bigg Boss: ಬಿಗ್ ಬಾಸ್ ನಿರೂಪಣೆಗೆ ವಿಜಯ್ ದೇವರಕೊಂಡ ಕೇಳಿದ ಸಂಭಾವನೆ ಎಷ್ಟು ಕೋಟಿ ಗೊತ್ತೇ?
ತಲೆಯಲ್ಲಿದ್ದ ಬಣ್ಣ-ಬಣ್ಣದ ವಿಗ್ ತೆಗೆದಾಗ ಗುಂಡಣ್ಣನಿಗೆ ಅಮ್ಮನನ್ನು ನೋಡಿ ಶಾಕ್ ಆಗುತ್ತದೆ. ಜೊತೆಗೆ ಭಾಗ್ಯ ಹಾಗೂ ಆಕೆಯ ಸ್ನೇಹಿತೆ ಮಾತನಾಡಿಕೊಳ್ಳುವ ವಿಚಾರವನ್ನು ಕೇಳಿಸಿಕೊಳ್ಳುತ್ತಾನೆ. ಭಾಗ್ಯ ನೀನು ಅಷ್ಟು ದೊಡ್ಡ ಹೋಟೆಲ್ನಲ್ಲಿ ಚೆಫ್ ಆಗಿದ್ದೆ ಎಂಬುದು ನನಗೆ ಗೊತ್ತೇ ಇರಲಿಲ್ಲ.. ಈಗ ಇಷ್ಟು ಸಣ್ಣ ಕೆಲಸ ಮಾಡೋಕೆ ಕಷ್ಟ ಆಗ್ತಿಲ್ವ ನಿಂಗೆ ಎಂದು ಸ್ನೇಹಿತೆ ಕೇಳುತ್ತಾಳೆ. ಅದಕ್ಕೆ ಭಾಗ್ಯ, ಅದೆಲ್ಲ ಮುಗಿದು ಹೋದ ಕತೆ. ಕೆಲಸದಲ್ಲಿ ಸಣ್ಣದು-ದೊಡ್ಡದು ಅಂತ ಏನಿಲ್ಲ.. ಎಲ್ಲರೂ ಕೆಲಸ ಮಾಡೋದು ಹೊಟ್ಟೆ-ಬಟ್ಟೆಗಾಗಿ ಅಲ್ವಾ.. ನಮ್ಮ ಮನೆಯಲ್ಲಿ ನಾನು ಇಲ್ಲಿ ಕೆಲಸ ಮಾಡುವ ವಿಷಯನೇ ಗೊತ್ತಿಲ್ಲ. ಗೊತ್ತಾದ್ರೆ ಅವರಿಗೆ ಇದು ಇಷ್ಟ ಆಗಲ್ಲ.. ಆದ್ರೆ ನನ್ಗೆ ಈಗ ಈ ಕೆಲಸ ಬಿಟ್ರೆ ಬೇರೆ ಯಾವ ಕೆಲಸನೂ ಇಲ್ಲ.. ಮನೆಯವರನ್ನೆಲ್ಲ ಚೆನ್ನಾಗಿ ನೋಡ್ಕೋಬೇಕು.. ಮನೆಯಲ್ಲಿ ಗೊತ್ತಾದ್ರೆ ನನ್ನ ಕೆಲಸಕ್ಕೆ ಹೋಗೋದು ಬೇಡ ಅಂತಾರೆ.. ಹಾಗೆಲ್ಲಾದ್ರು ಗೊತ್ತಾದ್ರೆ ನಾನು ಸೋತ ಹಾಗೆ ಎಂದು ಹೇಳುತ್ತಾಳೆ.
ಇದನ್ನೆಲ್ಲ ಗುಂಡಣ್ಣ ಕೇಳಿಸಿ ಕಣ್ಣೀರು ಹಾಕುತ್ತಾನೆ. ಇಲ್ಲ ಅಮ್ಮ ಸೋಲ ಬಾರದು.. ಇದನ್ನ ಯಾವುದೇ ಕಾರಣಕ್ಕೂ ಮನೆಯಲ್ಲಿ ಗೊತ್ತಾಗಲು ಬಿಡಬಾರದು ಎಂದು ಅಂದುಕೊಳ್ಳುತ್ತಾನೆ. ಇದೇ ಸಮಯದಲ್ಲಿ ಸುಂದರಿ ಹಾಗೂ ಪೂಜಾ ಅದೇ ರೆಸಾರ್ಟ್ಗೆ ಬರುತ್ತಾರೆ. ಗುಂಡಣ್ಣ ಇಲ್ಲೇ ಪಾರ್ಟಿಗೆ ಬಂದಿರೋದು ಅವನ ಕರ್ಕೊಂಡು ಹೋಗಬೇಕು ಎಂದು ಅಲ್ಲಿಗೆ ಬರುತ್ತಾರೆ. ಸದ್ಯ ಇವರು ಕೂಡ ಭಾಗ್ಯಾಳನ್ನು ಜೋಕರ್ ವೇಷದಲ್ಲಿ ನೋಡುತ್ತಾರ ಅಥವಾ ಗುಂಡಣ್ಣ ಅಮ್ಮನನ್ನು ಕಾಪಾಡುತ್ತಾನ ಎಂಬುದು ಮುಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.