ಬಿಗ್ ಬಾಸ್ ಸೀಸನ್ 12ರ (Bigg Boss Kannada 12) ನಿನ್ನೆಯ ಕಿಚ್ಚನ ಪಂಚಾಯಿತಿಯಲ್ಲಿ ಹಲವಾರು ವಿಚಾರಗಳ ಬಗ್ಗೆ ಸುದೀಪ್ ಮಾತನಾಡಿದರು. ಕೆಲವರಿಗೆ ಎಚ್ಚರಿಕೆ ಕೊಟ್ಟರೆ, ಇನ್ನೂ ಕೆಲವರಿಗೆ ಮಾಡಿರುವ ತಪ್ಪುಗಳ ಬಗ್ಗೆ ತಿಳಿ ಹೇಳಿದರು. ಇದರ ಜೊತೆಗೆ ಕಬ್ಬಡಿ ಆಡುವಾಗ ನಡೆದ ಘಟನೆ ಬಗ್ಗೆ ಮಾತನಾಡದೆ ಇರದ ರಕ್ಷಿತಾ ಬಗ್ಗೆಯೂ ಕಿಚ್ಚ ಹೇಳಿದ್ದಾರೆ. ರಕ್ಷಿತಾಗೆ ಕಿಚ್ಚನ ಕ್ಲಾಸ್ ಹೇಗಿತ್ತು?
ರಕ್ಷಿತಾ ಶೆಟ್ಟಿ ತಪ್ಪು ಮಾಡಿದ್ರಾ?
ಕಬ್ಬಡಿ ಆಡುವಾಗ ನಡೆದ ಘಟನೆ ಬಗ್ಗೆ ಮಾತನಾಡದೆ ರಕ್ಷಿತಾ ಶೆಟ್ಟಿ ತಪ್ಪು ಮಾಡಿದ್ರಾ? ಎನ್ನುವ ಚರ್ಚೆಗಳು ಶುರುವಾಗಿವೆ. ರಕ್ಷಿತಾ ಬಟ್ಟೆ ವಿಚಾರದಲ್ಲಿ ಆಪಾದನೆ ರಾಶಿಕ ಮತ್ತು ಸ್ಪಂದನಾ ಅವರ ಮೇಲೆ ಬಂದಿತ್ತು . ಆದರೆ ಇವತ್ತಿನ ಪಂಚಾಯಿತಿಯಲ್ಲಿ ರಕ್ಷಿತಾ ಅವರೆ ಸ್ವತಃ ಅವರಿಬ್ಬರದ್ದು ತಪ್ಪಿಲ್ಲ ಗೇಮ್ ನ ಫ್ಲೋ ಅಲ್ಲಿ ಅದು ಆಗಿದ್ದು ಅಂತ ಹೇಳಿದ್ದಾರೆ ಮತ್ತು ತಾನು ಆಟ ನಿಲ್ಲಿಸಿರಲಿಲ್ಲ ಅಂತ ಸುದೀಪ್ ಅವರ ಎದುರು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: BBK 12: ಜೋಕರ್‌ಗಳಂತೆ ಕಾಣಿಸುತ್ತಿದ್ದೀರ ಎಂದು ಇಡೀ ಮನೆ ನಾಮಿನೇಟ್ ಮಾಡಿ ಬಿಗ್ ಟ್ವಿಸ್ಟ್ ಕೊಟ್ಟ ಕಿಚ್ಚ ಸುದೀಪ್!
ಅದಕ್ಕೆ ಸುದೀಪ್ ಅವರು ಮನೆಯವರು ಅವರಿಬ್ಬರ ಮೇಲೆ ಆಪಾದನೆ ಹಾಕಿದಾಗ ನೀವು ಯಾಕೆ ಅವರೆಲ್ಲರಿಗೂ ಇದೆಲ್ಲಾ ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದು ತಿಳಿಸಿಲ್ಲ ಅಂತ ರಕ್ಷಿತಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರ ಮಧ್ಯೆ ಗಿಲ್ಲಿಗೂ ಸುದೀಪ್ ಅವರು ಪ್ರಶ್ನೆ ಇಟ್ಟಿದ್ದಾರೆ.
ರಕ್ಷಿತಾ ಅವರಿಗೆ ಕ್ಲಾಸ್
ಗಿಲ್ಲಿ ಕೂಡ ರಾಶಿಕಾ ಅವರನ್ನು ಆಯ್ಕೆ ಮಾಡದೇ ಇರಲು ಕಾರಣ, ತಾನು ಗೇಮ್‌ವನ್ನು ಚೆನ್ನಾಗಿ ನಿಭಾಯಿಸಿರುವೆ. ಹಾಗೇ ರಕ್ಷಿತಾ ಜೊತೆ ರಾಶಿಕಾ ನಡೆದುಕೊಂಡ ರೀತಿ ತಪ್ಪಾಗಿತ್ತು. ಹಾಗಾಗಿ ರಾಶಿಕಾ ಅವರನ್ನು ಆಯ್ಕೆ ಮಾಡಿಲ್ಲ ಎಂದು ಹೇಳಿದರು.
ಇದಾದ ಬಳಿಕ ಸುದೀಪ್ ಅವರು ಈ ಬಗ್ಗೆ ಕ್ಲಾರಿಟಿ ನೀಡಿ, ರಕ್ಷಿತಾ ಅವರಿಗೆ ಕ್ಲಾಸ್ ತೆಗೆದುಕೊಂಡರು. ಅವರು ಮನೆಯವರು ಅವರಿಬ್ಬರ ಮೇಲೆ ಆಪಾದನೆ ಹಾಕಿದಾಗ ನೀವು ಯಾಕೆ ಅವರೆಲ್ಲರಿಗೂ ಇದೆಲ್ಲಾ ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದು ತಿಳಿಸಿಲ್ಲ. ಒಂದು ವೇಳೆ ನೀವು ಆ ಸಂದರ್ಭದಲ್ಲಿ ಮಾತನಾಡಿದ್ದಾರೆ, ಈ ವಾರ ನಿಮಗೆ ಕಿಚ್ಚನ ಚಪ್ಪಾಳೆ ಸಿಗುತ್ತಿತ್ತು ಎಂದು ಹೇಳಿದರು. ಅಷ್ಟೇ ಅಲ್ಲಕ ರಕ್ಷಿತಾ ಅವರಿಗೆ ಕಿಚ್ಚ, ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಲೇ ಬೇಕು ಎಂದು ಕ್ಲಾಸ್ ತೆಗದುಕೊಂಡಿದ್ದಾರೆ.
ಇದನ್ನೂ ಓದಿ: BBK 12: ಫ್ಯಾನ್ಸ್ ಊಹಿಸಿದ್ದು ನಿಜವಾಗೋಯ್ತು! ಕಿಚ್ಚನ ಚಪ್ಪಾಳೆ ಇವರಿಗೇ ನೋಡಿ
ಟಾಸ್ಕ್‌ನಲ್ಲಿ ಆಗಿದ್ದೇನು?
ಬಿಗ್ ಬಾಸ್ ಸ್ಪರ್ಧಿಗಳಿಗೆ ಕಬ್ಬಡಿ ಟಾಸ್ಕ್ ನೀಡಿತ್ತು. ಈ ವೇಳೆ ರಾಶಿಕಾ, ರಕ್ಷಿತಾ ಶೆಟ್ಟಿ ಅವರ ಟಿ-ಶರ್ಟ್ ಅನ್ನು ಸಂಪೂರ್ಣವಾಗಿ ಎಳೆದಿದ್ದರು. ಆಟ ನಿಲ್ಲಿಸಿ ಅಂತ ರಘು ಹೇಳುತ್ತಿದ್ದರೂ ಸಹ ರಾಶಿಕಾ ಮತ್ತು ಸ್ಪಂದನಾ ನಿಲ್ಲಿಸಲಿಲ್ಲ. ಈಗಾಗಿ ರಕ್ಷಿತಾ ಶೆಟ್ಟಿ ಮಣ್ಣು ಎರಚಿದ್ದರು.
ಮನೆಯ ಗಾರ್ಡನ್ ಏರಿಯಾದಲ್ಲಿ ಕಬ್ಬಡ್ಡಿ ಗ್ರೌಂಡ್ ನಿರ್ಮಾಣ ಮಾಡಲಾಗಿತ್ತು. ಪ್ರಿನ್ಸಿಪಾಲ್ ರಘು ರೈಡ್‌ಗೆ ಹೋಗುವ ತಂಡದ ನಿರ್ಧಾರ ಮಾಡುವ ಜವಾಬ್ದಾರಿ ಹೊತ್ತಿದ್ದರು. ರೈಡ್ ಮಾಡುವವರು ಎದುರಾಳಿಯ ತಂಡದವರ ಜಾಕೆಟ್‌ನಲ್ಲಿದ್ದ ನಾಣ್ಯ ಕೀಳುವುದು ಟಾಸ್ಕ್ ಆಗಿತ್ತು.