ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹುಟ್ಟುಹಬ್ಬದಂದೇ ಭರ್ಜರಿ ಗಿಫ್ಟ್‌ ನೀಡಿದ ʻಕ್ರೇಜಿ ಕ್ವೀನ್‌ʼ ರಕ್ಷಿತಾ ಪ್ರೇಮ್;‌ ʻಇಡಿಯಟ್‌ʼ ಅಂತ ಕರೆದಿದ್ದು ಯಾರಿಗೆ?

Rakshitha Prem Birthday: ನಟಿ ರಕ್ಷಿತಾ ಪ್ರೇಮ್ ತಮ್ಮ ಹೊಸ ನಿರ್ಮಾಣ ಸಂಸ್ಥೆ 'ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್' ಅನ್ನು ಅಧಿಕೃತವಾಗಿ ಚಾಲನೆ ಮಾಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶವನ್ನು ಈ ಬ್ಯಾನರ್ ಹೊಂದಿದೆ. ಅಂದಹಾಗೆ, ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲೇ ತಮ್ಮ ಸಹೋದರ ರಾಣಾ ನಟನೆಯ 3ನೇ ಚಿತ್ರಕ್ಕೆ 'ಇಡಿಯಟ್' ಎಂದು ಹೆಸರಿಟ್ಟು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಮಂಜುನಾಥ್ ಬಿ.ಎಸ್. ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಹುಟ್ಟುಹಬ್ಬದಂದೇ ಹೊಸ ಬ್ಯಾನರ್ ಆರಂಭಿಸಿದ ನಟಿ ರಕ್ಷಿತಾ ಪ್ರೇಮ್

-

Avinash GR
Avinash GR Mar 31, 2026 1:37 PM

ಸ್ಯಾಂಡಲ್‌ವುಡ್‌ ʻಕ್ರೇಜಿ ಕ್ವೀನ್‌ʼ ರಕ್ಷಿತಾ ಪ್ರೇಮ್‌ ಅವರಿಗೆ ಇಂದು (ಮಾ.31) ಹುಟ್ಟುಹಬ್ಬದ ಸಂಭ್ರಮ. ತಮ್ಮ ಜನ್ಮದಿನದ ಸಂಭ್ರಮದಲ್ಲಿಯೇ ರಕ್ಷಿತಾ ಪ್ರೇಮ್‌ ಅವರು ಒಂದು ಗುಡ್‌ ನ್ಯೂಸ್‌ ಹಂಚಿಕೊಂಡಿದ್ದಾರೆ. ಅದೇನಪ್ಪ ಅಂದ್ರೆ ತಮ್ಮ ಪತಿ ಪ್ರೇಮ್‌ ಅವರ ಜೊತೆಗೂಡಿ ʻಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್’ ಎಂಬ ಹೊಸ ಬ್ಯಾನರ್‌ ಆರಂಭಿಸಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆಯ ಜೊತೆಗೆ ಸ್ಟುಡಿಯೋ ಕೂಡ ಆರಂಭಿಸಿದೆ ರಕ್ಷಿತಾ ಪ್ರೇಮ್‌ ಜೋಡಿ.

ತಮ್ಮನಿಗೆ ಬರ್ತ್‌ಡೇ ಗಿಫ್ಟ್‌

ಹುಟ್ಟುಹಬ್ಬದ ದಿನವೇ ತಮ್ಮ ಸಹೋದರ ರಾಣಾಗೆ ರಕ್ಷಿತಾ ಒಂದು ಗಿಫ್ಟ್‌ ಕೂಡ ನೀಡಿದ್ದಾರೆ. ಅದೇನು ಅಂತೀರಾ? ಹೊಸ ಸಿನಿಮಾ. ಹೌದು, ರಕ್ಷಿತಾ ಸಹೋದರ ರಾಣಾ ಹೀರೋ ಆಗಿರುವ ಹೊಸ ಸಿನಿಮಾದ ಪೋಸ್ಟರ್‌ ಇಂದೇ ರಿಲೀಸ್‌ ಆಗಿದೆ. ಪ್ರೇಮ್‌ ಜೊತೆಗೆ ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡಿರುವ ಮಂಜುನಾಥ್‌ ಬಿ ಎಸ್‌ ಅವರು ಈಗ ರಾಣಾಗೆ ಹೊಸ ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರೆ. ಸಹ-ನಿರ್ದೇಶಕರಾಗಿ ಹಾಗೂ ಚಿತ್ರಸಾಹಿತಿಯಾಗಿ ಗುರುತಿಸಿಕೊಂಡಿರುವ ಮಂಜುನಾಥ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ.

ಸ್ಯಾಂಡಲ್‌ವುಡ್‌ನಲ್ಲಿ ಫ್ಯಾನ್‌ ವಾರ್! ದರ್ಶನ್‌ - ʻಕಿಚ್ಚʼ ಸುದೀಪ್‌ ಬಗ್ಗೆ ರಕ್ಷಿತಾ ಪ್ರೇಮ್‌ ದಂಪತಿ ಹೇಳಿದ್ದೇನು?

ʻಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್’ ಬ್ಯಾನರ್‌ ಅಡಿಯಲ್ಲೇ ಶುರುವಾಗಲಿರುವ ಈ ಸಿನಿಮಾಕ್ಕೆ ʻಇಡಿಯಟ್‌ʼ ಎಂದು ಹೆಸರಿಡಲಾಗಿದೆ. ವಿಲಿಯಂ ಡೇವಿಡ್‌ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ʻಏಕ್‌ ಲವ್‌ ಯಾʼ, ʻಏಳುಮಲೆʼ ಚಿತ್ರಗಳ ನಂತರ ರಾಣಾ ಹೀರೋ ಆಗಿರುವ ಮೂರನೇ ಸಿನಿಮಾ ಇದಾಗಿದೆ.

ʻಇಡಿಯಟ್‌ʼಗೂ ರಕ್ಷಿತಾಗೂ ಇದೆ ಕನೆಕ್ಷನ್‌

ಅಂದಹಾಗೆ, ರಕ್ಷಿತಾ ಪ್ರೇಮ್‌ ಮೊದಲ ಬಾರಿಗೆ ತೆಲುಗಿನಲ್ಲಿ ನಟಿಸಿದ್ದು ʻಇಡಿಯಟ್‌ʼ ಎಂಬ ಚಿತ್ರದಿಂದ. ಕನ್ನಡದ ಅಪ್ಪು ಚಿತ್ರದ ರಿಮೇಕ್‌ ಆಗಿದ್ದ ಆ ಸಿನಿಮಾಕ್ಕೆ ʻಇಡಿಯಟ್‌ʼ ಎಂದು ಹೆಸರಿಡಲಾಗಿತ್ತು. ಅಲ್ಲಿ ರವಿ ತೇಜಗೆ ಜೋಡಿಯಾಗಿ ರಕ್ಷಿತಾ ನಟಿಸಿದ್ದರು. ಇದೀಗ ತಮ್ಮನ ಮೂರನೇ ಸಿನಿಮಾಕ್ಕೂ ʻಇಡಿಯಟ್‌ʼ ಟೈಟಲ್‌ ಫೈನಲ್‌ ಮಾಡಿದ್ದಾರೆ ರಕ್ಷಿತಾ.

Jogi Prem: ನನ್ನ ಉದ್ದೇಶ ಅದಾಗಿರಲಿಲ್ಲ, ನೋರಾ ಮಾತಾಡಿದ್ದು ಸರಿಯಲ್ಲ; ಜೋಗಿ ಪ್ರೇಮ್

ಇನ್ನು, ಈ ಹೊಸ ಬ್ಯಾನರ್‌ ಆರಂಭಿಸಿರುವ ಉದ್ದೇಶವೇ ಪ್ರತಿಭಾವಂತ ಹೊಸಬರಿಗೆ ಅವಕಾಶ ಕೊಡುವುದಂತೆ. ಹೊಸಬರ ಸಿನಿಮಾಗಳನ್ನು ಈ ಬ್ಯಾನರ್‌ ಮೂಲಕ ನಿರ್ಮಾಣ ಮಾಡಿ, ಅವರಿಗೊಂದು ಅವಕಾಶ ನೀಡಬೇಕು ಎಂದುಕೊಂಡಿದ್ದಾರಂತೆ ರಕ್ಷಿತಾ ಪ್ರೇಮ್.