ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rakshitha Shetty: ಬಂಗುಡೆ ಮೀನು ಹಿಡಿದು ಸಂಭ್ರಮಿಸಿದ ರಕ್ಷಿತಾ ಶೆಟ್ಟಿ; ಹುಟ್ಟೂರಿನಲ್ಲಿ ಭರ್ಜರಿ ಸ್ವಾಗತ

Bigg Boss Kannada: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಗಿಲ್ಲಿ ನಟ ವಿನ್‌ ಆದರೆ ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌ ಆದರು. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಹಾಗೂ ರಕ್ಷಿತಾ ಜೋಡಿಗೆ ಸಖತ್‌ ಫಿದಾ ಆಗಿದ್ರು ವೀಕ್ಷಕರು. ಅದರಂತೆ ಈ ಜೋಡಿಯೇ ವಿನ್ನರ್‌, ರನ್ನರ್‌ ಆಗಿದ್ದಾರೆ. ಇಷ್ಟೂ ದಿನ ಸಂದರ್ಶನದಲ್ಲೇ ಬ್ಯುಸಿಯಾದ ರಕ್ಷಿತಾ ಈಗ ಹುಟ್ಟೂರಿಗೆ ಹೋಗಿದ್ದಾರೆ. ಅಲ್ಲಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಬಂಗುಡೆ ಮೀನು ಹಿಡಿದು ಸಂಭ್ರಮಿಸಿದ್ದಾರೆ ರಕ್ಷಿತಾ.

ರಕ್ಷಿತಾ ಶೆಟ್ಟಿ

ಬಿಗ್‌ ಬಾಸ್‌ ಸೀಸನ್‌ 12ರಲ್ಲಿ (Bigg Boss Kannada 12) ಗಿಲ್ಲಿ ನಟ (Gilli Nata) ವಿನ್‌ ಆದರೆ ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌ ಆದರು. ಬಿಗ್ ಬಾಸ್ (BBK 12) ಮನೆಯಲ್ಲಿ ಗಿಲ್ಲಿ ನಟ ಹಾಗೂ ರಕ್ಷಿತಾ ಜೋಡಿಗೆ ಸಖತ್‌ ಫಿದಾ ಆಗಿದ್ರು ವೀಕ್ಷಕರು. ಅದರಂತೆ ಈ ಜೋಡಿಯೇ ವಿನ್ನರ್‌, ರನ್ನರ್‌ (Runner Up) ಆಗಿದ್ದಾರೆ. ಇಷ್ಟೂ ದಿನ ಸಂದರ್ಶನದಲ್ಲೇ ಬ್ಯುಸಿಯಾದ ರಕ್ಷಿತಾ ಈಗ ಹುಟ್ಟೂರಿಗೆ ಹೋಗಿದ್ದಾರೆ. ಅಲ್ಲಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಬಂಗುಡೆ ಮೀನು (Bangude Fish) ಹಿಡಿದು ಸಂಭ್ರಮಿಸಿದ್ದಾರೆ ರಕ್ಷಿತಾ.

ಮೀನು ಹಿಡಿದು ಸಂಭ್ರಮ

ರಕ್ಷಿತಾ ಅವರನ್ನ ಮೆರವಣಿಗೆ ಮಾಡಿಸಿದ್ದಾರೆ. ಜನ ಸೆಲ್ಫಿ ತೆಗೆಸಿಕೊಳ್ಳಲು ಮುಗಿ ಬಿದ್ದರು. ಅದರಲ್ಲೂ ರಕ್ಷಿತಾ ಅವರ ಮೀನು ಹಿಡಿದು ಸಂಭ್ರಮಿಸಿದ್ದಾರೆ. ರಕ್ಷಿತಾ ಸಖತ್‌ ವೋಟ್‌ ಪಡೆದು ರನ್ನರ್‌ ಅಪ್‌ ಆಗಿದ್ದಾರೆ. 25 ಲಕ್ಷ ಹಣ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Mutant Raghu: ರಘು ತೂಕದಲ್ಲಿ ಇಷ್ಟೊಂದು ಬದಲಾವಣೆನಾ? ಫ್ಯಾನ್ಸ್‌ ಶಾಕ್‌

ರಕ್ಷಿತಾ ಅವರಿಗೆ ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ 20 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯ್ತು. ಖುದ್ದು ಟಿಎ ಶರವಣ ಅವರು ವೇದಿಕೆಗೆ ಆಗಮಿಸಿ ರಕ್ಷಿತಾ ಅವರಿಗೆ 20 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರ ಮಾಡಿದರು. ಅದಾದ ಬಳಿಕ ಜಾರ್ ಅಪ್ಲಿಕೇಶನ್​​ನ ವತಿಯಿಂದ ರಕ್ಷಿತಾ ಅವರಿಗೆ ಐದು ಲಕ್ಷ ರೂಪಾಯಿ ನಗದು ಹಣವನ್ನು ಉಡುಗೊರೆಯಾಗಿ ಸಹ ನೀಡಲಾಯ್ತು.



ತುಳುನಾಡಿನ ಹುಡುಗಿ

ರಕ್ಷಿತಾ ಬಿಗ್‌ ಬಾಸ್‌ ಮನೆಗೆ ಒಂದು ವಾರದ ಬಳಿಕ ಎಂಟ್ರಿ ಕೊಟ್ಟವರು. ತುಳುನಾಡಿನ ಹುಡುಗಿ ರಕ್ಷಿತಾ ಶೆಟ್ಟಿ ಅಧಿಕೃತವಾಗಿ ಬಿಗ್ ಬಾಸ್ ಮನೆಗೆ ಲೇಟಾಗಿ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದರು. ಧ್ರುವಂತ್‌ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಎಲಿಮಿನೇಟ್‌ ಮಾಡಿ, ಹೊರಗೆ ಕಳುಹಿಸಲಾಗಿತ್ತು. ಆದರೆ ಉಳಿದ ಸದಸ್ಯರಿಗೆ ಗೊತ್ತಿಲ್ಲದಂತೆ ಅವರಿಬ್ಬರನ್ನು ಸೀಕ್ರೆಟ್‌ ರೂಮ್‌ಗೆ ಕಳುಹಿಸಿದ್ದರು ಬಿಗ್‌ ಬಾಸ್‌. ಬಹಳ ಸೀಸನ್‌ಗಳ ಬಳಿಕ ಈ ಟಾಸ್ಕ್‌ ಮಾಡಿಸಲಾಗಿತ್ತು.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ನಿಜವಾದ ಬಡವ ಅಲ್ಲ ಎಂದಿದ್ದ ಅಶ್ವಿನಿ; ಧನುಷ್ ತಿರುಗೇಟು!

ಆದರೆ ಧ್ರುವಂತ್ ಜೊತೆಗೆ ಇರಲಾರದೇ, ವಾಪಸ್‌ ಬಿಗ್‌ ಬಾಸ್‌ ಮನೆಗೆ ಕಳುಹಿಸಿ ಎಂದು ಗೋಳಾಡಿದ್ದರು ರಕ್ಷಿತಾ. ಆದರೂ ಛಲ ಬಿಡದ ರಕ್ಷಿತಾ ಅಲ್ಲಿಯೂ ತಮ್ಮನ್ನು ತಾವು ಪ್ರೂವ್‌ ಮಾಡಿಕೊಂಡಿದ್ದರು.

Yashaswi Devadiga

View all posts by this author