Bigg Boss Kannada 12: ಗಿಲ್ಲಿ ನಿಜವಾದ ಬಡವ ಅಲ್ಲ ಎಂದಿದ್ದ ಅಶ್ವಿನಿ; ಧನುಷ್ ತಿರುಗೇಟು!
Dhanush Gowda: ಬಿಗ್ ಬಾಸ್ ಫಿನಾಲೆ ಅಲ್ಲಿ ಟಾಪ್ 6 ಹಂತದಲ್ಲಿ ಗಿಲ್ಲಿ ನಟ, ಕಾವ್ಯ ಶೈವ, ರಘು, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಹಾಗೂ ಧನುಷ್ ಗೌಡ ಇದ್ದರು. ಈ 6 ಸ್ಪರ್ಧಿಗಳ ಪೈಕಿ ಮೊದಲು ಔಟ್ ಆದವರು ಧನುಷ್ ಗೌಡ. ಧನುಷ್ ಗೌಡಗೆ 6ನೇ ಸ್ಥಾನ ಲಭಿಸಿತ್ತು. ‘ಬಿಗ್ ಬಾಸ್’ ಬಾಯಿಂದಲೇ ‘ಗ್ರ್ಯಾಂಡ್ ಟಾಸ್ಕ್ ಮಾಸ್ಟರ್ ಎಂದು ಕರೆಯಿಸಿಕೊಂಡಿದ್ದ ಧನುಷ್ ಗೌಡ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಇದೀಗ ವಿಶ್ವವಾಣಿ ಸಂದರ್ಶನದಲ್ಲಿ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಫಿನಾಲೆ (Bigg Boss Kannada Finale) ಅಲ್ಲಿ ಟಾಪ್ 6 ಹಂತದಲ್ಲಿ ಗಿಲ್ಲಿ ನಟ, ಕಾವ್ಯ ಶೈವ, ರಘು, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಹಾಗೂ ಧನುಷ್ ಗೌಡ ಇದ್ದರು. ಈ 6 ಸ್ಪರ್ಧಿಗಳ ಪೈಕಿ ಮೊದಲು ಔಟ್ ಆದವರು ಧನುಷ್ ಗೌಡ. ಧನುಷ್ ಗೌಡಗೆ (Dhanush Gowda) 6ನೇ ಸ್ಥಾನ ಲಭಿಸಿತ್ತು. ‘ಬಿಗ್ ಬಾಸ್’ ಬಾಯಿಂದಲೇ ‘ಗ್ರ್ಯಾಂಡ್ ಟಾಸ್ಕ್ ಮಾಸ್ಟರ್ ಎಂದು ಕರೆಯಿಸಿಕೊಂಡಿದ್ದ ಧನುಷ್ ಗೌಡ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ‘ಬಿಗ್ ಬಾಸ್’ ಮನೆಯಲ್ಲಿ ಯಾವ ಜಗಳಕ್ಕೂ ನಾಂದಿ ಹಾಡದೆ, ನೇರವಾಗಿ ಹೇಳಿದವರು ಧನುಷ್ ಗೌಡ. ಇದೀಗ ವಿಶ್ವವಾಣಿ ಸಂದರ್ಶನದಲ್ಲಿ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: Gilli Nata: ಸುದೀಪ್ ಹಾಗೂ ಶಿವಣ್ಣ ಭೇಟಿ ಮಾಡಿದ ಗಿಲ್ಲಿ ನಟ; ತಾರೆಯರ ಶುಭ ಹಾರೈಕೆ
ನನಗೆ ನಾಟಕ ಮಾಡೋಕೆ ಬರಲ್ಲ
ನಾನು ಹೊರಗಡೆ ಹೇಗಿದ್ದೀನಿ ಹಾಗೇ ಇದ್ದೀನಿ. ನನಗೆ ನಾಟಕ ಮಾಡೋಕೆ ಬರಲ್ಲ. ಟಾಸ್ಕ್ ವಿಚಾರ ಬಂದರೆ, ಅದು ತುಂಬಾ ಇಷ್ಟ ಆಗ್ತಾ ಇತ್ತು. ಟಾಸ್ಕ್ ಇಲ್ಲ ಅಂದರೆ ಬಹಳ ಬೇಜಾರ್ ಆಗ್ತಾ ಇತ್ತು. ನಾನು ಗೆಲ್ಲಬೇಕು ಅಂತ ಆಡ್ತಿದ್ದೆ. ಯಾರನ್ನೂ ಸೋಲಿಸಬೇಕು ಅಂತ ಆಗಿಲ್ಲ ಎಂದರು.
ಅವನ ಆಟ ಆಡಿ ಗೆದ್ದಿದ್ದಾನೆ
ನಾನು ಸೈಲೆಂಟ್ ಅಂತ ಅನ್ನಿಸಿರಬಹುದು. ಅದು ವೋಟ್ ಕಡಿಮೆ ಬಿದ್ದಿರಬಹುದು. ನಾನು ಸೈಲೆಂಟ್ ಅಲ್ಲ ಅಲ್ಲಿ ಯಾರೂ ಅಷ್ಟಾಗಿ ಮಾತು ಕೊಡ್ತಾ ಇರಲಿಲ್ಲ ಎಂದರು. ನನ್ನ ತಾಯಿ ಹಾಗೂ ಹೆಂಡತಿ ಬೇಸರ ಆಯ್ತು. 6 ನೇ ಪಾಸಿಷನ್ ಬರ್ತೀನಿ ಅಂತ ಅಂದುಕೊಂಡಿರಲಿಲ್ಲ. ಗಿಲ್ಲಿ ಅವರು ಅವನ ಆಟ ಆಡಿ ಗೆದ್ದಿದ್ದಾನೆ. ಜನರ ನಿರ್ಧಾರ ಅದು. ಅವರು ಏನು ತೀಪರು ಕೊಟ್ಟಿದ್ದಾರೆ ಸರಿ ಇರತ್ತೆ. ನನ್ನ ಸ್ಥಾನದ ಬಗ್ಗೆಯೇ ಮಾತನಾಡಿಲ್ಲ.
ಕಾವ್ಯಾಗೆ ನಾನು ಹೇಳಿದ್ದು ಹೀಗೆ!
ಕಾವ್ಯರನ್ನ ಗಿಲ್ಲಿ ಎಲ್ಲಿಯೂ ಬಿಟು ಕೊಡಿಲ್ಲ. ನಿನ್ನ ತಪ್ಪು ಅಂತ ಕಾವ್ಯಾಗೆ ಹೇಳಿದ್ದೆ .ದೂರ ಇದ್ದು ಆಟ ಆಡು ಎಂದಿದ್ದೆ. ಅವರಿಬ್ಬರನ್ನು ದೂರ ಮಾಡಿ ನಂಗೇನು ಆಗಬೇಕಿರಲಿಲ್ಲ ಎಂದರು. ನಾನು ಒಂದು ವೇಳೆ ಕಾವ್ಯಗೆ ಹೇಳಿಲ್ಲ ಎಂದರೆ ಫ್ರೆಂಡ್ ಆಗ್ತಾ ಇರಲಿಲ್ಲ. ಗಿಲ್ಲಿ ಇಂದ ಕೆಟ್ಟದಾಗಿ ಆಗ್ತಿದೆ ಅಂತ ನಾನು ಹೇಳಿಲ್ಲ. ನಾನು ಹೇಳಿದ ರೀತಿ ಬೇರೆ ಜನ ತಿಳಿದುಕೊಂಡ ರೀತಿ ಬೇರೆ. ಗಿಲ್ಲಿ ಚೆನ್ನಾಗಿ ಆಡ್ತಾ ಇದ್ದಾನೆ ಅನ್ನೋದು ನನಗೆ ಗೊತ್ತಿತ್ತು.
ಇದನ್ನೂ ಓದಿ: Bigg Boss Kannada 12: PR ಇಲ್ಲದೇ ಇಲ್ಲಿ ತನಕ ಬಂದೆ! ಗಿಲ್ಲಿ ಬಗ್ಗೆ ಧ್ರುವಂತ್ ಹೇಳಿದ್ದೇನು?
ಗೆದ್ದ ಮೇಲೆ ಹಾಗೆ ಹೇಳಬಾರದು
ಅಶ್ವಿನಿ ವಿಚಾರಕ್ಕೆ ಮಾತನಾಡಿ, ಬಡವ ಆಗಲಿ, ಸಾಹುಕಾರ ಆಗಲಿ ಅದನ್ನ ನೋಡಿ ವೋಟ್ ಹಾಕಲ್ಲ. ಅವನು ಇರೋ ರೀತಿಗೆ ವೋಟ್ ಹಾಕ್ತಾರೆ. ಗಿಲ್ಲಿ ಇರೋದೇ ಹಾಗೇ, ಅವನು ಏನೂ ಬಡವರ ಥರ ತೋರಿಸಿಕೊಂಡಿಲ್ಲ. ಅವನು ಇರೋದೇ ಹಾಗೆ. ಗೆದ್ದ ಮೇಲೆ ಹಾಗೆ ಹೇಳಬಾರದು. ಕುರಿ ಫಾರ್ಮ್ ಆಗತ್ತೆ ಎಂದಿದ್ದ. ಮನೆ ಇದೆ ಎಂದಿದ್ದ. ಎಲ್ಲಿಯೂ ಬಡವ ಅದೆಲ್ಲ ಹೇಳಿಕೊಂಡಿಲ್ಲ ಎಂದರು.