Dhurandhar: ಸೋಮವಾರದ ಪರೀಕ್ಷೆಯಲ್ಲಿ ಪಾಸಾದ ʻಧುರಂಧರ್ʼ; ರಣವೀರ್ ಸಿಂಗ್ ಖಾತೆಗೆ ಬಿತ್ತು ಮತ್ತೊಂದು ಗೆಲುವು! ಈವರೆಗೂ ಎಷ್ಟಾಯ್ತು ಕಲೆಕ್ಷನ್?
Dhurandhar Box Office Collection: ರಣವೀರ್ ಸಿಂಗ್ ನಟನೆಯ ಬಹುನಿರೀಕ್ಷಿತ ʻಧುರಂಧರ್ʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈಗಾಗಲೇ ಶತಕೋಟಿ ಕ್ಲಬ್‌ಗೆ ಸೇರಿದೆ. ಡಿಸೆಂಬರ್ 5ರಂದು ತೆರೆಕಂಡ ಈ ಚಿತ್ರವು ಸೋಮವಾರದ ಕಲೆಕ್ಷನ್‌ನಲ್ಲಿ 'ಪಾಸ್' ಆಗಿದೆ. ಮೊದಲ ನಾಲ್ಕು ದಿನಗಳಲ್ಲಿ ಭಾರತದಲ್ಲಿ 130.80 ಕೋಟಿ ರೂ. ಗಳಿಕೆ ಕಂಡಿದೆ.
-
ರಣವೀರ್ ಸಿಂಗ್ ಖಾತೆಗೆ ಭರ್ಜರಿ ಗೆಲುವೊಂದು ದಕ್ಕಿದೆ. ಬಹುನಿರೀಕ್ಷಿತ ʻಧುರಂಧರ್ʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಈ ಚಿತ್ರವು ಶತಕೋಟಿ ಕ್ಲಬ್‌ಗೆ ಸೇರ್ಪಡೆಗೊಂಡಿದ್ದು, ಹೊಸ ಹೊಸ ದಾಖಲೆಗಳನ್ನು ಬರೆಯುವತ್ತ ಮುನ್ನುಗ್ಗುತ್ತಿದೆ. 2023ರಲ್ಲಿ ತೆರೆಕಂಡಿದ್ದ ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ನಂತರ ರಣವೀರ್ ಸಿಂಗ್ ಮತ್ತೊಂದು ಬ್ಲಾಕ್ ಬಸ್ಟರ್ ನೀಡುವ ತವಕದಲ್ಲಿದ್ದಾರೆ.
ಸೋಮವಾರದ ಪರೀಕ್ಷೆಯಲ್ಲಿ ʻಧುರಂಧರ್ʼ ಪಾಸ್
ಹೌದು, ʻಧುರಂಧರ್ʼ ಸಿನಿಮಾವು ಡಿಸೆಂಬರ್ 5ರಂದು ತೆರೆಕಂಡಿತ್ತು. ಮೊದಲ ಮೂರು ದಿನಗಳ ವೀಕೆಂಡ್‌ನಲ್ಲಿ ಉತ್ತಮ ಪ್ರದರ್ಶನ ಕಂಡಿದ್ದ ಈ ಚಿತ್ರವು ಸೋಮವಾರ ಯಾವ ರೀತಿ ಕಲೆಕ್ಷನ್ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಸಾಮಾನ್ಯವಾಗಿ ಸೋಮವಾರ ಉತ್ತಮ ಗಳಿಕೆ ಮಾಡಿದರೆ, ಆ ಚಿತ್ರವು ಹಿಟ್ ಆಗಲಿದೆ ಎಂಬ ಮಾತು ಬಾಕ್ಸ್ ಆಫೀಸ್ ವಲಯದಲ್ಲಿದೆ. ಇದೀಗ ಸೋಮವಾರ ಪರೀಕ್ಷೆಯಲ್ಲಿ ಪಾಸ್ ಆಗಿರುವ ʻಧುರಂಧರ್ʼ ಚಿತ್ರವು ಭಾರತದಲ್ಲಿ ಭರ್ತಿ 24.30 ಕೋಟಿ ರೂಪಾಯಿ ಬಾಚಿಕೊಂಡಿದೆ. ಸದ್ಯದ ಮಟ್ಟಿಗೆ ಇದು ಉತ್ತಮ ಮೊತ್ತವೇ ಆಗಿರುವುದರಿಂದ ಇದೇ ಪ್ರಮಾಣದಲ್ಲಿ ಗಳಿಕೆಯಾದರೆ. ಮೊದಲ ವಾರವೇ ಈ ಸಿನಿಮಾ 200 ಕೋಟಿ ರೂ. ಕ್ಲಬ್‌ಗೆ ಸೇರುವುದರಲ್ಲಿ ಅನುಮಾನವೇ ಇಲ್ಲ.
ಈವರೆಗೂ ಆಗಿರುವ ಗಳಿಕೆ ಎಷ್ಟು?
ಶುಕ್ರವಾರ : 28.60 ಕೋಟಿ ರೂಪಾಯಿ
ಶನಿವಾರ : 33.10 ಕೋಟಿ ರೂಪಾಯಿ
ಭಾನುವಾರ : 44.80 ಕೋಟಿ ರೂಪಾಯಿ
ಸೋಮವಾರ : 24.30 ಕೋಟಿ ರೂಪಾಯಿ
ಒಟ್ಟು ಭಾರತದಲ್ಲಿ ಈವರೆಗೂ ಧುರಂಧರ್ʼ ಚಿತ್ರ 130.80 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿದೇಶಗಳಲ್ಲಿ ಈ ಚಿತ್ರವು 42.42 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅಲ್ಲಿಗೆ ಮೊದಲ ನಾಲ್ಕು ದಿನಗಳಿಗೆ 170+ ಕೋಟಿ ರೂ. ಹಣ ಗಳಿಕೆ ಆದಂತೆ ಆಗಿದೆ. ಇದು ಸದ್ಯದ ಮಟ್ಟಿಗೆ ದೊಡ್ಡ ದಾಖಲೆಯೇ ಸರಿ. ಅಂದಹಾಗೆ, ಈ ಚಿತ್ರಕ್ಕೆ 140 ಕೋಟಿ ರೂ. ಹಣ ಖರ್ಚಾಗಿದೆಯಂತೆ.
`ಧುರಂಧರ್ʼ ಸಿನಿಮಾ ಕಲೆಕ್ಷನ್ ರಿಪೋರ್ಟ್
UNSTOPPABLE – UNSHAKABLE...#Dhurandhar has set the boxoffice on 🔥🔥🔥, passes the make-or-break Monday test with distinction marks... East, West, North, South – it's #Dhurandhar mania across the board.
— taran adarsh (@taran_adarsh) December 9, 2025
The film is outstanding at national multiplex chains, while the heartland… pic.twitter.com/sQCr3B3f6h
ಈ ಚಿತ್ರದಲ್ಲಿ ಯಾರೆಲ್ಲಾ ನಟಿಸಿದ್ದಾರೆ?
ಆದಿತ್ಯ ಧರ್ ನಿರ್ಮಾಣ ಮಾಡಿ, ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಅನೇಕ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ರಣವೀರ್ ಸಿಂಗ್ ಜೋಡಿಯಾಗಿ ಸಾರಾ ಅರ್ಜುನ್ ನಟಿಸಿದ್ದು, ಮಿಕ್ಕಂತೆ ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ರಾಕೇಶ್ ಬೇಡಿ, ನವೀನ್ ಕೌಶಿಕ್, ಮಾನವ್ ಗೋಹಿಲ್, ಡ್ಯಾನಿಶ್ ಪಾಂಡೋರ್, ಗೌರವ್ ಗೆರಾ, ರಾಜ್ ಜುತ್ಷಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರದ ಮುಂದುವರಿದ ಭಾಗವು ಮಾರ್ಚ್ 19ರಂದು ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.