ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದಲ್ಲಿ 500 ಕೋಟಿ ರೂ. ಕ್ಲಬ್‌ ಸೇರಿದ ʻಧುರಂಧರ್‌ʼ; 16ನೇ ದಿನ ಮತ್ತೊಂದು ದೊಡ್ಡ ದಾಖಲೆ ಸೃಷ್ಟಿಸಿದ ರಣವೀರ್‌ ಸಿಂಗ್‌ ಸಿನಿಮಾ

Dhurandhar Box Office Report: ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಬರೆಯುತ್ತಿದೆ. ಬಿಡುಗಡೆಯಾದ 16ನೇ ದಿನ ಈ ಚಿತ್ರವು 33.50 ಕೋಟಿ ರೂ. ಗಳಿಸುವ ಮೂಲಕ, ತನ್ನ ಮೊದಲ ದಿನದ ಗಳಿಕೆಯನ್ನೇ (28 ಕೋಟಿ ರೂ.) ಮೀರಿಸಿದೆ. ಸದ್ಯ ಭಾರತದಲ್ಲಿ 516.50 ಕೋಟಿ ರೂ. ಹಾಗೂ ವಿಶ್ವಾದ್ಯಂತ 750 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಈ ಚಿತ್ರವು, ಶೀಘ್ರದಲ್ಲೇ 'ಛಾವಾ' ಮತ್ತು 'ಕಾಂತಾರ ಚಾಪ್ಟರ್ 1' ದಾಖಲೆಗಳನ್ನು ಮುರಿಯಲಿದೆ.

Ranveer Singh: ಭಾರತದಲ್ಲಿ 500 ಕೋಟಿ ರೂ. ಕ್ಲಬ್‌ ಸೇರಿದ ʻಧುರಂಧರ್‌ʼ

-

Avinash GR
Avinash GR Dec 21, 2025 11:26 AM

ಆದಿತ್ಯ ಧರ್‌ ನಿರ್ಮಾಣ, ನಿರ್ದೇಶನದ, ರಣವೀರ್‌ ಸಿಂಗ್‌ ನಟನೆಯ ʻಧುರಂಧರ್ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಚಿನ್ನದ ಮಳೆಯನ್ನು ಸುರಿಸಿದೆ. ಹಾಕಿದ ಬಂಡವಾಳಕ್ಕೆ ಮೂರು ಪಟ್ಟು ಅಧಿಕ ಲಾಭವನ್ನು ತಂದುಕೊಟ್ಟಿದೆ. ಸಿನಿಮಾ ತೆರೆಕಂಡು 16 ದಿನಗಳು ಕಳೆದರೂ, ಸದ್ಯಕ್ಕಂತೂ ಅದರ ಗೆಲುವಿನ ಓಟ ನಿಲ್ಲುವಂತೆ ಕಾಣುತ್ತಿಲ್ಲ. ಆರಂಭಿಕ ದಿನಗಳಿಗೆ ಹೋಲಿಕೆ ಮಾಡಿದರೆ, ಈಗಲೇ ಅದರ ಗಳಿಕೆ ಅಧಿಕವಾಗಿದೆ. ಸದ್ಯ ಈ ಚಿತ್ರವು 500 ಕೋಟಿ ರೂ. ಕ್ಲಬ್‌ ಸೇರಿದೆ.

ಭಾರತದಲ್ಲಿ ದಾಖಲೆ ಬರೆದ ಧುರಂಧರ್‌

ತೆರೆಕಂಡು 16 ದಿನಗಳಿಗೆ ಭಾರತದಲ್ಲಿ ಧುರಂಧರ್‌ ಸಿನಿಮಾವು 500 ಕೋಟಿ ರೂ. ಕ್ಲಬ್‌ ಸೇರಿದೆ. ಅಚ್ಚರಿ ಎಂದರೆ, 16ನೇ ದಿನವೇ 33.50 ಕೋಟಿ ರೂ. ಬಾಚಿಕೊಂಡು, ಹೊಸ ದಾಖಲೆಯನ್ನು ಬರೆದಿದೆ. ಅಸಲಿಗೆ, ಈ ಸಿನಿಮಾ ತೆರೆಕಂಡ ದಿನ ಗಳಿಸಿದ್ದು 28 ಕೋಟಿ ರೂ. ಮಾರನೇ ದಿನ 32 ಕೋಟಿ ರೂ. ಗಳಿಸಿತ್ತು. ಆದರೆ ರಿಲೀಸ್‌ ಆದ 16ನೇ ದಿನ 33.50 ಕೋಟಿ ರೂ. ಗಳಿಕೆ ಮಾಡಿರುವುದು ಹೊಸ ದಾಖಲೆಯಾಗಿದೆ. ಇನ್ನು, ಭಾನುವಾರವು (ಡಿ.21) ಕೂಡ ಈ ಚಿತ್ರವು ಇಷ್ಟೇ ಪ್ರಮಾಣದ ಗಳಿಕೆಯನ್ನು ಮಾಡುವ ನಿರೀಕ್ಷೆ ಇದೆ. ಇದಾದ ನಂತರ ಕ್ರಿಸ್‌ಮಸ್‌ ರಜೆಗಳು ಸಿಗುವುದರಿಂದ ಗಳಿಕೆಯಲ್ಲಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

Akhanda 2 Box Office Collection: ಡೆವಿಲ್‌, ಧುರಂಧರ್‌ ನಡುವೆಯೂ ಅಬ್ಬರಿಸಿದ 'ಅಖಂಡ 2' ! ಬಾಲಯ್ಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ಇನ್ನು, ಧುರಂಧರ್‌ ಆದಷ್ಟು ಬೇಗ ಈ ವರ್ಷ ಟಾಪ್‌ ಕಲೆಕ್ಷನ್‌ ಸಿನಿಮಾ ಎಂಬ ಹಣೆಪಟ್ಟಿಯನ್ನು ಪಡೆದುಕೊಳ್ಳುವುದರ ಜೊತೆಗೆ 1000 ಕೋಟಿ ರೂ. ಕ್ಲಬ್‌ಗೂ ಸೇರ್ಪಡೆ ಆಗುವ ಸಾಧ್ಯತೆಗಳು ದಟ್ಟವಾಗಿವೆ. ಈವರೆಗೂ ಭಾರತದಲ್ಲಿ ಧುರಂಧರ್‌ ಸಿನಿಮಾ ಗಳಿಸಿರುವುದು 516.50 ಕೋಟಿ ರೂ. ವಿಶ್ವಾದ್ಯಂತ ಎಲ್ಲಾ ಗಳಿಕೆಯನ್ನು ಸೇರಿಸಿದರೆ, 750+ ಕೋಟಿ ರೂ. ದಾಟಲಿದೆ. ಸದ್ಯ 500 ಕೋಟಿ ರೂ. ಕ್ಲಬ್‌ ಸೇರಿದ ಬಾಲಿವುಡ್‌ ಸಿನಿಮಾಗಳ ಪೈಕಿ ಧುರಂಧರ್‌ಗೆ ಈಗ 8ನೇ ಸ್ಥಾನ ಸಿಕ್ಕಿದೆ. ಅತೀ ಶೀಘ್ರದಲ್ಲೇ ಟಾಪ್‌ 5ರಲ್ಲಿ ಸ್ಥಾನ ಪಡೆಯುವುದು ಖಚಿತ.

Ranveer Singh: 6 ದೇಶಗಳಲ್ಲಿ 'ಧುರಂಧರ್‌' ಬ್ಯಾನ್, ಆದರೂ ಗಲ್ಲಾಪೆಟ್ಟಿಗೆಯಲ್ಲಿ ಸಿಡಿಲಬ್ಬರದ ಕಲೆಕ್ಷನ್!‌ ಈವರೆಗೂ ಆಗಿರುವ ಗಳಿಕೆ ಎಷ್ಟು?

ಕಾಂತಾರಾ ದಾಖಲೆ ಬ್ರೇಕ್‌ ಮಾಡಲು ಎಷ್ಟು ಕೋಟಿ ಬೇಕು?

ಈ ವರ್ಷ ಅತ್ಯಧಿಕ ಗಳಿಕೆ ಮಾಡಿರುವ ಸಿನಿಮಾಗಳ ಪೈಕಿ ಕಾಂತಾರ ಚಾಪ್ಟರ್‌ 1 ಸಿನಿಮಾವು ಮೊದಲ ಸ್ಥಾನದಲ್ಲಿದೆ. ಈ ಚಿತ್ರವು 900+ ಕೋಟಿ ರೂ. ಗಳಿಸಿದೆ. ನಂತರದ ಸ್ಥಾನದಲ್ಲಿ ಛಾವಾ ಸಿನಿಮಾ ಇದೆ. ಧುರಂಧರ್‌ಗೆ ಮೂರನೇ ಸ್ಥಾನ ಇದೆ. 50 ಕೋಟಿ ರೂ. ಗಳಿಸಿದರೆ, ಛಾವಾ ದಾಖಲೆ ಬ್ರೇಕ್‌ ಆಗಲಿದೆ. ಧುರಂಧರ್‌ ಸಿನಿಮಾ 150 ಕೋಟಿ ರೂ. ಗಳಿಸಿದರೆ, ಕಾಂತಾರ ಚಾಪ್ಟರ್‌ 1 ಚಿತ್ರದ ದಾಖಲೆಯು ಬ್ರೇಕ್‌ ಆಗಲಿದ್ದು, ಈ ವರ್ಷ ಅತ್ಯಧಿಕ ಗಳಿಕೆ ಕಂಡ ಸಿನಿಮಾ ಎಂಬ ಖ್ಯಾತಿಯು ಧುರಂಧರ್‌ಗೆ ಸಿಗಲಿದೆ. ಅದಕ್ಕೆ ಇನ್ನೂ ಕೆಲವು ದಿನಗಳು ಕಾಯಬೇಕಿದೆ.