ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Prabhas: ʻಧುರಂಧರ್‌ʼ ಅಬ್ಬರಕ್ಕೆ ಬಾಲಿವುಡ್‌ನಲ್ಲಿ ಮಂಕಾದ ʻದಿ ರಾಜಾ ಸಾಬ್‌ʼ; 38ನೇ ದಿನದಲ್ಲೂ ಕಲೆಕ್ಷನ್‌ ಕಿಂಗ್‌ ಆದ ರಣವೀರ್‌ ಸಿಂಗ್‌!

Ranveer Singh: 'ಧುರಂಧರ್' ಸಿನಿಮಾ 38ನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ಪಾರುಪತ್ಯ ಮೆರೆದಿದೆ. ವಿಶ್ವಾದ್ಯಂತ 1280+ ಕೋಟಿ ರೂ. ಗಳಿಸಿರುವ ಈ ಚಿತ್ರ, ಹಿಂದಿ ಬೆಲ್ಟ್‌ನಲ್ಲಿ ಪ್ರಭಾಸ್ ಅವರ ಹೊಸ ಚಿತ್ರ 'ದಿ ರಾಜಾ ಸಾಬ್'ಗಿಂತ ಹೆಚ್ಚು ಗಳಿಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.

'ರಾಜಾ ಸಾಬ್'ಗೆ ರಣವೀರ್ ಪಂಚ್: 38ನೇ ದಿನವೂ 'ಧುರಂಧರ್' ಕಲೆಕ್ಷನ್ ಕಿಂಗ್!

-

Avinash GR
Avinash GR Jan 12, 2026 4:25 PM

ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಅವರ ಧುರಂಧರ್‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಧೂಳ್‌ ಧಮಾಕಾ ಮಾಡುತ್ತಿದೆ. ಈವರೆಗೂ ಈ ಚಿತ್ರದ ಗಳಿಕೆ ವಿಶ್ವಾದ್ಯಂತ 1280+ ಕೋಟಿ ರೂ. ದಾಟಿದೆ. ಈ ಮೂಲಕ ಬಾಲಿವುಡ್‌ನಲ್ಲಿ ದೊಡ್ಡ ಸಂಚಲನವನ್ನು ಉಂಟು ಮಾಡಿದೆ. ಅತೀ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾ ಎಂಬ ಪಟ್ಟವು ಧುರಂಧರ್‌ ಸಿನಿಮಾಗೆ ಸಿಕ್ಕಿದೆ. ಚಿತ್ರ ತೆರೆಕಂಡು 38 ದಿನಗಳಾಗಿವೆ. ಆದರೂ ಕಲೆಕ್ಷನ್‌ನಲ್ಲಿ ಕಿಂಗ್‌ ಆಗಿ ಮುಂದುವರಿಯುತ್ತಿದೆ.

ಧುರಂಧರ್‌ ಮುಂದೆ ರಾಜಾ ಸಾಬ್‌

ಹೌದು, 38ನೇ ದಿನ ಧುರಂಧರ್‌ ಸಿನಿಮಾವು ಭಾರತದಲ್ಲಿ 6.15 ಕೋಟಿ ರೂ. ಗಳಿಕೆ ಮಾಡಿದೆ. ಆ ಮೂಲಕ ದೊಡ್ಡ ತನ್ನ ಹವಾ ಇನ್ನೂ ಮುಗಿದಿಲ್ಲ ಎಂದು ಸಾಬೀತು ಮಾಡಿದೆ. ಈ ನಡುವೆ ಮೊನ್ನೆಯಷ್ಟೇ ತೆರೆಕಂಡಿರುವ ದಿ ರಾಜಾ ಸಾಬ್‌ ಸಿನಿಮಾ ಧುರಂಧರ್‌ ಮುಂದೆ ಮಂಡಿಯೂರಿದೆ. ಹೌದು, ಜನವರಿ 11ರಂದು ಹಿಂದಿಯ ಧುರಂಧರ್‌ 6.15 ಕೋಟಿ ರೂ. ಕಮಾಯಿ ಮಾಡಿದ್ದರೆ, ಪ್ರಭಾಸ್‌ ನಟನೆಯ ಬಹುನಿರೀಕ್ಷಿತ ʻದಿ ರಾಜಾ ಸಾಬ್ʼ‌ ಸಿನಿಮಾದ ಹಿಂದಿ ವರ್ಷನ್‌ನಿಂದ 4.65 ಕೋಟಿ ರೂ. ಗಳಿಕೆ ಆಗಿದೆ. ಈ ಮೂಲಕ ಧುರಂಧರ್‌ ಎದುರು ರಾಜಾ ಸಾಬ್‌ ಡಲ್‌ ಹೊಡೆದಿದೆ.

ʻದಿ ರಾಜಾ ಸಾಬ್‌ʼ ಕಲೆಕ್ಷನ್‌ನಲ್ಲಿ ಕುಸಿತ; ಪ್ರಭಾಸ್‌ ಸಿನಿಮಾಗೆ 2ನೇ ದಿನ ಸಿಕ್ಕ ರೆಸ್ಪಾನ್ಸ್‌ ಹೇಗಿದೆ ನೋಡಿ?

ಹಿಂದಿಯಲ್ಲಿ ನಂಬರ್‌ 1 ಸಿನಿಮಾ

ಬಾಲಿವುಡ್‌ನಲ್ಲಿ ಈವರೆಗೂ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿ ಅಲ್ಲು ಅರ್ಜುನ್‌ ನಟನೆಯ ಪುಷ್ಪ 2 ಸಿನಿಮಾದ ಹೆಸರಿನಲ್ಲಿತ್ತು. ಪುಷ್ಪ 2 ಸಿನಿಮಾದ ಹಿಂದಿ ವರ್ಷನ್‌ನಿಂದ 830.10 ಕೋಟಿ ರೂ.ಗಳಿಕೆ ಆಗಿತ್ತು. ನಂತರದ ಸ್ಥಾನ ಶಾರುಖ್‌ ಖಾನ್‌ ಅವರ ಜವಾನ್ (643.87‌ ಕೋಟಿ ರೂ.) ಹೆಸರಿನಲ್ಲಿತ್ತು. ಮೂರನೇ ಸ್ಥಾನವು ಶ್ರದ್ಧಾ ಕಪೂರ್‌ ಅವರ ಸ್ತ್ರೀ 2 (627.02 ಕೋಟಿ ರೂ.) ಚಿತ್ರ ಇತ್ತು.

ಇದೀಗ ಈ ಸಿನಿಮಾಗಳನ್ನು ಧುರಂಧರ್‌ ಬೀಟ್‌ ಮಾಡಿದೆ. ಈ ಚಿತ್ರದ ಭಾರತದ ಗಳಿಕೆಯು ಈಗ 857.40 ಕೋಟಿ ರೂ. ಆಗಿದೆ. ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಧುರಂಧರ್‌ ಸಿನಿಮಾದ ವಿಶ್ವಾದ್ಯಂತ ಗಳಿಕೆಯು 1280+ ಕೋಟಿ ರೂ. ಆಗಿದೆ.

Prabhas: ಕರ್ನಾಟಕದಲ್ಲಿ ʻದಿ ರಾಜಾ ಸಾಬ್‌ʼ ಚಿತ್ರಕ್ಕೆ 300 ಥಿಯೇಟರ್‌ ಮೀಸಲು; ವಿತರಣೆ ಜವಾಬ್ದಾರಿ ಹೊತ್ತ ಹೊಂಬಾಳೆ ಫಿಲ್ಮ್ಸ್‌!

ಭಾರತ ಟಾಪ್‌ ಸಿನಿಮಾಗಳ ಪಟ್ಟಿಯಲ್ಲಿ 5ನೇ ಸ್ಥಾನ

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಆಮೀರ್ ಖಾನ್ ನಟನೆಯ 'ದಂಗಲ್' (2,200 ಕೋಟಿ ರೂ.) ಇಂದಿಗೂ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ದಕ್ಷಿಣ ಭಾರತದ ಹೆಮ್ಮೆ ಎನಿಸಿದ 'ಬಾಹುಬಲಿ 2' (1,810.60 ಕೋಟಿ ರೂ.), 'ಪುಷ್ಪ 2: ದ ರೂಲ್' (1,800 ಕೋಟಿ ರೂ.) ಮತ್ತು ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ (1,387 ಕೋಟಿ ರೂ.) ಚಿತ್ರಗಳು ಕ್ರಮವಾಗಿ ಸ್ಥಾನ ಪಡೆದುಕೊಂಡಿವೆ.

ಇದೀಗ ರಣವೀರ್ ಸಿಂಗ್ ನಟನೆಯ 'ಧುರಂಧರ್' ಚಿತ್ರವು 1,284.53 ಕೋಟಿ ಗಳಿಸುವ ಮೂಲಕ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಐದನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶೀಘ್ರದಲ್ಲೇ ಆರ್‌ಆರ್‌ಆರ್‌ ಸಿನಿಮಾವನ್ನು ಧುರಂಧರ್‌ ಬೀಟ್‌ ಮಾಡಿದರೆ ಅಚ್ಚರಿ ಇಲ್ಲ.