Rashmika Mandanna: ಕೊನೆಗೂ ಪ್ರೀತಿಯಲ್ಲಿ ಬಿದ್ದಿರುವುದನ್ನು ಒಪ್ಪಿಕೊಂಡ ರಶ್ಮಿಕಾ! ಸೀಕ್ರೆಟ್ ಡೇಟಿಂಗ್ ಬಗ್ಗೆ ಹೇಳಿದ್ದೇನು?
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರನ್ನು ಲವ್ ಮಾಡುತ್ತಿದ್ದಾರೆ ಎಂಬ ಮಾತುಗಳು ಬಹಳ ವರ್ಷಗಳಿಂದ ಕೇಳಿಬರುತ್ತಲೇ ಇದೆ. ಆದರೆ, ಈ ಬಗ್ಗೆ ರಶ್ಮಿಕಾ ಆಗಲಿ ವಿಜಯ್ ಆಗಲಿ ಓಪನ್ ಆಗಿ ಎಲ್ಲೂ ಮಾತನಾಡಿಲ್ಲ. ಆದರೆ ಇದೇ ಮೊದಲ ಬಾರಿಗೆ ರಶ್ಮಿಕಾ ಅವರು ಇದೇ ತಾವು ಪ್ರೀತಿಯಲ್ಲಿರುವುದಾಗಿ ಒಪ್ಪಿಕೊಂಡಿದ್ದಾರೆ.

rashmika

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಭಾರತ ಚಿತ್ರರಂಗದ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸ್ಯಾಂಡಲ್ವುಡ್, ಟಾಲಿವುಡ್, ಬಾಲಿವುಡ್‌ನಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ಹೀರೋಯಿನ್. ನಟಿ ರಶ್ಮಿಕಾ ಅವರ ವೈಯಕ್ತಿಕ ಬದುಕು ಕೂಡ ಆಗಾಗ ಸುದ್ದಿಯಾಗುತ್ತೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಡೇಟಿಂಗ್ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಗೀಡಾಗುತ್ತೆ. ಇಲ್ಲಿಯವರೆಗೆ ರಶ್ಮಿಕಾ ಮಂದಣ್ಣ ಆಗಲಿ ವಿಜಯ್ ದೇವರಕೊಂಡ ಆಗಲಿ ತಮ್ಮ ಸಂಬಂಧದ ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ.
ಇದೀಗ ರಶ್ಮಿಕಾ ಸಂದರ್ಶನವೊಂದರಲ್ಲಿ ತಾನು ಪ್ರೀತಿಯಲ್ಲಿ ಬಿದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ರಶ್ಮಿಕಾ ಇದೇ ಮೊದಲ ಬಾರಿಗೆ ತಾನು ಪ್ರೀತಿ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ನಟಿ ತಾವು ಪ್ರೀತಿ ಮಾಡುವ ಸಂಗಾತಿ ಹೆಸರನ್ನು ಬಹಿರಂಗಪಡಿಸಲಿಲ್ಲ. ರಶ್ಮಿಕಾ ತನ್ನ ವೈಯಕ್ತಿಕ ವಿಚಾರ ಮಾತನಾಡುತ್ತಾ ತನ್ನ ಮನೆಯು ನನಗೆ ಅತ್ಯಂತ ಸಂತೋಷವನ್ನು ನೀಡುವ ಸ್ಥಳವಾಗಿದೆ. ನನಗೆ ತೃಪ್ತಿ ಕೊಡುವ ಏಕೈಕ ಸ್ಥಳವೆಂದರೆ, ಅದು ನನ್ನ ಮನೆ ಎಂದು ಹೇಳಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ಜೀವನ ಸಂಗಾತಿಯ ಬಗ್ಗೆ ಮಾತನಾಡಿದ್ದಾರೆ. ಕಣ್ಣುಗಳು ಒಬ್ಬ ವ್ಯಕ್ತಿಯ ಆತ್ಮಕ್ಕೆ ಕಿಟಕಿ ಎನ್ನುತ್ತಾರೆ. ಈ ಮಾತನ್ನು ನಾನು ನಂಬುತ್ತೇನೆ. ನಾನು ಯಾವಾಗಲೂ ನಗುತ್ತಾ ಇರಲು ಇಷ್ಟ ಪಡುತ್ತೇನೆ. ಆದ್ದರಿಂದ ನಾನು ನಗು ಮುಖಗಳನ್ನು ಹೊಂದಿರುವ ನನ್ನ ಇಷ್ಟದ ಜನರತ್ತ ಆಕರ್ಷಿತಳಾಗುತ್ತೇನೆ. ನನ್ನ ಸಂಗಾತಿಯು ತನ್ನ ಸುತ್ತಲಿನ ಜನರನ್ನು ಗೌರವಿಸುವ ವ್ಯಕ್ತಿಯಾಗಿರುತ್ತಾನೆ ಎಂದು ಹೇಳಿಕೊಂಡಿದ್ದಾರೆ. ನಟಿಯ ಈ ರೀತಿ ಹೇಳಿಕೆ ಕಂಡು ನಟಿ ವಿಜಯ್ ಜೊತೆ ಲವ್ ಅಲ್ಲಿ ಬಿದ್ದಿರುವುದು ಪಕ್ಕಾ ಎಂದು ಅಭಿಮಾನಿಗಳು ಚರ್ಚೆ ಮಾಡಿದ್ದಾರೆ.
ಇದನ್ನು ಓದಿ: Viral News: ರಾಷ್ಟ್ರ ಧ್ವಜದ ಮೇಲೆ ಕರ್ನಾಟಕದ ಮ್ಯಾಪ್; ವಿದ್ಯಾರ್ಥಿ ವಿರುದ್ಧ ನೆಟ್ಟಿಗರು ಆಕ್ರೋಶ
ಈ ಹಿಂದೆ ವಿಜಯ್ ದೇವರಕೊಂಡ ಕೂಡ ತಾನು ಪ್ರೀತಿಸುತ್ತಿರುವುದು ನಿಜ ಎಂದು ದೃಢಪಡಿಸಿದ್ದರು. ತಾನು ಪರೋಕ್ಷವಾಗಿ ಪ್ರೀತಿಯ ಬಲೆಯಲ್ಲಿ ಬಿದ್ದಿರುವುದಾಗಿ ಒಪ್ಪಿಕೊಂಡಿದ್ದರು.ವಿಜಯ್ ನಾನು ಸಿಂಗಲ್ ಅಲ್ಲ, ನನಗೆ 35 ವರ್ಷ. ನಾನು ಒಬ್ಬಂಟಿಯಾಗಿರುತ್ತೇನೆ ಎಂದು ನೀವು ಭಾವಿ ಸುತ್ತೀರಾ? ತಾನು ಡೇಟ್‌ಗೆ ಹೋಗುವುದು ಅಪರೂಪ, ದೀರ್ಘಾವಧಿಯ ಸ್ನೇಹ ಹೊಂದಿರುವವರ ಜೊತೆ ಮಾತ್ರ ಡೇಟ್‌ಗೆ ಹೋಗುತ್ತೇನೆ ಎಂದು ಹೇಳುವ ಮೂಲಕ ಪ್ರೀತಿಯಲ್ಲಿ ಬಿದ್ದಿರುವ ಬಗ್ಗೆ ಖಚಿತ ಪಡಿಸಿದ್ದರು.