ಕಾಂತಾರ (Kantara Movie) ಸಿನಿಮಾ ರಿಷಬ್ ಶೆಟ್ಟಿ (Rishab shetty) ಅವರಿಗೆ ಟರ್ನಿಂಗ್ ಪಾಯಿಂಟ್ ಕೊಟ್ಟ ಮೂವಿ. ರಾಷ್ಟ್ರಪ್ರಶಸ್ತಿ ದೊರೆಕಿದ್ದು ಮಾತ್ರವೇ ಅಲ್ಲದೆ ಇಂದು ಭಾರತದ ಸ್ಟಾರ್ ಪ್ಯಾನ್ ಇಂಡಿಯಾ ನಟರಲ್ಲಿ ಒಬ್ಬರನ್ನಾಗಿ ಮಾಡಿದೆ ಈ ಸಿನಿಮಾ. ಇತ್ತೀಚೆಗಷ್ಟೆ ರಿಷಬ್ ಶೆಟ್ಟಿ ಅವರು ಐಎನ್ಸಿಎ 2026 ಅವಾರ್ಡ್ ದೊರಕಿತು. ‘ಕಾಂತಾರ 1’ ಸಿನಿಮಾದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ, ಅತ್ಯುತ್ತಮ ನಿರ್ದೇಶಕ (Director) ಮತ್ತು ಅತ್ಯುತ್ತಮ ಸಿನಿಮಾ ಪ್ರಶಸ್ತಿಗಳನ್ನು ‘ಕಾಂತಾರ: ಚಾಪ್ಟರ್ 1’ ಬಾಚಿಕೊಂಡಿತು. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಸ್ವೀಕರಿಸಿ ರಿಷಬ್ ಶೆಟ್ಟಿ ಮಾತನಾಡಲೇಬೇಕು ಎಂದು ನಿರೂಪಕರಾದ ರಾಣಾ ದಗ್ಗುಬಾಟಿ ಹಾಗೂ ಕರಣ್ ಜೋಹರ್ ಒತ್ತಾಯ ಮಾಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ರಿಷಬ್ ಪತ್ನಿ ಪ್ರಗತಿ (Pragathi shetty) ಅವರನ್ನು ವೇದಿಕೆಗೆ ಕರೆದಿದ್ದಾರೆ. ಈ ವೇಳೆ ರಿಷಬ್ ಮಾತನಾಡಿದ್ದು ಹೀಗೆ.
ಕಾಂತಾರದಲ್ಲಿ ನಟಿಸೋದು ಬೇಡ ಎಂದುಕೊಂಡಿದ್ದೆ
ಮೊದಲ ಬಾರಿ ನಾನು 'ಕಾಂತಾರ' ಕಥೆ ಬರೆದಾಗ ನಿರ್ದೇಶನ ಮಾತ್ರ ಸಾಕು, ನಟಿಸೋದು ಬೇಡ ಎಂದುಕೊಂಡಿದ್ದೆ. ಆದರೆ ಶಿವ ಪಾತ್ರವನ್ನು ನೀವೇ ಮಾಡಬೇಕು ಎಂದು ಪತ್ನಿ ಪ್ರಗತಿ ಹೇಳಿದ್ದರು. ಹಾಗಾಗಿ 'ಕಾಂತಾರ' ಚಿತ್ರ ನಿರ್ದೇಶಿಸಿ, ನಟಿಸಿದೆ.ಹಾಗಾಗಿ ಪ್ರಗತಿಗೆ ಧನ್ಯವಾದ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: Rohit Shetty: ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ; ಪ್ರಮುಖ ಆರೋಪಿ ಅರೆಸ್ಟ್
ನಾನು ಸಿನಿಮಾಗಳಲ್ಲಿ ಅದಕ್ಕೂ ಮುಂಚೆ ನಟಿಸಿದ್ದೆ ಆದರೆ ನಾನು ನಿರ್ದೇಶಿಸಿದ ಸಿನಿಮಾನಲ್ಲಿ ನಟಿಸುತ್ತಿರಲಿಲ್ಲ.ಪತ್ನಿ ನನಗೆ ಧೈರ್ಯ ನೀಡಿ, ಆ ಪಾತ್ರ ಮಾಡಲು ನನ್ನಲ್ಲಿ ಸ್ಪೂರ್ತಿ ತುಂಬಿದರು. ಕಾಂತಾರ 1’ ಸಿನಿಮಾದ ಹಿಂದೆ ಸಾಕಷ್ಟು ಜನರ ಶ್ರಮ ಇದೆ.
ಇಡೀ ತಂಡದ ಪರಿಶ್ರಮ ಇದರಲ್ಲಿದೆ. ಆಕ್ಷನ್ ಕ್ರೊರಿಯೋಗ್ರಫರ್, ಪ್ರೊಡಕ್ಷನ್ ಡಿಸೈನರ್, ಕಾಸ್ಟ್ಯೂಮ್ ಡಿಸೈನರ್ ಪ್ರಗತಿ ಶೆಟ್ಟಿ ಕೂಡ ಇಲ್ಲಿದ್ದಾರೆ. ಈ ಪ್ರಶಸ್ತಿಯನ್ನು ಕನ್ನಡ ಪ್ರೇಕ್ಷಕರು ಹಾಗೂ ನಾವು ನಂಬುವ ದೈವಕ್ಕೆ ಪ್ರಶಸ್ತಿ ಅರ್ಪಿಸುತ್ತೇನೆ" ಎಂದು ಹೇಳಿ ರಿಷಬ್ ವೇದಿಕೆ ಇಳಿದರು. ಕ ನ್ನಡದ ಜನತೆಗೆ ಧನ್ಯವಾದ. ನಿಮ್ಮಿಂದಲೇ ಇದೆಲ್ಲಾ ಸಾಧ್ಯವಾಯಿತು. ಅದರಿಂದ 'ಕಾಂತಾರ' ಸಿನಿಮಾ ಇಲ್ಲಿವರೆಗೆ ಬಂತು ಎಂದೂ ಹೇಳಿದರು.
'ಕಾಂತಾರ ಚಾಪ್ಟರ್ 1' ಮೆಗಾ ಸಕ್ಸಸ್ ಕಂಡ ಬಳಿಕ ತೆಲುಗು ನಿರ್ದೇಶಕನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಇನ್ನೇನು ಶುರುವಾಗಿದೆ ಎನ್ನುವಾಗಲೇ ರಿಷಬ್ ಶೆಟ್ಟಿ ಮತ್ತೊಂದು ಸಿನಿಮಾವನ್ನು ಆರಂಭ ಮಾಡಿದ್ದಾರೆ. ಹನುಮಂತನ ಸುತ್ತ ಸಾಗುವ 'ಜೈ ಹನುಮಾನ್' ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಹನುಮಂತನಾಗಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: Amruthadhaare Serial: ಹೆಂಡತಿ ಯಶಸ್ಸಿನ ಹಿಂದಿದೆ ಗಂಡನ ಶ್ರಮ; ಗೌತಮ್ - ಭೂಮಿಕಾ ಜೋಡಿ ಕಂಡು ವೀಕ್ಷಕರು ಖುಷ್!
ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಅವರ ಪಾತ್ರವು ಹೇಗೆ ಇರಬಹುದು ಎಂಬ ಕುತೂಹಲ ಇದೆ. ನಿರ್ದೇಶಕ ಪ್ರಶಾಂತ್ ವರ್ಮಾ ಅವರು ಸಂಪೂರ್ಣವಾಗಿ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿದ್ದು, ಏಪ್ರಿಲ್‌ನಿಂದ ಶೂಟಿಂಗ್ ಆರಂಭವಾಗುವ ನಿರೀಕ್ಷೆ ಇದೆ. ʻಜೈ ಹನುಮಾನ್ʼ ಸಿನಿಮಾವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಲಿದೆ.