ರಿಷಬ್ ಶೆಟ್ಟಿ-ಅಕ್ಷಯ್ ಸಿನಿಮಾಗಳು ಒಂದೇ ದಿನ ತೆರೆಗೆ; ಬಾಕ್ಸ್ ಆಫೀಸ್ ಫೈಟ್ ಪಕ್ಕಾ!
ರಿಷಬ್ ಹುಟ್ಟುಹಬ್ಬ ದಿನ 'ಕಾಂತಾರ: ಅಧ್ಯಾಯ 1'ರ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಹಾಗೆಯೇ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಫ್ಯಾನ್ಸ್ ಬಹಳಷ್ಟು ಉತ್ಸುಕರಾಗಿದ್ದು ಅಕ್ಟೋಬರ್ 2ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. 'ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಪೈಪೋಟಿ ನೀಡಲು ಇದೀಗ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸಿನಿಮಾ ಸಿದ್ದವಾಗಲಿದೆ. ಹೌದು ಅಕ್ಷಯ್ ಕುಮಾರ್ ನಟನೆಯ ‘ಜಾಲಿ ಎಲ್ ಎಲ್ ಬಿ 3’ ಸಿನಿಮಾ ಅದೇ ದಿನ ರಿಲೀಸ್ ಆಗಲಿದೆ.

Rishab Shetty’s Kantara and Jolly LLB 3

ನವದೆಹಲಿ: ಕಾಂತಾರ (Kantara) ಚಿತ್ರದ ಮೂಲಕ ಗಮನ ಸೆಳೆದ ರಿಷಬ್ ಶೆಟ್ಟಿ (Rishab Shetty) ನಟನೆ, ನಿರ್ದೇಶನದಲ್ಲಿಯೂ ಮಿಂಚುತ್ತಿದ್ದಾರೆ. 2022ರಲ್ಲಿ ತೆರೆ ಕಂಡು ಸಿನಿ ಇಂಡಸ್ಟ್ರಿಯಲ್ಲೇ ಹೊಸ ದಾಖಲೆ ಬರೆದಿದ್ದ 'ಕಾಂತಾರ' ಸಿನಿಮಾದ ಪ್ರೀಕ್ವೆಲ್ ಇದೀಗ ಸಿದ್ಧಗೊಳ್ಳುತ್ತಿದೆ. ಈಗಾಗಲೇ ರಿಷಬ್ ಹುಟ್ಟುಹಬ್ಬ ದಿನ 'ಕಾಂತಾರ: ಅಧ್ಯಾಯ 1'ರ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಹಾಗೆಯೇ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಫ್ಯಾನ್ಸ್ ಬಹಳಷ್ಟು ಉತ್ಸುಕರಾಗಿದ್ದು ಅಕ್ಟೋಬರ್ 2ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಆದರೆ 'ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಪೈಪೋಟಿ ನೀಡಲು ಇದೀಗ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಸಿನಿಮಾ ಸಿದ್ಧವಾಗಿದೆ. ಹೌದು, ಅಕ್ಷಯ್ ಕುಮಾರ್ ನಟನೆಯ ‘ಜಾಲಿ ಎಲ್‌ಎಲ್‌ಬಿ 3’ (Jolly LLB 3) ಸಿನಿಮಾವನ್ನು ಅದೇ ದಿನ ರಿಲೀಸ್ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.
ಈಗಾಗಲೇ ಅಕ್ಷಯ್ ಕುಮಾರ್ ನಟನೆಯ ‘ಜಾಲಿ ಎಲ್‌ಎಲ್‌ಬಿ’ ಮತ್ತು ‘ಜಾಲಿ ಎಲ್‌ಎಲ್‌ಬಿ 2’ ಸಿನಿಮಾಗಳು ಹಿಟ್ ಆಗಿವೆ. ಈಗ ಅದರ ಮೂರನೇ ಭಾಗ ‘ಜಾಲಿ ಎಲ್‌ಎಲ್‌ಬಿ 3’ ತೆರೆ ಮೇಲೆ ಬರಲು ಸಿದ್ದವಾಗಿದೆ. ಮೊದಲ ಭಾಗದಲ್ಲಿ ಗಮನ ಸೆಳೆದಿದ್ದ ನಟ ಅರ್ಷದ್ ವಾರ್ಸಿ ಕೂಡ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜತೆ ತೆರೆ ಹಂಚಿಕೊಂಡಿದ್ದಾರೆ. ಸುಭಾಶ್ ಕಪೂರ್ ನಿರ್ದೇಶನದ ಈ ಚಿತ್ರದ ಮೇಲೆ ಅಭಿಮಾನಿಗಳಿಗೂ ಬಹಳಷ್ಟು ನಿರೀಕ್ಷೆ ಇದೆ. ಆದರೆ ಅದೇ ದಿನ ರಿಷಬ್ ನಟನೆಯ ʼಕಾಂತರʼ ಕೂಡ ಬಿಡುಗಡೆಯಾಗಲಿದ್ದು ಭಾರಿ ಪೈಪೋಟಿ ಎದುರಾಗಲಿದೆ.
ಇದನ್ನು ಓದಿ:Swapna Mantapa Movie: ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನಮಂಟಪʼ ಚಿತ್ರ ಜು.25ಕ್ಕೆ ರಿಲೀಸ್
ʼಜಾಲಿ ಎಲ್‌ಎಲ್‌ಬಿ 3’ ಚಿತ್ರವನ್ನು ಸೆಪ್ಟೆಂಬರ್ 19ರಂದು ತೆರೆಕಾಣಿಸುವ ಪ್ಲ್ಯಾನ್ ಇತ್ತು. ಆದರೆ ಈಗ ಚಿತ್ರತಂಡದವರು ನಿರ್ಧಾರ ಬದಲಿಸಿದ್ದು ಸೆಪ್ಟೆಂಬರ್ 19ರ ಬದಲು ಅಕ್ಟೋಬರ್ 2ರಂದು ಬಿಡುಗಡೆ ಮಾಡುವುದು ಪಕ್ಕಾ ಎಂದು ತಿಳಿಸಿದೆ. ಇತ್ತೀಚೆಗೆ ರಿಲೀಸ್ ಆದ ಅಕ್ಷಯ್ ಕುಮಾರ್ ನಟನೆಯ ʼಕೇಸರಿ-2ʼ ಹಾಗೂ ʼಹೌಸ್‌ಫುಲ್-5ʼ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆದಿದ್ದು, ಇದೀಗ ʼಎಲ್‌ಎಲ್‌ಬಿ 3ʼ ಮೂಲಕ ಅವರು ತೆರೆಗೆ ಬರಲು ಸಜ್ಜಾಗಿದ್ದಾರೆ. ಇತ್ತ 'ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಗಾಗಿ ಫ್ಯಾನ್ಸ್ ಮೋಸ್ಟ್ ವೈಟಿಂಗ್‌ನಲ್ಲಿದ್ದು ಚಿತ್ರತಂಡವು ಅದ್ಧೂರಿಯಾಗಿ ನಿರ್ಮಾಣ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗಲಿದ್ದು ಸಿನಿಮಾದ ಪೋಸ್ಟರ್ ನೋಡಿಯೇ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಒಟ್ಟಿನಲ್ಲಿ ʼಕಾಂತಾರʼ ಚಿತ್ರದ ಎದುರು ʼಜಾಲಿ ಎಲ್‌ಎಲ್‌ಬಿ 3ʼ ಬಿಡುಗಡೆಯಾಗಲಿದೆ ಎನ್ನುವ ವಿಚಾರವೇ ಅಭಿಮಾನಿಗಳಿಗೆ ಬಹಳಷ್ಟು ಶಾಕ್ ನೀಡಿದೆ.