ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishab Shetty: ರಿಷಬ್ ದಂಪತಿಗೆ ಪಂಜುರ್ಲಿ ದೈವದ ಅಭಯ! ಹರಕೆ ತೀರಿಸಿದ ನಟ

Barebail Varaha Panjurli: ಮಂಗಳೂರಿನ ಬಾರೆಬೈಲ್ ವರಾಹ ಪಂಜುರ್ಲಿ ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮ ನೆರವೇರಿದೆ. ಈ ಸಂದರ್ಭದಲ್ಲಿ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ ರಾಮ್ ಸೇರಿದಂತೆ ಚಿತ್ರರಂಗದ ಹಲವರು ಭಾಗಿ ಆಗಿದ್ದರು. ಪತ್ನಿ ಮಕ್ಕಳ ಜತೆಗೆ ರಿಷಬ್ ಶೆಟ್ಟಿ ಭಾಗವಹಿಸಿದರು.

ರಿಷಬ್‌ ಶೆಟ್ಟಿ

ರಿಷಬ್ ಶೆಟ್ಟಿ (Rishab Shetty) ಅವರ ‘ಕಾಂತಾರ: ಚಾಪ್ಟರ್ 1’(Kantara Movie) ಚಿತ್ರ ಸಕ್ಸೆಸ್‌ ಆಗಿದೆ. ಈ ಹಿನ್ನೆಲೆಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಚಿತ್ರತಂಡದಿಂದ ಗುರುವಾರ (ಡಿ 4) ರಾತ್ರಿ ಹರಕೆಯ ಕೋಲ ಸಮರ್ಪಿಸಿದೆ. ಮಂಗಳೂರಿನ ಬಾರೆಬೈಲ್ ವರಾಹ ಪಂಜುರ್ಲಿ (Barebail Varaha Panjurli ), ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮ ನೆರವೇರಿದೆ. ಈ ಸಂದರ್ಭದಲ್ಲಿ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ ರಾಮ್ (Santosh Anand Ram) ಸೇರಿದಂತೆ ಚಿತ್ರರಂಗದ ಹಲವರು ಭಾಗಿ ಆಗಿದ್ದರು. ಪತ್ನಿ ಮಕ್ಕಳ ಜತೆಗೆ ರಿಷಬ್ ಶೆಟ್ಟಿ ಭಾಗವಹಿಸಿದರು.

ದೈವ ಅಭಯ

ಕಾಂತಾರ ಸಿನಿಮಾ ಸಮಯದಲ್ಲಿಯೂ ರಿಷಬ್ ಶೆಟ್ಟಿಗೆ ಜಾಗರೂಕತೆಯಿಂದ ಇರುವಂತೆ ದೈವ ಎಚ್ಚರಿಕೆ ನೀಡಿತ್ತು ಎನ್ನಲಾಗಿತ್ತು. ಇದೀಗ ಕಣ್ಣೀರು ಸುರಿಸಬೇಡ ನಿನ್ನ ಹಿಂದೆ ನಾನಿದ್ದೇನೆ ಎಂದು ದೈವ ಅಭಯ ನೀಡಿದೆ ಎನ್ನಲಾಗಿದೆ. ಕಳೆದ ಏಪ್ರಿಲ್ ನಲ್ಲಿ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಹಾಗೂ ಕುಟುಂಬ ಭಾಗವಹಿಸಿತ್ತು. ರಿಷಬ್ ಶೆಟ್ಟಿ ಅವರನ್ನು ಅಪ್ಪಿ ಅಲಂಗಿಸಿದ ಮಡಿಲಲ್ಲಿ ಮಲಗಿದ ಪಂಜುರ್ಲಿ ದೈವ ನಿನ್ನ ಹಿಂದೆ ನಾನಿದ್ದೇನೆ ಎಂದು ಕೈ ಭಾಷೆಯಲ್ಲಿ ಸನ್ನೆ ಮಾಡುವ ಮೂಲಕ ಅಭಯ ನೀಡಿತು.

ಇದನ್ನೂ ಓದಿ: ರಿಷಬ್‌ ಶೆಟ್ಟಿ-ಅಕ್ಷಯ್ ಸಿನಿಮಾಗಳು ಒಂದೇ ದಿನ ತೆರೆಗೆ; ಬಾಕ್ಸ್ ಆಫೀಸ್ ಫೈಟ್ ಪಕ್ಕಾ!

Rishab Shetty took blessings of panjurli daiva with Kantara Team

‘ರಿಷಭೋತ್ಸವ’

ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ರಿಷಬ್‌ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ ‘ರಿಷಭೋತ್ಸವ’ ಜನವರಿ 3ರಂದು ಕುಂದಾಪುರದಲ್ಲಿ ನಡೆಯಲಿದೆ. ಕೋಟೇಶ್ವರದ ಯುವ ಮೆರಿಡಿಯನ್‌ ಫಿಲ್ಮ್‌ ಸ್ಟುಡಿಯೋದಲ್ಲಿ ನಡೆಯಲಿರುವ ಈ ಬೃಹತ್‌ ಮಟ್ಟದ ಕಾರ್ಯಕ್ರಮದ ಪೋಸ್ಟರ್‌ ಅನ್ನು ಬಿಡುಗಡೆ ಮಾಡಲಾಗಿದೆ.

ಕುಂದಾಪುರದ ಕೆರಾಡಿ ಎಂದ ಸಣ್ಣ ಊರಲ್ಲಿ ಹುಟ್ಟಿ ದೇಶಾದ್ಯಂತ ಮನೆ ಮಾತಾಗಿರುವ ರಿಷಬ್‌ ಅವರಿಗೆ ಊರಿನ ಮಂದಿ ಹಾಗೂ ಅಭಿಮಾನಿಗಳು ಸೇರಿ ಈ ಅಭಿನಂದನಾ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಈ ಸಮಾರಂಭದಲ್ಲಿ ದಕ್ಷಿಣ ಭಾರತೀಯ ಸಿನಿಮಾರಂಗದ ದಿಗ್ಗಜರು, ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ರಣವೀರ್ ಸಿಂಗ್ ದೈವಕ್ಕೆ ಅಪಮಾನ

ಸದ್ಯ ಗೋವಾದ 56ನೇ ಇಂಟರ್‌ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್‌ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಚಾವುಂಡಿ ದೈವಕ್ಕೆ ಅಪಮಾನ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ರಿಷಬ್ ಶೆಟ್ಟಿ ಎದುರಲ್ಲೇ ಕಾಂತಾರ ಚಾಪ್ಟರ್‌ 1 ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ದೈವವನ್ನು ರಣವೀರ್ ಸಿಂಗ್ ಘೋಸ್ಟ್ (ದೆವ್ವ) ಎಂದು ಕರೆದಿದ್ದರು.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಜಂಟಿ ಕ್ಯಾಪ್ಟನ್‌ ಆದ ಜೋಡಿ ಇದೇ! ಗಿಲ್ಲಿ-ಕಾವ್ಯಗೆ ಹೀನಾಯ ಸೋಲು

ಕಾಂತಾರ ಚಾಪ್ಟರ್‌ 1 ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದೆ ಮತ್ತು ಇದು ಅತ್ಯುತ್ತಮ ಪ್ರದರ್ಶನವಾಗಿತ್ತು, ವಿಶೇಷವಾಗಿ ಸ್ತ್ರೀ ದೆವ್ವ (ಚಾವುಂಡಿ ದೈವ) ರಿಷಬ್‌ ದೇಹದೊಳಗೆ ಹೋದಾಗ, ಆ ಶಾಟ್ ಅದ್ಭುತವಾಗಿತ್ತು. ಇಲ್ಲಿ ಯಾರಾದರೂ ನನ್ನನ್ನು ಕಾಂತಾರ 3 ರಲ್ಲಿ ನೋಡಲು ಬಯಸುತ್ತೀರಾ? ಈ ವ್ಯಕ್ತಿಗೆ (ರಿಷಬ್) ಹೇಳಿ"‌ ಎಂದೆಲ್ಲಾ ರಣವೀರ್‌ ಸಿಂಗ್‌ ಹೇಳಿದ್ದರು. ಆ ಬಳಿಕ ರಣವೀರ್‌ ಕ್ಷಮೆ ಕೂಡ ಕೇಳಿದ್ದಾರೆ.

Yashaswi Devadiga

View all posts by this author