ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishab Shetty: ಅಂಜನಾದ್ರಿ, ಮಂತ್ರಾಲಯಕ್ಕೆ ರಿಷಬ್ ಶೆಟ್ಟಿ ಕುಟುಂಬದೊಂದಿಗೆ ಭೇಟಿ

Rishab: ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇದೀಗ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ಆಂಜನೇಯನ ದರ್ಶನ ಪಡೆದರು.

ರಿಷಬ್‌ ಶೆಟ್ಟಿ

ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಕಾಂತಾರ ಸಿನಿಮಾ (Kantara Cinema) ಯಶಸ್ಸಿನ ಬಳಿಕ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇದೀಗ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ (Anjanadri) ಭೇಟಿ ಆಂಜನೇಯನ ದರ್ಶನ ಪಡೆದರು. ಹಾಗೇ ರಿಷಬ್ ಶೆಟ್ಟಿ ಅವರು ತಮ್ಮ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಕುಟುಂಬದ ಸದಸ್ಯರೊಂದಿಗೆ ಮಂತ್ರಾಲಯಕ್ಕೆ (Manthralaya) ಆಗಮಿಸಿ, ರಾಯರ ಮೂಲ ಬೃಂದಾವನದ ಪವಿತ್ರ ದರ್ಶನ ಪಡೆದರು.

ಬೃಂದಾವನದ ಪವಿತ್ರ ದರ್ಶನ

ರಿಷಬ್ ಶೆಟ್ಟಿ ಅವರು ತಮ್ಮ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಕುಟುಂಬದ ಸದಸ್ಯರೊಂದಿಗೆ ಮಂತ್ರಾಲಯಕ್ಕೆ ಆಗಮಿಸಿ, ರಾಯರ ಮೂಲ ಬೃಂದಾವನದ ಪವಿತ್ರ ದರ್ಶನ ಪಡೆದರು. ಈ ವೇಳೆ ರಾಯರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಪುನೀತರಾದರು. ಕೇವಲ ದರ್ಶನ ಮಾತ್ರವಲ್ಲದೆ, ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರನ್ನು ಭೇಟಿ ಮಾಡಿ ಗುರುಗಳ ಆಶೀರ್ವಾದ ಪಡೆದರು.‌

ಇದನ್ನೂ ಓದಿ: Akshaye Khanna: ʻಧುರಂಧರ್‌ʼ ನಂತರ ರಿಷಬ್‌ ಶೆಟ್ಟಿ ನಿರ್ದೇಶಕರ ಜೊತೆಗೆ ಕೈಜೋಡಿಸಿದ ಬಾಲಿವುಡ್‌ ನಟ ಅಕ್ಷಯ್‌ ಖನ್ನಾ! ಫಸ್ಟ್‌ ಲುಕ್‌ ನೋಡಿ ಎಲ್ಲರೂ ಶಾಕ್!‌

ಈ ಹಿಂದೆ ತಿರುಪತಿ, ಮಂತ್ರಾಲಯ ಮತ್ತು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಶೆಟ್ಟರು, ಇಂದು ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆ ಹನುಮನ ಜನ್ಮಸ್ಥಳ ಎಂದೇ ಪ್ರಸಿದ್ಧವಾಗಿರುವ ಅಂಜನಾದ್ರಿಗೆ ಆಗಮಿಸಿದರು.ಬೆಟ್ಟದ ಮೇಲಿರುವ ಆಂಜನೇಯನ ದರ್ಶನಕ್ಕಾಗಿ ರಿಷಬ್ ಶೆಟ್ಟಿ ಅವರು ಸಾಮಾನ್ಯರಂತೆ 575 ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ತುದಿಗೆ ತಲುಪಿದರು.

Rishab shetty Pragati

ದೇವಸ್ಥಾನದಲ್ಲಿ ಮಾರುತಿಗೆ ವಿಶೇಷ ಪೂಜೆ ಹಾಗೂ ಹರಕೆ ಸಲ್ಲಿಸಿದರು. ದರ್ಶನದ ಬಳಿಕ ಅಂಜನಾದ್ರಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ಯಾದಾಸಬಾಬಾ ಅವರು ರಿಷಬ್ ಶೆಟ್ಟಿ ಅವರಿಗೆ ಹನುಮ ಜನ್ಮಸ್ಥಳದ ಪುರಾಣ ಮತ್ತು ಇತಿಹಾಸದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.

ಇದನ್ನೂ ಓದಿ: Raj B Shetty: ರಾಜ್‌ - ರಿಷಬ್‌ ನಡುವೆ ಮನಸ್ತಾಪ ಇರೋದು ನಿಜನಾ? ಕ್ಲಾರಿಟಿ ಕೊಟ್ಟ ರಾಜ್ ಬಿ ಶೆಟ್ಟಿ

ಸಿನಿಮಾ ವಿಚಾರಕ್ಕೆ ಬರೋದಾದರೆ, ತೆಲುಗಿನ ‘ಜೈ ಹನುಮಾನ್’ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದೆ. ಅದರ ಬಳಿಕವಷ್ಟೆ ಅಶ್ವಿನ್ ಗಂಗರಾಜು ನಿರ್ದೇಶನದ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ.

Yashaswi Devadiga

View all posts by this author