ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Sai Pallavi: ಮತ್ತೊಮ್ಮೆ ಶಾರ್ಟ್ ಹೇರ್ ಲುಕ್‌ನಲ್ಲಿ ಮಿಂಚಿದ ಸಾಯಿ ಪಲ್ಲವಿ!

Sai Pallavi: ದಕ್ಷಿಣ ಭಾರತದ ಜನಪ್ರಿಯ ನಟಿ ಸಾಯಿ ಪಲ್ಲವಿ ಮತ್ತೊಮ್ಮೆ ತಮ್ಮ ವಿಭಿನ್ನ ಲುಕ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈಗಾಗಲೇ ‘ರಾಮಾಯಣ’ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು, ಇದೀಗ ತಮಿಳಿನ ಬಹುನಿರೀಕ್ಷಿತ ಸಿನಿಮಾ ‘ಇಂಜಿ ವೆಲ್ಲಂ’ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಧನುಷ್ ಮತ್ತು ಮಮ್ಮುಟ್ಟಿ ನಟನೆಯ ‘OM’ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿರುವ ಸಾಯಿ ಪಲ್ಲವಿ, ಈ ಹೊಸ ಚಿತ್ರದ ಹಾಡಿನ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ.

Sai Pallavi: ಮತ್ತೊಮ್ಮೆ ಶಾರ್ಟ್ ಹೇರ್ ಲುಕ್‌ನಲ್ಲಿ ಮಿಂಚಿದ ಸಾಯಿ ಪಲ್ಲವಿ!

ಸಾಯಿ ಪಲ್ಲವಿ -

Yashaswi Devadiga
Yashaswi Devadiga Nov 26, 2026 10:17 AM

ದಕ್ಷಿಣ ಭಾರತದ ಜನಪ್ರಿಯ ನಟಿ ಸಾಯಿ ಪಲ್ಲವಿ ಮತ್ತೊಮ್ಮೆ ತಮ್ಮ ವಿಭಿನ್ನ ಲುಕ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈಗಾಗಲೇ ‘ರಾಮಾಯಣ’ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು, ಇದೀಗ ತಮಿಳಿನ ಬಹುನಿರೀಕ್ಷಿತ ಸಿನಿಮಾ ‘ಇಂಜಿ ವೆಲ್ಲಂ’ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಧನುಷ್ ಮತ್ತು ಮಮ್ಮುಟ್ಟಿ ನಟನೆಯ ‘OM’ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿರುವ ಸಾಯಿ ಪಲ್ಲವಿ, ಈ ಹೊಸ ಚಿತ್ರದ ಹಾಡಿನ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ.

‘ಆಚಿ ಆಚಿ’ ಹಾಡಿನಲ್ಲಿ ಸಾಯಿ ಪಲ್ಲವಿ ವಿಭಿನ್ನ ಅವತಾರ!

ಮಣಿರತ್ನಂ ನಿರ್ದೇಶನದ ‘ಇಂಜಿ ವೆಲ್ಲಂ’ ಚಿತ್ರದ ಮೊದಲ ಹಾಡು ‘ಆಚಿ ಆಚಿ’ ಬಿಡುಗಡೆಯಾಗಿದ್ದು, ಈಗಾಗಲೇ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಬುಧವಾರ ಚಿತ್ರತಂಡ ಈ ಹಾಡನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ; Bigg Boss Kannada 13: ಜೋಡಿ ಟಾಸ್ಕ್‌ನಲ್ಲಿ ಯಶಸ್‌ - ಸೌಂದರ್ಯಗೆ ಗೆಲುವು! ಕ್ಯಾಪ್ಟನ್ಸಿ ರೇಸ್‌ಗೆ ಲಗ್ಗೆ

ಈ ಹಾಡಿನಲ್ಲಿ ಸಾಯಿ ಪಲ್ಲವಿ ಸಂಪೂರ್ಣ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಅವರು ಚಿಕ್ಕದಾಗಿ ಕತ್ತರಿಸಿದ ಕೂದಲಿನೊಂದಿಗೆ ಹೊಸ ಲುಕ್‌ನಲ್ಲಿ ಮಿಂಚಿದ್ದಾರೆ. ಜೊತೆಗೆ ಹಾಡಿನಲ್ಲಿ ಗರ್ಭಿಣಿ ಮಹಿಳೆಯರ ಗುಂಪಿನೊಂದಿಗೆ ಸಾಯಿ ಪಲ್ಲವಿ ಕೂಡ ಗರ್ಭಿಣಿಯ ಪಾತ್ರದಲ್ಲಿ ಕಾಣಿಸಿಕೊಂಡು ಹೆಜ್ಜೆ ಹಾಕಿದ್ದಾರೆ. ಅವರ ಈ ವಿಭಿನ್ನ ಅವತಾರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಚಿತ್ರದ ನಿರ್ಮಾಣ ಸಂಸ್ಥೆಯಾದ ಮದ್ರಾಸ್ ಟಾಕೀಸ್ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಾಡನ್ನು ಹಂಚಿಕೊಂಡಿದೆ. 'ಆಚಿ ಆಚಿ' ಹಾಡಿಗೆ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇಳಂಗೋ ಕೃಷ್ಣನ್ ಸಾಹಿತ್ಯ ಬರೆದಿದ್ದು, ವೈಶಾಲಿ ಸಾಮಂತ್ ಮತ್ತು ಶರಣ್ಯ ಶ್ರೀನಿವಾಸ್ ಧ್ವನಿ ನೀಡಿದ್ದಾರೆ. ಮಲಯಾಳಂ ಸಾಹಿತ್ಯವನ್ನು ವಿನಾಯಕ್ ಶಾಸಿಕುಮಾರ್ ರಚಿಸಿದ್ದಾರೆ.

‘ಇಂಜಿ ವೆಲ್ಲಂ’ ಶೀರ್ಷಿಕೆಯ ಹಿಂದಿನ ಮಜವಾದ ಕಥೆ!

ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ಕಳೆದ ಸೆಪ್ಟೆಂಬರ್‌ನಲ್ಲಿ ವಿಶೇಷ ವಿಡಿಯೋ ಮೂಲಕ ಪರಿಚಯಿಸಿತ್ತು. ಈ ವಿಡಿಯೋದಲ್ಲಿ ಸಾಯಿ ಪಲ್ಲವಿ ಮತ್ತು ವಿಜಯ್ ಸೇತುಪತಿ ಚಿತ್ರದ ಹೆಸರಿನ ಅರ್ಥದ ಬಗ್ಗೆ ಮಾತನಾಡಿದ್ದರು.

ಮೊದಲಿಗೆ ಸಾಯಿ ಪಲ್ಲವಿ, ವಿಜಯ್ ಸೇತುಪತಿ ಅವರನ್ನು ಶುಂಠಿ (ಇಂಜಿ) ಎಂದು ಕರೆದು, ತಮ್ಮನ್ನು ಬೆಲ್ಲ (ವೆಲ್ಲಂ) ಎಂದು ಹೇಳುತ್ತಾರೆ. ಬಳಿಕ ಪಾತ್ರಗಳನ್ನು ಬದಲಾಯಿಸಿ, ತಾವೇ ಶುಂಠಿ ಮತ್ತು ವಿಜಯ್ ಸೇತುಪತಿ ಬೆಲ್ಲ ಎಂದು ತಮಾಷೆ ಮಾಡುತ್ತಾರೆ. ಕೊನೆಗೆ ವಿಜಯ್ ಸೇತುಪತಿ ಈ ಗೊಂದಲಕ್ಕೆ ತೆರೆ ಎಳೆದು, ತಾವೇ ಶುಂಠಿ ಮತ್ತು ಸಾಯಿ ಪಲ್ಲವಿಯೇ ಬೆಲ್ಲ ಎಂದು ಹೇಳುತ್ತಾರೆ. ಈ ವಿಡಿಯೋ ಕೂಡ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು.

ಜನವರಿ 29ಕ್ಕೆ ತೆರೆಗೆ ಬರಲಿದೆ ಸಿನಿಮಾ

ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿರುವ ‘ಇಂಜಿ ವೆಲ್ಲಂ’ ಸಿನಿಮಾ ಮುಂದಿನ ವರ್ಷದ ಜನವರಿ 29ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಬಹುತೇಕ ಚಿತ್ರೀಕರಣ ಕೋಲ್ಕತ್ತಾದಲ್ಲಿ ನಡೆದಿದೆ.

ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿವೆ. ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದು, ಅವಿಕ್ ಮುಖೋಪಾಧ್ಯಾಯ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಮಣಿರತ್ನಂ ಅವರ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಶ್ರೀಕರ್ ಪ್ರಸಾದ್ ಸಂಕಲನ ಮಾಡುತ್ತಿದ್ದಾರೆ.

ಏಕಾ ಲಖಾನಿ ವಸ್ತ್ರ ವಿನ್ಯಾಸ, ಶರ್ಮಿಷ್ಠಾ ರಾಯ್ ಕಲಾ ನಿರ್ದೇಶನ ನಿರ್ವಹಿಸುತ್ತಿದ್ದಾರೆ. ಸಾಹಸ ದೃಶ್ಯಗಳಿಗೆ ದಿಲೀಪ್ ಸುಬ್ಬರಾಯನ್ ಮತ್ತು ನೃತ್ಯ ಸಂಯೋಜನೆಗೆ ಬೃಂದಾ ಗೋಪಾಲ್ ಕೆಲಸ ಮಾಡಿದ್ದಾರೆ. ರಂಜಿತ್ ಅಂಬಾಡಿ ಮೇಕಪ್ ವಿಭಾಗದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ಈಗೇನ್ ಮಾಡುತ್ತೆ ಗುಳ್ಳೆನರಿ? ಕಿರಣ್‌ ಕೊಟ್ಟ ಚಮಕ್‌ಗೆ ಯಶಸ್‌ ವಿಲ ವಿಲ!

‘ಆಚಿ ಆಚಿ’ ಹಾಡಿನಲ್ಲಿನ ಸಾಯಿ ಪಲ್ಲವಿಯ ಕಿರು ಕೂದಲಿನ ಲುಕ್ ಹಾಗೂ ವಿಭಿನ್ನ ಪಾತ್ರ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಸಿನಿಮಾ ಬಿಡುಗಡೆಯಾದ ಬಳಿಕ ಅವರ ಪಾತ್ರಕ್ಕೆ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.