ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಸೋಲಿನ ಸುಳಿಗೆ ಸಿಲುಕಿದ್ದಾರೆ. ಕಳೆದ ವರ್ಷ ಬಂದ ಅವರ ʻಸಿಕಂದರ್ʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿತ್ತು. ಅದಕ್ಕೂ ಹಿಂದಿನ ಅವರ ಸಿನಿಮಾಗಳು ಕೂಡ ಅಂತಹ ಮ್ಯಾಜಿಕ್ ಮಾಡಿಲ್ಲ. ಹಾಗಾಗಿ, ಅವರೀಗ ಒಂದು ಗೆಲುಗಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಅಪೂರ್ವ ಲಖಿಯಾ ನಿರ್ದೇಶನದ ಬ್ಯಾಟಲ್ ಆ ಗಾಲ್ವಾನ್ ಚಿತ್ರದಲ್ಲಿ ಸಲ್ಮಾನ್ ಬ್ಯುಸಿ ಆಗಿದ್ದು, ಅದರ ಜೊತೆಗೆ ಮತ್ತೊಮ್ಮೆ ದಕ್ಷಿಣ ಭಾರತದ ನಿರ್ದೇಶಕರತ್ತ ಕಣ್ಣು ಹಾಯಿಸಿದ್ದಾರೆ.
ತೆಲುಗು ನಿರ್ದೇಶಕರ ಜೊತೆಗೆ ಸಿನಿಮಾ
ದಕ್ಷಿಣ ಭಾರತದಲ್ಲಿ ವಾರಿಸು, ಮಹರ್ಷಿ, ಎವಡು, ಊಪಿರಿ ಮುಂತಾದ ಸಿನಿಮಾಗಳನ್ನು ಮಾಡಿ ಫೇಮಸ್ ಆಗಿರುವ ರಾಷ್ಟ್ರ ಪ್ರಶಸ್ತಿ ವಿಜೇತ ತೆಲುಗು ನಿರ್ದೇಶಕ ವಂಶಿ ಪೈಡಿಪಲ್ಲಿ ಅವರ ಜೊತೆಗೆ ಒಂದು ಬಿಗ್ ಬಜೆಟ್‌ನ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕಾಗಿ ಸಲ್ಮಾನ್ ಖಾನ್ ಮಾತುಕತೆ ನಡೆಸುತ್ತಿದ್ದಾರೆ. 'ಬ್ಯಾಟಲ್ ಆಫ್ ಗಲ್ವಾನ್' ನಂತರ ವಂಶಿ ಪೈಡಿಪಲ್ಲಿ ಅವರ ಸಿನಿಮಾವನ್ನು ಸಲ್ಮಾನ್ ಖಾನ್ ಅವರು ತಕ್ಷಣವೇ ಟೇಕಾಫ್ ಮಾಡಲಿದ್ದಾರೆ. ಇದು ವಂಶಿ ಪೈಡಿಪಲ್ಲಿ ಅವರ ಮೊದಲ ಹಿಂದಿ ಸಿನಿಮಾವಾಗಲಿದೆ. ಆಕ್ಷನ್ ಜೊತೆಗೆ ಭಾವನಾತ್ಮಕವಾಗಿಯೂ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಳ್ಳಲಿದೆ ಎಂಬುದು ಚಿತ್ರತಂಡ ನೀಡುವ ಮಾಹಿತಿ.
Salman Khan: ಆಮೀರ್ ಖಾನ್ ಕಾಲೆಳೆದ ಸಲ್ಮಾನ್ ಖಾನ್; ಫುಲ್ ವೈರಲ್ ಆಗ್ತಿದೆ ಈ ವಿಡಿಯೊ
ಯಾವಾಗ ಶುರು?
ಮೂಲಗಳ ಪ್ರಕಾರ, 2026ರ ಏಪ್ರಿಲ್‌ನಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ವಂಶಿ ಪೈಡಿಪಲ್ಲಿ ಅವರು ಈಗಾಗಲೇ ಈ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಪ್ರಾರಂಭಿಸಿದ್ದು, ಚಿತ್ರತಂಡವು ಪ್ರಸ್ತುತ ಕಲಾವಿದರ ಆಯ್ಕೆಯಲ್ಲಿ ಬ್ಯುಸಿ ಆಗಿದೆ. ತೆಲುಗಿನ ಹೆಸರಾಂತ ನಿರ್ಮಾಪಕ ದಿಲ್ ರಾಜು ಅವರು ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.
ಆಸ್ಪತ್ರೆಗೆ ದಾಖಲಾದ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್; ಐಸಿಯುನಲ್ಲಿ ಮುಂದುವರಿದ ಚಿಕಿತ್ಸೆ, ಆರೋಗ್ಯ ಸಮಸ್ಯೆ ಏನು?
ನಾಯಕಿಯಾಗಿ ನಯನತಾರಾ ಫಿಕ್ಸ್
ತಮಿಳು ನಟಿ ನಯನತಾರಾ ಅವರು ಸದ್ಯ ಮನ ಶಂಕರ ವರಪ್ರಸಾದ್ ಗಾರು ಚಿತ್ರದ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದು, ಇದೀಗ ಸಲ್ಮಾನ್ ಖಾನ್ - ವಂಶಿ ಕಾಂಬಿನೇಷನ್ ಈ ಸಿನಿಮಾಗೆ ಸೆಲೆಕ್ಟ್ ಆಗಿದ್ದಾರೆ ಎಂಬ ಮಾಹಿತಿ ಇದೆ. ಈ ಹಿಂದೆ ಶಾರುಖ್ ಖಾನ್ ಅವರ ಜವಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ್ದ ನಯನತಾರ, ಈಗ ಎರಡನೇ ಬಾರಿಗೆ ಬಾಲಿವುಡ್‌ಗೆ ಮರಳುತ್ತಿದ್ದಾರೆ.
ಸಲ್ಮಾನ್ ಖಾನ್‌ಗೆ ಗೆಲುವು ಕೊಟ್ಟ ದಕ್ಷಿಣ ಭಾರತದ ನಿರ್ದೇಶಕರು
ಈ ಹಿಂದೆ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಸಲ್ಮಾನ್ ಖಾನ್‌ಗೆ ವಾಂಟೆಡ್ ಚಿತ್ರದ ಮೂಲಕ ಗೆಲುವು ನೀಡಿದವರು ಪ್ರಭುದೇವ. ಮಲಯಾಳಂ ನಿರ್ದೇಶಕ ಸಿದ್ಧಿಕಿ ಅವರು ಬಾಡಿಗಾರ್ಡ್ ಮೂಲಕ ಗೆಲುವು ನೀಡಿದರು. ಜೊತೆಗೆ ಹಲವು ದಕ್ಷಿಣ ಭಾರತದ ಸಿನಿಮಾಗಳನ್ನು ರಿಮೇಕ್ ಮಾಡಿ ಸಲ್ಮಾನ್ ಖಾನ್ ಅವರು ಗೆಲುವು ಕಂಡಿದ್ದಾರೆ.