ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗಣಪತಿಗೆ ಆರತಿ ಮಾಡುವಾಗ ನಟ ಸಲ್ಮಾನ್ ಖಾನ್ ಎಡವಟ್ಟು; ಅಣ್ಣನನ್ನು ತಿದ್ದಿದ ತಂಗಿ ಅರ್ಪಿತಾ! ‌

Salman Khan: ಗಣಪತಿ ಪೂಜೆಯ ವೇಳೆ ಆರತಿ ತಟ್ಟೆಯನ್ನು ಸಲ್ಮಾನ್‌ ಖಾನ್ ಉಲ್ಟಾ ತಿರುಗಿಸಿ ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.‌ ಈ ವೇಳೆ ತಕ್ಷಣವೇ ಸಹೋದರಿ ಅರ್ಪಿತಾ ಅಣ್ಣನ ಕೈಹಿಡಿದು ತಿದ್ದಿದ್ದು, ಸಲ್ಮಾನ್ ನಗುತ್ತಲೇ ಸರಿಪಡಿಸಿಕೊಂಡ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗಣಪತಿಗೆ ಆರತಿ ಬೆಳಗುವಾಗ ಸಲ್ಮಾನ್ ಎಡವಟ್ಟು; ತಪ್ಪು ತಿದ್ದಿದ ತಂಗಿ ಅರ್ಪಿತಾ

-

Avinash GR
Avinash GR Sep 16, 2026 12:11 PM

‘ಭಾಯ್‌ಜಾನ್’ ಸಲ್ಮಾನ್ ಖಾನ್ ಅವರು ಗಣೇಶೋತ್ಸವದಲ್ಲಿ ಸಂಭ್ರಮದಿಂದ ಭಾಗಿಯಾಗಿದ್ದಾರೆ. ಸಹೋದರ ಸೊಹೈಲ್ ಖಾನ್ ಅವರ ನಿವಾಸದಲ್ಲಿ ಅದ್ಧೂರಿಯಾಗಿ ಜರುಗಿದ ಗಣೇಶೋತ್ಸವದ ವಿಸರ್ಜನಾ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಹಾಜರಿದ್ದರು. ಈ ವೇಳೆ ಸಲ್ಮಾನ್‌ ಖಾನ್‌ ಮಾಡಿದ ಸಣ್ಣ ಎಡವಟ್ಟೊಂದನ್ನು ಪಕ್ಕದಲ್ಲೇ ಇದ್ದ ತಂಗಿ ಅರ್ಪಿತಾ ಖಾನ್ ತಕ್ಷಣವೇ ಕಂಡುಹಿಡಿದು ಸರಿಪಡಿಸಿದ್ದಾರೆ.

ಗಣೇಶ ಮೂರ್ತಿ ವಿಸರ್ಜನೆಗೂ ಮುನ್ನ ಖಾನ್ ಕುಟುಂಬ ಒಟ್ಟಾಗಿ ಸಾಂಪ್ರದಾಯಿಕ ಮಂಗಳಾರತಿ ನೆರವೇರಿಸಿತು. ಗಣೇಶನಿಗೆ ಆರತಿ ಬೆಳಗುವಾಗ ಸಲ್ಮಾನ್‌ ಖಾನ್‌ರಿಂದ ತಪ್ಪೊಂದು ನಡೆದುಹೋಯಿತು. ಸಾಮಾನ್ಯವಾಗಿ ಆರತಿ ತಟ್ಟೆಯನ್ನು ದೇವರ ಮುಂದೆ ಪ್ರದಕ್ಷಿಣಾಕಾರವಾಗಿ (ಗಡಿಯಾರದ ಮುಳ್ಳು ತಿರುಗುವ ದಿಕ್ಕಿನಲ್ಲಿ) ತಿರುಗಿಸಬೇಕು. ಆದರೆ, ಸಲ್ಲು ಭಾಯ್‌ ಮಾತ್ರ ಉಲ್ಟಾ ತಿರುಗಿಸಿದರು.

ಸಹೋದರನನ್ನು ತಿದ್ದಿದ ತಂಗಿ ಅರ್ಪಿತಾ

ಸಲ್ಮಾನ್ ಖಾನ್ ಆರತಿ ತಟ್ಟೆಯನ್ನು ಉಲ್ಟಾ ತಿರುಗಿಸುತ್ತಿರುವುದನ್ನು ಪಕ್ಕದಲ್ಲೇ ಇದ್ದ ಸಹೋದರಿ ಅರ್ಪಿತಾ ಗಮನಿಸಿದರು. ತಕ್ಷಣವೇ ಸಲ್ಮಾನ್ ಕೈಹಿಡಿದು, ಪ್ರದಕ್ಷಿಣಾಕಾರವಾಗಿ ಆರತಿ ಬೆಳಗುವಂತೆ ತಿದ್ದಿ ಹೇಳಿದರು. ತಂಗಿಯ ಸಮಯಪ್ರಜ್ಞೆಯನ್ನು ಕಂಡು ಮುಗುಳ್ನಕ್ಕ ಸಲ್ಮಾನ್, ತಕ್ಷಣವೇ ತಮ್ಮ ತಪ್ಪನ್ನು ಸರಿಪಡಿಸಿಕೊಂಡರು. ಈ ವಿಡಿಯೋ ತುಣುಕು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಆರತಿಯ ಸಮಯದಲ್ಲಿ ಯೂಲಿಯಾ ವಂತೂರ್ ಕೂಡ ಸಾಥ್ ನೀಡಿದ್ದು, ಅರ್ಬಾಜ್ ಖಾನ್ ಪುತ್ರ ಅರ್ಹಾನ್ ಖಾನ್ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದರು.

ಆರತಿ ಮಾಡುತ್ತಿರುವ ಸಲ್ಮಾನ್‌ ಖಾನ್‌ ವಿಡಿಯೋ ವೈರಲ್



ಬದಲಾದ ಸಲ್ಮಾನ್‌ ಲುಕ್

ಕ್ಯಾಮೆರಾಗಳ ಮುಂದೆ ಸಾಮಾನ್ಯವಾಗಿ ಗಂಭೀರವಾಗಿ ಕಾಣಿಸಿಕೊಳ್ಳುವ ಸಲ್ಮಾನ್ ಖಾನ್, ಈ ಸಂಭ್ರಮದಲ್ಲಿ ಅತ್ಯಂತ ಲವಲವಿಕೆ ಹಾಗೂ ಹಸನ್ಮುಖಿಯಾಗಿ ಕಂಡುಬಂದಿದ್ದು ಎಲ್ಲರ ಗಮನ ಸೆಳೆಯಿತು. ಪ್ರಿಂಟೆಡ್ ಜೀನ್ಸ್, ಮ್ಯಾಚಿಂಗ್ ಜಾಕೆಟ್ ಹಾಗೂ ಶಾರ್ಟ್ ಕ್ರಾಪ್ಡ್ ಕೇಶವಿನ್ಯಾಸದ ಮೇಲೆ ಬೀನಿ ಕ್ಯಾಪ್ ಧರಿಸಿ ಕ್ಯಾಶುಯಲ್ ಲುಕ್‌ನಲ್ಲಿ ಮಿಂಚಿದ ಅವರು, ಪಾಪರಾಜಿಗಳಿಗೆ ನಗುತ್ತಾ ಕೈಬೀಸಿ ನಂತರ ಅತಿಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದರೊಂದಿಗೆ ಸಲ್ಮಾನ್‌ ಖಾನ್‌ ಸಖತ್ ಸ್ಲಿಮ್ ಆಗಿ ಕಾಣುತ್ತಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

Salman Khan: 'ನಾನು 16 ಕೆಜಿ ತೂಕ ಇಳಿಸಿಕೊಂಡಿದ್ದೇನೆ': ಸಲ್ಮಾನ್ ಖಾನ್ ವಿಡಿಯೋ ವೈರಲ್‌

ಸೊಹೈಲ್ ಖಾನ್ ಅವರ ನಿವಾಸದಲ್ಲಿ ನಡೆದ ಈ ಸಂಭ್ರಮದಲ್ಲಿ ಸಹೋದರಿಯರಾದ ಅರ್ಪಿತಾ, ಅಲ್ವಿರಾ ಖಾನ್ ಅಗ್ನಿಹೋತ್ರಿ, ನಟ ವರುಣ್ ಶರ್ಮಾ ಸೇರಿದಂತೆ ಕುಟುಂಬದ ಆಪ್ತರು ಹಾಜರಿದ್ದರು. ಅಪಾರ್ಟ್‌ಮೆಂಟ್ ಆವರಣದಲ್ಲೇ ನಿರ್ಮಿಸಲಾಗಿದ್ದ ನೀರಿನ ತೊಟ್ಟಿಯಲ್ಲಿ ಅರ್ಹಾನ್ ಖಾನ್ ಪರಿಸರಸ್ನೇಹಿಯಾಗಿ ಗಣೇಶ ಮೂರ್ತಿಯನ್ನು ವಿಸರ್ಜಿಸಿದರು.

ನಯನತಾರಾ ಜೊತೆ ಹೊಸ ಸಿನಿಮಾ

ಸಿನಿಮಾ ವಿಚಾರಕ್ಕೆ ಬಂದರೆ, ಸಲ್ಮಾನ್ ಖಾನ್ ಪ್ರಸ್ತುತ ನಿರ್ದೇಶಕ ವಂಶಿ ಪೈಡಿಪಲ್ಲಿ ಅವರ ಮುಂದಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ನಯನತಾರಾ ಜೊತೆಗೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಸಲ್ಮಾನ್‌ ಖಾನ್‌, ತಮ್ಮ ಪಾತ್ರಕ್ಕಾಗಿ ದೇಹದ ತೂಕ ಇಳಿಸಿಕೊಂಡು ಸ್ಲಿಮ್ ಲುಕ್‌ಗೆ ಮರಳಿದ್ದಾರೆ. ಮತ್ತೊಂದೆಡೆ, 2020ರ ಭಾರತ-ಚೀನಾ ಗಲ್ವಾನ್ ಸಂಘರ್ಷವನ್ನು ಆಧರಿಸಿದ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಹೆಸರಿನ ಅವರ ಮತ್ತೊಂದು ಮಹತ್ವಾಕಾಂಕ್ಷೆಯ ಚಿತ್ರದ ಚಿತ್ರೀಕರಣ ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.