ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Salman Khan : ಸಾನ್ವಿ ಸುದೀಪ್ ಕಂಠಕ್ಕೆ ಫಿದಾ ಆದ್ರು ಸಲ್ಮಾನ್ ಖಾನ್​​; ಪೋಸ್ಟ್‌ನಲ್ಲಿ ಏನಿದೆ?

Salman Khan: 'ಮಾರ್ಕ್' ಚಿತ್ರದ 'ಮಸ್ತ್ ಮಲೈಕಾ' ಹಾಡು ಸಿನಿಮಾ ರಿಲೀಸ್‌ ಒಳಗೆಯೇ ಸಖತ್‌ ಟ್ರೆಂಡಿಂಗ್‌ ಆಗಿತ್ತು. ಡಿಸೆಂಬರ್ 25 ರಂದು 'ಮಾರ್ಕ್' ಸಿನಿಮಾ ತೆರೆಗೆ ಅಪ್ಪಳಿಸಿತ್ತು. 'ಮಾರ್ಕ್' ಸಿನಿಮಾದ ಪಾರ್ಟಿ ಸಾಂಗ್ - 'ಮಸ್ತ್ ಮಲೈಕಾ' ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಅದರಲ್ಲಿಯೂ ಸಾನ್ವಿ ಸುದೀಪ್ ಕಂಠಕ್ಕೆ‌ ಸಂಗೀತ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಹಾಡು ಬಾಲಿವುಡ್ ನಟ ಸಲ್ಮಾನ್ ಖಾನ್​​ಗೂ ಸಾಕಷ್ಟು ಇಷ್ಟ ಆಗಿದೆ.

ಸಾನ್ವಿ ಸುದೀಪ್‌

'ಮಾರ್ಕ್' (Mark Movie) ಚಿತ್ರದ 'ಮಸ್ತ್ ಮಲೈಕಾ' ಹಾಡು ಸಿನಿಮಾ ರಿಲೀಸ್‌ ಒಳಗೆಯೇ ಸಖತ್‌ ಟ್ರೆಂಡಿಂಗ್‌ ಆಗಿತ್ತು. ಡಿಸೆಂಬರ್ 25 ರಂದು 'ಮಾರ್ಕ್' ಸಿನಿಮಾ ತೆರೆಗೆ ಅಪ್ಪಳಿಸಿತ್ತು. 'ಮಾರ್ಕ್' ಸಿನಿಮಾದ ಪಾರ್ಟಿ ಸಾಂಗ್ - 'ಮಸ್ತ್ ಮಲೈಕಾ' (Masth Malaika) ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಅದರಲ್ಲಿಯೂ ಸಾನ್ವಿ ಸುದೀಪ್ ಕಂಠಕ್ಕೆ‌ ಸಂಗೀತ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಹಾಡು ಬಾಲಿವುಡ್ ನಟ ಸಲ್ಮಾನ್ ಖಾನ್​​ಗೂ (Salman Khan) ಸಾಕಷ್ಟು ಇಷ್ಟ ಆಗಿದೆ. ಈ ಹಾಡಿನ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಬಗ್ಗೆ ಪೋಸ್ಟ್‌ ಶೇರ್‌ ಮಾಡಿದ್ದಾರೆ.

ಸುದೀಪ್ ಮೇಲೆ ವಿಶೇಷ ಪ್ರೀತಿ

ಸಲ್ಮಾನ್ ಖಾನ್ ಅವರಿಗೆ ಸುದೀಪ್ ಮೇಲೆ ವಿಶೇಷ ಪ್ರೀತಿ ಕೂಡ ಇದೆ. ‘ದಬಾಂಗ್ 3’ ಚಿತ್ರದಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದರು. ‘ಮಸ್ತ್ ಮಲೈಕಾ’ ಹಾಡಿನ ಲಿಂಕ್​ ಅನ್ನು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ ಸಲ್ಮಾನ್ ಖಾನ್. ‘ಸುಂದರವಾದ ಹಾಡು, ಒಳ್ಳೆಯದಾಗಲಿ’ ಎಂದು ಸಲ್ಮಾನ್ ಖಾನ್ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Amruthadhaare Serial: ಡುಮ್ಮ ಸರ್ -ಭೂಮಿ ಟೀಚರ್ ಬಾಳಲ್ಲಿ ನಿತ್ಯ ಪ್ರೇಮೋತ್ಸವ!

ಈ ಸ್ಟೋರಿಯಲ್ಲಿ ಕಿಚ್ಚ ಸುದೀಪ್ ಹಾಗೂ ಸಾನ್ವಿಯನ್ನು ಟ್ಯಾಗ್ ಮಾಡಿದ್ದಾರೆ. ‘ಎಂತಹ ಅದ್ಭುತ ಗೌರವ. ಧನ್ಯವಾದಗಳು ಸಲ್ಮಾನ್ ಸರ್’ ಎಂದು ಸಾನ್ವಿ ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಸುದೀಪ್‌ ಬೊಂಬಾಟ್ ಸ್ಟೆಪ್ಸ್

ಮಗಳ ಕಂಠಕ್ಕೆ ಕಿಚ್ಚ‌ ಸುದೀಪ್‌ ಬೊಂಬಾಟ್ ಸ್ಟೆಪ್ಸ್ ಹಾಕಿರುವುದು ಮತ್ತೊಂದು ವಿಶೇಷ. 'ಮಸ್ತ್ ಮಲೈಕಾ..' ಸಾನ್ವಿ ಅವರ ಮೊದಲ ಹಾಡು ಅನ್ನೋದು ವಿಶೇಷ. ಸಿನಿಮಾ ರಂಗದಲ್ಲಿ ಅಥವಾ ಸಂಗೀತ ಕ್ಷೇತ್ರದಲ್ಲಿ ಏನಾದರೂ ಮಾಡಬೇಕು ಎಂಬುವುದು ಸಾನ್ವಿ ಕನಸು. ಆ ಕನಸಿನಂತೆ ಅವರು ಸಾಗುತ್ತಿದ್ದಾರೆ. ಈ ಹಿಂದೆ ನಟ ನಾನಿ ಅಭಿನಯದ 'ಹಿಟ್ 3' ಚಿತ್ರದ ಮೂಲಕ ಸಾನ್ವಿ ಸುದೀಪ್ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. 'ಹಿಟ್ 3' ಚಿತ್ರದ ಥೀಮ್ ಸಾಂಗ್ 'ಪೊರಟಮೆ 3.0' ಗೆ ಸಾನ್ವಿ ಧ್ವನಿ ನೀಡಿದ್ದರು.

Salman Khan Praises Sanvi Sudeep's Mast Malaika Song from Mark Movie

ಇತ್ತೀಚೆಗೆ ಸಲ್ಮಾನ್‌ ಖಾನ್‌ ಅವರು ರಾಜ್‌ ಬಿ. ಶೆಟ್ಟಿ ಅಭಿನಯದ ʻರಕ್ಕಸಪುರದೋಳ್ʼ‌ ಸಿನಿಮಾಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಫೆ.6ರಂದು ತೆರೆಕಂಡು ಭಾರಿ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ನಟ ಸಲ್ಮಾನ್‌ ಖಾನ್‌ ಅವರು ಟ್ರೇಲರ್‌ ನೋಡಿ ಖುಷಿಪಟ್ಟಿದ್ದಲ್ಲದೇ, "ಈ ಚಿತ್ರದ ಹಿಂದಿ ವರ್ಷನ್‌ ಅನ್ನು ನನಗೆ ಯಾವಾಗ ತೋರಿಸುವೆ" ಎಂದು ರವಿವರ್ಮ ಬಳಿ ಕೇಳಿದ್ದರು. ರವಿ ಸಾರಂಗ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Tanisha Kuppanda: ದರ್ಶನ್​ ಹೆಸರಿನಲ್ಲಿ ಅನ್ನ ಸಂತರ್ಪಣೆ, ವಿಶೇಷ ಪೂಜೆ; ತನಿಷಾ ಕುಪ್ಪಂಡ ವಿಡಿಯೋ ವೈರಲ್‌

ಸದ್ಯ ‘ಗಾಲ್ವಾನ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಹಾಡು ಗಮನ ಸೆಳೆಯುವ ರೀತಿಯಲ್ಲಿ ಇದೆ. ಸಲ್ಮಾನ್ ಖಾನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ , ಅಪೂರ್ವ ಲಖಿಯಾ ನಿರ್ದೇಶಕರಾಗಿದ್ದಾರೆ. ಬಿಡುಗಡೆ ದಿನಾಂಕವನ್ನು ಏಪ್ರಿಲ್ 17 ರಿಂದ ಆಗಸ್ಟ್ 14, 2026 ಕ್ಕೆ ಮುಂದೂಡಲಾಗಿದೆ ಎಂದು ವರದಿಯಾಗಿದೆ.

Yashaswi Devadiga

View all posts by this author