ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಲ್ಮಾನ್‌ ಖಾನ್‌ ನಟನೆಯ ʻಬ್ಯಾಟಲ್ ಆಫ್ ಗಲ್ವಾನ್ʼ ಚಿತ್ರದ ಟೈಟಲ್‌ ಚೇಂಜ್;‌ ʻಮಾತೃಭೂಮಿʼ ಎಂದು ಬದಲಾವಣೆ ಮಾಡಿದ್ದೇಕೆ?

ಸಲ್ಮಾನ್ ಖಾನ್ ಅವರ 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದ ಶೀರ್ಷಿಕೆಯನ್ನ ಈಗ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಎಂದು ಬದಲಾವಣೆ ಮಾಡಲಾಗಿದೆ. ಅಪೂರ್ವ ಲಖಿಯಾ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರು ಬ್ಯಾಕ್‌ ಟು ಬ್ಯಾಕ್‌ ಸೋಲುಗಳಿಂದ ಕಂಗೆಟ್ಟಿದ್ದು, ಈ ಬಾರಿ ಗೆದ್ದೇ ಗೆಲ್ಲುವ ನಿರೀಕ್ಷೆಯೊಂದಿಗೆ 'ಬ್ಯಾಟಲ್ ಆಫ್ ಗಲ್ವಾನ್' (Battle of Galwan) ಸಿನಿಮಾ ಆರಂಭಿಸಿದ್ದರು. ಚಿತ್ರದ ಫಸ್ಟ್‌ ಲುಕ್‌ ನೋಡಿದವರು, ಇದು ಸಲ್ಲುಗೆ ಗೆಲ್ಲುವು ತಂದುಕೊಡಲಿದೆ ಎಂದೇ ಮಾತನಾಡಿಕೊಂಡಿದ್ದರು. ಇದೀಗ ಚಿತ್ರದ ಕಡೆಯಿಂದ ಒಂದು ಅಪ್ಡೇಟ್‌ ಸಿಕ್ಕಿದೆ. ಅದೇನಪ್ಪ ಅಂದ್ರೆ ಸಿನಿಮಾದ ಶೀರ್ಷಿಕೆ ಬದಲಾಗಿದೆ.

ಹೌದು, ಸಲ್ಮಾನ್ ಖಾನ್ ನಟನೆಯ 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದ ಶೀರ್ಷಿಕೆಯನ್ನು ಈಗ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' (Maatrubhumi: May War Rest in Peace) ಎಂದು ಬದಲಾಯಿಸಲಾಗಿದೆ. ಸಲ್ಮಾನ್ ಖಾನ್ ಅವರೇ ಸ್ವತಃ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ಹೊಚ್ಚಹೊಸ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ ಈ ವಿಷಯವನ್ನು ಘೋಷಿಸಿದ್ದಾರೆ.

Salman Khan: ಆಮೀರ್‌ ಖಾನ್‌ ಕಾಲೆಳೆದ ಸಲ್ಮಾನ್‌ ಖಾನ್‌; ಫುಲ್‌ ವೈರಲ್‌ ಆಗ್ತಿದೆ ಈ ವಿಡಿಯೊ

ಅಪೂರ್ವ ಲಖಿಯಾ ನಿರ್ದೇಶನದ 'ಮಾತೃಭೂಮಿʼ ಚಿತ್ರವು 2020ರಲ್ಲಿ ನಡೆದ ಭಾರತ ಮತ್ತು ಚೀನಾ ಸೈನಿಕರ ನಡುವಿನ 'ಗಲ್ವಾನ್ ವ್ಯಾಲಿ' ಎಂಬ ಸಂಘರ್ಷದ ನೈಜ ಘಟನೆಯನ್ನು ಆಧರಿಸಿದೆ. ಗಡಿ ಸಂಘರ್ಷದ ಸಮಯದಲ್ಲಿ ಭಾರತೀಯ ಸೈನಿಕರು ತೋರಿದ ಶೌರ್ಯ ಮತ್ತು ಬಲಿದಾನದ ಕಥೆಯನ್ನು ಈ ಸಿನಿಮಾ ಕೇಂದ್ರೀಕರಿಸುತ್ತದೆ ಎಂದು ಹೇಳಲಾಗುತ್ತಿದೆ.

ವಿವಾದ ಆಗುತ್ತಿದ್ದಂತೆಯೇ ಶೀರ್ಷಿಕೆ ಬದಲಾವಣೆ?

ಅಂದಹಾಗೆ, ಈ ಚಿತ್ರದ ಹಳೆಯ ʻಬ್ಯಾಟಲ್ ಆ ಗಾಲ್ವಾನ್ʼ ಶೀರ್ಷಿಕೆಯ ಬಗ್ಗೆ ವಿವಾದ ಎದ್ದ ಕೆಲವೇ ದಿನಗಳಲ್ಲಿ ಈ ಬದಲಾವಣೆ ಮಾಡಲಾಗಿದೆ. 2020ರ ಭಾರತ-ಚೀನಾ ಗಡಿ ಸಂಘರ್ಷದ ಆಧಾರಿತ ಈ ಚಿತ್ರವು "ಸತ್ಯವನ್ನು ತಿರುಚುತ್ತಿದೆ", "ಚೀನಾ ವಿರೋಧಿ ಭಾವನೆಯನ್ನು ಉತ್ತೇಜಿಸುತ್ತಿದೆ" ಎಂದು ಚೀನಾ ಸರ್ಕಾರ ಬೆಂಬಲಿತ ಮಾಧ್ಯಮಗಳು ಟೀಕೆ ಮಾಡಿದ್ದವು. ಈ ವಿಷಯದ ಸುತ್ತಲಿನ ರಾಜಕೀಯ ಸೂಕ್ಷ್ಮತೆ ಮತ್ತು ಗೊಂದಲಗಳನ್ನು ತಪ್ಪಿಸಲು ನಿರ್ಮಾಪಕರು ಇದೀಗ ಶೀರ್ಷಿಕೆಯನ್ನು ಬದಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ‌

ಆಸ್ಪತ್ರೆಗೆ ದಾಖಲಾದ ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌; ಐಸಿಯುನಲ್ಲಿ ಮುಂದುವರಿದ ಚಿಕಿತ್ಸೆ, ಆರೋಗ್ಯ ಸಮಸ್ಯೆ ಏನು?

ಯುದ್ಧವು ಶಾಂತಿಯಿಂದ ಕೊನೆಗೊಳ್ಳಲಿ

ಹೊಸ ಶೀರ್ಷಿಕೆಯು ದೇಶಭಕ್ತಿಯ ವಿಶಾಲವಾದ ವಿಷಯವನ್ನು ಪ್ರತಿಬಿಂಬಿಸುವುದಲ್ಲದೆ, "ಯುದ್ಧವು ಶಾಂತಿಯಿಂದ ಕೊನೆಗೊಳ್ಳಲಿ" (May War Rest in Peace) ಎಂಬ ಸಂದೇಶವನ್ನೂ ಹೊತ್ತಿದೆ. ಈ ಚಿತ್ರದಲ್ಲಿ ಚಿತ್ರಾಂಗದಾ ಸಿಂಗ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈ ವರ್ಷದ ಬಹುನಿರೀಕ್ಷಿತ ಬಾಲಿವುಡ್ ಚಿತ್ರಗಳಲ್ಲಿ ಇದು ಕೂಡ ಒಂದಾಗಿದೆ. ಹೊಸ ಶೀರ್ಷಿಕೆ ಮತ್ತು ಪೋಸ್ಟರ್ ಈಗಾಗಲೇ ಅಂತರ್ಜಾಲದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಸಲ್ಮಾನ್ ಖಾನ್ ಅವರನ್ನು ಸೈನಿಕನ ಪಾತ್ರದಲ್ಲಿ ಬೆಳ್ಳಿತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಸಲ್ಮಾನ್‌ ಖಾನ್‌ ಸಿನಿಮಾಗೆ ʻಮಾತೃಭೂಮಿʼ ಟೈಟಲ್



ಈ ಚಿತ್ರವನ್ನು ಸಲ್ಮಾನ್‌ ಖಾನ್‌ ಅವರ ಕುಟುಂಬವೇ ನಿರ್ಮಾಣ ಮಾಡುತ್ತಿದ್ದು, ಆಗಸ್ಟ್‌ನಲ್ಲಿ ತೆರೆಗೆ ತರಲು ಪ್ಲ್ಯಾನಿಂಗ್‌ ನಡೆಯುತ್ತಿದೆ. ಸಲ್ಮಾನ್ ಖಾನ್ ಈ ಚಿತ್ರದ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿ ಇದ್ದಾರೆ. ಶೀರ್ಷಿಕೆ ಬದಲಾವಣೆಯಿಂದಾದರೂ ಅವರಿಗೆ ಅದೃಷ್ಟ ಕುದುರಲಿದೆಯೇ? ಕಾದು ನೋಡಬೇಕಿದೆ.