ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Samantha Ruth Prabhu: ಸಮಂತಾ ಗೆಲುವನ್ನು ಕಂಡು ಸಂಭ್ರಮಿಸಿದ ಮಾಜಿ ಅತ್ತೆ ಅಮಲಾ ಅಕ್ಕಿನೇನಿ

Samantha Ruth Prabhu: ಸಮಂತಾ ರೂತ್ ಪ್ರಭು ತಮ್ಮ ಮಾಜಿ ಪತಿ ನಾಗ ಚೈತನ್ಯಅವರ ತಾಯಿ ಅಮಲಾ ಅಕ್ಕಿನೇನಿ ಅವರೊಂದಿಗೆ ವಿಚ್ಛೇದನದ ಬಳಿಕ ಮೊದಲ ಬಾರಿಗೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಜೀ ತೆಲುಗು ಅವಾರ್ಡ್ಸ್ ಸಮಾರಂಭದಲ್ಲಿ ಈ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಅಮಲಾ ಅಕ್ಕಿನೇನಿ ಎದುರು ಸಮಂತಾ ಭಾವುಕ ಮಾತು...!

ಸಮಂತಾ ರೂತ್ ಪ್ರಭು - ಅಮಲಾ ಅಕ್ಕಿನೇನಿ

Profile Sushmitha Jain May 22, 2025 4:27 PM

ಸಮಂತಾ ರೂತ್ ಪ್ರಭು (Samantha Ruth Prabhu ), ತಮ್ಮ ಮಾಜಿ ಪತಿ ನಾಗ ಚೈತನ್ಯ (Naga Chaitanya) ಅವರ ತಾಯಿ ಅಮಲಾ ಅಕ್ಕಿನೇನಿ (Amala Akkineni) ಅವರೊಂದಿಗೆ ವಿಚ್ಛೇದನದ ಬಳಿಕ ಮೊದಲ ಬಾರಿಗೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಜೀ ತೆಲುಗು ಅವಾರ್ಡ್ಸ್ (Zee Telugu Awards ) ಸಮಾರಂಭದಲ್ಲಿ ಈ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಪ್ಲೋಡ್ ಆದ ಈ ಪ್ರೊಮೊ ವಿಡಿಯೋದಲ್ಲಿ, ಸಮಂತಾ ಹಳದಿ ಸೀರೆಯಲ್ಲಿ ವೇದಿಕೆಗೆ ಆಗಮಿಸಿದ್ದು, ಅವರು ತಮ್ಮ 15 ವರ್ಷಗಳ ಚಿತ್ರರಂಗದ ವೃತ್ತಿಜೀವನದಲ್ಲಿ ತೆಲುಗು ಪ್ರೇಕ್ಷಕರಿಂದ ಗಳಿಸಿದ ಪ್ರೀತಿ ಮತ್ತು ಬೆಂಬಲವನ್ನು ಕಂಡು ಭಾವುಕವಾಗಿ ಧನ್ಯವಾದ ಸಲ್ಲಿಸಿದ್ದಾರೆ. ಈ ಕ್ಷಣಕ್ಕೆ ವೇದಿಕೆಯಲ್ಲಿದ್ದ ಅಮಲಾ ಅಕ್ಕಿನೇನಿ ಸಾಕ್ಷಿಯಾಗಿದ್ದು, ಸಮಂತಾ ಬಗ್ಗೆ ಹೆಮ್ಮೆಯಿಂದ ಚಪ್ಪಾಳೆ ತಟ್ಟಿದ್ದಾರೆ. ಅಲ್ಲದೇ ತಮ್ಮ ಮಾಜಿ ಸೊಸೆಯ ಗೆಲುವಿನ ಕ್ಷಣಗಳನ್ನು ಸಂಭ್ರಮಿಸಿದ್ದಾರೆ.

ಸದ್ಯ ಈ ಕಾರ್ಯಕ್ರಮದ ಪ್ರೊಮೊ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಎಲ್ಲರ ಗಮನ ಸೆಳೆದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬ ಅಭಿಮಾನಿ, "ನಾಗಾರ್ಜುನ ಅವರ ಪತ್ನಿ ಚಪ್ಪಾಳೆ ತಟ್ಟಿದ್ದಾರೆ" ಎಂದು ಬರೆದಿದ್ದಾರೆ. ಇನ್ನೊಬ್ಬರು, "ಅಮಲಾ ಹೇಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ. "ಅಮಲಾ ಕೂಡ ಈ ಕಾರ್ಯಕ್ರಮದಲ್ಲಿದ್ದರು" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಸಮಂತಾ ರೂತ್ ಪ್ರಭು ಮತ್ತು ನಾಗ ಚೈತನ್ಯ ಕೆಲವು ವರ್ಷಗಳ ಕಾಲ ಡೇಟಿಂಗ್‌ನ ಬಳಿಕ 2017 ರಲ್ಲಿ ವಿವಾಹವಾದರು. ಆದರೆ, 2021 ರ ಅಕ್ಟೋಬರ್‌ನಲ್ಲಿ, ಅಂದರೆ ವಿವಾಹದ ನಾಲ್ಕು ವರ್ಷಗಳ ನಂತರ ಇಬ್ಬರು ಬೇರ್ಪಟ್ಟರು. ಕಳೆದ ವರ್ಷ, ಸಮಂತಾ ಒಂದು ಸಂದರ್ಶನದಲ್ಲಿ ನಾಗ ಚೈತನ್ಯರಿಂದ ತಾವು ಬೇರೆಯಾದ ಘಟನೆಯನ್ನು ನೆನಪಿಸಿಕೊಂಡರು. ಅವರು ತಮ್ಮ ಮಾಜಿ ಪತಿಯ ಹೆಸರನ್ನು ಉಲ್ಲೇಖಿಸದಿದ್ದರೂ, "ನನ್ನ ಮಯೋಸಿಟಿಸ್ ಚಿಕಿತ್ಸೆಗೆ ಮುಂಚಿನ ವರ್ಷವು ತುಂಬಾ ಕಷ್ಟಕರವಾಗಿತ್ತು" ಎಂದು ಹೇಳಿದರು.

"ನಾನು ಆ ಸಮಸ್ಯೆಯನ್ನು ಎದುರಿಸುವ ಮೊದಲ ವರ್ಷವನ್ನು ನಿಖರವಾಗಿ ನೆನಪಿಸಿಕೊಳ್ಳುತ್ತೇನೆ, ಅದು ನನಗೆ ತುಂಬಾ ಕಷ್ಟಕರವಾದ ವರ್ಷವಾಗಿತ್ತು. ನಾನು, ನನ್ನ ಸ್ನೇಹಿತ, ಮ್ಯಾನೇಜರ್ ಹಿಮಾಂಕ್‌ನೊಂದಿಗೆ ಮುಂಬೈನಿಂದ ವಾಪಸ್ ಪ್ರಯಾಣಿಸುತ್ತಿದ್ದ ದಿನವನ್ನು ನೆನಪಿಸಿಕೊಳ್ಳುತ್ತೇನೆ. ಅದು ಕಳೆದ ವರ್ಷದ ಜೂನ್‌ ಸಮಯ ನಾನು ಅವನಿಗೆ ಹೇಳಿದ್ದೆ, ಈಗ ನಾನು ಶಾಂತವಾಗಿದ್ದೇನೆ. ತುಂಬಾ ದಿನಗಳ ನಂತರ ನಾನು ಸ್ವಲ್ಪ ಶಾಂತವಾಗಿದ್ದೇನೆ ಮತ್ತು ರೆಸ್ಟ್ ಫೀಲ್‌ ಮಾಡುತ್ತಿದ್ದೇನೆ. ಈಗ ನಾನು ಉಸಿರಾಡಬಹುದು, ನಿದ್ದೆ ಮಾಡಬಹುದು ಮತ್ತು ಎದ್ದು ನನ್ನ ಕೆಲಸದ ಮೇಲೆ ಗಮನ ಕೊಡಬಹುದು" ಎಂದು ಸಮಂತಾ ಹೇಳಿದರು.

ಪ್ರಸ್ತುತ, ಸಮಂತಾ ನಿರ್ದೇಶಕ ರಾಜ್ ನಿಡಿಮೊರು ಅವರೊಂದಿಗೆ ಡೇಟಿಂಗ್‌ನಲ್ಲಿರುವ ಗಾಸಿಪ್‌ಗಳಿವೆ, ಆದರೆ ನಾಗ ಚೈತನ್ಯ ನಟಿ ಶೋಭಿತಾ ಧುಲಿಪಾಲರನ್ನು ವಿವಾಹವಾಗಿದ್ದಾರೆ