ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mango Pachcha: ಸಂಕ್ರಾಂತಿ ಸಂಭ್ರಮಕ್ಕೆ ʻಅರಗಿಣಿಯೇʼ ಎನ್ನುತ್ತಾ ಬಂದ ಸಂಚಿತ್‌ ಸಂಜೀವ್‌; ʻಕಿಚ್ಚʼ ಸುದೀಪ್‌ ಪುತ್ರಿ ಹಾಡಿದ 2ನೇ ಸಾಂಗ್‌ ರಿಲೀಸ್‌

Mango Pachcha Movie: ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಗಾಯಕಿಯಾಗಿ ತಮ್ಮ ಎರಡನೇ ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಸಂಚಿತ್ ಸಂಜೀವ್ ಅಭಿನಯದ 'ಮ್ಯಾಂಗೋ ಪಚ್ಚ' ಚಿತ್ರದ 'ಅರಗಿಣಿಯೇ' ಎಂಬ ರೊಮ್ಯಾಂಟಿಕ್ ವಿಡಿಯೋ ಹಾಡು ಬಿಡುಗಡೆಯಾಗಿದೆ. ಚರಣ್ ರಾಜ್ ಸಂಗೀತ ನೀಡಿರುವ ಈ ಹಾಡನ್ನು ಸಾನ್ವಿ ಸುದೀಪ್ ಮತ್ತು ಕಪಿಲ್ ಕಪಿಲನ್ ಹಾಡಿದ್ದಾರೆ.

ಕಿಚ್ಚ ಸುದೀಪ್‌ ಅವರ ಸೋದರಳಿಯ ಸಂಚಿತ್‌ ಸಂಜೀವ್‌ ನಟನೆಯ ಮ್ಯಾಂಗೋ ಪಚ್ಚ ಸಿನಿಮಾವು ತೆರೆಗೆ ಸಿದ್ಧವಾಗಿದೆ. ಈ ಸಿನಿಮಾದ ಮೂಲಕ ಇದೇ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ ನಟ ಸಂಚಿತ್‌ ಸಂಜೀವ್‌. ಸದ್ಯ ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಚಿತ್ರದ ಹಾಡೊಂದು ರಿಲೀಸ್‌ ಆಗಿದೆ. ವಿಶೇಷ ಏನಪ್ಪ ಅಂದರೆ, ಈ ಹಾಡನ್ನು ಹಾಡಿರುವುದು ಸುದೀಪ್‌ ಅವರ ಪುತ್ರಿ ಸಾನ್ವಿ.

ಎರಡನೇ ಹಾಡು ರಿಲೀಸ್‌

ಸಾನ್ವಿ ಈಗಾಗಲೇ ಮಾರ್ಕ್‌ ಚಿತ್ರಕ್ಕಾಗಿ ಮಸ್ತ್ ಮಲೈಕಾ ಹಾಡನ್ನು ಹಾಡಿದ್ದರು. ಆ ಹಾಡು ದೊಡ್ಡ ಹಿಟ್‌ ಆಗಿತ್ತು. ಇದೀಗ ಅವರ ಎರಡನೇ ಹಾಡು ರಿಲೀಸ್‌ ಆಗಿದೆ. ಅರಗಿಣಿಯೇ ಎಂಬ ಹಾಡನ್ನು ಸಾನ್ವಿ ಜೊತೆಗೆ ಕಪಿಲ್‌ ಕಪಿಲನ್‌ ಅವರು ಹಾಡಿದ್ದಾರೆ. ಕಪಿಲ್‌ ಈ ಹಿಂದೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಟೈಟಲ್‌ ಸಾಂಗ್‌ ಹಾಡಿ ಫೇಮಸ್‌ ಆಗಿದ್ದರು. ಇದೀಗ ಅರಗಿಣಿಯೇ ಹಾಡನ್ನು ಒಟ್ಟಾಗಿ ಹಾಡಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ ಮ್ಯಾಂಗೋ ಪಚ್ಚ ಚಿತ್ರದ ಹಸರವ್ವ ಹಾಡು ದೊಡ್ಡ ಸದ್ದು ಮಾಡಿತ್ತು. ಈಗ ಅರಗಿಣಿಯೇ ಎಂಬ ರೊಮ್ಯಾಂಟಿಕ್‌ ಹಾಡಿನ ಸರದಿ.

Mango Pachcha: ಸಂಕ್ರಾಂತಿಗೊಂದು ಕನ್ನಡ ಸಿನಿಮಾ; 'ಕಿಚ್ಚ' ಸುದೀಪ್ ಸೋದರಳಿಯನ 'ಮ್ಯಾಂಗೋ ಪಚ್ಚ' ರಿಲೀಸ್ ಡೇಟ್ ಫಿಕ್ಸ್

ವಿಡಿಯೋ ಸಾಂಗ್‌ ರಿಲೀಸ್‌

ಈ ಹಿಂದೆ ಹಸರವ್ವ ಲಿರಿಕಲ್‌ ಸಾಂಗ್‌ ರಿಲೀಸ್‌ ಮಾಡಿದ್ದ ಚಿತ್ರತಂಡ, ಈ ಬಾರಿ ಅರಗಿಣಿಯೇ ಮೂಲಕ ವಿಡಿಯೋ ಸಾಂಗ್‌ ರಿಲೀಸ್‌ ಮಾಡಿದೆ. ಈ ಹಾಡನ್ನು ಮೈಸೂರಿನ ಸುಂದರ ಜಾಗಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಹಾಡಿಗೆ ಚರಣ್‌ ರಾಜ್‌ ಸಂಗೀತ ನಿರ್ದೇಶನ ಮಾಡಿದ್ದು, ಧನಂಜಯ ರಂಜನ್‌ ಸಾಹಿತ್ಯ ಬರೆದಿದ್ದಾರೆ. ಸಂಚಿತ್‌ ಸಂಜೀವ್‌ ಜೊತೆಗೆ ನಾಯಕಿಯಾಗಿ ಕಾಜಲ್‌ ಕುಂದರ್‌ ಕಾಣಿಸಿಕೊಂಡಿದ್ದು, ವಿವೇಕ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

Kiccha Sudeep ಪುತ್ರಿ ಸಾನ್ವಿ ಗಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ; ‌ʻಮಾರ್ಕ್ʼ ಚಿತ್ರದ ʻಮಸ್ತ್‌ ಮಲೈಕಾʼ ಸಾಂಗ್‌ ಕೇಳೋಕೆ ನೀವು ರೆಡಿನಾ?

ಮಯೂರ್ ಪಟೇಲ್‌ , ಉಗ್ರಂ ಮಂಜು ಜೊತೆಗೆ ವಿಜಯ್‌ ರಾಘವೆಂದ್ರ ಅವರ ಅಕ್ಕನ ಮಗ ಜೈ ಕೂಡ ನಟಿಸಿದ್ದಾರೆ. ಮ್ಯಾಂಗೋ ಪಚ್ಚ ಮೈಸೂರಿನ ಭಾಗದ ಕಥೆಯಾಗಿದ್ದು, ಸಂಚಿತ್‌ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಮಾಡಿದ್ದು, ಇದೊಂದು ಕ್ರೈಂ ಥ್ರಿಲ್ಲರ್‌ ಜಾನರ್‌ ಚಿತ್ರವಾಗಿದ್ದು, ಟೀಸರ್‌ ಮತ್ತು ಹಾಡುಗಳಿಂದ ಸದ್ದು ಮಾಡ್ತಿರೋ ಮ್ಯಾಂಗೋ ಪಚ್ಚ ಸಿನಿಮಾ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ. ಮ್ಯಾಂಗೋ ಪಚ್ಚ ಚಿತ್ರವನ್ನು ಕೆಆರ್‌ಜಿ ಮತ್ತು ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್‌ ಜಂಟಿಯಾಗಿ ನಿರ್ಮಾಣ ಮಾಡಿವೆ.