ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiccha Sudeep ಪುತ್ರಿ ಸಾನ್ವಿ ಗಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ; ‌ʻಮಾರ್ಕ್ʼ ಚಿತ್ರದ ʻಮಸ್ತ್‌ ಮಲೈಕಾʼ ಸಾಂಗ್‌ ಕೇಳೋಕೆ ನೀವು ರೆಡಿನಾ?

Sanvi Sudeep: ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಅವರು 'ಮಾರ್ಕ್' ಚಿತ್ರದ ಮೂಲಕ ಗಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಅಧಿಕೃತ ಎಂಟ್ರಿ ಕೊಡುತ್ತಿದ್ದಾರೆ. ಸುದೀಪ್ ನಟನೆಯ ಈ ಸಿನಿಮಾದಲ್ಲಿ 'ಮಸ್ತ್ ಮಲೈಕಾ' ಎಂಬ ವಿಶೇಷ ಹಾಡಿಗೆ ಸಾನ್ವಿ ಧ್ವನಿ ನೀಡಿದ್ದಾರೆ.

Sudeep: ʻಮಾರ್ಕ್‌ʼ ಚಿತ್ರದ ಹಾಡಿಗೆ ಧ್ವನಿಯಾದ ಕಿಚ್ಚನ ಪುತ್ರಿ  ಸಾನ್ವಿ

-

Avinash GR
Avinash GR Dec 14, 2025 6:41 PM

ಸ್ಯಾಂಡಲ್‌ವುಡ್‌ಗೆ ಹೊಸ ಗಾಯಕಿಯೊಬ್ಬರ ಆಗಮನ ಆಗುತ್ತಿದೆ. ಅದು ಬೇರೆ ಯಾರು ಅಲ್ಲ, ಕಿಚ್ಚ ಸುದೀಪ್‌ ಅವರ ಪುತ್ರಿ ಸಾನ್ವಿ. ಹೌದು, ಎಲ್ಲರಿಗೂ ಗೊತ್ತಿರುವಂತೆ ಸಾನ್ವಿ ಉತ್ತಮ ಗಾಯಕಿ. ಆದರೆ ಅಧಿಕೃತವಾಗಿ ಈವರೆಗೂ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿರಲಿಲ್ಲ. ಇದೀಗ ಅವರು ತಮ್ಮ ತಂದೆಯ ಸಿನಿಮಾದ ಮೂಲಕವೇ ಗಾಯಕಿಯಾಗಿ ವೃತ್ತಿ ಬದುಕು ಆರಂಭಿಸುತ್ತಿದ್ದಾರೆ.

ಮಾರ್ಕ್‌ ಚಿತ್ರದಲ್ಲಿ ಸಾನ್ವಿ ಸಾಂಗ್

ಸುದೀಪ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ʻಮಾರ್ಕ್‌ʼನಲ್ಲಿ ಮಸ್ತ್‌ ಮಲೈಕಾ ಎಂಬ ಒಂದು ಸ್ಪೆಷಲ್‌ ಸಾಂಗ್‌ ಇದೆ. ಇದರಲ್ಲಿ ಕಿಚ್ಚನ ಜೊತೆ ನಟಿ ನಿಶ್ವಿಕಾ ನಾಯ್ಡು ಹೆಕ್ಕೆ ಹಾಕಿದ್ದಾರೆ. ಈ ಹಾಡನ್ನು ಹಾಡಿರುವುದು ಸುದೀಪ್‌ ಅವರ ಪುತ್ರಿ ಸಾನ್ವಿ. ಈ ಹಾಡಿನೊಂದಿಗೆ ಸಾನ್ವಿ ಸುದೀಪ್‌ ಅವರು ಸ್ಯಾಂಡಲ್‌ವುಡ್‌ಗೆ ಗಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ.

Mark Trailer : ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌! ಬರ್ತಿದೆ ‘ಮಾರ್ಕ್‌’ ಟ್ರೈಲರ್, ಯಾವಾಗ?

ಸುದೀಪ್‌ ಏನಂದ್ರು?

ಈ ಹಾಡಿನ ಕುರಿತು ಟ್ವೀಟ್‌ ಮಾಡಿರುವ ಕಿಚ್ಚ‌ ಸುದೀಪ್, "ನನ್ನ ಪ್ರೀತಿಯ ಬಾದ್‌ಷಾಗಳೇ... ಮಾರ್ಕ್‌ ಚಿತ್ರದ ಉತ್ಸಾಹಭರಿತ ಹಾಡು ಡಿಸೆಂಬರ್ 15 (ಸೋಮವಾರ) ಮಧ್ಯಾಹ್ನ 3:30 ಕ್ಕೆ ಬಿಡುಗಡೆಯಾಗಲಿದೆ. ಸಾರೇಗಾಮ ಸೌತ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಆಗುತ್ತಿದ್ದು, ಸಾನ್ವಿ ಅವರ ಮೊದಲ ಹಾಡು, ಇದನ್ನು ಗಾಯಕ ನಕಾಶ್‌ ಅಜೀಜ್ ಅವರೊಂದಿಗೆ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಅವರ ಅದ್ಭುತ ಸಂಯೋಜನೆ ಈ ಹಾಡಿಗಿದೆ. ನನ್ನ ಬೆರಳು ಹಿಡಿದು ಈಗ ಮೈಕ್ ಹಿಡಿಯುವವರೆಗೆ... ಯಾವಾಗಲೂ ನಿನ್ನ ಬಗ್ಗೆ ಹೆಮ್ಮೆ ಇದೆ, ಸಾನೂ... ಈ ಸುಂದರವಾದ ಹಾಡಿಗಾಗಿ ಧನ್ಯವಾದಗಳು" ಎಂದು ಭಾವುಕರಾಗಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

Mark Teaser: 'ಮಾರ್ಕ್‌'ಗೆ ಉಘೇ ಉಘೇ ಅಂದ್ರು ಫ್ಯಾನ್ಸ್‌! ಟೀಸರ್‌ನಲ್ಲಿ ಕಿಚ್ಚನ ರೌದ್ರಾವತಾರ

ಸುದೀಪ್‌ ಟ್ವೀಟ್



ಮಾರ್ಕ್‌ ಚಿತ್ರದ ಬಗ್ಗೆ..

ಸುದೀಪ್‌ ನಟನೆಯ ಮಾರ್ಕ್‌ ಕೇವಲ ಆರು ತಿಂಗಳಲ್ಲಿ ಕಂಪ್ಲೀಟ್‌ ಆಗಿರುವ ಸಿನಿಮಾ. ಮ್ಯಾಕ್ಸ್‌ ಸಿನಿಮಾವನ್ನು ನಿರ್ದೇಶಿಸಿದ್ದ ವಿಜಯ್‌ ಕಾರ್ತಿಕೇಯ ಅವರೇ ಈ ಚಿತ್ರಕ್ಕೂ ನಿರ್ದೇಶನ ಮಾಡಿದ್ದು, ಸತ್ಯಜ್ಯೋತಿ ಫಿಲ್ಮ್ಸ್‌ ನಿರ್ಮಾಣ ಮಾಡಿದೆ. ನಿರ್ಮಾಣದಲ್ಲಿ ಸುದೀಪ್‌ ಕೂಡ ಸಾಥ್‌ ನೀಡಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದು, ಸುದೀಪ್‌ ಜೊತೆಗೆ ನವೀನ್‌ ಚಂದ್ರ, ಶೈನ್‌ ಟಾಮ್‌ ಚಾಕೋ, ವಿಕ್ರಾಂತ್‌, ಯೋಗಿ ಬಾಬು, ನಿಶ್ವಿಕಾ ನಾಯ್ಡು, ರೋಶಿಣಿ ಪ್ರಕಾಶ್‌, ದೀಪಿಷ್ಕಾ ಮುಂತಾದವರು ನಟಿಸಿದ್ದು, ಶೇಖರ್ ಚಂದ್ರು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.