ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ರೋಚಕ ತಿರುವು ಪಡೆದು ಕಥೆ ಸಾಗುತ್ತಿದೆ. ಜೈದೇವ್‌ಗೆ ಮಲ್ಲಿ ವಿಚಾರದಲ್ಲಿ ಮುಖಭಂಗವಾಗಿದೆ. ಪರೀಕ್ಷೆಗೆ ಮಲ್ಲಿ ಕುಳಿತುಕೊಳ್ಳವಾರದು ಅಂತ ಎಷ್ಟೇ ಪ್ಲ್ಯಾನ್ ಮಾಡಿದ್ರೂ ಪ್ಲ್ಯಾನ್ ಪ್ಲಾಪ್ ಆಗಿದೆ. ಇದರ ಜೊತೆಗೆ ಹಿಂದೆ ಇರುವ ವ್ಯಕ್ತಿ ಬೇರೆ ಯಾರು ಅಲ್ಲ ಬದಲಿಗೆ ಜೈದೇವ್ ಎನ್ನುವ ವಿಚಾರ ಗೌತಮ್ ಗೆ ಗೊತ್ತಾಗಿದೆ. ಸದ್ಯ ಜೈದೇವ್ (Jaidev) ಎಂದಿನಂತೆ ಎಣ್ಣೆ ಕುಡಿಯುತ್ತಾ ಕುಂತಿದ್ದು, ಜೈದೇವ್‌ನ ಲಕ್ಷ್ಮೀಕಾಂತ್ (Lakshmikanth) ಪ್ರಶ್ನೆ ಮಾಡಿದ್ದಾನೆ. ಲಕ್ಷ್ಮೀಕಾಂತ್‌ಗೂ ಜೈದೇವ್ ಮೇಲೆ ಅನುಮಾನ ಶುರು ಆಗಿದೆ.
ಜೈದೇವ್ ಕುತಂತ್ರ
ಮಲ್ಲಿ ಎಕ್ಸಾಮ್ ಬರೆದು ಬಂದು ಗೌತಮ್ ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾಳೆ. ನಾನು ಯಾರಿಗೂ ಕೇಡನ್ನು ಬಯಸಿಲ್ಲ ಆದ್ರೂ ನನಗೆ ಹೀಗೆ ಆಗ್ತಿದೆ ಅಂತ ಬೇಸರ ವ್ಯಕ್ತಪಡಿಸಿದ್ದಾಳೆ. ಗೌತಮ್ ಸಮಾಧಾನ ಮಾಡಿದ್ದಾನೆ. ಈ ವಿಚಾರ ಭೂಮಿಕಾಗೆ ಗೊತ್ತಾಗದಂತೆ ಇರು ಎಂದು ಬುದ್ಧಿವಾದ ಹೇಳಿದ್ದಾನೆ ಜೈದೇವ್ ಬಳಿ ಸುನಿ ಓಡಿ ಬಂದು ಮದುವೆ ಬಗ್ಗೆ ಹಾಗೂ ರೌಡಿಗಳು ಅಟ್ಯಾಕ್ ಮಾಡಿರುವ ಬಗ್ಗೆ ವಿವರಿಸುತ್ತಾನೆ. ಜೈದೇವ್ ಮಾತ್ರ ತುಂಬಾ ಆರಾಮದಾಯಕವಾಗಿರೋದನ್ನ ಗಮನಿಸಿದ ಸುನಿ, ಪ್ರಶ್ನೆ ಹಾಕುತ್ತಾನೆ. ಆಗ ಜೈದೇವ್ ಇದ್ದವನು, ಇದಕ್ಕೆಲ್ಲ ಡೈರೆಕ್ಟರ್ ನಾನೆ ಎಂದು ಹೇಳುತ್ತಾನೆ.
ಇದನ್ನೂ ಓದಿ: Dhurandhar 2: ಮೊದಲ ದಿನವೇ ಅದ್ಭುತ ಯಶಸ್ಸು ಕಂಡ ‘ಧುರಂಧರ್ 2’ ಸಿನಿಮಾ; ಫಸ್ಟ್ ಡೇ ಕಲೆಕ್ಷನ್ ಎಷ್ಟು?
ಇದನ್ನೆಲ್ಲ ಕೇಳಿದ ಸುನಿಗೆ ಜೈದೇವ್ ಬಗ್ಗೆ ಶಾಕ್ ಆಗುತ್ತೆ. ಮಲ್ಲಿ ಪಾಡಿಗೆ ಇರಲು ಬಿಟ್ಟುಬಿಡಿ ಎಂದ ಸುನಿ ಮೇಲೆ ಜೈದೇವ್ ಕೂಡ ರೇಗಾಡುತ್ತಾನೆ. ಹೀಗಾಗಿ ಸುನಿ ಕೂಡ ಜೈದೇವ್ ಇಷ್ಟು ಕೆಟ್ಟ ವ್ಯಕ್ತಿನಾ ಅಂತ ಮನಸಲ್ಲೇ ಅಂದುಕೊಳ್ಳುತ್ತಾನೆ.
ಸುನಿಗೂ ಪಶ್ಚಾತ್ತಾಪ
ಮತ್ತೊಂದು ಕಡೆ ಗೊಂದಲದ ಗೂಡಿನಲ್ಲಿರುವ ಸುನಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ ಆದರೆ ಜೈದೇವ್ ಮತ್ತು ಮಲ್ಲಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮತ್ತೊಂದು ಕಡೆ ಸುನಿ ಬಳಿ ಮಲ್ಲಿ ನನ್ನನ್ನು ಮೋಸ ಮಾಡಬೇಡ ಎಂದೆಲ್ಲಾ ಕೇಳಿಕೊಂಡಿದ್ದು ಮಲ್ಲಿಯ ಮಾತು ಕೇಳಿ ಸುನಿಗೆ ಪಾಪ ಪ್ರಜ್ಞೆ ಕಾಡಲು ಶುರುವಾಗಿದೆ.
ಪ್ರೀ ವೆಡ್ಡಿಂಗ್ ಫೋಟೊಶೂಟ್ ವೇಳೆ ಬಂದ ಜೈದೇವ್
ಗೌತಮ್ ಮತ್ತು ಭೂಮಿಕಾ ಪ್ರೀ ವೆಡ್ಡಿಂಗ್ ಫೋಟೊಶೂಟ್ ಗೆ ಸುನಿ ಮತ್ತು ಮಲ್ಲಿಯನ್ನು ಕಳಿಸಿದ್ದಾರೆ. ಆನಂದ್-ಅಪರ್ಣಾ ಈ ಕಾರ್ಯಕ್ರಮ ನಡೆಯುತ್ತಿದ್ದು ಜೈದೇವ್ ಕೂಡ ಅದೇ ಸ್ಥಳಕ್ಕೆ ಬಂದಿದ್ದಾನೆ. ಸುನಿ ಕಂಡೊಡನೆ ಮಾತನಾಡಲು ಹೋಗಿದ್ದು ಇಬ್ಬರ ಭೇಟಿಯನ್ನು ಕಂಡು ಆನಂದ್ ಕೆರಳಿದ್ದಾನೆ. ಗೌತಮ್ ಗೆ ಫೋನ್ ಮಾಡಿ ಜೈದೇವ್ ಬಂದಿರುವ ವಿಚಾರ ಕೂಡ ತಿಳಿಸಿದ್ದಾನೆ.
ಲಕ್ಷ್ಮೀಕಾಂತನಿಗೆ ಸಿಕ್ಕಿದ್ಯಾ ಕೇಡಿ ಕುತಂತ್ರದ ಸುಳಿವು?
ಸುನಿ ನೋಡಿದ ಬಳಿಕ ಜೈದೇವ್ ಮನೆಗೆ ಎಂದಿನಂತೆ ಎಣ್ಣೆ ಕುಡಿಯುತ್ತಾ ಕುಂತಿದ್ದು, ಜೈದೇವ್‌ನ ಲಕ್ಷ್ಮೀಕಾಂತ್ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಜೈದೇವ್ ನೇರ ಉತ್ತರ ಕೊಡದೇ ತುಂಬಾನೇ ದೊಡ್ಡ ಪ್ಲಾನ್ ಮಾಡಿದ್ದೇನೆ ಆದರೆ ನಾನು ಆ ಪ್ಲಾನ್ ನಾನು ಏನಂತ ಹೇಳಲ್ಲ ಎನ್ನುತ್ತಾನೆ. ಈ ಬಾರಿ ನನ್ನ ಪ್ಲಾನ್ ನ ಯಾರು ಊಹೆ ಮಾಡೋಕೆ ಸಾಧ್ಯ ಇಲ್ಲಎಂದೆಲ್ಲ ಹೇಳಿದ್ದಾನೆ.
ಸದ್ಯಕ್ಕೆ ಜೈದೇವ್ ಕಳಿಸಿರುವ ಹುಡುಗ ಸುನಿ ಎಂದು ಗೌತಮ್ ಮತ್ತು ಭೂಮಿಕಾಗೆ ಗೊತ್ತಾದರೆ ಮುಂದೇನಾಗಬಹುದು ಎನ್ನುವ ಕುತೂಹಲ ವೀಕ್ಷಕರಲ್ಲಿದೆ.
ಇದನ್ನೂ ಓದಿ: Rashmika Mandanna: ಆಗ ಮಗಳಾಗಿ,ಈಗ ಸೊಸೆಯಾಗಿ ಪ್ರೀತಿ ನೀಡುತ್ತಿದ್ದಾರೆ! ರಶ್ಮಿಕಾ ಭಾವುಕ
ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.