ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare serial) ರೋಚಕ ಟ್ವಿಸ್ಟ್ ಪಡೆದು ಸಾಗುತ್ತಿದೆ. ಮಿಂಚುವನ್ನು ಕಿಡ್ನ್ಯಾಪ್ ಮಾಡಿದ್ದ ಜೈದೇವನನ್ನು ಅರಿಯದೇ ಕೊಲೆ ಮಾಡಿದ್ದ ಜೀವ. ಅಲ್ಲಿ ಭೂಮಿಕಾ (Bhoomika) ಮತ್ತು ಮಲ್ಲಿನೂ ಇದ್ದರು. ಕೊಲೆ ಮಾಡಿರುವ ಪಶ್ಚಾತ್ತಾಪದಲ್ಲಿದ್ದ ಭೂಮಿಕಾ ಪೊಲೀಸರಿಗೆ ಶರಣಾಗುವ ನಿಟ್ಟಿನಲ್ಲಿ ಇದ್ದಳು. ಜೈದೇವನ ಬಾಡಿಯನ್ನು ತೆಗೆದು ಪೊಲೀಸರಿಗೆ ತಿಳಿಸಲು ಹೋದರೆ ಅಲ್ಲಿ ಶವವೇ ಇರಲಿಲ್ಲ. ಅದನ್ನು ನೋಡಿ ಮಲ್ಲಿಗೆ ಎಲ್ಲಾ ವಿಷಯ ತಿಳಿಸಿದ್ದಾಳೆ ಭೂಮಿಕಾ. ಬಳಿಕ, ಅಲ್ಲಿಯ ಅಧಿಕಾರಿಗಳ ಮಾಹಿತಿ ಪಡೆದ ಮಲ್ಲಿ, ಸಿಸಿಟಿವಿ (CCTV Footage) ಫುಟೇಜ್ ಚೆಕ್ ಮಾಡಿಸಿದ್ದಾಳೆ. ಜೈದೇವನ ಸಮಾಧಿಯಲ್ಲಿ ಕೈ ಹೊರಕ್ಕೆ ಬಂದಿದ್ದು, ಕಾಪಾಡುವಂತೆ ಆತ ಕೇಳಿಕೊಂಡಿದ್ದಾನೆ. ಅಲ್ಲಿಗೆ ಆತ ಜೀವಂತ ಇರುವುದು ತಿಳಿದಿದೆ.
ಜೈದೇವ್ ತಾಯಿ ಶಕುಂತಲಾಳನ್ನು ಭೇಟಿ
ಸತ್ತು ಹೋದನೆಂದು ಭಾವಿಸಲಾಗಿದ್ದ ಜೈದೇವ್ ಮರಳಿ ಬಂದು ತಾಯಿ ಶಕುಂತಲಾಳನ್ನು ಭೇಟಿಯಾಗಿದ್ದಾನೆ. ಜೈದೇವ್ ಬದುಕಿ ಬಂದಿದ್ದರಿಂದ ಭೂಮಿಕಾ, ಜೀವಾ ಮತ್ತು ಮಲ್ಲಿ ಜೈಲು ಸೇರುವುದು ತಪ್ಪಿದೆ.
ಇದನ್ನೂ ಓದಿ: Amruthadhaare Serial: ಅಮೃತಧಾರೆಯ ಹೊಸ ಅಧ್ಯಾಯ! ಭೂಮಿಕಾ ಬದುಕಿನ ಹಾದಿಗೆ ಬಿಗ್ ಟ್ವಿಸ್ಟ್
ತಾಯಿ ಶಕುಂತಲಾಳನ್ನು ಭೇಟಿಯಾಗಿ ತನ್ನ ವಿರುದ್ಧ ಭೂಮಿಕಾ, ಜೀವಾ ಮತ್ತು ಮಲ್ಲಿ ರಚಿಸಿದ್ದ ಷಡ್ಯಂತ್ರದ ವಿಷಯ ಹೇಳಿದ್ದಾನೆ. ಯಾರಿಗೂ ತಿಳಿಯದಂತೆ ಮನೆಯೊಳಗೆ ಎಂಟ್ರಿ ಕೊಟ್ಟ ಜೈದೇವ್‌ಗೆ ಭೂಮಿಕಾಳ ದರ್ಶನವಾಗಿದೆ.
ಜೈದೇವ್ ವಿರುದ್ಧ ಸೋತಿರುವ ಭೂಮಿಕಾ, ಖಡಕ್ ಮಾತುಗಳನ್ನಾಡಿದ್ದಾಳೆ. ಆದ್ರೆ ಭೂಮಿಕಾಳ ಮಾತಿಗೆ ಜೈದೇವ್, ಡೋಂಟ್ ಕೇರ್ ಅಂದಿದ್ದಾನೆ. ಜೈದೇವ್ ಮುಂದೆ ಶಿಶುಪಾಲನ ಕತೆ ಹೇಳಿರುವ ಭೂಮಿಕಾ ಕೆಡಿಗೆ ಅಂತ್ಯದ ಎಚ್ಚರಿಕೆಯನ್ನು ನೀಡಿದ್ದಾಳೆ.
ಇನ್ನು ಜೈದೇವ್ ಮಾತ್ರ ಭೂಮಿಕಾಗೆ ಹೆದರದೇ ವಾರ್ನ್ ಮಾಡಿದ್ದಾನೆ. ವೀಕ್ಷಕರಿಗೂ ಎಪಿಸೋಡ್ ನೋಡಿ ಕುತೂಹಲ ಮೂಡಿದೆ. ಜೈದೇವನ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದಂತೆ ಮಾಡಿ, ಆತನ ಬದಲಿಗೆ ಬೇರೆ ನಟನ ಎಂಟ್ರಿ ಆಗಲಿದೆ ಎಂದೂ ಕಮೆಂಟ್ ಮಾಡಿದ್ದರು. ಕಾಡಿನಲ್ಲಿ ಸಿಸಿಟಿವಿ ಇಟ್ಟವರು ಯಾರು ಮತ್ತು ಧಾರಾವಾಹಿಯ ಮುಂದಿನ ಕಥೆ ಏನು ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.
ಇದನ್ನೂ ಓದಿ: Bigg Boss Kannada 12: ರಾಶಿಕಾ ಬಗ್ಗೆ ಮಾತನಾಡಿ ತಾಯಿ ಭಾವುಕ! ಅತ್ತ ಧನುಷ್‌ಗೆ ಬಿಗ್ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ೭ ಗಂಟೆಗೆ ಪ್ರಸಾರ ಕಾಣುತ್ತಿದೆ.