ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare Serial: ಜೈದೇವ್ ಕಥೆ ಫಿನಿಶ್‌; ಮಲ್ಲಿ ತನಿಖೆ ಶುರು, ಜೀವ ಕೊಟ್ಟೇ ಬಿಟ್ಟ ಬಿಗ್‌ ಟ್ವಿಸ್ಟ್‌!

Amruthadhaare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ರೊಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಜೈದೇವ್‌ಗೆ ಜೀವಾಯಿಂದಲೇ ಕಂಟಕ ಎದುರಾದಂತಿದೆ. ಇದೀಗ ಮಲ್ಲಿ ಬಲಿ ಜೀವಾ, ಜೈದೇವ್‌ ಕುರಿತಾಗಿ ಮಾತನಾಡಿದ್ದಾನೆ. ಜೈದೇವ್ - ಜೀವ ಜಿದ್ದಾ – ಜಿದ್ದಿಗೆ ಭೂಮಿ ಸಾಕ್ಷಿ ಆಗಲಿದ್ದಾಳಾ?

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare) ರೊಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಜೈದೇವ್‌ಗೆ ಜೀವಾಯಿಂದಲೇ ಕಂಟಕ ಎದುರಾದಂತಿದೆ. ಇದೀಗ ಮಲ್ಲಿ ಬಲಿ ಜೀವಾ, ಜೈದೇವ್‌ (Jaidev) ಕುರಿತಾಗಿ ಮಾತನಾಡಿದ್ದಾನೆ. ಜೈದೇವ್ - ಜೀವ ಜಿದ್ದಾ – ಜಿದ್ದಿಗೆ ಭೂಮಿ ಸಾಕ್ಷಿ ಆಗಲಿದ್ದಾಳಾ?

ಜೀವಾ ಈ ಬಗ್ಗೆ ಮಲ್ಲಿ ಮುಂದೆ ಹೇಳಿದ್ದೇನು?

ಜೈದೇವ್‌ ತನ್ನ ಜೀವನದ್ದಕ್ಕೂ ಒಂದಲ್ಲ ಒಂದು ಕೆಟ್ಟ ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾನೆ. ದಿಯಾಳನ್ನ ಕೊಲೆ ಮಾಡಿ, ಏನೂ ಗೊತ್ತಿಲ್ಲದಂತೆ ಇದ್ದ. ಆದರೆ ಈಗ ಹಾಗಲ್ಲ. ಜೀವಾ ಈ ಬಗ್ಗೆ ಮಲ್ಲಿ ಮುಂದೆ ಹೇಳಿದ್ದಾನೆ. ದಿಯಾ ಪ್ರೀತಿಸುತ್ತಿದ್ದ ಹುಡುಗ ಜೀವಾ ಫ್ರೆಂಡ್‌. ಹಾಗಾಗಿ ದಿಯಾ ಕಾಣೆಯಾಗಿರೋ ಬಗ್ಗೆ ಜೈದೇವ್‌ ಮೇಲೆ ಅನುಮಾನ ಇದೆ ಎಂದಿದ್ದಾನೆ ಜೀವಾ. ಈ ವಿಚಾರ ಮಲ್ಲಿ ಭೂಮಿಕಾ ಮುಂದೆ ಹೇಳಿದ್ದಾಳೆ. ಇನ್ನು ಜೈದೇವ್‌ಗೆ ಕಂಟಕ ಬಂದಿರೂವಂತಿದೆ.

ಇದನ್ನೂ ಓದಿ: Bigg Boss Kannada 13: ಸೆಟ್‌ನಲ್ಲೇ ವಿನಯ್ ವಿರುದ್ಧ ಕಿಡಿಕಾರಿದ ಸಂಗೀತಾ ಶೃಂಗೇರಿ!

ಈ ಸ್ತನ ಕ್ಯಾನ್ಸರ್‌ ಕುರಿತು ‘ಅಮೃತಧಾರೆ’ ಧಾರಾವಾಹಿ ಸಂಚಿಕೆಗಳನ್ನ ರೂಪಿಸಿದೆ. ನಾಯಕಿ ಭೂಮಿಕಾಗೆ ಸ್ತನ ಕ್ಯಾನ್ಸರ್‌ ಇದೆ ಎಂದು ತೋರಿಸಲಾಗಿದೆ. ಆ ಪಾತ್ರಕ್ಕೆ ಇಡೀ ಕುಟುಂಬ, ಮುಖ್ಯವಾಗಿ ಗಂಡ ಎಷ್ಟು ಸಪೋರ್ಟಿವ್‌ ಆಗಿ, ಸವಾಲಿಗೆ ಸೆಡ್ಡು ಹೊಡೆದು ನಿಂತಿದ್ದಾರೆ ಎಂಬುವುದನ್ನ ತೋರಿಸಲಾಗುತ್ತಿದೆ. ಮನರಂಜನೆಯ ದೃಷ್ಟಿಯನ್ನ ಮೀರಿ, ಭಾವನಾತ್ಮಕವಾಗಿ ಧಾರಾವಾಹಿ ಕನೆಕ್ಟ್ ಆಗುತ್ತಿದೆ.

ಇನ್ನೊಂದೆಡೆ ಭೂಮಿಕಾಳ ಅನಾರೋಗ್ಯವನ್ನೇ ಬಳಸಿಕೊಂಡು ಆಕೆಗೆ ಮಾನಸಿಕ ಹಿಂಸೆ ನೀಡಬೇಕು ಎಂಬ ಶಕುಂತಲಾ ಮತ್ತು ಜೈದೇವ್‌ ಅವರ ಕುತಂತ್ರಕ್ಕೂ ಸದ್ಯಕ್ಕೆ ಬ್ರೇಕ್‌ ಬಿದ್ದಿದೆ. ಆದರೆ ಈ ಇಬ್ಬರ ಸಂಚು ಮಾತ್ರ ಇನ್ನೂ ಮುಗಿದಿಲ್ಲ. ಗೌತಮ್‌ ಕುಟುಂಬವನ್ನು ಬೀದಿಗೆ ತರುವ ಉದ್ದೇಶದಿಂದ ಜೈದೇವ್‌ ಮತ್ತು ಶಕುಂತಲಾ ನಿರಂತರವಾಗಿ ಕುತಂತ್ರ ನಡೆಸುತ್ತಿದ್ದಾರೆ.



ಇಲ್ಲಿಯವರೆಗೆ ಹಲವು ಬಾರಿ ತಮ್ಮ ತಪ್ಪುಗಳಿಂದ ತಪ್ಪಿಸಿಕೊಂಡಿರುವ ಇವರಿಬ್ಬರ ನಿಜ ಬಣ್ಣ ಯಾವಾಗ ಬಯಲಾಗುತ್ತದೆ ಎಂಬುದೇ ಈಗ ಕುತೂಹಲ. ಶಕುಂತಲಾಳ ಕುತಂತ್ರವೂ ಒಂದೊಂದಾಗಿ ಬಯಲಾಗುತ್ತಿದ್ದು, ಕೊನೆಗೆ ತಾಯಿ-ಮಗ ಇಬ್ಬರೂ ಒಟ್ಟಿಗೆ ಜೈಲು ಸೇರುವ ಸ್ಥಿತಿ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Amruthadhaare serial: ಇಷ್ಟು ದಿನ ಭೂಮಿ ಟೈಟ್ ಆಗೋದು ನೋಡಿದ್ರಿ, ಈಗ ಡುಮ್ಮ ಸರ್ ಸರದಿ!

`ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author