Amruthadhaare serial: ಇಷ್ಟು ದಿನ ಭೂಮಿ ಟೈಟ್ ಆಗೋದು ನೋಡಿದ್ರಿ, ಈಗ ಡುಮ್ಮ ಸರ್ ಸರದಿ!
Amruthadhaare serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಕ್ಯಾನ್ಸರ್‌ನಿಂದ ಭೂಮಿಕಾ ಸಾವನ್ನಪ್ಪುತ್ತಾಳೆ ಎಂಬ ವೀಕ್ಷಕರ ಲೆಕ್ಕಾಚಾರ ಉಲ್ಟಾ ಆಗಿದೆ. ಗೌತಮ್‌ನ ಆರೈಕೆ ಮತ್ತು ಕುಟುಂಬಸ್ಥರ ಪ್ರಾರ್ಥನೆಯಿಂದ ಗುಣಮುಖಳಾದ ಭೂಮಿಕಾ, ಹೊಸ ರೂಪದಲ್ಲಿ ಮತ್ತೆ ಬಂದಿದ್ದಾಳೆ. ಈಗ ಗೌತಮ್ ಇದೇ ಖುಷಿಗೆ ಪಾರ್ಟಿ ಮಾಡಿದ್ದಾನೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare serial) ಕ್ಯಾನ್ಸರ್‌ನಿಂದ ಭೂಮಿಕಾ ಸಾವನ್ನಪ್ಪುತ್ತಾಳೆ ಎಂಬ ವೀಕ್ಷಕರ ಲೆಕ್ಕಾಚಾರ ಉಲ್ಟಾ ಆಗಿದೆ. ಗೌತಮ್‌ನ ಆರೈಕೆ ಮತ್ತು ಕುಟುಂಬಸ್ಥರ ಪ್ರಾರ್ಥನೆಯಿಂದ ಗುಣಮುಖಳಾದ ಭೂಮಿಕಾ (Bhoomika), ಹೊಸ ರೂಪದಲ್ಲಿ ಮತ್ತೆ ಬಂದಿದ್ದಾಳೆ. ಈಗ ಗೌತಮ್ ಇದೇ ಖುಷಿಗೆ ಪಾರ್ಟಿ ಮಾಡಿದ್ದಾನೆ.
ಸೀರಿಯಲ್‌ನಲ್ಲಿ ಹಾಸ್ಯ ಸನ್ನಿವೇಶ ಅಂದರೆ ಆನಂದ್ ಸದಾ ಭೂಮಿಗೆ ಗೊತ್ತಿಲ್ಲದ ಹಾಗೇ ಜ್ಯೂಸ್‌ಗೆ ಡ್ರಿಂಕ್ಸ್ ಮಿಕ್ಸ್ ಮಾಡಿ ಭೂಮಿ ಮನದ ಮಾತನ್ನು ಆಚೆ ಹಾಕಿಸುತ್ತಿದ್ದರು. ಆದರೆ ಈಗ ಹಾಗಲ್ಲ. ಇಷ್ಟು ದಿನ ಭೂಮಿ ಟೈಟ್ ಆಗೋದು ನೋಡಿದ್ರಿ.ಈಗ ಡುಮ್ಮ ಸಾರ್ ಸರದಿ. ಕುಡಿದ ಮತ್ತಿನಲ್ಲಿ ಗೌತಮ್ , ಭೂಮಿಯನ್ನ ಹೊಗಳಿದ್ದಾನೆ.
ಇದನ್ನೂ ಓದಿ: Vijay kumar: 'ಮಂಗಳಗೌರಿ ಮದುವೆ' ಸೀರಿಯಲ್ ಖ್ಯಾತಿಯ ನಟ ಇನ್ನಿಲ್ಲ
ಸಾವನ್ನೇ ಗೆದ್ದ ಭೂಮಿಕಾ
ಸೀರಿಯಲ್ ಇತ್ತೀಚಗೆ ಅಂತ್ಯ ಹಾಡತ್ತೆ ಅಂದುಕೊಂಡಿದ್ದರು ವೀಕ್ಷಕರು. ಆರಂಭದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಳ್ಳಲು ಭೂಮಿಕಾ ಹಿಂದೇಟು ಹಾಕಿದ್ದಳು. ಆದ್ರೆ ಗೌತಮ್ ಬಲವಂತದ ಮೇರೆಗೆ ಚಿಕಿತ್ಸೆ ಪಡೆದುಕೊಂಡ ಭೂಮಿಕಾ ಗುಣವಾಗಿದ್ದಾಳೆ. ಎಲ್ಲಾ ಕೆಲಸಗಳನ್ನು ಬಿಟ್ಟು ಪತ್ನಿಯ ಆರೈಕೆಯಲ್ಲಿ ಗೌತಮ್ ತೊಡಗಿಕೊಂಡಿದ್ದನು. ಗೌತಮ್ ಆರೈಕೆ, ಕುಟುಂಬಸ್ಥರ ಪ್ರಾರ್ಥನೆಯಿಂದ ಭೂಮಿಕಾ ಸಾವನ್ನೇ ಗೆದ್ದಿದ್ದಾಳೆ.
ಕ್ಯಾನ್ಸರ್ ವಿರುದ್ಧ ಧೈರ್ಯ ದಿಂದ ಹೋರಾಡಿದ ಭೂಮಿಕಾ ಸಾವಿಗೆ ಸವಾಲು ಹಾಕಿ ಗೆದ್ದಿದ್ದಾರೆ. ಅಷ್ಟೇ ಅಲ್ಲದೇ ವೀ ಕ್ಷಕರು ಕೂಡ ಭೂಮಿಕಾಳ ಹೊಸ ಲುಕ್ಗೆ ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮತ್ತೊಂದೆಡೆ ಇದೇ ವಿಷಯವನ್ನಿಟ್ಟುಕೊಂಡು ಭೂಮಿಕಾಗೆ ಮಾನಸಿಕ ಹಿಂಸೆ ನೀಡಬೇಕೆಂಬ ಶಕುಂತಲಾ ಮತ್ತು ಜೈದೇವ್ ಕೆಟ್ಟ ಆಸೆಗೂ ನಿರ್ದೇಶಕರು ಕೊಕ್ ನೀಡಿದ್ದಾರೆ. ನಿರ್ದೇಶಕರು ಕಥೆಗೆ ರೋಚಕ ತಿರುವುಗಳನ್ನು ನೀಡುತ್ತಾ ಧಾರಾವಾಹಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಜೈದೇವ್ ಮತ್ತು ಶಕುಂತಲಾ ಗೌತಮ್ ಫ್ಯಾಮಿಲಿಯನ್ನು ಬೀದಿಗೆ ತರುವ ಹುನ್ನಾರ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಅವರಿಬ್ಬರೂ ಹೇಗೋ ತಪ್ಪಿಸಿಕೊಂಡಿದ್ದರು. ಅದರಲ್ಲಿಯೂ ಜೈದೇವ ದಿಯಾಳ ಕೊಲೆ ಮಾಡಿದ್ದು, ಇನ್ನೂ ಯಾರಿಗೂ ಗೊತ್ತಿಲ್ಲ. ಶಕುಂತಲಾ ಕುತಂತ್ರ ಕೂಡ ಬಯಲು ಮಾಡಿ ಆಕೆಗೂ ಮಗನ ಜೊತೆಗೇ ಜೈಲೂಟ ಮಲ್ಲಿ ಹಾಕಿಸುತ್ತಾಳಾ ಅನ್ನೋದು ಕಾದು ನೋಡಬೇಕಿದೆ.
ಇದನ್ನೂ ಓದಿ: Ram Gopal Varma: ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಪಾತ್ರದಲ್ಲಿ ಈ ನಟ!
`ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.