ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare Serial: ಜೇಡಿ ವಿರುದ್ಧ ಮೊದಲ ಬಾರಿಗೆ ಧ್ವನಿಗೂಡಿಸಿದ್ದಾಳೆ ಶಕುಂತಲಾ! ಕಿಡಿ ಕಾರಿದ ಪಾರ್ಥ

Amruthadhaare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಜೈದೇವ್‌ ಉಪಟಳ ಹೆಚ್ಚಾಗುತ್ತಲೇ ಇದೆ. ಒಂದು ಕಡೆ ಮಲ್ಲಿಗೆ ತೊಂದರೆ ಕೊಡ್ತಾ ಇದ್ದರೆ, ಇನ್ನೊಂದು ಕಡೆ ಪಾರ್ಥ ಹಾಗೂ ಅಪೇಕ್ಷಾಗೂ ಕ್ಲಾಸ್‌ ತೆಗೆದುಕೊಂಡಿದ್ದಾನೆ. ಜೈದೇವ್‌ ಉಪಟಳದಿಂದಾಗಿ ವ್ಯಾಪಾರಿ ಗೌತಮ್ ಇಮೇಜ್ ಗೆ ಧಕ್ಕೆಯಾಗಿದೆ. ಸಮಯಕ್ಕೆ ಮಹತ್ವ ನೀಡುವ ಗೌತಮ್ ಇದೇ ಮೊದಲ ಬಾರಿ ಸಮಯಕ್ಕೆ ಸರಿಯಾಗಿ ಮೀಟಿಂಗ್‌ಗೆ ಹೋಗಲು ಸಾಧ್ಯವಾಗಿಲ್ಲ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಜೈದೇವ್‌ (Jaidev) ಉಪಟಳ ಹೆಚ್ಚಾಗುತ್ತಲೇ ಇದೆ. ಒಂದು ಕಡೆ ಮಲ್ಲಿಗೆ ತೊಂದರೆ ಕೊಡ್ತಾ ಇದ್ದರೆ, ಇನ್ನೊಂದು ಕಡೆ ಪಾರ್ಥ (Partha) ಹಾಗೂ ಅಪೇಕ್ಷಾಗೂ ಕ್ಲಾಸ್‌ ತೆಗೆದುಕೊಂಡಿದ್ದಾನೆ. ಜೈದೇವ್‌ ಉಪಟಳದಿಂದಾಗಿ ವ್ಯಾಪಾರಿ ಗೌತಮ್ ಇಮೇಜ್ ಗೆ ಧಕ್ಕೆಯಾಗಿದೆ. ಸಮಯಕ್ಕೆ ಮಹತ್ವ ನೀಡುವ ಗೌತಮ್ (Gowtham) ಇದೇ ಮೊದಲ ಬಾರಿ ಸಮಯಕ್ಕೆ ಸರಿಯಾಗಿ ಮೀಟಿಂಗ್‌ಗೆ ಹೋಗಲು ಸಾಧ್ಯವಾಗಿಲ್ಲ.

ಮಲ್ಲಿ ಜೈದೇವ್‌ ಬಲೆಗೆ ಸಿಕ್ಕಿಹಾಕಿಕೊಂಡಿದ್ದಳು. ರೌಡಿಗಳು ಅಟ್ಯಾಕ್‌ ಮಾಡಿರುವುದರಿಂದ ತಾನಿದ್ದ ಲೊಕೇಶನ್‌ ಗೌತಮ್‌ಗೆ ಕಳುಹಿಸಿದ್ದಾಳೆ. ಇದರಿಂದಾಗಿ ಗೌತಮ್‌ಗೆ ತನ್ನ ಕೆಲಸಕ್ಕೂ ತೊಂದರೆ ಆಗಿದೆ. ಈ ಹಿನ್ನೆಲೆ ಗೌತಮ್‌ನ ನಂಬಿದ ವ್ಯಕ್ತಿ ಫೋನ್ ಮಾಡಿ ಕಿಡಿ ಕಾರಿದ್ದಾನೆ. ನೀವು ಅಂದರೆ ಟೈಮ್, ಟೈಮ್ ಅಂದರೆ ನೀವು ಅಂತಾ ನಂಬಿದ್ದೇ ಎಂದೆಲ್ಲಾ ಹೇಳಿ ಫೋನ್ ಕಟ್ ಮಾಡಿದ್ದಾನೆ.

ಇದನ್ನೂ ಓದಿ: Puneeth Rajkumar Birthday: ಇಂದು ಪುನೀತ್‌ ರಾಜ್‌ಕುಮಾರ್‌ ಜನ್ಮದಿನ; ಅಪ್ಪು ಪ್ರಯಾಣವೇ ಸ್ಫೂರ್ತಿದಾಯಕ

ಜೇಡಿ ವಿರುದ್ಧ ಮೊದಲ ಬಾರಿಗೆ ಧ್ವನಿಗೂಡಿಸಿದ್ದಾಳೆ ಶಕುಂತಲಾ!

ಮತ್ತೊಂದು ಕಡೆ ಪಾರ್ಥನ ತಂಟೆಗೆ ಜೈದೇವ್‌ ಹೋಗಿದ್ದಾನೆ. ಪಾರ್ಥ ಹಾಗೂ ಅಪೇಕ್ಷಾ ಮನೆಯಿಂದ ಆಚೆ ಹೋಗೋಕೆ ನಿರ್ಧಾರ ಮಾಡಿದ್ದಳು. ಆದರೆ ಶಕುಂತಲಾ ಮತ್ತೆ ಕರೆಸಿಕೊಂಡಿದ್ದಾಳೆ. ಜೈದೇವ್ ಗೆ ಪಾರ್ಥ ಸಂಬಂಧದ ಪಾಠ ಮಾಡಿದ್ದಾನೆ.

ಒಳ್ಳೆಯತನ ಇಲ್ಲದ ಮನೆ ಸ್ಮಶಾನಕ್ಕೆ ಸಮ ಎಂಬ ಅರ್ಥದಲ್ಲಿ ಮಾತನಾಡಿದ್ದಾ‌ನೆ. ಕಣ್ಣೇದುರು ಸಾಮ್ರಾಜ್ಯ ಕುಸಿಯುತ್ತಿದೆ ಆದರೆ ನಿನಗೆ ಕಾಣ್ತಿಲ್ಲ ಎಂದು ಹೇಳಿದ್ದಾನೆ. ಪಾರ್ಥನ ಈ ಮಾತುಗಳಿಂದ ಕೆರಳಿರುವ ಜೈದೇವ್ ಇನ್ನೇನೂ ಪಾರ್ಥನ ವಿರುದ್ದ ತಿರುಗಿ ಬೀಳಬೇಕು, ಅಷ್ಟರಲ್ಲಿ ಬಂದ ಶಕುಂತಲಾ ಇದೇನು ವಾರ್ ಫೀಲ್ಡಾ ಎಂಬ ಪ್ರಶ್ನೆ ಕೇಳಿದ್ದಾಳೆ. ಪಾರ್ಥನ ತಂಟೆಗೆ ಬರದಂತೆ ಜೈದೇವ್‌ಗೆ ವಾರ್ನ್‌ ಮಾಡಿದ್ದಾಳೆ ಶಕುಂತಲಾ.



ಸದ್ಯ ಮಲ್ಲಿಯನ್ನು ಗೌತಮ್ ಕಾಪಾಡಿದ್ದಾನೆ. ಮಲ್ಲಿ ಎಲ್ಲಾ ಅಡೆತಡೆಗಳನ್ನು ದಾಟಿ ಪರೀಕ್ಷೆಯನ್ನು ಕೂಡ ಬರೆದು ಆಗಿದೆ. ಇನ್ನೂ ಇದೆಲ್ಲದರ ಹಿಂದೆ ಜೈದೇವ್‌ ಕೈವಾಡ ಇದೆ ಅನ್ನೋದು ಇನ್ನೂ ಗೌತಮ್‌ಗೆ ಗೊತ್ತಿಲ್ಲ.

ಮತ್ತೊಂದು ಕಡೆ ಪಾರ್ಥ ಕೂಡ ಅಪೇಕ್ಷಾ ಜೊತೆ ಮನೆಯಿಂದ ಹೊರ ಬರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಮುಂಬರುವ ದಿನಗಳಲ್ಲಿ ಮಲ್ಲಿ ಪರೀಕ್ಷೆ ಪಾಸಾಗ್ತಾಳಾ? ಜೈದೇವ್‌ಗೆ ಗೌತಮ್ ಬುದ್ದಿ ಕಲಿಸುತ್ತಾನಾ? ಅಥವಾ ಜೈದೇವ್‌ಗೆ ತನ್ನ ತಪ್ಪಿನ ಅರಿವು ಆಗುತ್ತಾ..? ಮಲ್ಲಿ ಮತ್ತು ಸುನಿ ಮದುವೆಯಾಗುತ್ತಾರಾ? ಎನ್ನುವುದು ವೀಕ್ಷರಲ್ಲಿ ಇರುವ ಕುತೂಹಲ.

ಇದನ್ನೂ ಓದಿ: Amruthadhaare serial : ಮಲ್ಲಿಗೆ ಆಪತ್ಬಾಂಧವನಾಗಿ ಬಂದ ಗೌತಮ್ ದಿವಾನ್; ಆದರೂ ಎದುರಾಗಿದೆ ತೊಂದರೆ!

ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author