ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amruthadhaare Serial : ಇನ್ಮುಂದೆ ಗೌತಮ್‌ ಅಜ್ಜಿದು ಡಬಲ್ ಆಕ್ಟಿಂಗಾ? ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌ ಏನು?

Jaidev: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ದಿನಕ್ಕೊಂದು ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಜೈದೇವ್‌ ) ಹೊಸ ಮಾಸ್ಟರ್‌ ಪ್ಯಾನ್‌ ಮಾಡ್ತಿದ್ದಾನೆ.ಅತ್ತ ಭೂಮಿಕಾ ಬರ್ತ್‌ಡೇಯನ್ನ ವಠಾರದ ಜನ ಸೇರಿಕೊಂಡು ಮಾಡ್ತಿದ್ದಾರೆ. ಇದೀಗ ಜಯದೇವ್‌, ಅಜ್ಜಿ ಆಸ್ತಿಯ ಮೇಲೆ ಕಣ್ಣಿಟ್ಟಿದ್ದಾನೆ. ಅಜ್ಜಿ ಹೇಳಿದರೆ ಗೌತಮ್-ಭೂಮಿಕಾ ಮಾತು ಕೇಳಬೇಕು ಎನ್ನೋದು ಎಲ್ಲರಿಗೂ ಗೊತ್ತಿದೆ. ಡುಬ್ಲಿಕೇಟ್‌ ಅಜ್ಜಿ ಮನೆಗೆ ಬರ್ತಾರಾ?

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (amruthadhaare serial ) ದಿನಕ್ಕೊಂದು ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಜೈದೇವ್‌ (Jaidev) ಹೊಸ ಮಾಸ್ಟರ್‌ ಪ್ಯಾನ್‌ ಮಾಡ್ತಿದ್ದಾನೆ.ಅತ್ತ ಭೂಮಿಕಾ (Bhoomika Birthday) ಬರ್ತ್‌ಡೇಯನ್ನ ವಠಾರದ ಜನ ಸೇರಿಕೊಂಡು ಮಾಡ್ತಿದ್ದಾರೆ. ಇದೀಗ ಜಯದೇವ್‌, ಅಜ್ಜಿ ಆಸ್ತಿಯ ಮೇಲೆ ಕಣ್ಣಿಟ್ಟಿದ್ದಾನೆ. ಅಜ್ಜಿ ಹೇಳಿದರೆ ಗೌತಮ್-ಭೂಮಿಕಾ (Goutham Bhoomika) ಮಾತು ಕೇಳಬೇಕು ಎನ್ನೋದು ಎಲ್ಲರಿಗೂ ಗೊತ್ತಿದೆ. ಡುಬ್ಲಿಕೇಟ್‌ ಅಜ್ಜಿ ಮನೆಗೆ ಬರ್ತಾರಾ?

ಭಾಗ್ಯಮ್ಮ ಹರಸಾಹಸ

ಭಾಗ್ಯಮ್ಮಳಿಗೆ ಈಗ ಮಗ ಸೊಸೆ ದೂರ ಆಗಿರೋ ವಿಚಾರ ಗೊತ್ತಾಗಿದೆ. ಭಾಗ್ಯಮ್ಮ ಇವರಿಬ್ಬರ ಸಂಸಾರ ಸರಿ ಮಾಡಬೇಕೆಂಬ ಪಣ ತೊಟ್ಟಿದ್ದಾಳೆ. ಏಕಾಏಕಿ ಮಾಯವಾಗಿದ್ದ ಅಜ್ಜಿ ಎಂಟ್ರಿ ಕೊಟ್ಟಿದ್ದಾರೆ. ಶಕುನಿ ಮಾವ ಈ ವಿಚಾರವನ್ನ ಆನಂದ್‌ಗೆ ತಿಳಿಸಿದ್ದಾನೆ. ಭಾಗ್ಯಮ್ಮ ಈ ಸುದ್ದಿ ಕೇಳಿ ಖುಷಿ ಆಗಿದ್ದಾಳೆ.ಅತ್ತೆ ಬಂದಿದ್ದಾರೆ ಅಂದ್ರೆ ನಮಗೆಲ್ಲ ನೂರು ಆನೆ ಬಲ ಬಂದಗಾಯ್ತು ಎಂದಿದ್ದಾಳೆ ಭಾಗ್ಯ.

ಇದನ್ನೂ ಓದಿ: Kannada Serial TRP: ಟಿಆರ್​ಪಿಯಲ್ಲಿ ಝೀ ಕನ್ನಡ ಧಾರಾವಾಹಿಯದ್ದೇ ಹವಾ: ನಂಬರ್ 1 ಧಾರಾವಾಹಿ ಇದೇ ನೋಡಿ

ಜೀ ಕನ್ನಡ ವಾಹಿನಿ ಪ್ರೋಮೋ



ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌

ಇನ್ನೊಂದು ಕಡೆ ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌ ಮಾಡ್ತಿದ್ದಾನೆ. ಅಜ್ಜಿ ಥರ ಇರೋ ಇನ್ನೊಂದು ಫೇಕ್‌ ಅಜ್ಜಿಯನ್ನ ತರ್ತಿನಿ ಅಂತ ಲಾಯರ್‌ ಬಳಿ ಹೇಳಿದ್ದಾನೆ. ಪೇಪರ್‌ ವ್ಯವಸ್ಥೆ ನೀವು ಮಾಡಿ, ಫೇಕ್‌ ಅಜ್ಜಿ ನಾನು ತರ್ತೀನಿ ಅಂತ ಹೇಳಿದ್ದಾನೆ.

ಆಸ್ತಿಗಳನ್ನು ಬ್ಯಾಂಕ್‌ನವರು ಮುಟ್ಟುಗೋಲು ಹಾಕಿದ್ದಾರೆ. ಇದರಿಂದ ಜಯದೇವ್‌ ಏನೂ ಮಾಡಲು ಆಗುತ್ತಿಲ್ಲ. ಅತ್ತ ಗೌತಮ್-ಭೂಮಿಕಾರನ್ನು ಮನೆಗೆ ಕರೆಸಿ ಆಸ್ತಿ ಸಮಸ್ಯೆ ಬಗೆಹರಿಸೋಣ ಎಂದುಕೊಂಡರೆ ಅದು ಆಗುತ್ತಿಲ್ಲ. ಹೀಗಾಗಿ ಅವನು ಅಜ್ಜಿ ಆಸ್ತಿ ಮೇಲೆ ಕಣ್ಣು ಹಾಕಿದ್ದಾನೆ.

ಭೂಮಿಕಾ ಜನ್ಮದಿನ

ವಠಾರದವರು ಸೇರಿಕೊಂಡು ಭೂಮಿಕಾರ ಜನ್ಮದಿನವನ್ನು ಆಚರಣೆ ಮಾಡಿದ್ದಾರೆ. ಭೂಮಿಕಾ ಕೇಕ್‌ ಕಟ್‌ ಮಾಡಿದ್ದು, ಗೌತಮ್‌ ಕೇಕ್‌ ತಿನಿಸಿದ್ದಾನೆ. ಇದೀಗ ಮನೆಗೆ ಎಂಟ್ರಿ ಕೊಟ್ಟಿದ್ದು ನಿಜವಾದ ಅಜ್ಜಿನಾ? ಅಥವಾ ಫೇಕಾ ಎನ್ನೋದೇ ವೀಕ್ಷಕರಲ್ಲಿ ಇರೋ ಕುತೂಹಲ.

ಇದನ್ನೂ ಓದಿ: Amruthadhare Serial: ಗೌತಮ್ - ಭೂಮಿ ಒಂದು ಮಾಡೋಕೆ ಮಿಂಚು - ಆಕಾಶ್ ಒಂದಾದ್ರು! ಇನ್ನು ಬರೀ ಒಲವ ಅಮೃತಧಾರೆ

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author