ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ (Amruthadhare) ಧಾರಾವಾಹಿಯಲ್ಲಿ ಐದು ವರ್ಷಗಳ ನಂತರದ ಕಥೆ ಶುರುವಾಗಿದ್ದು, ಒಂದೊಂದು ಎಪಿಸೋಡ್ ರೋಚಕತೆ ಸೃಷ್ಟಿಸುತ್ತಿದೆ. ಕ್ಯಾಬ್ ಡ್ರೈವರ್ ಆಗಿ ಸಾಮಾನ್ಯ ಜೀವನ ನಡೆಸುತ್ತಿರುವ ಗೌತಮ್ ಹಾಗೂ ಭೂಮಿಕಾ ಭೇಟಿ ಯಾವಾಗ ಆಗುತ್ತೊ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಈ ಘಳಿಗೆ ಇದೀಗ ಕೂಡಿ ಬಂದಿದೆ. ಅಟೋದಲ್ಲಿ ಗೌತಮ್ ಭೂಮಿಯನ್ನು ನೋಡಿದ್ದಾನೆ. ಮರುದಿನ ಭೂಮಿಯನ್ನು ಹುಡುಕಿ ಆಕೆಗೆ ರೆಡ್ ರೋಸ್ ಕಳುಹಿಸಿದ್ದಾನೆ. ಸದ್ಯ ಪುನಃ ಸಿಕ್ಕಿದ ಗೌತಮ್ ಅನ್ನು ಭೂಮಿಕಾ ಒಪ್ಪಿಕೊಳ್ಳುತ್ತಾಳ ಎಂಬುದು ರೋಚಕತೆ ಸೃಷ್ಟಿಸಿದೆ.
ಐದು ವರ್ಷಗಳಿಂದ ಕ್ಯಾಬ್ ಡ್ರೈವರ್ ಕೆಲಸ ಮಾಡುತ್ತಿರುವ ಗೌತಮ್ ತನ್ನ ಹೆಂಡತಿ ಭೂಮಿಕಾಳನ್ನು ಹುಡುಕುತ್ತ ಅಲೆದೂ ಅಲೆದೂ ಸುಸ್ತಾಗಿರುತ್ತಾನೆ. ಐದು ವರ್ಷ ಕಳೆದರೂ ಆತನಿಗೆ ಭೂಮಿಕಾ ಮತ್ತು ಮಗ ಸಿಕ್ಕಿರುವುದಿಲ್ಲ. ಅದರ ನಡುವೆಯೇ ಡ್ರೈವರ್ ಕೆಲಸದ ನಿಮಿತ್ತ ಗೌತಮ್ ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಹೋಗಬೇಕಾಗಿ ಬಂದಿದೆ. ವಿಶೇಷ ಎಂದರೆ ಕುಶಾಲನಗರದಲ್ಲಿಯೇ ಭೂಮಿಕಾ ತನ್ನ ಮಗನ ಜೊತೆ ವಾಸ ಮಾಡುತ್ತ ಇರುತ್ತಾಳೆ.
ಗೌತಮ್ ಕುಶಾಲನಗರಕ್ಕೆ ಬಂದು ಕೆಲ ದಿನಗಳಾಗಿವೆ. ಈ ಸಂದರ್ಭ ಹಲವು ಬಾರಿ ಗೌತಮ್ ಕಣ್ಣೆದುರೇ ಭೂಮಿಕಾ ಇದ್ದರೂ ಕೂಡ ಇಬ್ಬರ ಭೇಟಿಯಾಗಿಲ್ಲ. ಇನ್ನೂ ತನ್ನ ಮಗು ಜೊತೆ ಗೌತಮ್ ಕೆಲಸ ಸಮಯ ಕಳೆದಿದ್ದು ತನಗೆ ಸಿಗುತ್ತಿರುವ ಹುಡುಗ ಅಪ್ಪುನೇ ತನ್ನ ಮಗ ಆಕಾಶ್ ಎನ್ನುವ ವಿಚಾರ ಗೌತಮ್‌ಗೆ ಇನ್ನೂ ಗೊತ್ತಾಗಿಲ್ಲ. ಇದರ ಮಧ್ಯೆ ಈಗ ಗೌತಮ್-ಭೂಮಿಕಾ ಭೇಟಿಗೆ ಮುಹೂರ್ತ ಕೂಡಿಬಂದಿದೆ.
ಭೂಮಿಕಾಳನ್ನು ಹುಡುಕುತ್ತಾ ಹುಡುಕುತ್ತಾ ಆನಂದ್ ಜೊತೆ ಗೌತಮ್ ಭೂಮಿಕಾ ಕೆಲಸ ಮಾಡುತ್ತಿರುವ ಶಾಲೆಯ ಬಳಿ ಬಂದಿದ್ದಾನೆ. ಇದೇ ಸಮಯದಲ್ಲಿ ಭೂಮಿಕಾ ಕೈಯಲ್ಲಿದ್ದ ಪೇಪರ್‌ಗಳೆಲ್ಲ ಕೆಳಗೆ ಬಿದ್ದಿದ್ದು ಮಕ್ಕಳು ಎತ್ತಿ ನೀಡಿದ್ದಾರೆ. ಬಳಿಕ ಭೂಮಿಕಾ ಆಟೋ ಹತ್ತಿ ಹೋಗುತ್ತಿರುವಾಗ ಭೂಮಿಕಾಳನ್ನು ನೋಡುತ್ತಾನೆ.
ಈ ಮೂಲಕ ಭೂಮಿಕಾ ಕೆಲಸ ಮಾಡುತ್ತಿರುವ ಸ್ಕೂಲ್ ಗೌತಮ್‌ಗೆ ಗೊತ್ತಾಗಿದೆ. ಇದೇ ಖುಷಿಯಲ್ಲಿ ಮರುದಿನ ವಿದ್ಯಾರ್ಥಿನಿ ಬಳಿ ಗೌತಮ್ ಹೂ ಜೊತೆಯಲ್ಲಿ ಪತ್ರವನ್ನು ಭೂಮಿಕಾಗೆ ತಲುಪಿಸಿದ್ದಾನೆ. ಪತ್ರವನ್ನು ಭೂಮಿಕಾ ಓದಲು ತೆರೆದಿದ್ದು, ನಿಮಗೆ ಹೂ ಕೊಡೋ ಧೈರ್ಯ ಯಾರಿಗಿದೆ? ನಾನು, ನಿಮ್ಮ ಗೌತಮ್ ಎಂದು ಪತ್ರದಲ್ಲಿ ಬರೆದಿದ್ದಾನೆ. ಪತ್ರದಲ್ಲಿ ಬರೆದ ಸಾಲನ್ನು ಓದಿ ಭೂಮಿಕಾ ಕೂಡ ಖುಷಿಯಾಗಿದ್ದಾಳೆ. ಅಲ್ಲದೆ ಒಂದಾಗಿ ಜೀವನ ಮಾಡೋಕೆ ಸಾವಿರ ಕಾರಣಗಳು ಇದ್ದವಲ್ಲ ಎಂದು ಭೂಮಿಕಾಗೆ ಗೌತಮ್ ಹೇಳುತ್ತಾನೆ. ಇದಕ್ಕೆ ಭೂಮಿಕಾ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.
ಮತ್ತೊಂದೆಡೆ ಜಯದೇವ್ ಕಂಪನಿಯಲ್ಲಿ 600 ಕೋಟಿ ರೂಪಾಯಿ ಸಾಲದ ವಿಚಾರ ಬೆಳಕಿಗೆ ಬಂದಿದೆ. ಈ ಹಣವನ್ನು ಜಯದೇವ್ ದುರ್ಬಳಕೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಬ್ಯಾಂಕ್ನವರು ಹಣ ಹಿಂದಿರುಗಿಸುವಂತೆ ಕೋರಿದ್ದಾರೆ. ಇದಕ್ಕಾಗಿ ಜಯದೇವ್ ಸದ್ಯ ಗೌತಮ್ ಹುಡುಕಾಟದಲ್ಲಿ ಇದ್ದಾನೆ.
Bhagya Lakshmi Serial: ಇಂಟರ್ವ್ಯೂ ಪಾಸ್ ಆಗಿ ಎಂಡಿ ಆದ ಭಾಗ್ಯ: ಆದೀಗೆ ಖುಷಿಯೋ ಖುಷಿ