ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amruthadhare Serial: ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದ ಅಮೃತಧಾರೆ: ವರ್ಕ್ ಆಗಿಲ್ಲ ಟ್ವಿಸ್ಟ್

ಅಟೋದಲ್ಲಿ ಗೌತಮ್ ಭೂಮಿಯನ್ನು ನೋಡುತ್ತಾನೆ. ಮರುದಿನ ಭೂಮಿಯನ್ನು ಹುಡುಕಿ ಆಕೆಗೆ ರೆಡ್ ರೋಸ್ ಕಳುಹಿಸಿದ್ದಾನೆ. ಆದರೆ, ಖುಷಿಯಲ್ಲಿ ಭೂಮಿಕಾ ಗೌತಮ್ ಬಳಿ ಓಡಿ ಬರುತ್ತಾಳೆ.. ಒಟ್ಟಾಗಿ ಇರುತ್ತಾಳೆ ಎಂದು ಅಂದುಕೊಂಡಿದ್ದ ವೀಕ್ಷಕರಿಗೆ ಬೇಸರ ಮೂಡಿದೆ.

Amruthadhare Serial

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ (Amruthadhare) ಧಾರಾವಾಹಿಯಲ್ಲಿ ಐದು ವರ್ಷಗಳ ನಂತರದ ಕಥೆ ಶುರುವಾಗಿತ್ತು. ಇಲ್ಲಿ ಕ್ಯಾಬ್ ಡ್ರೈವರ್ ಆಗಿ ಸಾಮಾನ್ಯ ಜೀವನ ನಡೆಸುತ್ತಿರುವ ಗೌತಮ್ ಹಾಗೂ ಭೂಮಿಕಾ ಭೇಟಿ ಯಾವಾಗ ಆಗುತ್ತೊ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಈ ಘಳಿಗೆ ಕೂಡ ಕೂಡಿ ಬಂತು. ಅಟೋದಲ್ಲಿ ಗೌತಮ್ ಭೂಮಿಯನ್ನು ನೋಡುತ್ತಾನೆ. ಮರುದಿನ ಭೂಮಿಯನ್ನು ಹುಡುಕಿ ಆಕೆಗೆ ರೆಡ್ ರೋಸ್ ಕಳುಹಿಸಿದ್ದಾನೆ. ಆದರೆ, ಖುಷಿಯಲ್ಲಿ ಭೂಮಿಕಾ ಗೌತಮ್ ಬಳಿ ಓಡಿ ಬರುತ್ತಾಳೆ.. ಒಟ್ಟಾಗಿ ಇರುತ್ತಾಳೆ ಎಂದು ಅಂದುಕೊಂಡಿದ್ದ ವೀಕ್ಷಕರಿಗೆ ಬೇಸರ ಮೂಡಿದೆ.

ಗೌತಮ್ ಕ್ಯಾಬ್ ಡ್ರೈವರ್ ಕೆಲಸದ ನಿಮಿತ್ತ ಕುಶಾಲನಗರಕ್ಕೆ ಬಂದು ಕೆಲ ದಿನಗಳಾಗಿವೆ. ಈ ಸಂದರ್ಭ ಹಲವು ಬಾರಿ ಗೌತಮ್ ಕಣ್ಣೆದುರೇ ಭೂಮಿಕಾ ಇದ್ದರೂ ಕೂಡ ಇಬ್ಬರ ಭೇಟಿಯಾಗಿಲ್ಲ. ಇನ್ನೂ ತನ್ನ ಮಗು ಜೊತೆ ಗೌತಮ್ ಕೆಲಸ ಸಮಯ ಕಳೆದಿದ್ದು ತನಗೆ ಸಿಗುತ್ತಿರುವ ಹುಡುಗ ಅಪ್ಪುನೇ ತನ್ನ ಮಗ ಆಕಾಶ್ ಎನ್ನುವ ವಿಚಾರ ಗೌತಮ್‌ಗೆ ಇನ್ನೂ ಗೊತ್ತಾಗಿಲ್ಲ. ಬಳಿಕ ಕಳೆದ ಎಪಿಸೋಡ್​ನಲ್ಲಿ ಗೌತಮ್-ಭೂಮಿಕಾ ಭೇಟಿಗೆ ಮುಹೂರ್ತ ಕೂಡಿಬಂದಿತ್ತು.

ಭೂಮಿಕಾ ಕೆಲಸ ಮಾಡುತ್ತಿರುವ ಶಾಲೆಯ ಬಳಿ ಗೌತಮ್ ಆಕೆಯನ್ನು ನೋಡಿದ್ದಾನೆ. ಈ ಮೂಲಕ ಭೂಮಿಕಾ ಕೆಲಸ ಮಾಡುತ್ತಿರುವ ಸ್ಕೂಲ್ ಗೌತಮ್‌ಗೆ ಗೊತ್ತಾಗಿದೆ. ಇದೇ ಖುಷಿಯಲ್ಲಿ ಮರುದಿನ ವಿದ್ಯಾರ್ಥಿನಿ ಬಳಿ ಗೌತಮ್ ಹೂ ಜೊತೆಯಲ್ಲಿ ಪತ್ರವನ್ನು ಭೂಮಿಕಾಗೆ ತಲುಪಿಸಿದ್ದಾನೆ. ನನ್ನ ಯಾಕೆ ಬಿಟ್ಟು ಹೋದ್ರಿ? ನನ್ನನ್ನು ಒಬ್ಬಂಟಿ ಮಾಡಿದ್ರಿ. ಇಷ್ಟು ವರ್ಷಗಳಿಂದ ನಾನು ನಿಮಗೋಸ್ಕರ ಅಲೆದಾಡಿದ್ದೀನಿ. ನಿಮ್ಮನ್ನು ಹುಡುಕಿಕೊಂಡು ಊರೂರು ತಿರುಗಿದ್ದೀನಿ. ನನ್ನ ಪ್ರೀತಿಗೆ ನಿಮಗೆ ಕಾಣಿಸಲೇ ಇಲ್ವಾ? ನಾನು ನಿಮ್ಮನ್ನು ಪ್ರೀತಿಸಿದ್ದೇ ತಪ್ಪಾಯ್ತಾ? ಎಂದು ಗೌತಮ್‌, ಭೂಮಿಗೆ ಕೇಳಿದ್ದಾನೆ.



ಆದರೆ, ಇದಕ್ಕೆ ಭೂಮಿಕಾ, ನನಗೆ ಮಗಳು ಹುಟ್ಟಿರೋ ವಿಷಯ ನೀವು ಹೇಳಲೇ ಇಲ್ಲ. ಮಗಳು ಕಿಡ್ನ್ಯಾಪ್‌ ಆಗಿರೋ ವಿಷಯವನ್ನು ನೀವು ಹೇಳಿ ಸಮಾಧಾನ ಮಾಡಬಹುದಿತ್ತು. ನಿಮ್ಮ ವಿಷಯದಲ್ಲಿ ನನ್ನ ಮನಸ್ಸು ಮುರಿದು ಹೋಗಿದೆ. ಈಗ ಉಳಿದಿರೋದು ದ್ವೇಷ ಮಾತ್ರ. ನಿಮ್ಮನ್ನು ಬಿಟ್ಟು ನಾನು ತುಂಬ ಮುಂದೆ ಬಂದಿದ್ದೀನಿ. ನಮ್ಮಿಂದ ದೂರ ಹೋಗಿ, ಮತ್ತೆ ಭೇಟಿ ಮಾಡುವ ಪ್ರಯತ್ನ ಮಾಡಬೇಡಿ ಎಂದು ಹೇಳಿದ್ದಾಳೆ.

ಭೂಮಿಕಾ ಮಾತು ಕೇಳಿ ಇನ್ನೂ ನೊಂದುಕೊಳ್ಳುವ ಗೌತಮ್ ಮನಸಿನಲ್ಲಿ ಯಾಕೆ ಇಷ್ಟು ಕಹಿ ತುಂಬಿಕೊಂಡಿದ್ದೀರಾ ಭೂಮಿಕಾ ನಾನು ನಿಮಗೆ ದ್ರೋಹ ಮಾಡಿಲ್ಲ ಎಂದು ಹೇಳುತ್ತಾನೆ. ಆದರೂ ಕೂಡ ಕೇಳಲು ಒಪ್ಪದ ಭೂಮಿಕಾ ಕಣ್ಣೀರು ಹಾಕುತ್ತಲೇ ಹೌದು ಕಹಿ ತುಂಬಿಕೊಂಡಿದ್ದೀನಿ ನಿಮ್ಮ ವಿಷಯದಲ್ಲಿ ನನ್ನ ಮನಸ್ಸು ಮುರಿದು ಹೋಗಿದೆ ಎಂದಿದ್ದಾಳೆ.



ಸದ್ಯ ಅಮೃತ ಘಳಿಗೆಯ ಈ ಎಪಿಸೋಡ್‌ ಕಂಡು ನಿರಾಸೆಗೊಂಡಿರುವ ಅನೇಕ ಪ್ರೇಕ್ಷಕರು, ಹಿಡಿಶಾಪ ಹಾಕುತ್ತಿದ್ದಾರೆ. ಇದ್ಯಾಕೋ ಅತಿಯಾಯ್ತು. ಭೂಮಿಕಾ ಇಷ್ಟೊಂದು ಹಠ ಮಾಡಬಾರದಿತ್ತು. ಇಬ್ಬರು ಒಂದಾಗಬೇಕಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಗೌತಮ್, ಛೇ ನಾನು ಭೂಮಿನ ನೋಡಿದೆ.. ಆದ್ರೆ ನನ್ನ ಮಗನನ್ನು ನೋಡಲು ಆಗಿಲ್ವಲ್ಲ ಎಂದು ಬೇಸರ ಗೊಂಡಿದ್ದಾನೆ. ಆಗ ಆನಂದ್, ಅವಳ ಮನೆ ಗೊತ್ತು ಅಲ್ವಾ ಯಾರಿಗೂ ಗೊತ್ತಾಗದಂತೆ ಹೋಗಿ ನೋಡಿಕೊಂಡು ಬರೋಣ ಎಂದು ಹೋಗಿದ್ದಾರೆ. ಸದ್ಯ ಇಲ್ಲಿ ಏನಾಗುತ್ತದೆ ಎಂಬುದು ನೋಡಬೇಕಿದೆ.

Mavatar Narasimha OTT: ಒಟಿಟಿಗೆ ಬಂತು ಬಾಕ್ಸ್ ಆಫೀಸ್​ನಲ್ಲಿ ದಾಖಲೆ ನಿರ್ಮಿಸಿದ ಮಹಾವತಾರ ನರಸಿಂಹ: ಎಲ್ಲಿ ವೀಕ್ಷಿಸಬಹುದು?