ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BB 19: ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಕಾಲಿಡಲಿದ್ದಾರೆ ಟ್ರಾನ್ಸ್​ಜೆಂಡರ್: ಯಾರು ನೋಡಿ

ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ ಸ್ಪರ್ಧಿಯಾಗಿ ಬಿಗ್ ಬಾಸ್ಗೆ ಪ್ರವೇಶಿಸಲಿದ್ದಾರೆ ಎಂದು ವರದಿಯಾಗಿದೆ. ಅನಯಾ ಬಂಗಾರ್ ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಕ್ರೀಡಾಪಟು ಎಂದು ಗುರುತಿಸಲ್ಪಟ್ಟಿದ್ದಾರೆ. ಹುಡುಗನಾಗಿದ್ದ ಆರ್ಯನ್ (ಮೊದಲ ಹೆಸರು) ಲಿಂಗ ಪರಿವರ್ತನೆ ಮಾಡಿಕೊಂಡು ಅನಯಾಳಾಗಿ ಸುದ್ದಿಯಾಗಿದ್ದರು.

Anaya-Bangar bigg boss

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 19 ಕ್ಕಾಗಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ತಿಂಗಳು ಆಗಸ್ಟ್ 24 ರಂದು ಸಲ್ಮಾನ್ ಖಾನ್ (Salman Khan) ಕಾರ್ಯಕ್ರಮದ ಗ್ರ್ಯಾಂಡ್ ಪ್ರೀಮಿಯರ್ ಅನ್ನು ಆಯೋಜಿಸಲಿದ್ದಾರೆ. ಕಾರ್ಯಕ್ರಮದ ಟ್ರೇಲರ್ ಕೂಡ ಬಿಡುಗಡೆ ಆಗಿದ್ದು ಈ ಬಾರಿ ರಾಜಕೀಯದ ಗರ್​​​​​​ವಾಲೋನ್​​​ ಕಿ ಸರ್ಕಾರ್​​​ ಥೀಮ್ ನೊಂದಿಗೆ ಶೋ ಪ್ರಸಾರ ಕಾಣಲಿದೆ. ಕಾರ್ಯಕ್ರಮ ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ, ಇದರ ಸ್ಪರ್ಧಿಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕಳೆದ ಕೆಲವು ದಿನಗಳಲ್ಲಿ, ದಿವ್ಯಾಂಕ ತ್ರಿಪಾಠಿ, ರೀಮ್ ಶೇಖ್ ಮತ್ತು ರ‍್ಯಾಪರ್ ರಫ್ತಾರ್, ಮಲ್ಲಿಕಾ ಶೆರಾವತ್ ಹೆಸರುಗಳು ಬಂದವು. ಈಗಈ ಲಿಸ್ಟ್​ಗೆ ಹೊಸ ಹೆಸರು ಸೇರಿದೆ.

ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ ಸ್ಪರ್ಧಿಯಾಗಿ ಬಿಗ್ ಬಾಸ್​ಗೆ ಪ್ರವೇಶಿಸಲಿದ್ದಾರೆ ಎಂದು ವರದಿಯಾಗಿದೆ. ಅನಯಾ ಬಂಗಾರ್ ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಕ್ರೀಡಾಪಟು ಎಂದು ಗುರುತಿಸಲ್ಪಟ್ಟಿದ್ದಾರೆ. ಹುಡುಗನಾಗಿದ್ದ ಆರ್ಯನ್ (ಮೊದಲ ಹೆಸರು) ಲಿಂಗ ಪರಿವರ್ತನೆ ಮಾಡಿಕೊಂಡು ಅನಯಾಳಾಗಿ ಸುದ್ದಿಯಾಗಿದ್ದರು. ಟ್ರಾನ್ಸ್​​ಜೆಂಡರ್​​ ಆಗಿ ಬದಲಾದ ಬಳಿಕ ಕ್ರಿಕೆಟ್​​ನಿಂದ ದೂರವಾಗಿದ್ದ ಅನಯಾ ಇತ್ತೀಚೆಗೆ ತಾನು ಮಹಿಳಾ ಕ್ರಿಕೆಟ್‌ ಆಡಲು ಅರ್ಹಳು ಎಂದು ಹೇಳಿದ್ದರು.

ಅನಯಾ ಬಂಗಾರ್ ಕೇವಲ ಕ್ರಿಕೆಟ್ ಆಟಗಾರ್ತಿ ಮಾತ್ರವಲ್ಲ, ನರ್ತಕಿಯೂ ಹೌದು. ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೃತ್ಯ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಕಲಾತ್ಮಕ ಕೌಶಲ್ಯವನ್ನು ಪ್ರದರ್ಶಿಸುತ್ತಿರುತ್ತಾರೆ. ಅನಯಾ ಬಂಗಾರ್ ಬಿಗ್ ಬಾಸ್ ಶೋಗೆ ಪ್ರವೇಶಿಸುವುದು ಖಚಿತವಾದರೆ, ಅವರು ತಮ್ಮ ವೈಯಕ್ತಿಕ ಜೀವನ, ಟ್ರಾನ್ಸ್ಜೆಂಡರ್ ಪ್ರಯಾಣ ಮತ್ತು ಕ್ರಿಕೆಟ್ ಜಗತ್ತಿನಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡುವ ಸಾಧ್ಯತೆಯಿದೆ. ಇದು ಭಾರತದಲ್ಲಿ ಟ್ರಾನ್ಸ್ಜೆಂಡರ್ ಸಮುದಾಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರ ಹಕ್ಕುಗಳನ್ನು ಚರ್ಚಿಸಲು ಒಂದು ವೇದಿಕೆಯಾಗಲಿದೆ.

ಇನ್ನು ಈ ಬಾರಿ ಯೂಟ್ಯೂಬರ್ ಪೂರವ್ ಝಾ ಮತ್ತು ಪಾಯಲ್ ಗೇಮಿಂಗ್ ಎಂದೇ ಪ್ರಸಿದ್ಧರಾದ ಗೇಮರ್ ಪಾಯಲ್ ಧರೆ ಖಚಿತ ಸ್ಪರ್ಧಿಗಳಾಗಿದ್ದಾರೆ ಎಂದು ವರದಿಯಾಗಿದೆ. ಈ ಬಾರಿ ಬಿಗ್ ಬಾಸ್ 19 ನಲ್ಲಿ ಒಟ್ಟು 19 ಸ್ಪರ್ಧಿಗಳು ಇರುತ್ತಾರೆ. ಅವರಲ್ಲಿ 16 ಜನರು ಗ್ರ್ಯಾಂಡ್ ಪ್ರೀಮಿಯರ್ ದಿನದಂದು ಮನೆಗೆ ಪ್ರವೇಶಿಸಿದರೆ, 3 ಜನರು ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿರುತ್ತಾರೆ.

BBM 7: ಬಿಗ್ ಬಾಸ್ ಮಲಯಾಳಂನಲ್ಲಿ ಬಿಗ್ ಟ್ವಿಸ್ಟ್: ಹಿಂದೆಂದೂ ಕಂಡು ಕೇಳರಿಯದ ಟಾಸ್ಕ್

ಕಾರ್ಯಕ್ರಮದ ಥೀಮ್ ಪ್ರಕಾರ, ಸಲ್ಮಾನ್ ಮೊದಲ ದಿನವೇ ಎರಡು ಪಕ್ಷಗಳ ಸ್ಪರ್ಧಿಗಳನ್ನು ರಚಿಸುತ್ತಾರೆ, ಅವರು ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಮತ ಎಣಿಕೆಯ ಆಧಾರದ ಮೇಲೆ ವಿಜೇತರು ಮನೆಯ ನಾಯಕ ಆಗಿರುತ್ತಾರೆ ಮತ್ತು ತಮ್ಮದೇ ಆದ ಸರ್ಕಾರವನ್ನು ರಚಿಸುತ್ತಾರೆ. ವಿರೋಧ ಪಕ್ಷವು ಕಾಲಕಾಲಕ್ಕೆ ರಹಸ್ಯ ಕಾರ್ಯಗಳನ್ನು ನೀಡುವ ಮೂಲಕ ಸರ್ಕಾರವನ್ನು ಉರುಳಿಸಲು ಅವಕಾಶವನ್ನು ಪಡೆಯುತ್ತದೆ.