ಅನುಶ್ರೀ (Anushree) ಅವರು ನಟಿಗಿಂತ ಹೆಚ್ಚು ನಿರೂಪಕಿಯಾಗಿ ಹೆಸರು ಮಾಡಿದವರು. ಕನ್ನಡದ ಬಹುತೇಕ ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿ ಅವರು ಖ್ಯಾತಿ ಗಳಿಸಿದ್ದಾರೆ. ಕನ್ನಡದ ನಂಬರ್ ಒನ್ ನಿರೂಪಕಿ ಆಗಿರುವ ಅನುಶ್ರೀ ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದ್ದಾರೆ. ಅವರಿಗೆ ಕೊನೆಗೂ ಕಂಕಣಭಾಗ್ಯ ಕೂಡಿಬಂದಿದೆ. ಇದೇ ಆಗಸ್ಟ್ ತಿಂಗಳಲ್ಲಿ ಅನುಶ್ರೀ ಅವರ ವಿವಾಹ ಅವರ ಕುಟುಂಬದವರೇ ನೋಡಿ ಫಿಕ್ಸ್ ಮಾಡಿದ ಯುವ ಉದ್ಯಮಿ ಜೊತೆಗೆ ನಡೆಯಲಿದೆ. ಬೆಂಗಳೂರು ಮೂಲದ ಉದ್ಯಮಿ ರೋಷನ್ ಜೊತೆ ಅನುಶ್ರೀ ಮದುವೆ ಫಿಕ್ಸ್ ಆಗಿದ್ದು, ಆಗಸ್ಟ್ 28ಕ್ಕೆ ವಿವಾಹ ನಡೆಯಲಿದೆ ಎಂದು ಹೇಳಲಾಗಿದೆ.
ಹೀಗಿರುವಾಗ ಅನುಶ್ರೀ ಝೀ ಕನ್ನಡದಲ್ಲಿ ಪ್ರಸಾರವಾಗುವ ಮಹಾಟನಿ ವೇದಿಕೆ ಮೇಲೆ ತಮ್ಮ ಭಾವಿ ಪತಿಗೆ ಪ್ರಪೋಸ್ ಮಾಡಿ ನಾಚಿ ನೀರಾಗಿದ್ದಾರೆ. ವೇದಿಕೆ ಮೇಲೆ ಭಾವಿ ಪತಿಗೆ LOVE YOU ಹೇಳಿದ್ದಾರೆ. ಮಹಾನಟಿ ವೇದಿಕೆ ಮೇಲೆ ವರ್ಷಾ ಚಂದ್ರಲೋಕದ ಸೆಟ್ ಹಾಕಿ ಭರ್ಜರಿಯಾಗಿ ಕುಣಿದಿದ್ದಾರೆ. ಇವರ ನೃತ್ಯಕ್ಕೆ ಜಡ್ಜ್ ಮನಸೋತಿದ್ದಾರೆ.
ಇದಾದ ಬಳಿಕ ಜಡ್ಜ್ ನಿಶ್ವಿಕಾ ನಾಯ್ಡು, ಅನು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬೇಕು ಅಂದ್ರೆ ಹೇಗೆ ಹೇಳ್ತೀರಾ ಎಂದು ಕೇಳಿದ್ದಾರೆ. ಆಗ ಅನುಶ್ರೀ, ನನ್ನ ಜೀವನದಲ್ಲಿ ಪೂರ್ಣಚಂದ್ರನಾಗಿ ನೀ ಬೇಗ ಬಾ I LOVE YOU ಎಂದು ಹೇಳುತ್ತಲೇ ನಾಚಿಕೊಂಡಿದ್ದಾರೆ. ಅನುಶ್ರೀ ಅವರು ತಮ್ಮ ಭಾವಿ ಪತಿಗೆ ವೇದಿಕೆ ಮೇಲೆ ಪ್ರಪೋಸ್ ಮಾಡಿದ್ದಾರೆ ಎಂದು ಎಲ್ಲರೂ ಫುಲ್ ಖುಷ್ ಆಗಿದ್ದಾರೆ.
ಅನುಶ್ರೀ ಅವರು ತಮ್ಮ ಫ್ಯಾಮಿಲಿ ನೋಡಿದ ಹುಡುಗನನ್ನೇ ಮದುವೆ ಆಗುತ್ತಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಗ್ರ್ಯಾಂಡ್ ಆಗಿ ನಿರೂಪಕಿ ಅನುಶ್ರೀ ವಿವಾಹ ನಡೆಯಲಿದೆ ಎಂಬ ಸುದ್ದಿಯಿದೆ. ಗಂಧದ ಗುಡಿ ಸಿನಿಮಾ ಇವೆಂಟ್ ನಲ್ಲಿ ಅನುಶ್ರೀ ಹಾಗೂ ರೋಷನ್ ಭೇಟಿಯಾಗದ್ದರಂತೆ. ಈ ಇವೆಂಟ್ ಪ್ಯಾಲೇಸ್ ಗ್ರೌಂಡ್ ನಲ್ಲಿ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅವರು ಆಯೋಜನೆ ಮಾಡಿದ್ದರು. ಅದೇ ಕಾರ್ಯಕ್ರಮದಲ್ಲಿ ಅನುಶ್ರೀ ನಿರೂಪಣೆಯನ್ನು ಮಾಡಿದ್ದರು. ರೋಷನ್ ಕೂಡ ಕಾರ್ಯಕ್ರಮ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದರು. ಆಗ ಇವರಿಬ್ಬರ ನಡುವೆ ಸ್ನೇಹ ಬೆಳೆದಿತ್ತು. ಅದೇ ಸ್ನೇಹ ಇದೀಗ ಮದುವೆಯವರೆಗೆ ಬಂದು ನಿಂತಿದೆ ಎಂಬ ಸುದ್ದಿಯಿದೆ.
Halli Power: ಪ್ಯಾಟೆ ಹುಡುಗಿಯರ ಹಳ್ಳಿ ಪವರ್: ಝೀ ಕನ್ನಡದ ಹೊಸ ಚಾನೆಲ್ನಲ್ಲಿ ಹೊಸ ರಿಯಾಲಿಟಿ ಶೋ