ಅನುಶ್ರೀ (Anushree) ಅವರು ನಟಿಗಿಂತ ಹೆಚ್ಚು ನಿರೂಪಕಿಯಾಗಿ ಹೆಸರು ಮಾಡಿದವರು. ಕನ್ನಡದ ಬಹುತೇಕ ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿ ಅವರು ಖ್ಯಾತಿ ಗಳಿಸಿದ್ದಾರೆ. ಕನ್ನಡದ ನಂಬರ್ ಒನ್ ನಿರೂಪಕಿ ಆಗಿರುವ ಅನುಶ್ರೀ ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದ್ದಾರೆ. ಅವರಿಗೆ ಕೊನೆಗೂ ಕಂಕಣಭಾಗ್ಯ ಕೂಡಿಬಂದಿದೆ. ಇದೇ ಆಗಸ್ಟ್ ತಿಂಗಳಲ್ಲಿ ಅನುಶ್ರೀ ಅವರ ವಿವಾಹ ಅವರ ಕುಟುಂಬದವರೇ ನೋಡಿ ಫಿಕ್ಸ್ ಮಾಡಿದ ಯುವ ಉದ್ಯಮಿ ಜೊತೆಗೆ ನಡೆಯಲಿದೆ. ಬೆಂಗಳೂರು ಮೂಲದ ಉದ್ಯಮಿ ರೋಷನ್ ಜೊತೆ ಅನುಶ್ರೀ ಮದುವೆ ಫಿಕ್ಸ್ ಆಗಿದ್ದು, ಆಗಸ್ಟ್ 28ಕ್ಕೆ ವಿವಾಹ ನಡೆಯಲಿದೆ.
ಈಗಾಗಲೇ ಆಪ್ತರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಅನುಶ್ರೀ ಮದುವೆಯ ಆಹ್ವಾನ ಪತ್ರಿಕೆ ತುಂಬಾ ಸರಳವಾಗಿದೆ. ಇದರಲ್ಲಿ ಅನುಶ್ರೀ ಬರೆದ ಸಾಲು ಕೂಡ ಇಂಟ್ರಸ್ಟಿಂಗ್ ಆಗಿದೆ. ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ ಎಂದು ಬರೆದಿದ್ದಾರೆ.
ಆ.28ಕ್ಕೆ ರೋಷನ್ ಜೊತೆ ನಿರೂಪಕಿ ಅನುಶ್ರೀ ಸಪ್ತಪದಿ ತುಳಿಯಲಿದ್ದಾರೆ. ಅಂದು ಬೆಳಗ್ಗೆ 10.56ಕ್ಕೆ ಮಾಂಗಲ್ಯ ಧಾರಣೆ ಆಗಲಿದೆ. ಬೆಂಗಳೂರಿನ ಹೊರವಲಯದ ರೆಸಾರ್ಟ್ನಲ್ಲಿ ಮದುವೆ ನಡೆಯಲಿದೆ. ಬೆಂಗಳೂರಿನ ಕಗ್ಗಲಿಪುರದ ತಿಟ್ಟಹಳ್ಳಿಯಲ್ಲಿ ಮದುವೆ ಆಗಲಿದೆ. ಇಲ್ಲಿ ಸಂಭ್ರಮ ಬೈ ಸ್ವಾಲೈನ್ಸ್ ಸ್ಟುಡಿಯೋ ಇದೆ. ಇಲ್ಲಿಯೇ ಅನುಶ್ರೀ ಹಾಗೂ ರೋಷನ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಚಿತ್ರರಂಗದಲ್ಲಿ ಅನುಶ್ರೀ ಅವರ ಸ್ನೇಹಿತರ ಬಳಗ ದೊಡ್ಡದು. ಅಲ್ಲದೇ, ರಾಜಕೀಯ ಕ್ಷೇತ್ರದವರ ಜೊತೆಗೂ ನಂಟು ಹೊಂದಿದ್ದಾರೆ. ಹಾಗಾಗಿ ಮದುವೆಗೆ ಅನೇಕ ಗಣ್ಯರು ಹಾಜರಿ ಹಾಕಲಿದ್ದಾರೆ. ಆದರೀಗ ಎಲ್ಲರಿಲ್ಲಿರುವ ಪ್ರಶ್ನೆ ಅನುಶ್ರೀ ಮದುವೆಗೆ ಸಾಮಾನ್ಯ ಜನರು, ಅವರ ಅಭಿಮಾನಿಗಳು ಬರಬಹುದಾ ಎಂಬುದು. ಸಾಮಾನ್ಯವಾಗಿ ಸೆಲೆಬ್ರಿಟಿ ಮದುವೆ ಎಂದರೆ ಅಲ್ಲಿ ವಿಐಪಿಗಳಿಗೆ ಮಾತ್ರ ಎಂಟ್ರಿ ಇರುತ್ತದೆ. ಇಲ್ಲೂ ಅದೇರೀತಿ ಇರಬಹುದು. ಆದರೆ, ಮದುವೆಯ ಬಳಿಕ ಒಂದು ದಿನ ಅನುಶ್ರೀ ಅವರು ತಮ್ಮ ಅಭಿಮಾನಿಗಳು ಊಟಕ್ಕೆ ಕರೆಯುವ ಸಾಧ್ಯತೆ ಇದೆ.
ಅನುಶ್ರೀ ಅವರ ಮದುವೆ ಯಾವಾಗ ಎಂಬ ಪ್ರಶ್ನೆ ಆಗಾಗ ಕೇಳಿಬರುತ್ತಿತ್ತು. ಅದಕ್ಕೆ ತಕ್ಕಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಹಲವು ಅಂತೆ-ಕಂತೆಗಳು ಹರಿದಾಡುತ್ತಿದ್ದವು. ಈ ಮೊದಲು ಕೂಡ ಅನುಶ್ರೀ ಮದುವೆ ಬಗ್ಗೆ ಕೆಲವು ಗಾಸಿಪ್ ಹಬ್ಬಿದ್ದವು. ಆದರೆ ಅವು ನಿಜವಾಗಲಿಲ್ಲ. ಈ ಬಾರಿ ಮದುವೆಯ ಸುದ್ದಿ ಖಚಿತವಾಗಿದೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
Shine Shetty: ಶೈನ್ ಶೆಟ್ಟಿ ದಿಢೀರ್ ಗಲ್ಲಿ ಕಿಚನ್ ಮಾರಿದ್ದೇಕೆ?: ಅವರೇ ಹೇಳಿದ್ದಾರೆ ನೋಡಿ
ಅಂದಹಾಗೆ ಗಂಧದ ಗುಡಿ ಸಿನಿಮಾ ಇವೆಂಟ್ ನಲ್ಲಿ ಅನುಶ್ರೀ ಹಾಗೂ ರೋಷನ್ ಭೇಟಿಯಾಗದ್ದರಂತೆ. ಈ ಇವೆಂಟ್ ಪ್ಯಾಲೇಸ್ ಗ್ರೌಂಡ್ ನಲ್ಲಿ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅವರು ಆಯೋಜನೆ ಮಾಡಿದ್ದರು. ಅದೇ ಕಾರ್ಯಕ್ರಮದಲ್ಲಿ ಅನುಶ್ರೀ ನಿರೂಪಣೆಯನ್ನು ಮಾಡಿದ್ದರು. ರೋಷನ್ ಕೂಡ ಕಾರ್ಯಕ್ರಮ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದರು. ಆಗ ಇವರಿಬ್ಬರ ನಡುವೆ ಸ್ನೇಹ ಬೆಳೆದಿತ್ತು. ಅದೇ ಸ್ನೇಹ ಇದೀಗ ಮದುವೆಯವರೆಗೆ ಬಂದು ನಿಂತಿದೆ.