ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಅಶ್ವಿನಿ ಗೌಡ ವಿರುದ್ಧ ರೊಚ್ಚಿಗೆದ್ದ ಸ್ಪರ್ಧಿಗಳು: ಸಿಕ್ಕಿತು ಡವ್ ರಾಣಿ ಪಟ್ಟ

ಸುದೀಪ್ ಅವರು ಸ್ಟೋರ್ ರೂಮ್ನಿಂದ ಹಲವು ಕಿರೀಟಗಳನ್ನು ತರಿಸಿದರು. ಇದರ ಜೊತೆಗೆ ಬೇಜಾವಾಬ್ದಾರಿ, ಡವ್‌ ರಾಣಿ, ಕುತಂತ್ರಿ ಸೇರಿದಂತೆ ಹಲವು ಸ್ಟಿಕ್ಕರ್ ಸಹ ನೀಡಲಾಗಿದೆ. ತಮ್ಮ ಆಯ್ಕೆಯ ಸ್ಟಿಕ್ಕರ್ ತೆಗೆದುಕೊಂಡು ಕಿರೀಟಕ್ಕೆ ಅಂಟಿಸಿ, ಅದನ್ನು ಸಹಸ್ಪರ್ಧಿಗೆ ನೀಡಬೇಕಾಗುತ್ತದೆ.

Ashwini Gowda Dove Raani

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಆರಂಭವಾಗಿ ಎರಡು ವಾರ ಕಳೆದಿವೆ. ಈ ಎರಡೂ ವಾರದಲ್ಲಿ ಅಶ್ವಿನಿ ಗೌಡ ಅವರು ಪ್ರತಿದಿನ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. ಮನೆಯಲ್ಲಿರುವ ಅನೇಕ ಸ್ಪರ್ಧಿಗಳಿಗೆ ಇವರು ಆಡುವ ಮಾತು, ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಆಕ್ಷೇಪವಿದೆ. ಆದರೆ, ನೇರವಾಗಿ ಯಾವ ಸ್ಪರ್ಧಿಗಳು ಕೂಡ ಇವರ ಬಳಿ ಅದನ್ನು ಹೇಳಿರಲಿಲ್ಲ. ಆದರೆ, ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್​ನಲ್ಲಿ ಸುದೀಪ್ ಕೊಟ್ಟ ಒಂದು ಚಟುವಟಿಕೆಯಲ್ಲಿ ಅಶ್ವಿನಿ ಅವರ ಮೇಲಿದ್ದ ಓಪಿನಿಯನ್ ಅನ್ನು ಸ್ಪರ್ಧಿಗಳು ಬ್ಲಾಸ್ಟ್ ಮಾಡಿದ್ದಾರೆ.

ಸುದೀಪ್ ಅವರು ಸ್ಟೋರ್ ರೂಮ್​ನಿಂದ ಹಲವು ಕಿರೀಟಗಳನ್ನು ತರಿಸಿದರು. ಇದರ ಜೊತೆಗೆ ಬೇಜಾವಾಬ್ದಾರಿ, ಡವ್‌ ರಾಣಿ, ಕುತಂತ್ರಿ ಸೇರಿದಂತೆ ಹಲವು ಸ್ಟಿಕ್ಕರ್ ಸಹ ನೀಡಲಾಗಿದೆ. ತಮ್ಮ ಆಯ್ಕೆಯ ಸ್ಟಿಕ್ಕರ್ ತೆಗೆದುಕೊಂಡು ಕಿರೀಟಕ್ಕೆ ಅಂಟಿಸಿ, ಅದನ್ನು ಸಹಸ್ಪರ್ಧಿಗೆ ನೀಡಬೇಕಾಗುತ್ತದೆ.

ಮೊದಲಿಗೆ ಕಿರೀಟದ ಮೇಲೆ ಡವ್ ರಾಣಿ ಸ್ಟಿಕ್ಕರ್ ಅಂಟಿಸಿ ಅಶ್ವಿನಿ ಗೌಡ ಅವರು ಕಾವ್ಯಾಗೆ ನೀಡಿದ್ದಾರೆ. ಟಾಯ್ಲೆಟ್ ಕ್ಲೀನ್ ಮಾಡೋಕೆ ಹೇಳಿದ್ರೆ ಕಣ್ಣೀರಿಟ್ಟು ಸಿಂಪತಿ ಕ್ರಿಯೇಟ್ ಮಾಡುತ್ತಾರೆ ಎಂದು ಕಾರಣ ನೀಡುತ್ತಾರೆ. ಕಾಕ್ರೋಚ್ ಸುಧಿ ಮತ್ತು ಗಿಲ್ಲಿ ನಟ ಅವರಿಗೆ ಬೇಜಾವಾಬ್ದಾರಿ ಕಿರೀಟ ಸಿಕ್ಕಿದೆ. ಮಂಜು ಭಾಷಿಣಿ ಅವರಿಗೆ ಕುತಂತ್ರಿ ಕಿರೀಟ ನೀಡಲಾಗಿದೆ. ನಂತರ ಹೆಚ್ಚಿನವರು ಅಶ್ವಿನಿ ಗೌಡ ಅವರಿಗೆ ಡವ್ ರಾಣಿ ಕಿರೀಟ ನೀಡಿದ್ದಾರೆ.

ತಮ್ಮನ್ನು ಮನೆಯ ಅರಸಿ ಮತ್ತು ರಾಜಮಾತೆ ಎಂದು ಕರೆದುಕೊಳ್ಳುವ ಅಶ್ವಿನಿ ಗೌಡ ಅವರಿಗೆ ಹಲವರು ಡವ್ ರಾಣಿ ಎಂಬ ಕಿರೀಟವನ್ನು ನೀಡಿದ್ದಾರೆ. ಈ ಕಿರೀಟ ನೀಡಿದ ಸ್ಪರ್ಧಿಗಳು ನೀಡಿದ ಒಂದೊಂದು ಕಾರಣಗಳನ್ನು ಕೇಳಿ ಸುದೀಪ್ ಸಹ ಅಚ್ಚರಿಗೊಂಡರು. ಜಗಳ ಆದ್ಮೇಲೆ ಅದನ್ನು ವಿಧ ವಿಧವಾಗಿ ಸ್ವಲ್ಪ ಡವ್ ಮಾಡಿಕೊಂಡು ಹೇಳುತ್ತಾರೆ ಎಂದು ಸ್ಪಂದನಾ ಸೋಮಣ್ಣ ಹೇಳಿದರು. ಬೇಡದೇ ಇರೋ ವಿಷಯಗಳಿಗೂ ಮಧ್ಯೆ ಎಂಟ್ರಿ ಕೊಡುತ್ತಾರೆ. ಅದಕ್ಕೂ ಅವರಿಗೂ ಸಂಬಂಧವೇ ಇರಲ್ಲ ಎಂದು ಗಿಲ್ಲಿ ನಟ ಹೇಳಿದರೆ, ಮಂಜು ಭಾಷಿಣಿ ಅವರು ನಾವು ಅನ್ನೋದೇ ನನ್ನ ತಲೆಯಲ್ಲಿರುತ್ತೆ ಅಂತ ಹೇಳ್ತಾರೆ. ಆದರೆ ನಾನು ಅನ್ನೋದು ಅವರ ಮನಸ್ಸಿನಲ್ಲಿರುತ್ತೆ ಎಂಬ ಕಾರಣ ನೀಡಿದ್ದಾರೆ.

BBK 12: ಸದ್ದೇ ಮಾಡದ ಅಸುರಾಧಿಪತಿ: ಡೋರ್ ತೆಗೆದು ಹೊರಹೋಗಿ ಎಂದ ಕಿಚ್ಚ ಸುದೀಪ್

ಇನ್ನು ಶನಿವಾರದ ಎಪಿಸೋಡ್​ನಲ್ಲಿ ಕೂಡ ರಾಶಿಕಾ ಶೆಟ್ಟಿ ಅವರು ಅಶ್ವಿನಿ ಅವರಿಗೆ ಶಕುನಿ ಎಂಬ ಪಟ್ಟ ಕೊಟ್ಟಿದ್ದರು. ತಂದಿಡೋದು ಮಾಡ್ತಾರೆ. ನಾವು ಹೇಳೋದು ಒಂದು, ಆದರೆ ಅವರು ಅರ್ಥ ಮಾಡಿಕೊಳ್ಳೋದು ಇನ್ನೊಂದು. ಅವರು ತುಂಬಾ ಮ್ಯಾನಿಪ್ಯುಲೇಟಿವ್ ಎಂದು ಅಶ್ವಿನಿ ಗೌಡ ಬಗ್ಗೆ ರಾಶಿಕಾ ಶೆಟ್ಟಿ ಬೆಟ್ಟು ಮಾಡಿ ತೋರಿಸಿದರು.